For Quick Alerts
  ALLOW NOTIFICATIONS  
  For Daily Alerts

  ಹೆಣ್ಣು ಮಗುವಿಗೆ ಜನ್ಮ ನೀಡಿದ ಬಹುಭಾಷೆ ನಟಿ ಸ್ನೇಹಾ

  |

  ದಕ್ಷಿಣ ಭಾರತದ ಖ್ಯಾತ ತಾರಾ ದಂಪತಿ ಸ್ನೇಹಾ ಮತ್ತು ಪ್ರಸನ್ನ ದಂಪತಿ ತಮ್ಮ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ಈ ಸಂತಸವನ್ನು ಪ್ರಸನ್ನ ಖುದ್ದು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

  ''ಏಂಜಲ್ ಬಂದರು (Angel arrived)'' ಎಂದು ಪೋಸ್ಟ್ ಹಾಕಿರುವ ಪ್ರಸನ್ನಾ, ಕೆಂಪು ಬಣ್ಣ ಶೋ ಫೋಟೋ ಹಂಚಿಕೊಂಡಿದ್ದಾರೆ.

  ಸ್ನೇಹ ದಂಪತಿಗೆ ಈಗಾಗಲೇ 4 ವರ್ಷದ ಗಂಡು ಮಗು ಇದೆ. ಆ ಹುಡುಗನ ಹೆಸರು ವಿಹಾನ್. ಕಳೆದ ಅಕ್ಟೋಬರ್ ತಿಂಗಳಲ್ಲಿ ಸ್ನೇಹ ಸೀಮಂತ ಕಾರ್ಯಕ್ರಮ ನಡೆದಿತ್ತು.

  ಸೀಮಂತ ಸಂಭ್ರಮದಲ್ಲಿ 'ಕುರುಕ್ಷೇತ್ರ' ದ್ರೌಪದಿ ಖ್ಯಾತಿಯ ನಟಿ ಸ್ನೇಹಾಸೀಮಂತ ಸಂಭ್ರಮದಲ್ಲಿ 'ಕುರುಕ್ಷೇತ್ರ' ದ್ರೌಪದಿ ಖ್ಯಾತಿಯ ನಟಿ ಸ್ನೇಹಾ

  2009ರಲ್ಲಿ ಬಂದಿದ್ದ 'ಅಚಮಂಡು ಅಚಮುಂಡು' ಸಿನಿಮಾದ ಶೂಟಿಂಗ್ ಸೆಟ್ ನಲ್ಲಿ ಸ್ನೇಹ ಮತ್ತು ಪ್ರಸನ್ನ ನಡುವೆ ಪ್ರೀತಿಯಾಗಿತ್ತು. 2012 ಮೇ 11 ರಂದು ತಾರಾಜೋಡಿ ಅದ್ಧೂರಿಯಾಗಿ ವಿವಾಹವಾಗಿದ್ದರು. ಮದುವೆ ಆದ ಮೂರು ವರ್ಷದ ಬಳಿಕ ಗಂಡು ಮಗುವಿಗೆ ಜನ್ಮ ನೀಡಿದ್ದರು.

  ತಮಿಳು, ತೆಲುಗು, ಕನ್ನಡ, ಮಲಯಾಳಂ ಭಾಷೆಯಲ್ಲಿ ನಟಿಸಿರುವ ಸ್ನೇಹ ಕೊನೆಯದಾಗಿ ಧನುಶ್ ಅಭಿನಯದ ಪಟಾಸ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಅದಕ್ಕೂ ಮುಂಚೆ ಕನ್ನಡದ ಕುರುಕ್ಷೇತ್ರ ಸಿನಿಮಾದಲ್ಲಿ ದ್ರೌಪದಿಯಾಗಿ ನಟಿಸಿದ್ದರು.

  English summary
  South famous actress sneha and prasanna couple welcomed their second child today.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X