twitter
    For Quick Alerts
    ALLOW NOTIFICATIONS  
    For Daily Alerts

    'ತಲೈವಿ'ಯಲ್ಲಿ ಕಂಗನಾ: ಜಯಲಲಿತಾ ಆಸೆ ಬೇರೆಯಾಗಿತ್ತು

    |

    ನಟಿ, ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಜೀವನ ಕುರಿತ 'ತಲೈವಿ' ಸಿನಿಮಾ ತೆರೆಗೆ ಬಂದಿದ್ದು, ಸಿನಿಮಾಕ್ಕೆ ಮಿಶ್ರ ಪ್ರಕತಿಕ್ರಿಯೆ ವ್ಯಕ್ತವಾಗಿದೆ. ನಟಿ ಕಂಗನಾ ರನೌತ್ ಜಯಲಲಿತಾ ಪಾತ್ರದಲ್ಲಿ ನಟಿಸಿದ್ದು, ಅವರ ನಟನೆ ಬಗ್ಗೆ ಒಳ್ಳೆ ಅಭಿಪ್ರಾಯಗಳೇ ವ್ಯಕ್ತವಾಗಿವೆ.

    ಆದರೆ ಜಯಲಲಿತಾ ಆಸೆ ಬೇರೆಯಾಗಿತ್ತು, ತಮ್ಮ ಜೀವನ ಸಿನಿಮಾ ಆದರೆ ಇಂಥಹಾ ನಟಿಯೇ ತಮ್ಮ ಪಾತ್ರದಲ್ಲಿ ನಟಿಸಬೇಕು ಎಂದು ಈ ಬದುಕಿದ್ದಾಗ ಜಯಲಲಿತಾ ಹೇಳಿಕೊಂಡಿದ್ದರು.

    ನಟಿ, ಪತ್ರಕರ್ತೆ ಸೆಮಿ ಗೆರೆವಾಲ್‌ ಹಿಂದೊಮ್ಮೆ ಜಯಲಲಿತಾ ಸಂದರ್ಶನ ಮಾಡಿದ್ದರು, ಬಹು ಜನಪ್ರಿಯವಾಗಿದ್ದ ಈ ಸಂದರ್ಶನದಲ್ಲಿ ಅನೇಕ ವಿಷಯಗಳನ್ನು ಜಯಲಲಿತಾ ಮಾತನಾಡಿದ್ದರು. ರಾಜಕಾರಣಿಯೊಬ್ಬರ ಅತ್ಯುತ್ತಮ ಸಂದರ್ಶನಗಳಲ್ಲಿ ಅದು ಸಹ ಒಂದು ಎಂದು ದಾಖಲಾಗಿದೆ. ಈ ಸಂದರ್ಶನದ ಸಮಯದಲ್ಲಿ ತಮ್ಮ ಜೀವನ ಸಿನಿಮಾ ಆದರೆ ಯಾವ ನಟಿ ತಮ್ಮ ಪಾತ್ರ ನಿರ್ವಹಿಸಬೇಕು ಎಂದು ಹೇಳಿದ್ದರು.

    ಒಂದೊಮ್ಮೆ ತಮ್ಮ ಜೀವನ ಸಿನಿಮಾ ಆದರೆ ತಮ್ಮ ಪಾತ್ರವನ್ನು ನಟಿ ಐಶ್ವರ್ಯಾ ರೈ ನಿರ್ವಹಿಸಬೇಕು ಎಂಬ ಆಸೆಯಿತ್ತು. ಈ ಬಗ್ಗೆ ಸೆಮಿ ಗೆರೆವಾಲ್ ಬಳಿ ಜಯಲಲಿತಾ ಹೇಳಿಕೊಂಡಿದ್ದರು. ಈ ವಿಷಯವನ್ನು ಇದೀಗ ಸಿಮಿ ಗೆರೆವಾಲ್ ನೆನಪಿಸಿಕೊಂಡಿದ್ದಾರೆ.

    ಜಯಲಲಿತಾ ಆಸೆ ಬೇರೆಯಾಗಿತ್ತು: ಸಿಮಿ

    ಜಯಲಲಿತಾ ಆಸೆ ಬೇರೆಯಾಗಿತ್ತು: ಸಿಮಿ

    ಟ್ವೀಟ್ ಮಾಡಿರುವ ಗೆರೆವಾಲ್, ''ನಾನು ಕಂಗನಾರ ಮೂರ್ಖತನದ ಟ್ವೀಟ್‌ಗಳನ್ನು ಬೆಂಬಲಿಸುವುದಿಲ್ಲ. ಆದರೆ ಆಕೆಯ ನಟನೆಯನ್ನು ಸದಾ ಮೆಚ್ಚಿಕೊಳ್ಳುತ್ತೇನೆ. 'ತಲೈವಿ' ಸಿನಿಮಾದ ಪಾತ್ರಕ್ಕಾಗಿ ಆಕೆ ತನ್ನನ್ನು ತಾನು ಸಮರ್ಪಿಸಿಕೊಂಡಿದ್ದಾಳೆ. ಜಯಲಲಿತಾಗೆ, ತಮ್ಮ ಪಾತ್ರದಲ್ಲಿ ಐಶ್ವರ್ಯಾ ರೈ ನಟಿಸಬೇಕು ಎಂಬ ಆಸೆ ಇತ್ತು. ಆದರೆ ಜಯಲಲಿತಾ ಈಗ ಇದ್ದಿದ್ದರೆ ಕಂಗನಾ ನಟನೆಯನ್ನು ಜಯಲಲಿತಾ ಒಪ್ಪಿಕೊಳ್ಳುತ್ತಿದ್ದರು ಎನಿಸುತ್ತದೆ'' ಎಂದಿದ್ದಾರೆ ಸಿಮಿ ಗೆರೆವಾಲ್.

    ಬಾಲ್ಯದ ಘಟನೆಗಳನ್ನು ಕೈಬಿಡಬಾರದಿತ್ತು: ಸಿಮಿ ಗೆರೆವಾಲ್

    ಬಾಲ್ಯದ ಘಟನೆಗಳನ್ನು ಕೈಬಿಡಬಾರದಿತ್ತು: ಸಿಮಿ ಗೆರೆವಾಲ್

    ಮತ್ತೊಂದು ಟ್ವೀಟ್‌ನಲ್ಲಿ, ''ನೀವು ಅದು ಅರವಿಂದ ಸ್ವಾಮಿ ಎಂಬುದನ್ನು ಸಹ ಮರೆತುಬಿಡುತ್ತೀರಿ. ಅರವಿಂದ ಸ್ವಾಮಿ ಎಂಜಿಆರ್ ಪಾತ್ರದಲ್ಲಿ ಅಷ್ಟು ಅದ್ಭುತವಾಗಿ ನಟಿಸಿದ್ದಾರೆ. ಆದರೆ ಸಿನಿಮಾ ನಿರ್ದೇಶಕರು ಜಯಲಲಿತಾರ ಬಾಲ್ಯವನ್ನು ಸಿನಿಮಾದಲ್ಲಿ ತೋರಿಸಿಲ್ಲ. ಜಯಲಲಿತಾರ ಬಾಲ್ಯದ ಚಿತ್ರಣವನ್ನು ಸಿನಿಮಾದಲ್ಲಿ ಕಟ್ಟಿಕೊಡದಿರುವುದು ನನಗಂತೂ ಬೇಸರವಾಯಿತು, ಒಟ್ಟಾರೆ ಸಿನಿಮಾ ಮೇಲೆ ದೊಡ್ಡ ಪರಿಣಾಮವನ್ನು ಅವರ ಬಾಲ್ಯದ ಕತೆ ಬೀರುತ್ತಿಲ್ಲ. ಇದು ನನ್ನ ಅಭಿಪ್ರಾಯವಷ್ಟೆ'' ಎಂದಿದ್ದಾರೆ ಸಿಮಿ ಗೆರೆವಾಲ್.

    ಸಿನಿಮಾದ ಬಗ್ಗೆ ಮುಖಂಡರ ಆಕ್ಷೇಪ

    ಸಿನಿಮಾದ ಬಗ್ಗೆ ಮುಖಂಡರ ಆಕ್ಷೇಪ

    'ತಲೈವಿ' ಸಿನಿಮಾ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿರುವ ಬೆನ್ನಲ್ಲೆ ಕೆಲವು ಎಐಎಡಿಎಂಕೆ ಪಕ್ಷದ ಮುಖಂಡರು ಸಿನಿಮಾದಲ್ಲಿನ ಕೆಲವು ದೃಶ್ಯಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜಯಲಲಿತಾ ಹಾಗೂ ಎಂಜಿಆರ್ ಬಗ್ಗೆ ಕೆಲವು ತಪ್ಪು ಮಾಹಿತಿಗಳನ್ನು ಸಿನಿಮಾವು ಒಳಗೊಂಡಿದೆ. ಎಂಜಿಆರ್, ಮಂತ್ರಿ ಸ್ಥಾನಕ್ಕೆ ಆಸೆ ಪಟ್ಟಿದ್ದರು, ಜಯಲಲಿತಾ ಎಂಜಿಆರ್‌ಗೆ ಗೊತ್ತಿಲ್ಲದೆ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಜೊತೆ ಸಂಪರ್ಕ ಹೊಂದಿದ್ದರು. ಎಂಜಿಆರ್, ಜಯಲಲಿತಾರನ್ನು ಕೆಲವು ಸಂದರ್ಭಗಳಲ್ಲಿ ಕ್ಷುಲ್ಲಕವಾಗಿ ಕಂಡಿದ್ದರು ಎಂದೆಲ್ಲ ತೋರಿಸಲಾಗಿದೆ ಇದೆಲ್ಲ ಸುಳ್ಳು, ಈ ದೃಶ್ಯಗಳನ್ನು ತೆಗೆದರೆ ಸಿನಿಮಾ ಸೂಪರ್ ಹಿಟ್ ಆಗಲಿದೆ ಎಂದು ಎಐಎಡಿಎಂಕೆ ಪಕ್ಷದ ಮುಖಂಡ ಜಯಕುಮಾರ್ ಹೇಳಿದ್ದಾರೆ.

    ಎ.ಎಲ್.ವಿಜಯ್ ನಿರ್ದೇಶನದ ಸಿನಿಮಾ

    ಎ.ಎಲ್.ವಿಜಯ್ ನಿರ್ದೇಶನದ ಸಿನಿಮಾ

    'ತಲೈವಿ' ಸಿನಿಮಾದಲ್ಲಿ ಜಯಲಲಿತಾ ಪಾತ್ರದಲ್ಲಿ ಕಂಗನಾ ನಟಿಸಿದ್ದಾರೆ. ಎಂಜಿಆರ್ ಪಾತ್ರದಲ್ಲಿ ಅರವಿಂದ ಸ್ವಾಮಿ, ಕರುಣಾನಿಧಿ ಪಾತ್ರದಲ್ಲಿ ನಾಸರ್ ನಟಿಸಿದ್ದಾರೆ. ಸಿನಿಮಾವನ್ನು ಎಎಲ್ ವಿಜಯ್, ಆರ್.ಎಂ.ವೀರಪ್ಪನ್ ಪಾತ್ರದಲ್ಲಿ ಸಮುದ್ರಕಿಣಿ, ಶಶಿಕಲಾ ಪಾತ್ರದಲ್ಲಿ ಪೂರ್ಣಾ ನಟಿಸಿದ್ದಾರೆ. ಸಿನಿಮಾಕ್ಕೆ ಕತೆ, ಚಿತ್ರಕತೆಯನ್ನು ವಿಜಯೇಂದ್ರ ಪ್ರಸಾದ್, ಮಧು ಕರ್ಕಿ, ರಜತ್ ಅರೋರ ಬರೆದಿದ್ದಾರೆ. 'ತಲೈವಿ' ಸಿನಿಮಾ ಇಂದು ಬಿಡುಗಡೆ ಆಗಿದ್ದು ಸಿನಿಮಾದ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

    English summary
    Former CM of Tamil Nadu Jayalalitha wanted Aishwarya Rai to play her role in movie not Kangana Ranaut.
    Sunday, September 12, 2021, 9:23
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X