For Quick Alerts
  ALLOW NOTIFICATIONS  
  For Daily Alerts

  ಮತ್ತೆ ಆಸ್ಪತ್ರೆ ಸೇರಿದ ರಜನಿಕಾಂತ್ ಮಗಳು ಐಶ್ವರ್ಯಾ, ವಿಚ್ಛೇದನದ ಬಳಿಕ ಅನಾರೋಗ್ಯಕ್ಕೀಡು!

  |

  ಸೂಪರ್‌ ಸ್ಟಾರ್ ರಜನಿಕಾಂತ್ ಪುತ್ರಿ ಐಶ್ವರ್ಯಾ ಹೆಚ್ಚಾಗಿ ಸುದ್ದಿ ಆಗಿದ್ದು, ಸದ್ದು ಮಾಡಿದ್ದು ಅಂದರೆ ಅದು ವಿಚ್ಛೇದನದ ಮೂಲಕ. ನಟ ಧನುಷ್ ಜೊತೆಗೆ ವಿಚ್ಛೇದನ ಪಡೆದು ಐಶ್ವರ್ಯಾ ದೂರವಾಗಿದ್ದಾರೆ. ಆದರ ಬೆನ್ನಲ್ಲೇ ಅವರು ಆಸ್ಪತ್ರೆ ಸೇರಿದ್ದರು. ಕೊರೊನಾ ಬಂದ ಕಾರಣಕ್ಕೆ ಆಕೆ ಆಸ್ಪತ್ರೆ ಸೇರಿದ್ದರು. ಬಳಿಕ ಕೊರೊನಾದಿಂದ ಚೇತರಿಸಿಕೊಂಡಿದ್ದರು.

  ಆದರೆ ಈಗ ಮತ್ತೆ ಐಶ್ವರ್ಯಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ತಮ್ಮ ಆರೋಗ್ಯದಲ್ಲಿ ಆಗುತ್ತಿರುವ ಏರುಪೇರಿನ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ಇರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಅವರು ಹೆಚ್ಚಿನ ಜ್ವರದಿಂದ ಬಳಲುತಿದ್ದಾರಂತೆ. ಜೊತೆಗೆ ತೆಲೆಸುತ್ತುವಿಕೆ ಕೂಡ ಇದೆಯಂತೆ. ಇದನ್ನು ಪೋಸ್ಟ್ ಮೂಲಕ ಹಂಚಿಕೊಂಡಿದ್ದಾರೆ.

  ಹೊಸ ಗರ್ಲ್‌ ಫ್ರೆಂಡ್ ಜೊತೆ ಧನುಷ್ : ಹೋಟೆಲ್‌ನಲ್ಲಿ ಇದ್ದ ಆ ಯುವತಿ ಯಾರು?ಹೊಸ ಗರ್ಲ್‌ ಫ್ರೆಂಡ್ ಜೊತೆ ಧನುಷ್ : ಹೋಟೆಲ್‌ನಲ್ಲಿ ಇದ್ದ ಆ ಯುವತಿ ಯಾರು?

  "ಕೋವಿಡ್ ಮೊದಲು ಮತ್ತು ಕೋವಿಡ್ ನಂತರದ ಜೀವನ. ಜ್ವರ ಮತ್ತು ತಲೆಸುತ್ತು ಕಾಣಿಸಿಕೊಂಡ ಕಾರಣ ಮತ್ತೆ ಆಸ್ಪತ್ರೆಗೆ ನಾನು ದಾಖಲಾಗಿದ್ದೇನೆ. ಆದರೆ ನಾವು ಅತ್ಯಂತ ಸುಂದರವಾದ, ಸ್ಫೂರ್ತಿದಾಯಕ, ಡೈನಾಮಿಕ್ ವೈದ್ಯರನ್ನು ಭೇಟಿಯಾದಾಗ ಮತ್ತು ಅವರೊಂದಿಗೆ ಕಳೆಯಲು ಸಮಯ ಸಿಕ್ಕಾಗ, ಈಗ ಆರೋಗ್ಯ ಅಷ್ಟು ಕೆಟ್ಟದಾಗಿ ಇಲ್ಲ ಡಾಕ್ಟರ್ ಎನ್ನುತ್ತೇವೆ. ನಾನು ಮಹಿಳಾ ದಿನಾಚರಣೆಗೂ ಮುನ್ನ, ಗೌರವಾನ್ವಿತ ಮೇಡಂ ಡಾ.ಪ್ರೀತಿಕಾ ಚೌದ್ರಿ ಅವರನ್ನು ಭೇಟಿ ಮಾಡುತ್ತಿದ್ದೇನೆ." ಎಂದು ಬರೆದುಕೊಂಡು ತಮ್ಮ ವೈದ್ಯರನ್ನೂ ಪರಿಚಯಿಸಿದ್ದಾರೆ.

  ಐಶ್ವರ್ಯಾ ತಮ್ಮ ಅನಾರೋಗ್ಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಳ್ಳುತ್ತಿದ್ದ ಹಾಗೇ, ವೈರಲ್ ಆಗಿದೆ. ಆಕೆಯ ಆಪ್ತರು, ಅಭಿಮಾನಿಗಳು, ಉದ್ಯಮದ ಸ್ನೇಹಿತರು ಶೀಘ್ರವಾಗಿ ಚೇತರಿಸಿಕೊಳ್ಳಿ ಎಂದು ಹಾರೈಸುತ್ತಿದ್ದಾರೆ.

  ಇದೇ ವರ್ಷ ಫೆಬ್ರವರಿಯಲ್ಲಿ ಅವರಿಗೆ ಕೊರೊನ ಪಾಟಿವ್ ಆಗಿತ್ತು. ಆಗ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆಗ ಪೋಸ್ಟ್ ಹಾಕಿದ್ದ ಐಶ್ವರ್ಯ ಆವರು "ಎಲ್ಲಾ ಮುನ್ನೆಚ್ಚರಿಕೆಗಳ ನಂತರವೂ ಕೊರೊನಾ ಪಾಸಿಟಿವ್ ಆಗಿದೆ.. ಅಡ್ಮಿಟ್ ಮಾಡಲಾಗಿದೆ.. ದಯವಿಟ್ಟು ಮಾಸ್ಕ್ ಹಾಕಿ, ಲಸಿಕೆ ಹಾಕಿಸಿಕೊಳ್ಳಿ ಮತ್ತು ಸುರಕ್ಷಿತವಾಗಿರಿ." ಎಂದು ಬರೆದುಕೊಂಡಿದ್ದರು.

  ನಟ ಧನುಷ್ ಮತ್ತು ಐಶ್ವರ್ಯಾ ಮತ್ತೆ ಒಂದಾಗುತ್ತಾರೆ. ಅದಕ್ಕಾಗಿ ಕುಟುಂಬದವರು ಕೂತು ಮಾತು ಕತೆ ನಡೆಸಲಿದ್ದಾರೆ ಎಂದು ಹೇಳಲಾಗಿತ್ತಾ ಇತ್ತು. ಆದರೆ ಆ ಸುದ್ದಿ ಸುಳ್ಳಾಯ್ತು. ಈ ಜೋಡಿ ಒಂದಾಗುವ ಬಗ್ಗೆ ಸದ್ಯ ಯಾವುದೇ ಸುಳಿವು ಕಂಡು ಬಂದಿಲ್ಲ. 2022ರ ಜನವರಿಯಲ್ಲಿ ಈ ಜೋಡಿ ವಿಚ್ಛೇದನ ಪಡೆದುಕೊಂಡು ದೂರಾಗಿದೆ.

  English summary
  Aishwarya Rajinikanth Gets Hospitalised Yet Again, She Shares Pictures From Hospital
  Monday, March 7, 2022, 18:04
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X