For Quick Alerts
  ALLOW NOTIFICATIONS  
  For Daily Alerts

  ಮಾಧವನ್-ಶ್ರದ್ಧಾ ಶ್ರೀನಾಥ್ ಸಿನಿಮಾ ಬಿಡುಗಡೆ ದಿನಾಂಕ ಫಿಕ್ಸ್

  |

  ಆರ್ ಮಾಧವನ್ ಮತ್ತು ಶ್ರದ್ಧಾ ಶ್ರೀನಾಥ್ ಬಹುನಿರೀಕ್ಷೆಯ ಚಿತ್ರ ಮಾರ ಅಮೇಜಾನ್ ಪ್ರೈಮ್‌ನಲ್ಲಿ ವರ್ಲ್ಡ್ ಪ್ರೀಮಿಯರ್ ಕಾಣಲಿದೆ. ಈ ಹಿಂದೆ ಡಿಸೆಂಬರ್ 17 ರಂದು ಸಿನಿಮಾ ತೆರೆಕಾಣಲಿದೆ ಎನ್ನಲಾಗಿತ್ತು. ಆದ್ರೀಗ, ಜನವರಿಯಲ್ಲಿ ಸಿನಿಮಾ ಬಿಡುಗಡೆಯಾಗಲಿದೆ ಎಂದು ಅಮೇಜಾನ್ ಪ್ರಕಟಿಸಿದೆ.

  ಜನವರಿ 8, 2021 ರಂದು ಮಾರ ಸಿನಿಮಾ ಅಮೇಜಾನ್ ಪ್ರೈಮ್‌ನಲ್ಲಿ ಪ್ರದರ್ಶನ ಕಾಣಲಿದೆ. ಆರ್ ಮಾಧವನ್, ಶ್ರದ್ಧಾ ಶ್ರೀನಾಥ್, ಅಲೆಕ್ಸಾಂಡರ್ ಬಾಬು, ಎಂಎಸ್ ಭಾಸ್ಕರ್, ಶಿವದಾ ನಾಯರ್, ಮೌಳಿ, ಗುರು ಸೋಮಸುಂದ್ರಮ್, ಕಿಶೋರ್, ಅಭಿರಾಮಿ ಸೇರಿದಂತೆ ಹಲವರು ನಟಿಸಿದ್ದಾರೆ.

  'ಮಾರ' ಮಾಧವನ್‌ಗೆ ಕಾರ್ತಿಕ್ ಜಯರಾಮ್ ಧ್ವನಿ'ಮಾರ' ಮಾಧವನ್‌ಗೆ ಕಾರ್ತಿಕ್ ಜಯರಾಮ್ ಧ್ವನಿ

  ಮಲಯಾಳಂ ಭಾಷೆಯ ಚಾರ್ಲಿ ಚಿತ್ರದ ತಮಿಳು ರೀಮೇಕ್ ಇದಾಗಿದ್ದು, ದಿಲೀಪ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಪ್ರಮೋದ್ ಫಿಲ್ಮ್ಸ್ ನಿರ್ಮಾಣದ ಬ್ಯಾನರ್ ಅಡಿಯಲ್ಲಿ ಪ್ರತೀಕ್ ಚಕ್ರವರ್ತಿ ಮತ್ತು ಶ್ರುತಿ ನಲ್ಲಪ್ಪ ನಿರ್ಮಿಸಿದ್ದಾರೆ.

  ಮಾರ ಚಿತ್ರಕ್ಕೆ ಗಿಬ್ರನ್ ಸಂಗೀತ ನೀಡಿದ್ದು, ಕಾರ್ತಿಕ್ ಮುತ್ತುಕುಮಾರ್ ಮತ್ತಯ ದಿನೇಶ್ ಕೃಷ್ಣನ್ ಛಾಯಾಗ್ರಹಣವಿದೆ. ಅಂದ್ಹಾಗೆ, ಈ ಸಿನಿಮಾ ಕನ್ನಡದಲ್ಲೂ ತೆರೆಕಾಣುತ್ತಿದೆ.

  ಕನ್ನಡದಲ್ಲಿ ಆರ್ ಮಾಧವನ್ ಪಾತ್ರಕ್ಕೆ ಕಾರ್ತಿಕ್ ಜಯರಾಂ ದನಿ ನೀಡಿದ್ದಾರೆ. ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಸಂತಸ ಹಂಚಿಕೊಂಡಿದ್ದ ಜೆಕೆ '''ಅದ್ಭುತವಾದ ನಟ ಮಾಧವನ್ ಗೆ ಧ್ವನಿ ನೀಡಿದ್ದು ಬಹಳ ಖುಷಿ ಕೊಟ್ಟಿತು. ಅವರ ಮುಂಬರುವ ಸಿನಿಮಾ 'ಮಾರ' ದ ಕನ್ನಡ ಅವತರಣಿಕೆಗೆ ಮಾಧವನ್ ಗೆ ಧ್ವನಿ ನೀಡಿದ್ದೇನೆ' ಎಂದಿದ್ದರು.

  English summary
  R Madhavan and shraddha srinath starrer Maara Movie Releasing On January 8, 2021.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X