Don't Miss!
- Sports
BBL 2023: ಬ್ರಿಸ್ಬೇನ್ ಹೀಟ್ ಮಣಿಸಿ 5ನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ಪರ್ತ್ ಸ್ಕಾರ್ಚರ್ಸ್
- Lifestyle
'ಸಿಂಗಾರ ಸಿರಿಯೇ' ಎಂದು 60ನೇ ವಯಸ್ಸಿನಲ್ಲಿ ವೆಡ್ಡಿಂಗ್ ಫೋಟೋಶೂಟ್: ರೊಮ್ಯಾಂಟಿಕ್ ವೀಡಿಯೋ ಸಕತ್ ವೈರಲ್
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Technology
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಪ್ರಕಾಶ್ ರೈ ನೋಡಿ ಭಯ ಪಟ್ಟಿದ್ದರಂತೆ ನಟಿ ಸಾಯಿ ಪಲ್ಲವಿ
ನಟಿ ಸಾಯಿ ಪಲ್ಲವಿ ತನ್ನ ಪ್ರತಿಭೆ, ಪಾತ್ರಗಳ ಆಯ್ಕೆ, ಸೌಂದರ್ಯದಿಂದ ಸಿನಿಪ್ರೇಮಿಗಳನ್ನು ಸೆಳೆಯುತ್ತಿರುವ ನಟಿ.
ಮಲಯಾಳಂ ಸಿನಿಮಾ ಪ್ರೇಮಂ ಮೂಲಕ ನಾಯಕಿಯಾದ ನಟಿ ಸಾಯಿ ಪಲ್ಲವಿ, ಆ ನಂತರ ಬಹು ಬೇಗನೆ ಅತ್ಯಂತ ಬೇಡಿಕೆಯ ನಟಿಯಾಗಿಬಿಟ್ಟರು. ಆದರೆ ಸಿಕ್ಕ ಅವಕಾಶಗಳನ್ನೆಲ್ಲಾ ಒಪ್ಪಿಕೊಳ್ಳದೆ, ಪಾತ್ರದ ಮಹತ್ವದ ಆಧಾರದಲ್ಲಿ ಸಿನಿಮಾ ಒಪ್ಪಿಕೊಳ್ಳುವ ಸಾಯಿ ಪಲ್ಲವಿ, ಈ ವರೆಗೆ ನಟಿಸಿರುವ ಸಿನಿಮಾಗಳೆಲ್ಲವೂ ಬಹುತೇಕ ಹಿಟ್.
ಇದೀಗ ತಮಿಳಿನ 'ಪಾವ ಕದೈಗಳ್' ಸಿನಿಮಾದಲ್ಲಿ ನಟಿ ಸಾಯಿ ಪಲ್ಲವಿ ನಟಿಸಿದ್ದು, ಆ ಸಿನಿಮಾ ಕೆಲವೇ ದಿನಗಳಲ್ಲಿ ಅಮೆಜಾನ್ ನಲ್ಲಿ ಬಿಡುಗಡೆ ಆಗಲಿದೆ. ಸಿನಿಮಾ ಕುರಿತಂತೆ ಮಾಧ್ಯಮದೊಟ್ಟಿಗೆ ಮಾತನಾಡಿರುವ ಸಾಯಿ ಪಲ್ಲವಿ. ಸೆಟ್‌ನಲ್ಲಿ ಪ್ರಕಾಶ್ ರೈ ಅವರನ್ನು ನೋಡಿ ಭಯಪಟ್ಟಿದ್ದರ ಬಗ್ಗೆ ಮಾತನಾಡಿದ್ದಾರೆ.

'ತಂದೆಯ ಗಾಂಭೀರ್ಯ, ಶಿಸ್ತು ಅವರ ಮುಖದಲ್ಲಿತ್ತು'
ಸಿನಿಮಾದಲ್ಲಿ ಸಾಯಿ ಪಲ್ಲವಿ ತಂದೆಯ ಪಾತ್ರದಲ್ಲಿ ನಟಿಸಿದ್ದಾರೆ ಪ್ರಕಾಶ್ ರೈ. ಮೊದಲ ದಿನ ಪ್ರಕಾಶ್ ರೈ ಸೆಟ್‌ಗೆ ಬಂದಾಗ ಅವರ ಮುಖದ ಮೇಲಿದ್ದ ತಂದೆಯ ಆ ಗಾಂಭೀರ್ಯ, ಶಿಸ್ತು ನೋಡಿ ನಿಜಕ್ಕೂ ಹೆದರಿದ್ದರಂತೆ ಸಾಯಿ ಪಲ್ಲವಿ. ಸೆಟ್‌ಗೆ ಬರುವಾಗಲೇ ಪಾತ್ರವನ್ನು ಆವಾಹಿಸಿಕೊಂಡಿದ್ದರು ಪ್ರಕಾಶ್ ರೈ ಎಂದಿದ್ದಾರೆ ಸಾಯಿ ಪಲ್ಲವಿ.

ಮೊದಲ ಭಾರಿ ಭೇಟಿ ಆದಾಗ ಭಯವಾಗಿತ್ತು: ಸಾಯಿ ಪಲ್ಲವಿ
'ಸಿನಿಮಾದ ಕತೆ ನನಗೆ ಗೊತ್ತಿತ್ತು, ಸಿನಿಮಾದ ಕತೆಯಲ್ಲಿ ತಂದೆ ಎಷ್ಟು ಶಿಸ್ತಿನ ವ್ಯಕ್ತಿ, ತಂದೆ-ಮಗಳ ಸಂಬಂಧದ ಬಗ್ಗೆ ಅರಿವಿತ್ತು. ಅದು ಪ್ರಕಾಶ್ ರೈ ಅವರಿಗೂ ಗೊತ್ತಿತ್ತು. ಮೊದಲ ದಿನ ಅವರು ಸೆಟ್ ಗೆ ಬಂದಾಗಲೇ ಆ ಸಿನಿಮಾದ ತಂದೆಯ ಪಾತ್ರವನ್ನು ಆವಾಹಿಸಿಕೊಂಡಿದ್ದರು. ಅವರನ್ನು ಮೊದಲ ಬಾರಿ ಭೇಟಿ ಆಗಿ ನನ್ನ ಪರಿಚಯ ಮಾಡಿಕೊಳ್ಳುವಾಗಲೇ ನನಗೆ ತಪ್ಪು ಮಾಡಿದ ಮಗಳು ಹೇಗೆ ತಂದೆಗೆ ಹೆದರುತ್ತಾಳೊ ಆ ರೀತಿಯ ಹೆದರಿಕೆ ಪ್ರಾರಂಭವಾಗಿತ್ತು ಎಂದಿದ್ದಾರೆ ಸಾಯಿ ಪಲ್ಲವಿ.

ಡಿಸೆಂಬರ್ 18 ಕ್ಕೆ ಬಿಡುಗಡೆ
'ಪಾವ ಕದೈಗಳ್' ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದ್ದು, ಸಿನಿಮಾ ಬಗ್ಗೆ ಕುತೂಹಲ ಕೆರಳಿಸಿದೆ. ಜೀವನದ 'ಡಾರ್ಕ್' ಭಾಗವನ್ನು ತೋರಿಸುವ ಸಿನಿಮಾ ಇದಾಗಿದ್ದು, ನಾಲ್ಕು ನಿರ್ದೇಶಕರು ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಇದೊಂದು ಅಂತಾಲಜಿ ಸಿನಿಮಾ ಆಗಿದ್ದು, ಡಿಸೆಂಬರ 18 ಕ್ಕೆ ಒಟಿಟಿಯಲ್ಲಿ ಬಿಡುಗಡೆ ಆಗಲಿದೆ.
Recommended Video

ಹಲವು ಸಿನಿಮಾಗಳಲ್ಲಿ ಸಾಯಿ ಪಲ್ಲವಿ ಬ್ಯುಸಿ
ಪಾವ ಕದೈಗಳ್ ಹೊರತುಪಡಿಸಿದಂತೆ ಸಾಯಿ ಪಲ್ಲವಿ ನಟಿಸಿರುವ ಲವ್ ಸ್ಟೋರಿ ಸಿನಿಮಾ ಚಿತ್ರೀಕರಣ ಮುಗಿದಿದ್ದು, ಬಿಡುಗಡೆಗೆ ತಯಾರಾಗಿದೆ. ವಿರಾಟ ಪರ್ವಂ ಹೆಸರಿನ ನಕ್ಸಲೈಟ್ ಜೀವನ ಆಧರಿಸಿದ ಸಿನಿಮಾದಲ್ಲಿ ಸಹ ನಟಿಸುತ್ತಿದ್ದಾರೆ ಸಾಯಿ ಪಲ್ಲವಿ. ನಂತರ ಶ್ಯಾಮ್ ಸಿಂಗ್ ರಾಯ್ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ ಸಾಯಿ ಪಲ್ಲವಿ.