For Quick Alerts
  ALLOW NOTIFICATIONS  
  For Daily Alerts

  ಸೂರ್ಯ ಜೊತೆ ಹೊಂಬಾಳೆ ಒಪ್ಪಂದ: ಸಿನಿಮಾ ಸಾಮಾನ್ಯದ್ದಲ್ಲ

  |

  ಕೆಲವೇ ವರ್ಷಗಳಲ್ಲಿ ದೊಡ್ಡ ನಿರ್ಮಾಣ ಸಂಸ್ಥೆಯಾಗಿ ಕರ್ನಾಟಕ ಹೊಂಬಾಳೆ ಫಿಲಮ್ಸ್‌ ಬೆಳೆದು ನಿಂತಿದೆ. ಮೊದಲಿಗೆ ಕನ್ನಡ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿದ್ದ ಹೊಂಬಾಳೆ, ಇದೀಗ ಬೇರೆ ಭಾಷೆಗಳಲ್ಲಿಯೂ ಸೂಪರ್ ಸ್ಟಾರ್ ನಟರೊಟ್ಟಿಗೆ ಸಿನಿಮಾ ಮಾಡುತ್ತಿದೆ.

  ಈಗಾಗಲೇ ಮಲಯಾಳಂನಲ್ಲಿ ಸಿನಿಮಾ ಘೋಷಿಸಿರುವ ಹೊಂಬಾಳೆ, ತಮಿಳು ಹಾಗೂ ಹಿಂದಿ ಭಾಷೆಯಲ್ಲಿಯೂ ಸಿನಿಮಾ ಮಾಡಲು ಸಜ್ಜಾಗಿದೆ. ವಿಶೇಷವೆಂದರೆ ತಮಿಳಿನ ಸ್ಟಾರ್ ನಟ ಸೂರ್ಯ ಜೊತೆ ಹೊಂಬಾಳೆ ಸಿನಿಮಾ ಮಾಡಲು ಸಜ್ಜಾಗಿದೆಯಂತೆ.

  ಬಾಕ್ಸ್ ಆಫೀಸ್‌ನಲ್ಲಿ ಚಿನ್ನದ ಬೆಳೆ ಬೆಳೆದ ಹೊಂಬಾಳೆ; ಕೆಜಿಎಫ್ ದಾಖಲೆ ಹೊಡೆದುರುಳಿಸಿದ 'ಕಾಂತಾರ'!ಬಾಕ್ಸ್ ಆಫೀಸ್‌ನಲ್ಲಿ ಚಿನ್ನದ ಬೆಳೆ ಬೆಳೆದ ಹೊಂಬಾಳೆ; ಕೆಜಿಎಫ್ ದಾಖಲೆ ಹೊಡೆದುರುಳಿಸಿದ 'ಕಾಂತಾರ'!

  ಸೂರ್ಯ ಜೊತೆಗೆ ಸಾಮಾನ್ಯ ಸಿನಿಮಾ ಮಾಡುತ್ತಿಲ್ಲ ಹೊಂಬಾಳೆ, ಬದಲಿಗೆ ಸೂಪರ್ ಹೀರೋ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದೆ. ಹಾಲಿವುಡ್‌ನಲ್ಲಿ ಮಾರ್ವೆಲ್ ಮಾದರಿಯಲ್ಲಿಯೇ ಕಾರ್ಟೂನ್ ಅನ್ನು ಸೂಪರ್ ಹೀರೋ ಸಿನಿಮಾ ಮಾಡಲು ಮುಂದಾಗಿದೆ ಹೊಂಬಾಳೆ.

  'ದಿ ಸ್ಟೀಲ್ ಕ್ಲಾವ್' ಕಾಮಿಕ್ಸ್

  'ದಿ ಸ್ಟೀಲ್ ಕ್ಲಾವ್' ಕಾಮಿಕ್ಸ್

  1962 ರಲ್ಲಿ ಮೊದಲ ಬಾರಿಗೆ ಪಬ್ಲಿಷ್ ಆದ 'ದಿ ಸ್ಟೀಲ್ ಕ್ಲಾವ್' ಕಾಮಿಕ್ಸ್ ಅನ್ನು ಆಧರಿಸಿ ಸೂಪರ್ ಹೀರೋ ಸಿನಿಮಾ ನಿರ್ಮಾಣಕ್ಕೆ ಹೊಂಬಾಳೆ ಮುಂದಾಗಿದ್ದು, ಅದ್ಧೂರಿ ಸಿನಿಮಾ ಇದಾಗಿರಲಿದೆ. ಸಿನಿಮಾದಲ್ಲಿ ನಾಯಕ ನಟರಾಗಿ ಸೂರ್ಯ ನಟಿಸಲಿದ್ದು, ಸಿನಿಮಾವನ್ನು ತಮಿಳಿನ ಖ್ಯಾತ ನಿರ್ದೇಶಕ ಲೋಕೇಶ್ ಕನಕರಾಜನ್ ನಿರ್ದೇಶನ ಮಾಡಲಿದ್ದಾರೆ.

  ತಮಿಳಿನಲ್ಲಿ 'ಇರುಂಬುಕೈ ಮಾಯಾವಿ'

  ತಮಿಳಿನಲ್ಲಿ 'ಇರುಂಬುಕೈ ಮಾಯಾವಿ'

  ಇಂಗ್ಲೀಷ್ ಕಾರ್ಟೂನ್ ಅನ್ನು ತಮಿಳಿನಲ್ಲಿ ಸಿನಿಮಾ ಮಾಡುತ್ತಿರುವುದಕ್ಕೆ ಕಾರಣವೂ ಇದೆ. 'ದಿ ಸ್ಟೀಲ್ ಕ್ಲಾವ್' ತಮಿಳುನಾಡಿನಲ್ಲಿ ಭಾರಿ ಜನಪ್ರಿಯತೆ ಹೊಂದಿರುವ ಕಾರ್ಟೂನ್. ತಮಿಳುನಾಡು ಮಾತ್ರವೇ ಅಲ್ಲದೆ ಕೇರಳ, ಆಂಧ್ರಗಳಲ್ಲಿಯೂ ಸ್ಟೀಲ್ ಕ್ಲಾವ್ ಸ್ಥಳೀಯ ಭಾಷೆಗಳಲ್ಲಿ ಸ್ಥಳೀಯ ಹೆಸರಿನಲ್ಲಿ ಬಹಳ ಜನಪ್ರಿಯವಾಗಿದೆ. ತಮಿಳಿನಲ್ಲಿ 'ಇರುಂಬುಕೈ ಮಾಯಾವಿ' ಎಂದು, ತೆಲುಗಿನಲ್ಲಿ 'ಉಕ್ಕು ಕೈ ಮಾಯಾವಿ' ಎಂಬ ಹೆಸರಿನಲ್ಲಿ ಮುದ್ರಣವಾಗುತ್ತಿತ್ತು.

  ಕಾರ್ಟೂನಿನ ಕತೆ ಏನು?

  ಕಾರ್ಟೂನಿನ ಕತೆ ಏನು?

  ವಿಜ್ಞಾನಿಯೊಬ್ಬ ಅಪಘಾತವೊಂದರಲ್ಲಿ ಮುಂಗೈ ಕಳೆದುಕೊಳ್ಳುತ್ತಾನೆ. ಆ ಬಳಿಕ ಉಕ್ಕಿನ ಮುಂಗೈ ಅನ್ನು ಧರಿಸಿ ನಿತ್ಯದ ಜೀವನಕ್ಕೆ ಮರಳುತ್ತಾನೆ. ಅವನ ಜೀವನದಲ್ಲಿ ನಡೆವ ಮತ್ತೊಂದು ಅಪಘಾತದಿಂದ ಅವನಿಗೆ ಕೆಲವು ಶಕ್ತಿಗಳು ಪ್ರಾಪ್ತಿಯಾಗುತ್ತವೆ. ಕೆಲ ಕ್ಷಣಗಳ ಕಾಲ ಅವನು ಮಾಯವಾಗಬಲ್ಲ ಶಕ್ತಿ ಪಡೆಯುತ್ತಾನೆ. ಅದನ್ನು ಬಳಸಿ ಆತ ಏನೇನೆಲ್ಲ ಮಾಡುತ್ತಾನೆ ಎಂಬುದೇ ಕತೆ. ಇದೇ ಮಾದರಿಯಲ್ಲಿ ಹಲವು ಸಿನಿಮಾಗಳು ಸಹ ಬಂದಿವೆ. ಉಕ್ಕಿನ ಕೈ ಬದಲಿಗೆ ವಾಚ್ ಬಳಸಿ ಮಾಯವಾಗುವ ಸಿನಿಮಾ ಕನ್ನಡದಲ್ಲಿಯೂ ಇದೆ. ಅಂಬರೀಶ್ ಆ ಸಿನಿಮಾದಲ್ಲಿ ನಟಿಸಿದ್ದಾರೆ.

  ಸೂರ್ಯ-ಲೋಕೇಶ್ ಇಬ್ಬರೂ ಬ್ಯುಸಿ

  ಸೂರ್ಯ-ಲೋಕೇಶ್ ಇಬ್ಬರೂ ಬ್ಯುಸಿ

  ಇನ್ನು ಲೋಕೇಶ್ ಕನಕರಾಜನ್ ತಮಿಳಿನಲ್ಲಿ ಸರಣಿ ಹಿಟ್ ನೀಡಿರುವ ನಿರ್ದೇಶಕ. ಇದೀಗ ಸೂರ್ಯ ವಿಲನ್ ಆಗಿ ನಟಿಸುತ್ತಿರುವ 'ವಿಕ್ರಂ' ಸಿನಿಮಾದ ಮುಂದಿನ ಭಾಗದ ನಿರ್ದೇಶನಕ್ಕೆ ಅಣಿಯಾಗುತ್ತಿದ್ದಾರೆ. ಸೂರ್ಯ ಸಹ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇಬ್ಬರೂ ತಮ್ಮ ಈಗಿನ ಸಿನಿಮಾಗಳಿಂದ ಬಿಡುವು ಪಡೆದುಕೊಂಡ ಬಳಿಕವಷ್ಟೆ ಕಾರ್ಟೂನ್ ಆಧರಿತ ಸಿನಿಮಾ ಸೆಟ್ಟೇರಲಿದೆ. ಹೊಂಬಾಳೆ ಒಟ್ಟೊಟ್ಟಿಗೆ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದೆ.

  English summary
  Hombale to produce a super hero movie with super star Suriya in Tamil. Lokesh Kanagaraj will direct the movie.
  Tuesday, November 1, 2022, 14:17
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X