For Quick Alerts
  ALLOW NOTIFICATIONS  
  For Daily Alerts

  ಮದುವೆಯಾಗುವುದಾಗಿ ಯುವತಿಗೆ ವಂಚನೆ ಪ್ರಕರಣ: ವಿಚಾರಣೆಗೆ ಹಾಜರಾದ ನಟ ಆರ್ಯ

  By ಫಿಲ್ಮಿಬೀಟ್ ಡೆಸ್ಕ್
  |

  ಮದುವೆಯಾಗುವುದಾಗಿ ಹೇಳಿ ಯುವತಿಗೆ ವಂಚನೆ ಮಾಡಿದ ಪ್ರಕರಣ ಸಂಬಂಧ ತಮಿಳಿನ ಖ್ಯಾತ ನಟ ಆರ್ಯ ಚೆನ್ನೈ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಆರ್ಯ ವಿರುದ್ಧ ಜರ್ಮನ್ ಮಹಿಳೆ ವಿದ್ಜಾ ಮದುವೆಯಾಗುವುದಾಗಿ ಹೇಳಿ ಮೋಸ ಮಾಡಿದ್ದಾರೆ ಎನ್ನುವ ಗಂಭೀರ ಆರೋಪ ಮಾಡಿ ದೂರು ದಾಖಲಿಸಿದ್ದರು.

  ಇತ್ತೀಚಿಗೆ ಆರ್ಯ ಪತ್ನಿ ಸಯೇಶಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ತಂದೆಯಾದ ಸಂಭ್ರಮ ಮತ್ತು ಸರ್ಪಟ್ಟ ಪರಂಬರೈ ಯಶಸ್ಸಿನ ಖುಷಿಯಲ್ಲಿದ್ದ ನಟ ಆರ್ಯಗೆ ಜರ್ಮನ್ ಮಹಿಳೆಯ ವಂಚನೆ ದೂರು ಶಾಕ್ ನೀಡಿದೆ. ದೂರಿನ ಬಳಿಕ ವಿಚಾರಣೆಗೆ ಹಾಜರಾಗುವಂತೆ ಚೆನ್ನೈ ಪೊಲೀಸರು ಆರ್ಯಗೆ ಸಮನ್ಸ್ ಜಾರಿ ಮಾಡಿದ್ದರು.

  ಮದುವೆಯಾಗುವುದಾಗಿ ಹೇಳಿ ಯುವತಿಗೆ ವಂಚನೆ: ನಟ ಆರ್ಯ ವಿರುದ್ಧ ದೂರು ದಾಖಲುಮದುವೆಯಾಗುವುದಾಗಿ ಹೇಳಿ ಯುವತಿಗೆ ವಂಚನೆ: ನಟ ಆರ್ಯ ವಿರುದ್ಧ ದೂರು ದಾಖಲು

  ಅದರಂತೆ ನಿನ್ನೆ (ಆಗಸ್ಟ್ 10) ಸಂಜೆ ಆರ್ಯ ಚೆನ್ನೈನ ಸೈಬರ್ ಅಪರಾಧ ವಿಭಾಗದ ಪೊಲೀಸರ ಮುಂದೆ ಹಾಜರಾಗಿದ್ದರು. ಈ ಪ್ರಕರಣ ಸಂಬಂಧ ಸುಮಾರು 3 ಗಂಟೆಗಳ ಕಾಲ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆದರೆ ಈ ಬಗ್ಗೆ ಯಾವುದೇ ವಿವರಗಳು ಹೊರಬಂದಿಲ್ಲ. ಈ ಬಗ್ಗೆ ಇನ್ನು ತನಿಖೆ ನಡೆಯುತ್ತಿದ್ದು, ಆರ್ಯ ವಿರುದ್ಧ ಕೇಳಿಬರುತ್ತಿರುವ ಆರೋಪ ನಿಜವೇ ಎನ್ನುವುದು ಇನ್ನು ಬಹಿರಂಗವಾಗಿಲ್ಲ. ಪೊಲೀಸರ ಮುಂದೆ ಆರ್ಯ ಹಾಜರಾಗಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

  ಪ್ರಕರಣದ ಹಿನ್ನಲೆ ಏನು?

  ಪ್ರಕರಣದ ಹಿನ್ನಲೆ ಏನು?

  ಜರ್ಮನಿ ಮೂಲಕ ವಿದ್ಜಾ ಎನ್ನುವ ಮಹಿಳೆ ನಟ ಆರ್ಯ ವಿರುದ್ಧ 70 ಲಕ್ಷ ರೂ. ವಂಚನೆ ಆರೋಪ ಮಾಡಿದ್ದರು. ಆರ್ಯ ತನ್ನನ್ನು ಪ್ರೀತಿಸಿ, ಮದುವೆಯಾಗುವುದಾಗಿ ಹೇಳಿ ಭರವಸೆ ನೀಡಿದ್ದರು. ಆದರೀಗ ಬೇರೆ ಯುವತಿ ಜೊತೆ ಮದುವೆಯಾಗಿದ್ದಾರೆ ಎಂದು ಜರ್ಮನಿ ಮೂಲದ ವಿದ್ಜಾ ಹೇಳಿದ್ದರು.

  ಆರ್ಯ ವಿರುದ್ಧ ವಿದ್ಜಾ ಮಾಡಿರುವ ಆರೋಪಗಳು

  ಆರ್ಯ ವಿರುದ್ಧ ವಿದ್ಜಾ ಮಾಡಿರುವ ಆರೋಪಗಳು

  ವಿದ್ಜಾ ತನ್ನ ದೂರಿನಲ್ಲಿ ಆರ್ಯ ಮದುವೆಯಾಗುವುದಾಗಿ ಭರವಸೆ ನೀಡಿದ್ದರು ಮತ್ತು ಅವಳಿಂದ 70 ಲಕ್ಷ ಸಾಲ ಪಡೆದಿದ್ದರು ಎಂದು ಉಲ್ಲೇಖಿಸಿದ್ದಾರೆ. ಆರು ತಿಂಗಳೊಳಗೆ ಸಯೇಶಾಗೆ ವಿಚ್ಛೇದನ ನೀಡಿ ತನ್ನನ್ನು ಮದುವೆ ಆಗುವುದಾಗಿಯೂ ಹೇಳಿದ್ದರು, ಹಾಗಾಗಿ ಆರ್ಯ ಮದುವೆಗೆ ಒಪ್ಪಿಗೆ ನೀಡಿದೆ ಎಂದು ವಿದ್ಜಾ ಆರೋಪಿಸಿದ್ದಾರೆ. ಅಷ್ಟೆಯಲ್ಲದೆ ಸಯೇಶಾಳನ್ನು ಮದುವೆಯಾದ ಬಗ್ಗೆ ಆರ್ಯರನ್ನು ಪ್ರಶ್ನಿಸಿದಾಗ ಎಲ್ಲಾ ಸಾಲ ತೀರಿಸುವುದಾಗಿ ಭರವಸೆ ನೀಡಿದ್ದರು ಎಂದು ವಿದ್ಜಾ ಉಲ್ಲೇಖಿಸಿದ್ದಾರೆ.

  ಆಗಸ್ಟ್ 17ಕ್ಕೆ ವಿಚಾರಣೆ ಮುಂದೂಡಿಕೆ

  ಆಗಸ್ಟ್ 17ಕ್ಕೆ ವಿಚಾರಣೆ ಮುಂದೂಡಿಕೆ

  ವಿದ್ಜಾಗೆ ಪವರ್ ಆಫ್ ಆಟಾರ್ನಿ ಆಗಿರುವ ಚೆನ್ನೈನ ರಾಜಪಾಂಡಿಯನ್ ಈ ವಿಚಾರವಾಗಿ ತನಿಖೆ ಕೋರಿ ಮದ್ರಾಸ್ ಹೈಕೋರ್ಟ್ ನಲ್ಲಿ ಪ್ರಕರಣ ದಾಖಲಿಸಿದ್ದರು. ಕೆಲವು ವಾರಗಳ ಹಿಂದೆ ವಿಚಾರಣೆಗೆ ನಡೆಸಿದ ಕೋರ್ಟ್ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸುವಂತೆ ಪೊಲೀಸರಿಗೆ ಹೇಳಿ ಪ್ರಕರಣವನ್ನು ಆಗಸ್ಟ್ 17ಕ್ಕೆ ಮುಂದೂಡಿದರು.

  ಆರ್ಯ ಸಿನಿಮಾ ಬಿಡುಗಡೆಗೆ ತಡೆ ಕೋರಿದ ವಕೀಲರು

  ಆರ್ಯ ಸಿನಿಮಾ ಬಿಡುಗಡೆಗೆ ತಡೆ ಕೋರಿದ ವಕೀಲರು

  ವಿದ್ಜಾ ಪರ ವಕೀಲರು ಆನಂದ್ ವಿಚಾರಣೆ ವೇಳೆ, ಆರ್ಯ ನಟನೆಯ ತಮಿಳು ಸಿನಿಮಾ ಮತ್ತು ಮಲಯಾಳಂ ಸಿನಿಮಾ ಬಿಡುಗಡೆಯಾಗದಂತೆ ನಿಲ್ಲಿಸಬೇಕು ಎಂದು ಕೇಳಿಕೊಂಡಿದ್ದರು. ವಿದ್ಜಾ ಅವರಿಗೆ ಹಣ ವಾಪಸ್ ಕೊಡುವವರೆಗೂ ಹಣ ಸಿನಿಮಾ ಬಿಡುಗಡೆಯಾಗಬಾರದು ಎಂದು ವಕೀಲರು ಮನವಿ ಮಾಡಿಕೊಂಡಿದ್ದರು. ಇದೀಗ ಪೊಲೀಸರು ಆರ್ಯ ಅವರನ್ನು ವಿಚಾರಣೆ ಮಾಡುತ್ತಿದ್ದಾರೆ.

  2019ರಲ್ಲಿ ಸಯೇಶಾ ಜೊತೆ ಆರ್ಯ ಮದುವೆ

  2019ರಲ್ಲಿ ಸಯೇಶಾ ಜೊತೆ ಆರ್ಯ ಮದುವೆ

  ಸಿನಿಮಾ ಸಕ್ಸಸ್ ನ ಖುಷಿಯಲ್ಲಿದ್ದ ನಟ ಆರ್ಯಗೆ ಜರ್ಮನ್ ಮಹಿಳೆಯ ವಂಚನೆ ದೂರು ದೊಡ್ಡ ತಲೆನೋವಾಗಿದೆ. ತಂದೆಯಾದ ಸಂಭ್ರಮ ಮತ್ತು ಸಿನಿಮಾ ಯಶಸ್ಸಿನ ಖುಷಿ ಎರಡನ್ನು ಈ ಆರೋಪ ಕಿತ್ತುಕೊಂಡಿದೆ. ಆರ್ಯ ಮತ್ತು ಸಯೇಶಾ ಇಬ್ಬರೂ 2019ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇಬ್ಬರು ಪ್ರೀತಿ ಮದುವೆಯಾದವರು. ಆರ್ಯ ಬಳಿ ಸದ್ಯ ಎನಿಮಿ ಮತ್ತು ಅರನಮನೈ-3 ಸಿನಿಮಾವಿದೆ.

  English summary
  Tamil Actor Arya summoned by Chennai Police in the alleged cheating case filed by a Germany based woman.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X