For Quick Alerts
  ALLOW NOTIFICATIONS  
  For Daily Alerts

  ನಯನತಾರಾ ಮೈಯಲ್ಲಿ ಬಂತು ಬಂತು ಕರೆಂಟು ಬಂತು

  By ಶಂಕರ್, ಚೆನ್ನೈ
  |

  ತಮ್ಮ ಆಕರ್ಷಕ ಮೈಕಟ್ಟಿನಿಂದ ದಕ್ಷಿಣ ಭಾರತದ ಪ್ರೇಕ್ಷಕರನ್ನು ಸೆಳೆದ ತಾರೆ ನಯನತಾರಾ. ದಕ್ಷಿಣ ಭಾರತದಲ್ಲಿ ತಮ್ಮದೇ ಆದಂತಹ ಡಿಮ್ಯಾಂಡ್ ಅವರಿಗಿದೆ. ದಕ್ಷಿಣದಲ್ಲಿ ನಂಬರ್ ಒನ್ ಹೀರೋಯಿನ್ ಆಗಿ ಬೆಳೆದದ್ದು ಈ ತಾರೆಯ ಮತ್ತೊಂದು ವಿಶೇಷ.

  ಡಾನ್ಸ್ ಮಾಸ್ಟರ್ ಪ್ರಭುದೇವ ಜೊತೆಗಿನ ಚೈತ್ರದ ಪ್ರೇಮಾಂಜಲಿ ಕಡೆಗೆ ಭಾಷ್ಪಾಂಜಲಿ ಆಗಿದ್ದು ಗೊತ್ತೇ ಇದೆ. ಇದೇ ಕೊರಗಿನಲ್ಲಿ ಸ್ವಲ್ಪ ಸಮಯ ಚಿತ್ರರಂಗದಿಂದಲೂ ನಯನಿ ದೂರ ಸರಿದಿದ್ದರು. ಬಳಿಕ ಮಾನಸಿಕವಾಗಿ ಚೇತರಿಸಿಕೊಂಡು ಹಿಂತಿರುಗಿದರು.

  ತೆಲುಗು, ತಮಿಳು ಚಿತ್ರಗಳಲ್ಲಿ ತೊಡಗಿಕೊಂಡರು. ಐಟಂ ಹಾಡುಗಳಿಗೆ ಆಫರ್ ಮೇಲೆ ಆಫರ್ ಗಳು ಬಂದವು. ಆದರೂ ನಾನು ಐಟಂ ಮಾಡಲ್ಲ ಎಂದು ಗರತಿ ಗೌರಮ್ಮನಂತೆ ಕೂತಿದ್ದರು. ಈಗ ಅದೇನಾಯಿತೋ ಏನೋ ನಯನತಾರಾ ಮೈಯಲ್ಲಿ ವಿದ್ಯುತ್ ಸಂಚಾರವಾಗಿದೆ.

  ಐಟಂ ಸಾಂಗ್ ಗೆ ಎಸ್ ಎಂದ ನಯನತಾರಾ

  ಐಟಂ ಸಾಂಗ್ ಗೆ ಎಸ್ ಎಂದ ನಯನತಾರಾ

  ಈಗ ಇದ್ದಕ್ಕಿದ್ದಂತೆ ಬಂತು ಬಂತು ಕರೆಂಟು ಬಂತು ಎಂದು ಎದ್ದು ಕುಳಿತಿದ್ದಾರೆ ನಯನತಾರಾ. ಅವರು ಕಡೆಗೂ ಐಟಂ ಸಾಂಗ್ ಮಾಡಲು ಎಸ್ ಎಂದಿದ್ದಾರೆ. ತಮಿಳಿನ ಚಿತ್ರವೊಂದರಲ್ಲಿ ನಯನತಾರಾ ಐಟಂ ಡಾನ್ಸ್ ಮಾಡಲಿದ್ದಾರೆ. ಆ ಚಿತ್ರದ ಹೆಸರು 'ಎಥಿರ್ ನೀಚಲ್'.

  ಕೊಲವರಿ ಡಿ ಶೈಲಿಯ ಹಾಡಿಗೆ ಹೆಜ್ಜೆ

  ಕೊಲವರಿ ಡಿ ಶೈಲಿಯ ಹಾಡಿಗೆ ಹೆಜ್ಜೆ

  ಈ ಚಿತ್ರ ಏಪ್ರಿಲ್ ಕೊನೆಯ ವಾರದಲ್ಲಿ ಬಿಡುಗಡೆಯಾಗುತ್ತಿದೆ. ಕೊಲವರಿ ಡಿ ಶೈಲಿಯಲ್ಲಿ ಹಾಡು ಇರುತ್ತಂತೆ. ಚಿತ್ರದಲ್ಲಿ ಲವ್ ಫೆಯಿಲೂರ್ ಆದ ಹಿನ್ನೆಲೆಯಲ್ಲಿ ಈ ಹಾಡು ಬರುತ್ತದಂತೆ ಎಂಬ ವಿವರಗಳನ್ನು ನಿರ್ಮಾಪರು ನೀಡಿದ್ದಾರೆ.

  ಧನುಷ್, ಕಾರ್ತಿಕ್ ಜೊತೆ ನಯನಿ ಹೆಜ್ಜೆ

  ಧನುಷ್, ಕಾರ್ತಿಕ್ ಜೊತೆ ನಯನಿ ಹೆಜ್ಜೆ

  ನಯನತಾರಾ ಜೊತೆ ಈ ಹಾಡಿನಲ್ಲಿ ಧನುಶ್ ಹಾಗೂ ಕಾರ್ತಿಕ್ ಸಹ ಹೆಜ್ಜೆ ಹಾಕಿದ್ದಾರೆ. ಚಿತ್ರದ ಪ್ರಮುಖ ಹೈಲೈಟ್ ಗಳಲ್ಲಿ ಇದೂ ಒಂದು ಎನ್ನಲಾಗಿದೆ.

  ಕಡೆ ಘಳಿಗೆಯಲ್ಲಿ ಬಂದ ನಯನತಾರಾ

  ಕಡೆ ಘಳಿಗೆಯಲ್ಲಿ ಬಂದ ನಯನತಾರಾ

  ಈ ಹಾಡನ್ನು ಕೇವಲ ಧನುಷ್ ಅವರೊಂದಿಗೆ ಮಾತ್ರ ಚಿತ್ರೀಕರಿಸಲು ಉದ್ದೇಶಿಸಲಾಗಿತ್ತು. ಬಳಿಕ ಹೀರೋಯಿನ್ ಒಬ್ಬರು ಇದ್ದರೆ ಕಲರ್ ಫುಲ್ ಆಗಿರುತ್ತದೆ ಎಂದು ಭಾವಿಸಿ ನಯನತಾರಾ ಅವರನ್ನು ಸಂಪರ್ಕಿಸಿದರಂತೆ. ಆಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

  ಇನ್ನೇನಿದ್ದರೂ ಪ್ರೇಕ್ಷಕರ ಹೃದಯದಲ್ಲಿ ಕರೆಂಟ್

  ಇನ್ನೇನಿದ್ದರೂ ಪ್ರೇಕ್ಷಕರ ಹೃದಯದಲ್ಲಿ ಕರೆಂಟ್

  ಇನ್ನೇನಿದ್ದರೂ ಪ್ರೇಕ್ಷಕರ ಹೃದಯದಲ್ಲಿ ಬಂತು ಬಂತು ಕರೆಂಟು ಬಂತು. ಈ ಹಿಂದೊಮ್ಮೆ ಬಿಲ್ ಕುಲ್ ಎಂದರೂ ಬಿಕಿನಿ ತೊಡಲ್ಲ ಎಂದಿದ್ದರು ನಯನಿ. ಬಳಿಕ ಬಿಕಿನಿಯಲ್ಲಿ ಬಳುಕುತ್ತಾ ಬಂದರು. ಪಡ್ಡೆಗಳು, ಕಲಾರಸಿಕರು, ಕಲಾರಾಧಕರು, ಕಲಾಪಿಪಾಸಕರು ಕಣ್ಣು ತುಂಬಿಕೊಂಡರು.

  English summary
  Nayantara gave green signal for an item number. Yes, Nayantara agreed to do the special number in forthcoming Tamil film Ethir Neechal, which is produced by Dhanush. The actor requested her to shake the legs for the song and the Billa girl, without a second thought, accepted the offer.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X