For Quick Alerts
  ALLOW NOTIFICATIONS  
  For Daily Alerts

  ಬಾಕ್ಸರ್ ಆರ್ಯ ನೋಡಿ ದಂಗಾದ ಅಭಿಮಾನಿಗಳು

  |

  ತಮಿಳು ನಟ ಆರ್ಯ ಸದ್ಯ 'ಸರ್ಪಟ್ಟ ಪರಂಬರೈ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಪಾ ರಂಜಿತ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಈ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದೆ. ನಟ ಆರ್ಯ ಲುಕ್ ಅಭಿಮಾನಿಗಳ ನಿದ್ದೆ ಗೆಡಿಸಿದೆ.

  ಬಾಕ್ಸರ್ ಆಗಿ ಎಂಟ್ರಿ ಕೊಟ್ಟಿರುವ ಆರ್ಯ ದೇಹ ಹುರಿಗೊಳಿಸಿ, ಕಟ್ಟು ಮಸ್ತಾದ ಬಾಡಿ ಪ್ರದರ್ಶಿಸುತ್ತಿರುವ ಆರ್ಯ ಲುಕ್ ಗೆ ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ. ಆರ್ಯ ಬಾಕ್ಸರ್ ಆರ್ಯ ಆಗಿ ಬದಲಾದ ರೀತಿಗೆ ಅಭಿಮಾನಿಗಳು ಹ್ಯಾಟ್ಸಪ್ ಹೇಳುತ್ತಿದ್ದಾರೆ.

  ಉತ್ತಮ ಸ್ನೇಹಿತರಾಗಿದ್ದ ನಟ ಆರ್ಯ ಮತ್ತು ವಿಶಾಲ್ 'ಎನಿಮಿ'ಗಳಾಗಿದ್ದೇಕೆ?

  ಫಸ್ಟ್ ಲುಕ್ ನೋಡಿ ದಂಗಾದ ಅಭಿಮಾನಿಗಳು

  ಫಸ್ಟ್ ಲುಕ್ ನೋಡಿ ದಂಗಾದ ಅಭಿಮಾನಿಗಳು

  ಪೊಸ್ಟರ್ ನಲ್ಲಿ ಆರ್ಯ ಬಾಕ್ಸಿಂಗ್ ರಿಂಗ್ ನಲ್ಲಿ ನಿಂತಿದ್ದಾರೆ. ಸುತ್ತಲು ಜನ ಅವರನ್ನು ಹುರಿದುಂಬಿಸುತ್ತಿದ್ದಾರೆ. ಈ ಪೋಸ್ಟರ್ ಸಿನಿಮಾದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ನಿರ್ದೇಶಕ ಪಾ. ರಂಜಿತ್ ಮೊದಲ ಬಾರಿಗೆ ನಟ ಆರ್ಯಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮದ್ರಾಸ್, ಕಾಲ ಮತ್ತು ಕಬಾಲಿ ಸಿನಿಮಾಗಳನ್ನು ಮಾಡಿರುವ ರಂಜಿತ್ 'ಸರ್ಪಟ್ಟ ಪರಂಬರೈ' ಸಿನಿಮಾದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಿಸಿದೆ.

  ಅಲ್ಲು ಅರ್ಜುನ್ 'ಪುಷ್ಪಾ' ಸಿನಿಮಾದಲ್ಲಿ ತಮಿಳು ಸ್ಟಾರ್ ನಟ

  ಬಾಲಿವುಡ್ ಸಿನಿಮಾದ ರಿಮೇಕ್?

  ಬಾಲಿವುಡ್ ಸಿನಿಮಾದ ರಿಮೇಕ್?

  ಅಂದಹಾಗೆ ಈ ಸಿನಿಮಾ ಬಾಲಿವುಡ್ ನಿರ್ದೇಶಕ ಅನುರಾಗ್ ಅಶ್ಯಪ್ ಅವರ ಸಾರಥ್ಯದಲ್ಲಿ ಬಂದ ಮುಕ್ಕಾಬಾಜ್ ಸಿನಿಮಾದ ರಿಮೇಕ್ ಎನ್ನುು ವದಂತಿಯೂ ಇದೆ. 2017ರಲ್ಲಿ ಈ ಸಿನಿಮಾ ರಿಲೀಸ್ ಆಗಿತ್ತು. ಅದೆ ಸಿನಿಮಾವನ್ನು ಟಾಲಿವುಡ್ ನಲ್ಲಿ ರಿಮೇಕ್ ಮಾಡಲಾಗುತ್ತಿದೆ ಎನ್ನುವ ಮಾತು ಕೇಳಿಬರುತ್ತಿದೆ.

  1990 ದಶಕದ ಉತ್ತರ ಚೆನ್ನೈನ ಕಥೆ

  1990 ದಶಕದ ಉತ್ತರ ಚೆನ್ನೈನ ಕಥೆ

  ಸರ್ಪಟ್ಟ ಸಿನಿಮಾ 1990ರ ದಶಕದ ಉತ್ತರ ಚೆನ್ನೈನ ಬಾಕ್ಸಿಂಗ್ ಸಂಸ್ಕೃತಿಯ ಬಗ್ಗೆ ಇರುವ ಸಿನಿಮಾ ಇದಾಗಿದ್ದು, ತುಂಬಾ ವಾಸ್ತವಿಕ ಕಥೆಯಾಗಿದೆ ಎಂದು ಹೇಳಲಾಗುತ್ತಿದೆ. ಈ ಚಿತ್ರಕ್ಕಾಗಿ ಆರ್ಯ ಸಾಕಷ್ಟು ಶ್ರಮಿಸಿದ್ದಾರೆ. ದೇಹ ಹುರಿಗೊಳಿಸಲು ಹಗಲು ರಾತ್ರಿ ವರ್ಕೌಟ್ ಮಾಡಿದ್ದಾರೆ. ಇತ್ತೀಚಿಗೆ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿರುವ ಫೋಟೋ ಮತ್ತು ವಿಡಿಯೋಗಳನ್ನು ಆರ್ಯ ಹಂಚಿಕೊಂಡಿದ್ದರು.

  Prashant Neal ಗೆ ಕ್ಲಾಸ್ ತೆಗೆದುಕೊಂಡ ಕನ್ನಡಿಗರು | Hombale Films | Filmibeat Kannada
  ನಟ ಸೂರ್ಯ ನಟಿಸಬೇಕಿದ್ದ ಸಿನಿಮಾವಿದು

  ನಟ ಸೂರ್ಯ ನಟಿಸಬೇಕಿದ್ದ ಸಿನಿಮಾವಿದು

  ವಿಶೇಷ ಎಂದರೆ ಈ ಸಿನಿಮಾವನ್ನು ನಿರ್ದೇಶಕ ಪ ರಂಜಿತ್ ಸೂರ್ಯ ಅವರ ಜೊತೆ ಮಾಡಬೇಕು ಎಂದು ನಿರ್ಧರಿಸಿದ್ದರಂತೆ. ಆದರೆ ಅದು ಸಾಧ್ಯವಾಗಲಿಲ್ಲ. ಬಳಿಕ ಆರ್ಯರನ್ನ ಕೇಳಿದಾಗ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಸದ್ಯ ಫಸ್ಟ್ ಪೋಸ್ಟರ್ ಮೂಲಕ ಎಲ್ಲರ ಗಮನ ಸೆಳೆಯುತ್ತಿರುವ ಸಿನಿಮಾ ಮುಂದಿನ ವರ್ಷ ತೆರೆಗೆ ಬರಲಿದೆ.

  English summary
  Tamil Actor Arya Starrer Sarpatta Parambarai first poster released. This movie is directed by Pa Ranjith.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X