For Quick Alerts
  ALLOW NOTIFICATIONS  
  For Daily Alerts

  ವಿಚ್ಛೇದನದ ನೋವು ಮರೆತು ನಿರ್ದೇಶನಕ್ಕಿಳಿದ ಐಶ್ವರ್ಯಾ ರಜನಿಕಾಂತ್!

  |

  ನಟ ರಜನಿಕಾಂತ್ ಪುತ್ರಿ ಐಶ್ವರ್ಯಾ ರಜನಿಕಾಂತ್ ಇತ್ತೀಚೆಗೆ ಹೆಚ್ಚಾಗಿ ಸುದ್ದಿ ಆಗಿದ್ದು ಎಂದರೆ, ಅದು ಅವರ ವಿಚ್ಛೇದನದ ಕಾರಣಕ್ಕೆ. ಧನುಷ್ ಮತ್ತು ಐಶ್ವರ್ಯಾ ಇಬ್ಬರು ವಿಚ್ಛೇದನ ಪಡೆದು ದೂರಾಗಿದ್ದಾರೆ. ಕೆಲವು ದಿನಗಳ ಹಿಂದೆ ಐಶ್ವರ್ಯಾ ರಜನಿಕಾಂತ್ ಅನಾರೋಗ್ಯ ಕಾರಣದಿಂದ ಆಸ್ಪತ್ರೆ ಸೇರಿದರು. ಇದರಿಂದ ರಜನಿ ಅಭಿಮಾನಿಗಳು ಮತ್ತೆ ಆತಂಕಕ್ಕೆ ಒಳಗಾಗಿದ್ದರು. ಈಗ ಗುಣಮುಖರಾಗಿ, ಸಿಹಿ ಸುದ್ದಿ ಜೊತೆಗೆ ಐಶ್ವರ್ಯಾ ಮತ್ತೆ ಅಕಾಡಕ್ಕೆ ಇಳಿಯಲು ಸಜ್ಜಾಗಿದ್ದಾರೆ.

  ಐಶ್ವರ್ಯಾ ಸದ್ಯ ಸಿನಿಮಾರಂಗದಲ್ಲಿ ಸಕ್ರಿಯವಾಗಲು ಸಜ್ಜಾಗಿದ್ದಾರೆ. ವಿಚ್ಛೇದನದ ನೋವಿನಿಂದ ಅವರು ಹೊರ ಬಂದು ಮತ್ತೆ ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಸಜ್ಜಾಗಿದ್ದಾರೆ. ತಾವೆ ಹೊಸ ಸಿನಿಮಾ ಮಾಡಲು ಮುಂದಾಗಿದ್ದಾರಂತೆ ಐಶ್ವರ್ಯಾ ರಜನಿಕಾಂತ್. ಮೂಲಗಳ ಪ್ರಕಾರ, ತಮಿಳು ಸ್ಟಾರ್ ನಟನೊಂದಿಗೆ ಸಿನಿಮಾ ಮಾಡಲು ಸಜ್ಜಾಗಿದ್ದಾರೆ ಐಶ್ವರ್ಯಾ.

  ಮತ್ತೆ ಆಸ್ಪತ್ರೆ ಸೇರಿದ ರಜನಿಕಾಂತ್ ಮಗಳು ಐಶ್ವರ್ಯಾ, ವಿಚ್ಛೇದನದ ಬಳಿಕ ಅನಾರೋಗ್ಯಕ್ಕೀಡು!ಮತ್ತೆ ಆಸ್ಪತ್ರೆ ಸೇರಿದ ರಜನಿಕಾಂತ್ ಮಗಳು ಐಶ್ವರ್ಯಾ, ವಿಚ್ಛೇದನದ ಬಳಿಕ ಅನಾರೋಗ್ಯಕ್ಕೀಡು!

  ಐಶ್ವರ್ಯಾ ರಜನಿಕಾಂತ್ ಮೊದಲಿನಿಂದಲೂ ಸಿನಿಮಾರಂಗದಲ್ಲಿ ಸಕ್ರಿಯವಾಗಿ ಇದ್ದವರು. ಈಗಾಗಲೇ ಹಲವಾರು ಸಿನಿಮಾಗಳನ್ನು ಅವರು ನಿರ್ದೇಶನ ಮಾಡಿದ್ದಾರೆ. ಮಾಜಿ ಪತಿ ಧನುಷ್ ಅವರಿಗೂ ಕೂಡ ಐಶ್ವರ್ಯ ಸಿನಿಮಾ ಮಾಡಿ ಸೈ ಎನಿಸಿಕೊಂಡಿದ್ದಾರೆ. ಆದರೆ ಕೊಂಚ ಸಮಯ ಅವರು ಸಿನಿಮಾ ನಿರ್ದೇಶನದಿಂದ ದೂರ ಉಳಿದಿದ್ದರು. ಈಗ ಮತ್ತದೇ ಹುರುಪಿನಿಂದ ಐಶ್ವರ್ಯ ಮತ್ತೆ ನಿರ್ದೇಶನಕ್ಕೆ ಇಳಿದಿದ್ದಾರೆ.

  ತಮಿಳು ನಟ ಸಿಂಬು ದೊಡ್ಡ ಮಟ್ಟದಲ್ಲಿ ಕಮ್ ಬ್ಯಾಕ್ ಮಾಡಲು ಸಜ್ಜಾಗುತ್ತಿದ್ದಾರಂತೆ. ಸಿಂಬು ನಟನೆಯ ಚಿತ್ರಕ್ಕೆ ಐಶ್ವರ್ಯ ರಜನಿಕಾಂತ್ ನಿರ್ದೇಶನ ಇರಲಿದೆ. ಇದಕ್ಕಾಗಿ ಒಂದು ಕಡೆ ನಟ ಸಿಂಬು ತಯಾರಿ ನಡೆಸಿದ್ದರೆ, ಮತ್ತೊಂದು ಕಡೆ ಕಥೆಯನ್ನು ಸಿದ್ಧ ಮಾಡಿಕೊಂಡಿದ್ದಾರಂತೆ ಐಶ್ವರ್ಯಾ.

  ಧನುಷ್ ಅಭಿನಯದ '3' ಚಿತ್ರದ ಮೂಲಕವೇ ಐಶ್ವರ್ಯಾ ರಜನಿಕಾಂತ್ ನಿರ್ದೇಶಕಿಯ ಪಟ್ಟಕ್ಕೆ ಏರಿದ್ದು. ಬಳಿಕ ಕೆಲವು ಸಿನಿಮಾಗಳನ್ನು ಮಾಡಿದ್ದಾರೆ. 'ವಾಯಿ ರಾಜ ವಾಯಿ', 'ಸಿನಿಮಾ ವೀರನ್' ಎನ್ನುವ ಸಿನಿಮಾಗಳನ್ನು ಮಾಡಿದ್ದಾರೆ. ಆದರೆ 2017ರ ಬಳಿಕ ಐಶ್ವರ್ಯಾ ಯಾವುದೇ ಸಿನಿಮಾ ಮಾಡಿಲ್ಲ. ಈಗ ಮತ್ತೆ ಸಿನಿಮಾ ನಿರ್ದೇಶನ ಮಾಡಲು ಮುಂದಾಗಿರುವುದು ಕುತೂಹಲ ಮೂಡಿಸಿದೆ.

  English summary
  Aishwaryaa Rajinikanth To Direct A Film To Tamil Actor Simbu,
  Wednesday, March 16, 2022, 9:53
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X