Don't Miss!
- Automobiles
ವೈರಲ್: ಬೆಂಗಳೂರಿನಲ್ಲಿ ಕಾಣಿಸಿಕೊಂಡಿತು ಹೊಚ್ಚ ಹೊಸ ವಾಹನ... ಇದರ ಬಗ್ಗೆ ಗೊತ್ತಾ?
- Sports
Ranji Trophy 2022-23: ಹೊರಬಿದ್ದ ಮುಂಬೈ; ಕರ್ನಾಟಕ ಸೇರಿ ಕ್ವಾರ್ಟರ್ ಫೈನಲ್ ತಲುಪಿದ ಅಗ್ರ 8 ತಂಡಗಳು
- News
ಫಾರೆನ್ಸಿಕ್ ಕ್ಯಾಂಪಸ್ ಶಂಕುಸ್ಥಾಪನೆಗೆ ಆಗಮಿಸಲಿರುವ ಅಮಿತ್ ಶಾ: ಧಾರವಾಡದಲ್ಲಿ ಭಾರಿ ಬಿಗಿ ಭದ್ರತೆ
- Lifestyle
2023ರಲ್ಲಿ ರಾಜಯೋಗದಿಂದಾಗಿ ಈ 4 ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನವಾಗಲಿದೆ
- Finance
7th Pay Commission: ನೌಕರರಿಗೆ ಸಿಹಿ ಸುದ್ದಿ: ಬಾಕಿ DA ಹಣ ನೀಡಲು ಕೇಂದ್ರ ಸರ್ಕಾರ ನಿರ್ಧಾರ, ಹೇಗೆ?
- Technology
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ರಜನೀಕಾಂತ್ ಬಗೆಗಿನ ಈ ಆಸಕ್ತಿಕರ ವಿಷಯಗಳು ನಿಮಗೆ ಗೊತ್ತೆ?
ಸೂಪರ್ ಸ್ಟಾರ್ ರಜನೀಕಾಂತ್ ಹುಟ್ಟುಹಬ್ಬ ಇಂದು (ಡಿಸೆಂಬರ್ 12). ಕರ್ನಾಟಕದಲ್ಲಿ ಹುಟ್ಟಿ ಬೆಳೆದ ರಜನೀಕಾಂತ್, ಭಾರತದ ಅತಿ ದೊಡ್ಡ ಸೂಪರ್ ಸ್ಟಾರ್ ಆಗಿ ಬೆಳೆದ ಬೆಳವಣಿಗೆ ಎಂಥಹವರಿಗೂ ಸ್ಪೂರ್ತಿ.
ಸಾಮಾನ್ಯ ಬಸ್ ಕಂಡಕ್ಟರ್ ಆಗಿದ್ದ ಶಿವಾಜಿರಾವ್ ಗಾಯಕ್‌ವಾಡ್ ಇಂದು ಲೋಕವೇ ಕೊಂಡಾಡುವ ರಜನೀಕಾಂತ್ ಆಗಿ ಬೆಳೆದಿದ್ದಾರೆ.
ಬೆಂಗಳೂರಿನ ಗವಿಪುರ, ಶ್ರೀರಾಮ್‌ಪುರ ಇನ್ನಿತರೆಗಳಲ್ಲಿ ಓಡಾಡಿ ಬೆಳೆದ ರಜನೀಕಾಂತ್ ಖ್ಯಾತಿ ಅಮೆರಿಕ, ಯೂರೋಪ್ ದೇಶಗಳು, ಜಪಾನ್ ಇನ್ನೂ ನೂರಾರು ದೇಶಗಳಲ್ಲಿ ಹರಡಿದೆ. ಎಷ್ಟೇ ದೊಡ್ಡ ಸ್ಟಾರ್ ಆಗಿದ್ದರೂ ಸಹ ಈಗಲೂ ತಾನು ಬೆಳೆದ ಬಂದ ಹಾದಿಯನ್ನು ನೆನಪಿಟ್ಟುಕೊಂಡಿರುವ ರಜನೀಗೆ ಈಗಲೂ ಬೆಂಗಳೂರೆಂದರೆ ಇಲ್ಲಿನ ಗೆಳೆಯರೆಂದರೆ ಪಂಚ ಪ್ರಾಣ. ರಜನೀಕಾಂತ್ ಹುಟ್ಟುಹಬ್ಬದ ಈ ಶುಭದಿನದಂದು ಅವರ ಬಗೆಗಿನ ಕೆಲವು ಅಪರೂಪದ ಸಂಗತಿಗಳು ಇಲ್ಲಿವೆ.

ಹೀರೋ ಆಗಿದ್ದು ಯಾವ ಸಿನಿಮಾದಿಂದ
ಶಿವಾಜಿರಾವ್ ಗಾಯಕ್‌ವಾಡ್ ಆಗಿದ್ದ ಯುವಕನಿಗೆ ರಜನೀಕಾಂತ್ ಎಂದು ನಾಮಕರಣ ಮಾಡಿದ್ದು ನಿರ್ದೇಶಕ ಕೆ ಬಾಲಚಂದ್ರ. ಆರಂಭದ ಹಲವು ಸಿನಿಮಾಗಳಲ್ಲಿ ರಜನೀಕಾಂತ್ ವಿಲನ್ ಆಗಿ ನಟಿಸಿದ್ದರು. ಮಹಿಳಾ ಪೀಡಕ, ರೇಪಿಸ್ಟ್ ಪಾತ್ರಗಳಲ್ಲಿ ನಟಿಸಿದ್ದರು. ರಜನೀಕಾಂತ್ ಹೀರೋ ಅಥವಾ ಒಳ್ಳೆಯ ಗುಣಗುಳ್ಳುಳ್ಳ ಪಾತ್ರದಲ್ಲಿ ನಟಿಸಿದ್ದು 'ಭುವನ ಒರು ಕೇಲ್ವಿಕುರಿ' ಸಿನಿಮಾದಲ್ಲಿ. ಇದು ಸೂಪರ್ ಹಿಟ್ ಅಯಿತು.

ವೇಷಮರೆಸಿಕೊಂಡು ಓಡಾಡುವ ರಜನೀಕಾಂತ್
ರಜನೀಕಾಂತ್ ಸ್ಟಾರ್ ಆಗಿದ್ದರೂ ಸಹ ಸಾಮಾನ್ಯರಂತೆ ಓಡಾಡುವುದು ಇಷ್ಟ. ಮೊದಲೆಲ್ಲ ಬೆಂಗಳೂರಿನ ತಮ್ಮ ಇಷ್ಟದ ಜಾಗಗಳಿಗೆ ವೇಷ ಮರೆಸಿಕೊಂಡು ಬರುತ್ತಿದ್ದರು ರಜನೀಕಾಂತ್. ಡಾ ರಾಜ್‌ಕುಮಾರ್ ಅವರನ್ನು ಭೇಟಿ ಮಾಡಲು ಸಹ ವೇಷ ಮರೆಸಿಕೊಂಡು ಬರುತ್ತಿದ್ದರಂತೆ ರಜನೀಕಾಂತ್. ಅಣ್ಣಾವ್ರ ಅಂತಿಮ ದರ್ಶನಕ್ಕೆ ಸಹ ಸನ್ಯಾಸಿಯ ವೇಷ ಧರಿಸಿ ಬಂದಿದ್ದರಂತೆ ನಟ ರಜನೀಕಾಂತ್.

ವಿದೇಶಿ ಕಾರ್‌ಡ್ರೈವರ್ ಅನ್ನು ಹೊಂದಿದ್ದ ರಜನೀ
ವಿದೇಶಿ ಕಾರನ್ನು ತರಿಸಿಕೊಂಡ ಮೊದಲ ದಕ್ಷಿಣದ ನಟ ರಜನೀಕಾಂತ್. ಆ ಕಾರಿಗೆ ವಿದೇಶಿ ಡ್ರೈವರ್ ಅನ್ನು ರಜನೀಕಾಂತ್ ಇಟ್ಟುಕೊಂಡಿದ್ದರು. ವಿದೇಶಿ ಸಿಗರೇಟನ್ನೇ ಸೇದುತ್ತಿದ್ದರು ರಜನೀಕಾಂತ್. ಒಂದು ಸಮಯದಲ್ಲಿ ಭಾರಿ ಧಿಮಾಕನ್ನು ಮಾಡುತ್ತಿದ್ದುದಾಗಿ ಸ್ವತಃ ನಟ ರಜನೀಕಾಂತ್ ಹೇಳಿಕೊಂಡಿದ್ದಾರೆ. ಆ ಕಾಲದಲ್ಲಿ ರಜನೀಕಾಂತ್ ನಟಿಸಿದ್ದ ಎಲ್ಲ ಸಿನಿಮಾಗಳು ಹಿಟ್ ಆಗುತ್ತಿದ್ದವಂತೆ.

ಪತ್ರಕರ್ತೆಯನ್ನು ವಿವಾಹವಾದ ರಜನೀಕಾಂತ್
ರಜನೀಕಾಂತ್ ಪತ್ನಿಯ ಹೆಸರು ಲತಾ. ಪತ್ರಕರ್ತೆಯಾಗಿದ್ದ ಲತಾ ಅವರು ಒಮ್ಮೆ ರಜನೀಕಾಂತ್ ಸಂದರ್ಶನ ಮಾಡಲೆಂದು ಹೋಗಿದ್ದರು. ಆಗ, ಲತಾರನ್ನು ನೋಡಿ ಇಷ್ಟಪಟ್ಟ ರಜನೀಕಾಂತ್ ಅವರನ್ನೇ ವಿವಾಹವಾಗಿಬಿಟ್ಟರು. ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅವರಲ್ಲಿ ಒಬ್ಬರು ನಟ ಧನುಶ್ ಅನ್ನು ವಿವಾಹವಾಗಿದ್ದಾರೆ.

ಬಸ್ ಕಂಡಕ್ಟರ್ ಕೆಲಸ ಮಾತ್ರವಲ್ಲ
ರಜನೀಕಾಂತ್ ಸಿನಿಮಾಗಳಲ್ಲಿ ನಟಿಸುವ ಮುನ್ನ ಬಸ್ ಕಂಡೆಕ್ಟರ್ ಆಗಿದ್ದರು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಅವರು ಅದೊಂದೆ ವೃತ್ತಿ ಮಾಡುತ್ತಿರಲಿಲ್ಲ. ಬಸ್ ಕಂಡಕ್ಟರ್ ಆಗುವುದಕ್ಕೂ ಮುನ್ನ ಕೂಲಿಯಾಗಿ, ಕಾರ್ಪೆಂಟರ್ ಆಗಿಯೂ ಕೆಲಸ ಮಾಡಿದ್ದರು. ಸಿಬಿಎಸ್‌ಇಯ ವಿದ್ಯಾರ್ಥಿಗಳಿಗೆ 'ಬಸ್ ಕಂಡಕ್ಟರ್ ಟು ಸೂಪರ್ ಸ್ಟಾರ್' ಹೆಸರಿನಲ್ಲಿ ರಜನೀಕಾಂತ್ ಜೀವನದ ಬಗ್ಗೆ ಪಾಠ ಇದೆ.

ಬಚ್ಚನ್ ನಟನೆಯ 11 ಸಿನಿಮಾಗಳ ರೀಮೇಕ್
ಡಾ ರಾಜ್‌ಕುಮಾರ್ ಎಂದರೆ ಅಪಾರ ಅಭಿಮಾನ ಹೊಂದಿದ್ದ ರಜನೀಕಾಂತ್‌ಗೆ ಅಮಿತಾಬ್ ಬಚ್ಚನ್ ಕಂಡರೂ ಅಷ್ಟೇ ಅಭಿಮಾನ. ತಮ್ಮ ಸಿನಿಮಾ ಆಯ್ಕೆಯಲ್ಲಿ ಅಮಿತಾಬ್ ಬಚ್ಚನ್ ಪಾತ್ರ ಸಾಕಷ್ಟಿದೆ ಎಂದು ಹೇಳಿದ್ದರು ರಜನೀಕಾಂತ್. ಅಮಿತಾಬ್ ಬಚ್ಚನ್ ನಟಿಸಿರುವ ಬರೋಬ್ಬರಿ 11 ಸಿನಿಮಾಗಳನ್ನು ತಮಿಳಿನಲ್ಲಿ ರೀಮೇಕ್ ಮಾಡಿದ್ದರು ರಜನೀಕಾಂತ್.