For Quick Alerts
  ALLOW NOTIFICATIONS  
  For Daily Alerts

  ಶಾರುಖ್ ಖಾನ್ ಜೊತೆ ನಟಿಸಲು ನಿರಾಕರಿಸಿದ ನಾಯನತಾರಾ: ಅಸಲಿ ಕಾರಣ ಬಹಿರಂಗ

  |

  ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟಿ ನಯನತಾರಾ ಇತ್ತೀಚಿಗೆ ಮದುವೆ ವಿಚಾರವಾಗಿ ಸುದ್ದಿಯಲ್ಲಿದ್ದರು. ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ಹಸೆಮಣೆ ಏರಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಆದರೆ ಈ ಬಗ್ಗೆ ನಟಿ ಎಲ್ಲಿಯೂ ಅಧಿಕೃತವಾಗಿ ಹೇಳಿಕೊಂಡಿಲ್ಲ. ಕಳೆದ ಕೆಲವು ವರ್ಷಗಳಿಂದ ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ನಯನತಾರಾ ಡೇಟಿಂಗ್ ನಲ್ಲಿದ್ದಾರೆ.

  Kiccha Sudeep Adopts 4 Government School | Filmibeat Kannada

  ಇದೀಗ ನಯನತಾರಾ ಮತ್ತೊಂದು ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಬಾಲಿವುಡ್ ಕಿಂಗ್ ಖಾನ್ ಶಾರುಖ್ ಜೊತೆ ನಟಿಸಲು ನಯನತಾರಾ ನಿರಾಕರಿಸುದ್ದರು ಎನ್ನುವ ಸುದ್ದಿ ಈಗ ವೈರಲ್ ಆಗಿದೆ. ಶಾರುಖ್ ಜೊತೆ ನಟಿಸಲು ನಟಮಣಿಯರು ತುದಿಗಾಲಿನಲ್ಲಿ ನಿಂತಿರುತ್ತಾರೆ. ಒಂದು ದೃಶ್ಯವಾದರು ಸಾಕು ಶಾರುಖ್ ಜೊತೆ ಕಾಣಿಸಿಕೊಳ್ಳಬೇಕು ಎಂದು ಕನಸುಕಂಡಿರುತ್ತಾರೆ. ಆದರೆ ನಯನತಾರಾ ಸಿಕ್ಕ ಅವಕಾಶವನ್ನು ತಿರಸ್ಕರಿಸಿ ಅಚ್ಚರಿ ಮೂಡಿಸಿರುವ ವಿಚಾರ ಈಗ ಸದ್ದು ಮಾಡುತ್ತಿದೆ. ಮುಂದೆ ಓದಿ..

  ಈ ಸುದ್ದಿ ಹರಡಿಸಿದ ನೀವೆಲ್ಲ ಜೋಕರ್ಸ್ ಎಂದ ನಯನತಾರಾ!ಈ ಸುದ್ದಿ ಹರಡಿಸಿದ ನೀವೆಲ್ಲ ಜೋಕರ್ಸ್ ಎಂದ ನಯನತಾರಾ!

  ಚೆನ್ನೈ ಎಕ್ಸ್ ಪ್ರೆಸ್ ನಲ್ಲಿ ಅಭಿನಯಸಬೇಕಿತ್ತು ನಯನತಾರಾ

  ಚೆನ್ನೈ ಎಕ್ಸ್ ಪ್ರೆಸ್ ನಲ್ಲಿ ಅಭಿನಯಸಬೇಕಿತ್ತು ನಯನತಾರಾ

  2013ರಲ್ಲಿ ರಿಲೀಸ್ ಆದ ಶಾರುಖ್ ಖಾನ್ ಅಭಿನಯದ ಚೆನ್ನೈ ಎಕ್ಸ್ ಸಿನಿಮಾದಲ್ಲಿ ನಯನತಾರಾ ಅಭಿನಯಿಸಬೇಕಿತ್ತು. ಆದರೆ ನಯನತಾರಾ ನಿರಾಕರಿಸಿದ್ದಾರೆ. ಚಿತ್ರದಲ್ಲಿ ದೀಪಿಕಾ ಪಡುಕೋಣೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಅಂದ್ರೆ ದೀಪಿಕಾ ಪಡುಕೋಣೆ ಜಾಗಕ್ಕೆ ನಯನತಾರಾಗೆ ಆಫರ್ ಮಾಡಲಾಗಿತ್ತಾ ಅಂದ ಅಂದ್ಕೋಬೇಡಿ, ಚಿತ್ರದಲ್ಲಿ ಶಾರುಖ್ ಜೊತೆ ಒಂದು ವಿಶೇಷ ಹಾಡಿನಲ್ಲಿ ಕಾಣಿಸಿಕೊಳ್ಳಲು ನಯನತಾರಾಗೆ ಆಫರ್ ಮಾಡಲಾಗಿತ್ತಂತೆ. ಆದರೆ ನಯನತಾರಾ ನೋ ಎಂದಿದ್ದಾರೆ.

  ಸಿನಿಮಾ ತಿರಸ್ಕರಿಸಿದ ನಯನತಾರಾ

  ಸಿನಿಮಾ ತಿರಸ್ಕರಿಸಿದ ನಯನತಾರಾ

  ಶಾರುಖ್ ಜೊತೆ ನಟಿಸಲು ನಟಿಮಣಿಯರು ಕಾಯುತ್ತಿರುತ್ತಾರೆ. ಆದರೆ ನಯನಾ ಸಿಕ್ಕ ಆಫರ್ ರಿಜೆಕ್ಟ್ ಮಾಡಿರುವುದು ಅನೇಕರಿಗೆ ಅಚ್ಚರಿ ಮೂಡಿಸಿತ್ತು. ದಕ್ಷಿಣ ಭಾರತದ ಎಲ್ಲಾ ಭಾಷೆಯಲ್ಲಿಯೂ ಅಭಿನಯಿಸಿರುವ ನಯನತಾರಾ ಹಿಂದಿ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ. ಚೆನ್ನೈ ಎಕ್ಸ್ ಪ್ರೆಸ್ ಮೂಲಕ ಬಾಲಿವುಡ್ ಗೆ ಕಾಲಿಡುವ ಅವಕಾಶ ಸಿಕ್ಕಿತ್ತು. ಆದರೆ ನಯನತಾರಾ ಒಪ್ಪಿಕೊಂಡಿಲ್ಲ. ಸಿನಿಮಾ ರಿಜೆಕ್ಟ್ ಮಾಡಲು ಕಾರಣವೇನು ಎನ್ನುವುದನ್ನು ನಯನತಾರಾ ಎಲ್ಲಿಯೂ ಹೇಳಿಕೊಂಡಿಲ್ಲ.

  ಸಿನಿಮಾ ತಿರಸ್ಕರಿಸಲು ಪ್ರಭುದೇವ ಕಾರಣ?

  ಸಿನಿಮಾ ತಿರಸ್ಕರಿಸಲು ಪ್ರಭುದೇವ ಕಾರಣ?

  ನಯನತಾರಾ ಹಿಂದಿ ಸಿನಿಮಾದಲ್ಲಿ ಕಾಣಿಸಿಕೊಳ್ಳುವುದಿಲ್ಲವಂತೆ. ಹಾಗಾಗಿ ಶಾರುಖ್ ಜೊತೆ ನಟಿಸಲು ನಿರಾಕರಿಸಿದ್ದಾರೆ ಎನ್ನುವ ಮಾತು ಕೇಳಿಬಂದಿತ್ತು. ಆದರೆ ಅಸಲಿ ಕಾರಣ ಬೇರೆಯೆ ಆಗಿತ್ತು. ವಿಶೇಷ ಹಾಡಿಗೆ ಪ್ರಭುದೇವ ನೃತ್ಯ ಸಂಯೋಜನೆ ಮಾಡುತ್ತಿದ್ದಾರೆ ಎನ್ನುವ ವಿಚಾರಕ್ಕೆ ನಯನತಾರಾ ನಿರಾಕರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರಭುದೇವ ಮತ್ತು ನಯನತಾರಾ ಕೆಲವು ವರ್ಷಗಳಿಂದ ಡೇಟಿಂಗ್ ನಲ್ಲಿದ್ದರು. ಇಬ್ಬರ ಗೆಳೆತನ ಮದುವೆ ವರೆಗೂ ಹೋಗಿತ್ತು. ಬಳಿಕ ಇಬ್ಬರು ಬೇರೆ ಬೇರೆಯಾಗಿ ಅಚ್ಚರಿ ಮೂಡಿಸಿದರು. ಅದೆ ಸಮಯದಲ್ಲಿ ಚೆನ್ನೈ ಎಕ್ಸ್ ಪ್ರೆಸ್ ಸಿನಿಮಾಗೆ ಆಫರ್ ಬಂದ ಕಾರಣ ನಯನತಾರಾ ಸಿನಿಮಾ ಮಾಡಲು ನಿರಾಕರಿಸಿದ್ದಾರೆ.

  ಇವಳೇ ನನ್ನ ಮುಂದಿನ ಮಕ್ಕಳ ತಾಯಿ: ಖ್ಯಾತ ನಟಿಯ ಫೋಟೊ ಹಾಕಿದ ನಿರ್ದೇಶಕ!ಇವಳೇ ನನ್ನ ಮುಂದಿನ ಮಕ್ಕಳ ತಾಯಿ: ಖ್ಯಾತ ನಟಿಯ ಫೋಟೊ ಹಾಕಿದ ನಿರ್ದೇಶಕ!

  ಪ್ರಿಯಾಮಣಿ ನಟಿಸಿದ್ದಾರೆ

  ಪ್ರಿಯಾಮಣಿ ನಟಿಸಿದ್ದಾರೆ

  ಚೆನ್ನೈ ಎಕ್ಸ್ ಪ್ರೆಸ್ ಸಿನಿಮಾದ ವಿಶೇಷ ಹಾಡಿನಲ್ಲಿ ದಕ್ಷಿಣ ಭಾರತದ ಮತ್ತೋರ್ವ ಖ್ಯಾತ ನಟಿ ಪ್ರಿಯಾಮಣಿ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಪ್ರಿಯಾಮಣಿ ಶಾರುಖ್ ಖಾನ್ ಜೊತೆ ತೆರೆಹಂಚಿಕೊಂಡಿದ್ದಾರೆ. ಚೆನ್ನೈ ಎಕ್ಸ್ ಪ್ರೆಸ್ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡ ಸಿನಿಮಾವಾಗಿದೆ.

  ನಯನತಾರಾ ಬಳಿ ಇರುವ ಸಿನಿಮಾಗಳು

  ನಯನತಾರಾ ಬಳಿ ಇರುವ ಸಿನಿಮಾಗಳು

  ನಯನತಾರಾ ದಕ್ಷಿಣ ಭಾರತದ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರು. ಅತೀ ಹೆಚ್ಚು ಸಂಭಾವನೆ ಪಡೆಯುವ ನಯನತಾರಾ ಬಳಿ ಸಾಲು ಸಾಲು ಸಿನಿಮಾಗಳಿವೆ. ಇತ್ತೀಚಿಗೆ ನಯನತಾರಾ ರಜನಿಕಾಂತ್ ಅಭಿನಯದ ದರ್ಬಾರ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸದ್ಯ ಪ್ರಿಯತಮ ವಿಘ್ನೇಶ್ ಶಿವನ್ ಸಿನಿಮಾ ಸೇರಿದ್ದಂತೆ ನಾಲ್ಕೈದು ಸಿನಿಮಾಗಳಲ್ಲಿ ನಯನತಾರಾ ಬ್ಯುಸಿಯಾಗಿದ್ದಾರೆ.

  English summary
  Actress Nayanthara refused a part Shah Rukh Khan starrer Super hit Chennai Express movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X