For Quick Alerts
  ALLOW NOTIFICATIONS  
  For Daily Alerts

  ತಮಿಳು ನಟ ವಿಜಯ್‌ಗೆ 1 ಲಕ್ಷ ರೂ ದಂಡ ವಿಧಿಸಿದ ಮದ್ರಾಸ್ ಕೋರ್ಟ್

  |

  ತಮಿಳು ನಟ ವಿಜಯ್‌ಗೆ ಮದ್ರಾಸ್ ಹೈ ಕೋರ್ಟ್ 1 ಲಕ್ಷ ರೂಪಾಯಿ ದಂಡ ವಿಧಿಸಿದೆ. ಎರಡು ವಾರದೊಳಗೆ ದಂಡದ ಹಣವನ್ನು ಮುಖ್ಯಮಂತ್ರಿ ಕೊರೊನಾ ಪರಿಹಾರ ನಿಧಿಗೆ ಪಾವತಿಸುವಂತೆ ಜುಲೈ 13 ರಂದು ನ್ಯಾಯಾಲಯ ನಿರ್ದೇಶನ ನೀಡಿದೆ.

  ವಿಜಯ್ ಬಳಸುತ್ತಿರುವ ದುಬಾರಿ ಕಾರೊಂದನ್ನು ವಿದೇಶದಿಂದ ಆಮದು ಮಾಡಿಕೊಂಡಿರುವುದಕ್ಕೆ ಸಂಬಂಧಿಸಿದಂತೆ ತೆರಿಗೆ ಪಾವತಿಸಬೇಕಿತ್ತು. ಅದನ್ನು ವಿಜಯ್ ಕಟ್ಟಿರಲಿಲ್ಲ. ಹಾಗಾಗಿ, ನ್ಯಾಯಾಲಯ ಈಗ ದಂಡ ಹಾಕಿದೆ ಎಂದು ಎಎನ್‌ಐ ವರದಿ ಮಾಡಿದೆ.

  ದಳಪತಿ ವಿಜಯ್ ಮುಂದಿನ ಸಿನಿಮಾಗೆ ತೆಲುಗು ಸ್ಟಾರ್ ನಟನ ತಂದೆ ನಿರ್ಮಾಣದಳಪತಿ ವಿಜಯ್ ಮುಂದಿನ ಸಿನಿಮಾಗೆ ತೆಲುಗು ಸ್ಟಾರ್ ನಟನ ತಂದೆ ನಿರ್ಮಾಣ

  ಸುಮಾರು ಮೂರು ಕೋಟಿ ಬೆಲೆ ಬಾಳುವ ರೋಲ್ಸ್ ರಾಯ್ಸ್ ಕಾರು ಖರೀದಿಸಿದ್ದ ವಿಜಯ್ ಮೂಲ ಬೆಲೆಯ ಶೇಕಡಾ 20 ರಷ್ಟು ತೆರಿಗೆ ಪಾವತಿಸಬೇಕಿತ್ತು. 2012ರಲ್ಲಿ ಇಂಗ್ಲೆಂಡ್‌ನಿಂದ ಕಾರು ಆಮದು ಮಾಡಿಕೊಂಡಿದ್ದರು. ದೊಡ್ಡ ಮೊತ್ತದ ತೆರಿಗೆ ಪಾವತಿಸಲು ಸಾಧ್ಯವಿಲ್ಲ, ಅದರಿಂದ ವಿನಾಯಿತಿ ನೀಡಿ ಎಂದು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. ಬಹಳ ವರ್ಷಗಳಿಂದ ಪ್ರಗತಿಯಲ್ಲಿದ್ದ ಪ್ರಕರಣಕ್ಕೆ ಇಂದು ಕ್ಲೈಮ್ಯಾಕ್ಸ್ ಸಿಕ್ಕಿದ್ದು, ಕೋರ್ಟ್ ವಿಜಯ್ ಅರ್ಜಿ ತಿರಸ್ಕರಿಸಿ ಛೀಮಾರಿ ಹಾಕಿದೆ.

  ಕೆಲವು ದಿನಗಳ ಹಿಂದೆ ನೇರಳೆ-ಬಣ್ಣದ ಸ್ವಾಂಕಿ ರೋಲ್ಸ್ ರಾಯ್ಸ್ ಕಾರನ್ನು ಚೆನ್ನೈನಲ್ಲಿ ಸುತ್ತಾಡಿತ್ತು. ಇದು ನಟ ವಿಜಯ್ ಅವರ ಕಾರು, ಅವರೇ ಚಾಲನೆ ಮಾಡುತ್ತಿದ್ದರು ಎಂದು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ವೈರಲ್ ಆಗಿತ್ತು. ಆದರೆ, ಆ ಕಾರು ವಿಜಯ್ ಅವರದ್ದೇ ಹಾಗೂ ವಿಜಯ್ ಸ್ವತಃ ಕಾರು ಚಾಲನೆ ಮಾಡುತ್ತಿದ್ದರು ಎನ್ನುವುದು ಖಾತ್ರಿಯಿಲ್ಲ.

  ಇನ್ನು ವಿಜಯ್ ಸಿನಿಮಾ ವಿಚಾರಕ್ಕೆ ಬಂದ್ರೆ ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದಲ್ಲಿ ಹೊಸ ಸಿನಿಮಾ ಮಾಡ್ತಿದ್ದು, ಈ ಚಿತ್ರಕ್ಕೆ 'ಬೀಸ್ಟ್' ಎಂದು ಹೆಸರಿಡಲಾಗಿದೆ. ಸನ್ ಪಿಕ್ಚರ್ಸ್ ಈ ಪ್ರಾಜೆಕ್ಟ್‌ಗೆ ಬಂಡವಾಳ ಹಾಕಿದ್ದಾರೆ.

  ವಿಜಯ್ ಸೇತುಪತಿಯ ಹೊಸ ರಿಯಾಲಿಟಿ ಶೋ | Filmibeat Kannada

  ಮೊದಲ ಹಂತದ ಚಿತ್ರೀಕರಣ ಜಾರ್ಜಿಯಾದಲ್ಲಿ ನಡೆದಿತ್ತು. ಇತ್ತೀಚಿಗೆ ಎರಡನೇ ಹಂತದ ಶೂಟಿಂಗ್ ಚೆನ್ನೈನಲ್ಲಿ ಆರಂಭವಾಗಿರುವ ಬಗ್ಗೆ ಮಾಹಿತಿ ಇದೆ. ಇನ್ನುಳಿದಂತೆ ಪೂಜಾ ಹೆಗ್ಡೆ ನಾಯಕಿಯಾಗಿದ್ದು, ಯೋಗಿ ಬಾಬು ಸಹ ತಾರಬಳಗದಲ್ಲಿದ್ದಾರೆ.

  English summary
  Madras high court imposes rs 1 lakh fine on tamil actor vijay.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X