For Quick Alerts
  ALLOW NOTIFICATIONS  
  For Daily Alerts

  'ನಿಮ್ಮ ನೆನಪು ಶಾಶ್ವತವಾಗಿರಲಿದೆ' ಎಸ್‌ಪಿಬಿ ಅಗಲಿಕೆಗೆ ರಜನಿಕಾಂತ್ ಸಂತಾಪ

  |

  ಸೂಪರ್ ಸ್ಟಾರ್ ರಜನಿಕಾಂತ್‌ಗೆ ಒಂದು ನಂಬಿಕೆ. ಎಸ್‌ಪಿ ಬಾಲಸುಬ್ರಹ್ಮಣ್ಯಂ ತಮ್ಮ ಚಿತ್ರಗಳಿಗೆ ಟೈಟಲ್ ಹಾಡು ಹಾಡಿದ್ರೆ ಅದು ಪಕ್ಕಾ ಹಿಟ್ ಆಗುತ್ತೆ ಎಂಬ ಸಂಪ್ರದಾಯ ಹೊಂದಿದ್ದವರು. ಅದರಂತೆ ರಜನಿಯ ಹಲವು ಚಿತ್ರಗಳಿಗೆ ಎಸ್‌ಪಿಬಿ ಶೀರ್ಷಿಕೆ ಹಾಡು ಹಾಡಿದ್ದಾರೆ.

  ಕೊನೆಯದಾಗಿ ತೆರೆಕಂಡ 'ದರ್ಬಾರ್' ಚಿತ್ರಕ್ಕೂ ಎಸ್‌ಪಿಬಿ ಅವರದ್ದೇ ಧ್ವನಿ. ಇನ್ಮುಂದೆ ಈ ಧ್ವನಿ ಇರಲ್ಲ ಎಂದು ಸುದ್ದಿ ಕೇಳಿ ರಜನಿಕಾಂತ್ ಬೇಸರಗೊಂಡಿದ್ದಾರೆ. ಈ ಕುರಿತು ಟ್ವಿಟ್ಟರ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ ತಲೈವಾ ಬಾಲು ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.

  ಅಗಲಿದ 'ಸಂಗೀತ ಮಾಂತ್ರಿಕನಿಗೆ' ಕಂಬನಿ ಮಿಡಿದ ಕನ್ನಡ ಸಿನಿಪ್ರಮುಖರು

  ''ಬಾಲು ಸರ್ ... ನೀವು ಅನೇಕ ವರ್ಷಗಳಿಂದ ನನ್ನ ಧ್ವನಿಯಾಗಿದ್ದೀರಿ ... ನಿಮ್ಮ ಧ್ವನಿ ಮತ್ತು ನಿಮ್ಮ ನೆನಪುಗಳು ನನ್ನೊಂದಿಗೆ ಶಾಶ್ವತವಾಗಿ ಉಳಿಯಲಿದೆ ... ನಾನು ನಿನ್ನನ್ನು ನಿಜವಾಗಿಯೂ ಮಿಸ್ ಮಾಡಿಕೊಳ್ಳುತ್ತೇನೆ ..'' ಎಂದು ಮಾತು ಆರಂಭಿಸಿದ್ದಾರೆ. ಮುಂದೆ ಓದಿ....

  ಇದು ಕರಾಳ ದಿನ

  ಇದು ಕರಾಳ ದಿನ

  ''ಇಂದು ಬಹಳ ನೋವಿನ ದಿನ. ಕೊನೆಯವರೆಗೂ ಬದುಕಿಗಾಗಿ ಹೋರಾಡಿ ಎಸ್‌ಪಿಬಿ ಅವರು ನಮ್ಮನ್ನಗಲಿ ಹೊರಟಿದ್ದಾರೆ. ಎಸ್‌ಪಿಬಿ ಅವರ ಹಾಡುಗಳು ಹಾಗೂ ಅವರ ಧ್ವನಿಯನ್ನು ರಂಜಿಸದ ಭಾರತೀಯರು ಬಹುಶಃ ಇರಲ್ಲ'' ಎಂದು ರಜನಿಕಾಂತ್ ಬೇಸರ ವ್ಯಕ್ತಪಡಿಸಿದ್ದಾರೆ.

  ವ್ಯಕ್ತಿತ್ವದಿಂದ ಗೆದ್ದವರು

  ವ್ಯಕ್ತಿತ್ವದಿಂದ ಗೆದ್ದವರು

  ''ಅವರ ಹಾಡು, ಅವರ ಧ್ವನಿಯನ್ನು ಮೀರಿದ ವ್ಯಕ್ತಿತ್ವದ ಅವರದ್ದು. ಅವರನ್ನು ಹತ್ತಿರದಿಂದ ಬಲ್ಲವರಿಗೆ ಅದು ತಿಳಿದಿರುತ್ತದೆ. ಸಣ್ಣವರು, ದೊಡ್ಡವರು ಎಂಬ ಭೇದಭಾವ ಇಲ್ಲದೇ ಎಲ್ಲರನ್ನೂ ಸಮಾನರೂಪದಲ್ಲಿ ಕಂಡ ಮಹಾನ್ ವ್ಯಕ್ತಿ'' - ರಜನಿಕಾಂತ್

  ಎಸ್‌ಪಿಬಿ ಅಗಲಿಕೆಗೆ ಕಂಬನಿ ಮಿಡಿದ ಚಿರಂಜೀವಿ, ಮಹೇಶ್ ಬಾಬು, ಎನ್‌ಟಿಆರ್

  ಖ್ಯಾತ ಗಾಯಕರಿಗಿಂತ ಎಸ್‌ಪಿಬಿ ವಿಶೇಷ

  ಖ್ಯಾತ ಗಾಯಕರಿಗಿಂತ ಎಸ್‌ಪಿಬಿ ವಿಶೇಷ

  ''ಭಾರತದ ಸಂಗೀತ ಲೋಕವು ಅನೇಕ ಹಾಡುಗಾರರನ್ನು ಸೃಷ್ಟಿಸಿದೆ. ಮೊಹಮ್ಮದ್ ರಫಿ, ಘಂಟಾಸಲಾ, ಕಿಶೋರ್ ಕುಮಾರ್ ಅಂತಹ ದೊಡ್ಡ ಗಾಯಕರಿದ್ದಾರೆ. ಆದರೆ, ಅವರೆಲ್ಲರಿಗಿಂತ ಎಸ್‌ಪಿಬಿ ಬಹಳ ವಿಶೇಷ ಮತ್ತು ಅಪರೂಪ. ಏಕಂದ್ರೆ, ಅವರೆಲ್ಲರೂ ಅವರದ್ದೇ ಭಾಷೆಯಲ್ಲಿ ಮಾತ್ರ ಹಾಡಿದರು. ಆ ಭಾಷಿಗರಿಗೆ ಮಾತ್ರ ತಿಳಿದವರು. ಆದ್ರೆ, ಬಾಲು ಎಲ್ಲ ಭಾಷೆಯಲ್ಲಿ ಹಾಡಿದವರು. ಇಡೀ ಭಾರತಕ್ಕೆ ಪರಿಚಿತರು'' - ರಜನಿಕಾಂತ್

  ಕೊನೆಯ ಬಾರಿಗೆ ಫೇಸ್ಬುಕ್ ಲೈವ್ ಬಂದ SPB ಹೇಳಿದ್ದೇನು ಗೊತ್ತಾ..? | SPB Last Social media LIVE | Filmibeat
  ನಮ್ಮೊಂದಿಗೆ ಇಲ್ಲ ಎಂಬ ನೋವು

  ನಮ್ಮೊಂದಿಗೆ ಇಲ್ಲ ಎಂಬ ನೋವು

  ''ಎಸ್‌ಪಿ ಬಿ ಅವರ ಹಾಡುಗಳನ್ನು ಕೇಳಿ ಖುಷಿಪಡುತ್ತಿದ್ದವರಿಗೆ, ಇನ್ಮುಂದೆ ಆ ಧ್ವನಿ ಇಲ್ಲ ಎಂಬ ಸಂಗತಿ ಕೇಳಿ ತೀರಾ ಬೇಸರ ತಂದಿದೆ. ನಮ್ಮೊಂದಿಗೆ ಅವರು ಇಲ್ಲ ಅಂದ್ರೆ ಊಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆ ನೋವನ್ನು ಭರಿಸುವ ಶಕ್ತಿ ಆ ಕುಟುಂಬಕ್ಕೆ ಸಿಗಲಿ'' ಎಂದು ಕೇಳಿಕೊಳ್ಳುತ್ತೇನೆ ಎಂದು ರಜನಿ ವಿಡಿಯೋ ಮೂಲಕ ಸಂತಾಪ ಸೂಚಿಸಿದ್ದಾರೆ.

  English summary
  SP Balasubramanyam Passes Away: Superstar Rajinikanth Condolences Pour In for veretan singer demise.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X