Don't Miss!
- News
Breaking; ಸೇನಾ ಆಯ್ಕೆ ಪೂರ್ವ ತರಬೇತಿಗಾಗಿ 3 ಶಾಲೆ ಸ್ಥಾಪನೆ
- Lifestyle
Today RashiBhavishya: ಶನಿವಾರದ ದಿನ ಭವಿಷ್ಯ: ವೃಷಭ, ಕುಂಭ, ಮೀನ ರಾಶಿಯ ಉದ್ಯೋಗಿಗಳು ಕಚೇರಿ ಕೆಲಸದ ಮೇಲೆ ಗಮನಹರಿಸಿ
- Sports
ENG vs NZ: ನ್ಯೂಜಿಲೆಂಡ್ ವಿರುದ್ಧ ಸತತ 2ನೇ ಶತಕ ದಾಖಲಿಸಿದ ಜಾನಿ ಬೈಸ್ಟ್ರೋವ್
- Finance
ಈ 220 ಉದ್ಯೋಗಿಗಳಿಗೆ ವಾರ್ಷಿಕ 1 ಕೋಟಿ ರು ಸಂಬಳ, ಯಾವ್ದು ಕಂಪನಿ?
- Automobiles
ಮಂಗಳೂರಿನಲ್ಲಿರುವ ಒಕಿನಾವ ಇವಿ ಸ್ಕೂಟರ್ ಮಾರಾಟ ಮಳಿಗೆಯಲ್ಲಿ ಅಗ್ನಿ ಅವಘಡ
- Education
CLAT 2022 Result : ಕ್ಲಾಟ್ ಪರೀಕ್ಷೆಯ ಫಲಿತಾಂಶ ಶೀಘ್ರದಲ್ಲಿ ಪ್ರಕಟ
- Technology
60,000ರೂ.ಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯವಾಗುವ ಲ್ಯಾಪ್ಟಾಪ್ಗಳು!
- Travel
ನಿಮ್ಮ ಮುಂದಿನ ಪ್ರವಾಸದ ಪಟ್ಟಿಯಲ್ಲಿ ಕರ್ನಾಟಕದ ಬಾದಾಮಿ ಯಾಕಿರಬೇಕು? ಇಲ್ಲಿದೆ ಕಾರಣ!
ಥೈಲ್ಯಾಂಡ್‌ನಲ್ಲಿ ನಯನತಾರಾ, ವಿಘ್ನೇಶ್ ಶಿವನ್ ಹನಿಮೂನ್!
ಸೌತ್ ಸಿನಿಮಾರಂಗದ ಹೆಸರಾಂತ ಜೋಡಿಗಳಲ್ಲಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ಕೂಡ ಜೋಡ ಕೂಡ ಒಂದು. ಹಲವು ವರ್ಷಗಳು ಪ್ರೀತಿಯಲ್ಲಿ ಇದ್ದ ಈ ಜೋಡಿ ಈಗ ಅಗ್ನಿಸಾಕ್ಷಿಯಾಗಿ ಮದುವೆ ಆಗಿದೆ. ಈ ಜೋಡಿ ವೈವಾಹಿಕ ಬಾಳಿಗೆ ಕಾಟ್ಟಾಗಿನಿಂದ ಇವರು ಹನಿಮೂನ್‌ಗಾಗಿ ಎಲ್ಲಿಗೆ ಹೋಗುತ್ತಾರೆ ಎನ್ನುವ ಕುತೂಹಲವಿತ್ತು.
ನಯನತಾರಾ, ವಿಘ್ನೇಶ್ ಮತ್ತು ಶಿವನ್ ಜೂನ್ 9 ರಂದು ವಿವಾಹವಾದರು. ಇವರ ಮದುವೆ ನೆಕ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗುವ ಕಾರಣ, ಮದುವೆಯ ಹೆಚ್ಚು ಫೋಟೊ ಮತ್ತು ವಿಡಿಯೋಗಳನ್ನು ಕೂಡ ಈ ಜೋಡಿ ಹಂಚಿಕೊಂಡಿಲ್ಲ.
ನಯನತಾರ
ಮಾಡಿದ
ತಪ್ಪಿಗೆ
ಕ್ಷಮೆಯಾಚಿಸಿದ
ಪತಿ
ವಿಘ್ನೇಶ್
ಶಿವನ್!
ಮದುವೆಯ ಬಳಿಕೆ ಕೆಲವೇ ಫೋಟೊಗಳನ್ನು ಹಂಚಿಕೊಂಡು, ಸಾಮಾಜಿಕ ಜಾಲತಾಣದಲ್ಲಿ ಮದುವೆ ಸುದ್ದಿಯನ್ನು ಹೇಳಿಕೊಂಡರು. ಈಗ ಇವರ ಹನಿಮೂನ್ ಎಲ್ಲಿ? ಎನ್ನುವ ವಿಚಾರ ಬಯಲಾಗಿದ್ದು. ಈ ಜೋಡಿ ಹನಿಮೂನ್ ಮೂಡ್‌ನಲ್ಲಿ ಕಾಲ ಕಳೆಯುತ್ತಿದ್ದಾರೆ.
ನಯನತಾರ
ವಿಗ್ನೇಶ್
ಶಿವನ್
ಮದುವೆ
ಫೊಟೋ
ಔಟ್:
ಪತ್ನಿಗೆ
ಮುತ್ತಿಟ್ಟ
ಪತಿ!

ಮದುವೆಗೆ 200 ಮಂದಿಗೆ ಆಹ್ವಾನ!
ನಯನತಾರಾ ಮತ್ತು ವಿಘ್ನೇಶ್ ಮದುವೆಗೆ ಒಟ್ಟು 200 ಮಂದಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಸೂಪರ್ ಸ್ಟಾರ್ ರಜನಿಕಾಂತ್, ಶಾರುಖ್ ಖಾನ್, ವಿಜಯ್, ವಿಜಯ್ ಸೇತುಪತಿ, ಶರತ್ ಕುಮಾರ್, ಕೆ.ಎಸ್.ರವಿಕುಮಾರ್ ಮತ್ತು ಅಜಿತ್ ದಂಪತಿ ವಿವಾಹದಲ್ಲಿ ಪಾಲ್ಗೊಂಡು ವಧು-ವರರಿಗೆ ಶುಭ ಹಾರೈಸಿದರು.

ಅದ್ಧೂರಿಯಾಗಿ ನಡೆದ ಮದುವೆ!
ಅದ್ಧೂರಿ ಮದುವೆಗಾಗಿ ನಯನತಾರಾ - ವಿಘ್ನೇಶ್ ಮದುವೆ ನಡೆದಿದೆ. ಇವರು ಮುಂಬೈನಿಂದ ವಸ್ತ್ರ ವಿನ್ಯಾಸಕರ ತಂಡ ಚೆನ್ನೈಗೆ ಬಂದಿತ್ತು. ಕತ್ರಿನಾ ಕೈಫ್ - ವಿಕ್ಕಿ ಕೌಶಲ್ ಮದುವೆಯಲ್ಲಿ ವಧುವಿನ ವಸ್ತ್ರಗಳನ್ನು ತಯಾರಿಸಿದ ಕಾಸ್ಟ್ಯೂಮ್ ಡಿಸೈನರ್ ತಂಡವು ನಯನತಾರಾ ಮತ್ತು ವಿಘ್ನೇಶ್ ಶಿವನ್ ಉಡುಗೆ ಸೇರಿದಂತೆ ಅಲಂಕಾರಗಳನ್ನು ಮಾಡಿದೆ. ಸಿನಿಮಾ ರಂಗವೇ ಮೂಗಿನ ಮೇಲೆ ಬೆರಳಿಡುವ ರೀತಿಯಲ್ಲಿ ಇವರ ಮದುವೆ ನಡೆದಿದೆ.

ಮದುವೆ ಬಳಿಕ ತಿರುಪತಿಗೆ ದಂಪತಿ ಭೇಟಿ!
ಮದುವೆಯಾದ ಮರುದಿನವೇ ದಂಪತಿಗಳಿಬ್ಬರು ತಿರುಪತಿಗೆ ತೆರಳಿದ್ದರು. ತಿರುಪತಿಯಲ್ಲಿ ದೇವರ ದರ್ಶನ ಪಡೆದುಕೊಂಡ ನಂತರ, ನಯನತಾರಾ ಮತ್ತು ವಿಘ್ನೇಶ್ ಕೇರಳಕ್ಕೆ ಹೋದರು. ನಯನತಾರಾ ತಾಯಿಯ ಆಶೀರ್ವಾದ ಪಡೆಯಲು ಕೇರಳಕ್ಕೆ ಹೋದರು. ನಯನತಾರಾ ತಾಯಿ ಅನಾರೋಗ್ಯದ ಕಾರಣ ಮದುವೆಗೆ ಹಾಜರಾಗಲಿಲ್ಲ. ಈ ಕಾರಣಕ್ಕೆ ಅಮ್ಮನ ಮನೆಯಲ್ಲಿ ಕೆಲವು ದಿನ ಇದ್ದರು.

ಥೈಲ್ಯಾಂಡ್‌ನಲ್ಲಿ ನಯನತಾರಾ, ವಿಘ್ನೇಶ್!
ಸದ್ಯ ಹನಿಮೂನ್ ಮೂಡ್‌ನಲ್ಲಿದ್ದಾರೆ ವಿಘ್ನೇಶ್ ಶಿವನ್ ಮತ್ತು ನಯನತಾರಾ. ವಿಘ್ನೇಶ್ ಶಿವನ್ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಥೈಲ್ಯಾಂಡ್ ಹೋಟೆಲ್‌ನಲ್ಲಿ ತೆಗೆದ ಕೆಲವು ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಹಾಗಾಗಿ ಈ ಜೋಡಿ ಸದ್ಯ ಹನಿಮೂನ್‌ಗಾಗಿ ಥೈಲ್ಯಾಂಡ್‌ಗೆ ಹಾರಿಗೆ ಎನ್ನುವುದು ಸ್ಪಷ್ಟ. ಇದನ್ನು ನೋಡಿದ ಅಭಿಮಾನಿಗಳು ನವ ದಂಪತಿಗೆ ಶುಭಾಶಯ ಕೋರಿದ್ದಾರೆ.

'ಜವಾನ್' ಶೂಟಿಂಗ್‌ಗೆ ನಯನತಾರಾ!
ಅಲ್ಲಿಂದ ಬಂದ ಬಳಿಕ ನಟಿ ನಯನತಾರಾ ಸಿನಿಮಾ ಶೂಟಿಂಗ್‌ನಲ್ಲಿ ಭಾಗಿ ಆಗಲಿದ್ದಾರೆ. ಅಟ್ಲಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಜವಾನ್' ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿದಿದ್ದು, ಎರಡನೇ ಹಂತದ ಚಿತ್ರೀಕರಣ ಹೈದರಾಬಾದ್‌ನ ರಾಮ್‌ಜಿ ಫಿಲ್ಮ್ ಸಿಟಿಯಲ್ಲಿ ನಡೆಯಲಿದೆ. ಈ ಚಿತ್ರದಲ್ಲಿ ನಯನತಾರಾ ಮತ್ತು ಶಾರುಖ್ ಖಾನ್ ದೃಶ್ಯಗಳ ಚಿತ್ರೀಕರಣ ನಡೆಯಬೇಕಿದೆ. ಹಾಗಾಗಿ ಈ ಬಾರಿಯ ಶೂಟಿಂಗ್‌ನಲ್ಲಿ ನಯನತಾರಾ ಭಾಗವಹಿಸಲಿದ್ದಾರೆ.