Don't Miss!
- News
ರಾಜ್ಯ ಸರ್ಕಾರ ಹಠಕ್ಕೆ ಅಂಗನವಾಡಿ ಕಾರ್ಯಕರ್ತರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿದೆ: ಸಿದ್ದರಾಮಯ್ಯ ಆಕ್ರೋಶ
- Sports
Ind vs NZ t20 series: ಭಾರತದ ಈ ಪ್ರತಿಭಾವಂತನಿಗೆ ಹೆಚ್ಚಿನ ಅವಕಾಶ ಸಿಗಲಿ ಎಂದ ಸಬಾ ಕರೀಂ
- Finance
ಹಿಂಡೆನ್ಬರ್ಗ್ ವರದಿ: ಅದಾನಿ ಗ್ರೂಪ್ನಿಂದ ಆರ್ಥಿಕ ಅಪರಾಧ? ತನಿಖೆ ತೀವ್ರಗೊಳಿಸಿದ SEBI
- Automobiles
ಜನಪ್ರಿಯ 'ಮಹೀಂದ್ರಾ XUV700' ಬೆಲೆ ಭಾರೀ ಏರಿಕೆ
- Technology
ಭಾರತದಲ್ಲಿ ಮೊಬೈಲ್ ಡೌನ್ಲೋಡ್ ವೇಗದಲ್ಲಿ ಭಾರಿ ಬದಲಾವಣೆ!..ಓಕ್ಲಾ ವರದಿ!
- Lifestyle
ತೂಕ ಇಳಿಕೆಗೆ ಟ್ರೈ ಮಾಡುತ್ತಿದ್ದೀರಾ? ಈ ಪಾನೀಯಗಳನ್ನು ನಿಮ್ಮ ತೂಕ ಇಳಿಕೆಯ ಡಯಟ್ನಲ್ಲಿ ಸೇರಿಸಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕನ್ನಡ ಭಾಷೆಯ ಬಗ್ಗೆ ನಟಿ ಸಾಯಿ ಪಲ್ಲವಿ ಹೇಳಿದ್ದು ಹೀಗೆ
ದಕ್ಷಿಣ ಭಾರತದ ಮಲಯಾಳಂ, ತಮಿಳು ಹಾಗೂ ತೆಲುಗು ಭಾಷೆಗಳ ಸಿನಿಮಾಗಳ ಸಿನಿಮಾಗಳಲ್ಲಿ ಮಾತ್ರವೇ ಕಾಣಿಸಿಕೊಂಡಿದ್ದ ಸ್ಟಾರ್ ನಟಿ ಸಾಯಿ ಪಲ್ಲವಿ ಈಗ ಪ್ಯಾನ್ ಇಂಡಿಯಾ ನಟಿ.
ಸಾಯಿ ಪಲ್ಲವಿ ನಟಿಸಿರುವ 'ಗಾರ್ಗಿ' ಹೆಸರಿನ ಸಿನಿಮಾ ದಕ್ಷಿಣ ಭಾರತದ ಭಾಷೆಗಳ ಜೊತೆಗೆ ಹಿಂದಿಯಲ್ಲಿಯೂ ಬಿಡುಗಡೆ ಆಗುತ್ತಿದೆ. ಆ ಮೂಲಕ ಮಹಿಳಾ ಪ್ರಧಾನ ಸಿನಿಮಾವನ್ನು ಪ್ಯಾನ್ ಇಂಡಿಯಾಗೆ ಕೊಂಡೊಯ್ಯುತ್ತಿರುವ ಮೊದಲ ನಟಿಯಾಗಿದ್ದಾರೆ ಸಾಯಿ ಪಲ್ಲವಿ.
Exclusive:
5
ದಿನದಲ್ಲಿ
ಸಾಯಿ
ಪಲ್ಲವಿಗೆ
ಕನ್ನಡ
ಹೇಳಿಕೊಟ್ಟ
ಶೀತಲ್
ಶೆಟ್ಟಿ:
'ಗಾರ್ಗಿ'
ಕಥೆಯೇನು?
ಈ ಮೊದಲು ಕೇವಲ ನಾಯಕ ಪ್ರಧಾನ ಅದರಲ್ಲೂ ಮಾಸ್ ಸಿನಿಮಾಗಳಷ್ಟೆ ಪ್ಯಾನ್ ಇಂಡಿಯಾ ಸಿನಿಮಾಗಳಾಗುತ್ತಿದ್ದವು. ಆದರೆ ಈಗ 'ಗಾರ್ಗಿ ಮೂಲಕ ಮಹಿಳಾ ಪ್ರಧಾನ ಸಿನಿಮಾವನ್ನು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಮಾಡಲಾಗುತ್ತಿದೆ. ಈ ಸಿನಿಮಾಕ್ಕಾಗಿ ಸಾಯಿ ಪಲ್ಲವಿ ಎಲ್ಲ ಭಾಷೆಗಳಲ್ಲೂ ತಾವೇ ಡಬ್ ಮಾಡುತ್ತಿದ್ದಾರೆ. ಈಗಾಗಲೇ ಸಿನಿಮಾದ ಟೀಸರ್ ಬಿಡುಗಡೆ ಆಗಿದ್ದು, ಅದರಲ್ಲಿ ಸಾಯಿ ಪಲ್ಲವಿ ತಾವೇ ಕನ್ನಡದಲ್ಲಿ ಡಬ್ಬಿಂಗ್ ಹೇಳಿದ್ದಾರೆ.
ಮದುವೆ,
ಮಕ್ಕಳ
ಬಗ್ಗೆ
ನಟಿ
ಸಾಯಿ
ಪಲ್ಲವಿ
ಮಾತು
ಈ ನಡುವೆ ಸಾಯಿ ಪಲ್ಲವಿಯ ಹೊಸ ಸಿನಿಮಾ 'ವಿರಾಟ ಪರ್ವಂ' ಬಿಡುಗಡೆ ಆಗುತ್ತಿದ್ದು, ಈ ಸಿನಿಮಾದ ಪ್ರೊಮೋಷನ್ ಸಂಬಂಧಿಸಿದ ಸಂದರ್ಶನವೊಂದರಲ್ಲಿ ಒಂದರಲ್ಲಿ ಮಾತನಾಡುತ್ತಾ ಕನ್ನಡ ಭಾಷೆಯ ಬಗ್ಗೆ ಸಾಯಿ ಪಲ್ಲವಿ ಮಾತನಾಡಿದ್ದಾರೆ.

ಕನ್ನಡ-ಕೊಂಕಣಿ ಸೇರಿದ ಭಾಷೆ ಬಡಗು!?
ತಮ್ಮ ಮೂಲ ಸ್ಥಳ, ಭಾಷೆಯ ಬಗ್ಗೆ ಸಂದರ್ಶನ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಾಯಿ ಪಲ್ಲವಿ, ''ನನ್ನ ಮೂಲ ತಮಿಳುನಾಡಿನ ಊಟಿ ಬಳಿಯ ಕೋಟಗಿರಿಯ ಒಂದು ಜನಾಂಗ ನಮ್ಮದು. ನಮ್ಮ ಭಾಷೆ ಬಡಗ. ಅದು ಕೊಂಕಣಿ ಮತ್ತು ಕನ್ನಡ ಸೇರಿ ಆದ ಭಾಷೆ ಎಂದು ನಾನು ಅಂದುಕೊಂಡಿದ್ದೆ. ಆದರೆ ಕನ್ನಡ ಹಾಗೂ ನಮ್ಮ ಭಾಷೆಗೆ ಸಾಕಷ್ಟು ವ್ಯತ್ಯಾಸವಿದೆ. ಅದು ಇತ್ತೀಚೆಗೆ ನನಗೆ ತಿಳಿಯಿತು'' ಎಂದಿದ್ದಾರೆ ಸಾಯಿ ಪಲ್ಲವಿ.

ಕನ್ನಡಲ್ಲಿ ಡಬ್ಬಿಂಗ್ ಮಾಡಿದ ಅನುಭವ ಹಂಚಿಕೊಂಡ ಸಾಯಿ ಪಲ್ಲವಿ
''ನನಗೆ ಕನ್ನಡ ಬರುವುದಿಲ್ಲ. ಅದು ಬಹಳ ಕಷ್ಟವಾದ ಭಾಷೆ ಅನಿಸುತ್ತೆ. ಇತ್ತೀಚೆಗೆ ನಾನು 'ಗಾರ್ಗಿ' ಎಂಬ ತಮಿಳು ಸಿನಿಮಾದಲ್ಲಿ ನಟಿಸಿದೆ. ಅದಕ್ಕಾಗಿ ಕನ್ನಡದಲ್ಲಿ ನಾನೇ ಡಬ್ ಮಾಡಿದೆ. ಅವರು 'ಳ', 'ಣ' ಅನ್ನು ಬಹಳ ಒತ್ತಿ ಮಾತನಾಡುತ್ತಾರೆ. ನಮ್ಮ ಭಾಷೆಯಲ್ಲಿ ಅಷ್ಟು ಒತ್ತಿ ಹೇಳುವುದಿಲ್ಲ ಹಾಗಾಗಿ ಅದು ನನಗೆ ಸರಿಯಾಗಿ ಬರಲಿಲ್ಲ. ಕಷ್ಟಪಟ್ಟು ಡಬ್ಬಿಂಗ್ ಮಾಡಿದೆ'' ಎಂದು ಕನ್ನಡದಲ್ಲಿ ಡಬ್ಬಿಂಗ್ ಮಾಡಿದ್ದನ್ನು ನೆನಪು ಮಾಡಿಕೊಂಡಿದ್ದಾರೆ ಸಾಯಿ ಪಲ್ಲವಿ.

ಸಾಯಿ ಪಲ್ಲವಿ ಬಗ್ಗೆ ಶೀಥಲ್ ಶೆಟ್ಟಿ ಮಾತು
ಸಾಯಿ ಪಲ್ಲವಿ 'ಗಾರ್ಗಿ' ಸಿನಿಮಾದ ಕನ್ನಡ ಆವೃತ್ತಿಗಾಗಿ ಸ್ವಯಂ ಡಬ್ಬಿಂಗ್ ಮಾಡಿದ್ದಾರೆ. ಅವರಿಗೆ ಕನ್ನಡ ಹೇಳಿಕೊಟ್ಟಿರುವುದು ಕನ್ನಡತಿ, ನಟಿ, ನಿರ್ದೇಶಕಿ ಶೀಥಲ್ ಶೆಟ್ಟಿ. ನಾವು ಸಾಯಿ ಪಲ್ಲವಿಯರೊಂದಿಗೆ ನಾಲ್ಕು ಜನ ಬಾಡಿ ಗಾರ್ಡ್ ಬರುತ್ತಿರಬಹುದು. ಫುಲ್ ಸ್ಟ್ರಿಕ್ಟ್ ಆಗಿ ಇರುತ್ತಾರೇನೋ ಅಂತೆಲ್ಲಾ ಅಂದುಕೊಂಡಿದ್ದೆವು. ಆದರೆ, ಸಿಂಪಲ್ ಆಗಿ ಅವರು ಹಾಗೂ ನಿರ್ದೇಶಕರು ಇಬ್ಬರೇ ಬಂದಿದ್ದರು. ಅವರು ನೋಡುವಷ್ಟೇ ಸಿಂಪಲ್ ಆಗಿ ಬಂದರು. ಅಷ್ಟೇ ಸಿಂಪಲ್ ಆಗಿ ಕೆಲಸ ಮುಗಿಸಿಕೊಂಡು ಹೋದರು'' ಎಂದು ಫಿಲ್ಮಿಬೀಟ್ ಜೊತೆಗೆ ಮಾತನಾಡುತ್ತಾ ಸಾಯಿ ಪಲ್ಲವಿ ಬಗ್ಗೆ ಹೇಳಿದ್ದರು ಶೀಥಲ್ ಶೆಟ್ಟಿ.

ಕನ್ನಡದಲ್ಲಿ ನಟಿಸಬೇಕಿತ್ತು ಸಾಯಿ ಪಲ್ಲವಿ
ಸಾಯಿ ಪಲ್ಲವಿ ಕನ್ನಡದಲ್ಲಿ ಸಿನಿಮಾ ಮಾಡುತ್ತಾರೆ ಎಂಬ ಸುದ್ದಿಯೂ ಇದೆ. ಮಂಸೋರೆ ನಿರ್ದೇಶನದ ಸಿನಿಮಾದಲ್ಲಿ ಸಾಯಿ ಪಲ್ಲವಿ ನಟನೆ ಮಾಡುತ್ತಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಫಿಲ್ಮಿಬೀಟ್ ಜೊತೆಗೆ ಮಾತನಾಡಿದ್ದ ಮಂಸೋರೆ, ನಿರ್ಮಾಪಕರೊಬ್ಬರೊಟ್ಟಿಗೆ ಈ ಬಗ್ಗೆ ಮಾತುಕತೆ ಆಗಿತ್ತು. ಒಬ್ಬ ಯುವ ರಾಜಕಾರಣಿಯ ಕತೆಯುಳ್ಳ ಸಿನಿಮಾದಲ್ಲಿ ಸಾಯಿ ಪಲ್ಲವಿ ನಟಿಸಿದರೆ ಚಂದ ಎಂದುಕೊಂಡಿದ್ದೆವು. ಆದರೆ ಕೋವಿಡ್ ಕಾರಣದಿಂದಾಗಿ ಆ ನಿರ್ಮಾಪಕರ ಪರಭಾಷೆಯ ಸಿನಿಮಾ ತಡವಾದ ಕಾರಣ ನಮ್ಮ ಸಿನಿಮಾದ ಯೋಜನೆ ಮುಂದುವರೆದಿಲ್ಲ ಎಂದಿದ್ದರು. ಆದಷ್ಟು ಬೇಗ ಸಾಯಿ ಪಲ್ಲವಿ ಅಪ್ಪಟ ಕನ್ನಡದ ಸಿನಿಮಾ ಮಾಡಲೆಂಬುದು ನಮ್ಮ ಬಯಕೆ.