For Quick Alerts
  ALLOW NOTIFICATIONS  
  For Daily Alerts

  ಮತ್ತೆ ಹಳೆಯ ಗೆಳೆಯನ ತೆಕ್ಕೆ ಸೇರಿದ ನಯನತಾರಾ

  |

  ದಕ್ಷಿಣ ಭಾರತದ ಖ್ಯಾತ ನಟಿ ನಯನತಾರಾ ಮತ್ತೆ ಪ್ರೀತಿಗೆ ಬಿದ್ದಿದ್ದಾರೆ. ಹೀಗಂತ ಎಲ್ಲಾ ಕಡೆ ಗಾಸಿಪ್ ಜೋರಾಗಿಯೇ ಹರಿದಾಡುತ್ತಿದೆ. ಈ ಮೊದಲು ನಟ, ನಿರ್ದೇಶಕ ಪ್ರಭುದೇವ ಜೊತೆ ಕೇಳಿಬಂದಿದ್ದ ನಯನಾರ ಲವ್ವಿ-ಡವ್ವಿ ಕೊನೆಗೆ ಸಂಬಂಧವನ್ನೇ ಮುರಿದುಕೊಳ್ಳುವವರೆಗೂ ಮಂದುವರಿಯಿತು. ನಂತರ ನಯನತಾರಾ, ಪ್ರಭುದೇವ ಬೇರೆ ಬೇರೆಯಾಗಿದ್ದು ಎಲ್ಲಾ ಕಡೆ ಬ್ರೇಕಿಂಗ್ ನ್ಯೂಸ್ ಆಗಿದ್ದು ಎಲ್ಲರಿಗೂ ಗೊತ್ತು.

  ಈ ಪ್ರಭುದೇವ ಜೊತೆ ಲವ್ವು ಶುರುವಾಗುವ ಮೊದಲು ಈ ನಯನತಾರಾ ಹೆಸರು ನಟ ಸಿಲಂಬರಸನ್ (ಸಿಂಬು) ಜೊತೆ ಕೇಳಿಬಂದಿತ್ತು. ಅಷ್ಟೇ ಅಲ್ಲ, ಅವರಿಬ್ಬರೂ ಸಾಕಷ್ಟು ಬಾರಿ ಒಟ್ಟೊಟ್ಟಿಗೆ ಓಡಾಡಿಕೊಂಡಿದ್ದು, ಕೂತಿದ್ದು, ನಿಂತಿದ್ದು ಎಲ್ಲವೂ ಸುದ್ದಿಯಾಗಿತ್ತು. ಅಷ್ಟರಲ್ಲಿ ಅದೇನಾಯ್ತೋ ಮದುವೆವರೆಗೆ ಹೋಗುವ ಬದಲು ಅವರಿಬ್ಬರ ಸಂಬಂಧ ಮುರಿದುಬಿತ್ತು. ನಂತರ ನಯನತಾರಾ, ಪ್ರಭುದೇವರ ಸಾನಿಧ್ಯ ಸೇರಿದ್ದರು.

  ಈಗ ಪ್ರಭುದೇವರ ಸಾನಿಧ್ಯದಿಂದ ದೂರವಾಗಿರುವ ನಯನತಾರಾ, ಮತ್ತೆ ಎರಡನೇ ಇನ್ನಿಂಗ್ಸ್ ಎನ್ನುವಂತೆ ಸಿನಿಮಾದಲ್ಲಿ ಬಹಳಷ್ಟು ಬಿಜಿಯಾಗಿದ್ದಾರೆ. ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಈಗ ಮತ್ತೆ 'ಹಳೆ ಗಂಡನ ಪಾದವೇ ಗತಿ' ಎಂಬ ಗಾದೆಮಾತಿನಂತೆ ಮತ್ತೆ ಸಿಂಬು ತೆಕ್ಕೆಗೆ ನಯನತಾರಾ ಜಾರಿದ್ದಾರಂತೆ. ಹೀಗಂತ ಅಂತೆ-ಕಂತೆ ಕಥೆಗಳು ತಮಿಳುನಾಡನ್ನೂ ದಾಟಿ ದಕ್ಷಿಣ ಭಾರತವನ್ನೆಲ್ಲಾ ವ್ಯಾಪಿಸತೊಡಗಿದೆ.

  ಈ ಕುರಿತು ಹರಡಿರುವ ಸುದ್ದಿ ನಯನತಾರಾ ಹಾಗೂ ಸಿಂಬು ಇಬ್ಬರಿಗೂ ಗೊತ್ತಾಗಿದೆ. ಅವರಿಬ್ಬರ ಮಧ್ಯೆ ಮತ್ತೊಮ್ಮೆ ಕುದುರಿರುವ ಸಂಬಂಧದ ಬಗ್ಗೆ ಕೇಳಿದ ಪ್ರಶ್ನೆಗೆ ಸಿಂಬು, "ನಯನತಾರಾ ತುಂಬಾ ಒಳ್ಳೆಯ ಮನಸ್ಸಿನ ಹುಡುಗಿ. ಅವರು ತುಂಬಾ ಮುಗ್ಧೆ ಹಾಗೂ ನಿಷ್ಕಳಂಕ ಮನಸ್ಥಿತಿ ಹೊಂದಿರುವವಳು. ಅವರು ನನ್ನ ಒಳ್ಳೆಯ ಗೆಳತಿ. ನಾವಿಬ್ಬರೂ ಆಗಾಗ ಭೇಟಿಯಾಗಿ ವೈಯಕ್ತಿಕ ವಿಷಯಗಳನ್ನೂ ಹಂಚಿಕೊಳ್ಳುತ್ತೇವೆ" ಎಂದಿದ್ದಾರೆ.

  ಆದರೆ ತೀರಾ ಆತ್ಮೀಯತೆ ಮೆರದು ಗಾಸಿಪ್ ಗೆ ಆಹಾರವಾಗಿದ್ದಾರೆ. ಕಾರಣ, ನಟಿ ನಯನತಾರಾ ಕೇವಲ ತಮಿಳು ನಟಿಯಲ್ಲ, ಅವರು ಹಿಂದಿ ಸೇರಿದಂತೆ ತೆಲುಗು, ಮಲಯಾಳಂ ಹಾಗೂ ಕನ್ನಡದಲ್ಲೂ ನಟಿಸಿದ್ದಾರೆ. ಕನ್ನಡದಲ್ಲಿ, ಉಪೇಂದ್ರ ನಟನೆ ಹಾಗೂ ನಿರ್ದೇಶನದ ಕಳೆದ ವರ್ಷ ಬಿಡುಗಡೆಯಾಗಿದ್ದ ಸೂಪರ್ ಹಿಟ್ ಚಿತ್ರ 'ಸೂಪರ್'ನಲ್ಲಿ ನಟಿಸಿದ್ದರು. ತೆಲುಗು ಚಿತ್ರ 'ಶ್ರೀರಾಮ ರಾಜ್ಯಂ' ಮೂಲಕ ತೆಲುಗಿನಲ್ಲೂ ಸಾಕಷ್ಟು ಪ್ರಸಿದ್ಧವಾಗಿದ್ದಾರೆ ನಯನತಾರಾ.

  ಹೀಗಿರುವಾಗ ನಯನತಾರಾ ಏನೇ ಮಾಡಿದರೂ ಅದು ದಕ್ಷಿಣ ಭಾರತದ ತುಂಬಾ ಸಹಜವಾಗಿ ಸುದ್ದಿಯಾಗುತ್ತದೆ. ಆದರೆ, ಯಾಕೆ ನಯನತಾರಾ ಪದೇ ಪದೇ ಗಾಸಿಪ್ ಗಳಿಗೆ ಆಹಾರವಾಗುತ್ತಿದ್ದಾರೆ. ಪ್ರಭುದೇವರು ಕೈಕೊಟ್ಟ ಮೇಲಾದರೂ ನಯನಾಗೆ ಬುದ್ಧಿ ಬರಬೇಕಿತ್ತಲ್ಲಾ ಎಂಬುದು ಅವರ ಅಭಿಮಾನಿಗಳ ಅಳಲು. ಆದರೆ, ಹಳೆಯ ಗೆಳೆಯ ಸಿಂಬು ಮಾತ್ರ 'ತಪ್ಪಿ ಹೋದ ಹಕ್ಕಿ ಮತ್ತೆ ಸಿಕ್ಕ ಖುಷಿ'ಯಲ್ಲಿ ತೇಲಾಡುತ್ತಿದ್ದಾರಂತೆ. ಅದೇನು ಕಥೇಯೋ! (ಏಜೆನ್ಸೀಸ್)

  English summary
  There is Gossip buzz everywhere that the actress Nayanatara tied the hand again with actor Silambarasan. Actor Simbu said that his friend Nayanthara is a good soul and both are sharing thing between them often.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X