For Quick Alerts
  ALLOW NOTIFICATIONS  
  For Daily Alerts

  ಹೇಮಂತ್ ಮಾಡಿದ್ದ ಆರೋಪಗಳೇ ವಿಜೆ ಚಿತ್ರಾ ಸಾವಿಗೆ ಕಾರಣ!

  |

  ತಮಿಳು ಕಿರುತೆರೆ ನಟಿ ವಿಜೆ ಚಿತ್ರಾ ಅವರ ಸಾವಿನ ಎರಡು ದಿನ ಬಳಿಕ ಪತಿ ಹೇಮಂತ್ ಕುಮಾರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಚಿತ್ರಾ ಆತ್ಮಹತ್ಯೆ ಮಾಡಿಕೊಳ್ಳಲು ಹೇಮಂತ್ ಪ್ರಚೋದನೆ ನೀಡಿದ್ದಾರೆ ಎಂಬ ಆರೋಪದಲ್ಲಿ ಕೇಸ್ ದಾಖಲಾಗಿದೆ.

  ತನ್ನ ಮಗಳ ಮೇಲೆ ಹೇಮಂತ್ ಹಲ್ಲೆ ಮಾಡಿದ್ದಾನೆ ಎಂದು ಚಿತ್ರಾ ಅವರ ತಾಯಿ ಸಹ ಆರೋಪಿಸಿದ್ದರು. ಇದೀಗ, ಚಿತ್ರಾ ಮತ್ತು ಹೇಮಂತ್ ಕುಮಾರ್ ನಡುವೆ ವಿಚಾರವೊಂದಕ್ಕೆ ವೈಮನಸ್ಸು ಮೂಡಿತ್ತು. ಅದೇ ವಿಚಾರದಲ್ಲಿ ಜಗಳವೂ ಸಹ ಆಗಿದೆ. ಇದರಿಂದ ಮನನೊಂದು ನಟಿ ಸಾವಿಗೆ ಶರಣಾಗಿದ್ದಾಳೆ ಎಂದು ವರದಿಯಾಗಿದೆ.

  ನಟಿ ವಿಜೆ ಚೈತ್ರಾ ಆತ್ಮಹತ್ಯೆ ಪ್ರಕರಣ; ಪತಿ ಹೇಮಂತ್ ಕುಮಾರ್ ಅರೆಸ್ಟ್

  ಹೇಮಂತ್ ಕುಮಾರ್ ತನ್ನ ಪತ್ನಿ ವಿಜೆ ಚಿತ್ರಾ ಅವರ ವೃತ್ತಿ ಜೀವನದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಂತೆ. ತಾನಿ ನಟಿಸುತ್ತಿದ್ದ ಧಾರಾವಾಹಿಯ ಸಹನಟನೊಬ್ಬನ ಜೊತೆಗಿನ ಆತ್ಮೀಯತೆ ಬಗ್ಗೆ ಅನುಮಾನ ಹೊರಹಾಕಿದ್ದರಂತೆ.

  ಚಿತ್ರಾ ಸಾಯುವ ದಿನದಂದು ಸಹ ಸೆಟ್‌ಗೆ ಹೋಗಿದ್ದ ಹೇಮಂತ್, ಆಕೆಯ ಜೊತೆ ವಾಗ್ವಾದ ನಡೆಸಿದ್ದರು ಎಂಬ ವಿಚಾರ ಬಹಿರಂಗವಾಗಿದೆ. ಸಹ ಕಲಾವಿದರ ಸಮ್ಮುಖದಲ್ಲಿ ಚಿತ್ರಾ ಅವರ ನಿಷ್ಠೆಯನ್ನು ಪ್ರಶ್ನಿಸಿದ್ದರು. ಇದು ಸಹಜವಾಗಿ ಆಕೆಗೆ ನೋವುಂಟು ಮಾಡಿತ್ತು ಎಂದು ಹೇಳಲಾಗಿದೆ.

  ಹೋಟೆಲ್‌ಗೆ ಬಂದ ನಂತರವೂ ಇಬ್ಬರ ಮಧ್ಯೆ ಈ ವಿಚಾರವಾಗಿ ಜಗಳ ಆಗಿದೆ. ಇನ್ನು ಹೊಸದಾಗಿ ನಟಿಸುತ್ತಿದ್ದ ಕಾರ್ಯಕ್ರಮದ ಪ್ರೋಮೋವೊಂದರ ದೃಶ್ಯದ ಬಗ್ಗೆಯೂ ಹೇಮಂತ್ ಅಸಮಾಧಾನ ಹೊಂದಿದ್ದರು ಎಂದು ವರದಿಯಾಗಿದೆ.

  ನಟಿ ವಿಜೆ ಚಿತ್ರಾ ಆತ್ಮಹತ್ಯೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್

  ಇಷ್ಟೆಲ್ಲ ಆದ್ಮೇಲೆ ನಟಿಸುವುದನ್ನು ನಿಲ್ಲಿಸು ಎಂದು ಚಿತ್ರಾ ಅವರಿಗೆ ಹೇಮಂತ್ ತಾಕೀತು ಹಾಕಿದ್ದರಂತೆ. ಒಂದು ವೇಳೆ ನಟಿಸುವುದು ನಿಲ್ಲಿಸದಿದ್ದರೇ ಈ ಮದುವೆಯನ್ನು ರದ್ದುಗೊಳಿಸಬೇಕಾಗುತ್ತದೆ ಎಂದು ಬೆದರಿಕೆ ಸಹ ಹಾಕಿದ್ದರು ಎಂದು ಹೇಳಲಾಗಿದೆ.

  ಚಿರು ಅಣ್ಣ ಹೇಳಿದ್ದಕ್ಕೆ ನಾನು ಹಾಡು ಬರೆಯೋಕೆ ಸ್ಟಾರ್ಟ್ ಮಾಡಿದ್ದು | Chetan Kumar | Filmibeat Kannada

  ಬಹಳ ಇಷ್ಟಪಟ್ಟು ಮದುವೆಯಾದ ವ್ಯಕ್ತಿಯಿಂದ ಇಂತಹ ನಿಂದನೆಗಳು ಬಂದ ಮೇಲೆ ಅದನ್ನು ಸಹಿಸಲಾಗದೆ ವಿಜೆ ಚಿತ್ರ ಆತ್ಮಹತ್ಯೆಯಂತಹ ಕಟು ನಿರ್ಧಾರ ತೆಗೆದುಕೊಂಡಿರಬಹುದು ಎಂದು ಚರ್ಚೆಯಾಗಿದೆ.

  English summary
  Hemanth Kumar's serious allegations forced VJ Chithra to take suicide said report.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X