For Quick Alerts
  ALLOW NOTIFICATIONS  
  For Daily Alerts

  ನಯನತಾರ ಹುಟ್ಟುಹಬ್ಬಕ್ಕೆ 'ಪವರ್‌ ಫುಲ್' ಶುಭಾಶಯ ತಿಳಿಸಿದ ಸಮಂತಾ

  |

  ಲೇಡಿ ಸೂಪರ್ ಸ್ಟಾರ್ ನಯನತಾರ ತಮ್ಮ 36ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ದೇಶಾದ್ಯಂತ ಅಭಿಮಾನಿಗಳು ಸೋಶಿಯಲ್ ಮೀಡಿಯಾ ಮೂಲಕ ನೆಚ್ಚಿನ ತಾರೆಯ ಜನುಮದಿನಕ್ಕೆ ಶುಭಕೋರುತ್ತಿದ್ದಾರೆ.

  ಕೇವಲ ಅಭಿಮಾನಿಗಳು ಮಾತ್ರವಲ್ಲ ಸಿನಿಮಾ ಇಂಡಸ್ಟ್ರಿಯಿಂದ ಹಲವು ಸೆಲೆಬ್ರಿಟಿಗಳು ನಯನತಾರಗೆ ಶುಭಕೋರಿದ್ದು, ಈ ದಿನವನ್ನು ವಿಶೇಷವಾಗಿಸಿದ್ದಾರೆ. ನಟಿ ಸಮಂತಾ ಅಕ್ಕಿನೇನಿ ಸಹ ನಯನತಾರ ಬರ್ತಡೇಗೆ ವಿಶ್ ಮಾಡಿದ್ದು, ಈ ಟ್ವೀಟ್ ಸಖತ್ ಪವರ್ ಫುಲ್ ಆಗಿದೆ. ಮುಂದೆ ಓದಿ....

   ಪ್ರಿಯತಮನ ಹುಟ್ಟುಹಬ್ಬಕ್ಕೆ ಲಕ್ಷಾಂತರ ಖರ್ಚು ಮಾಡಿದ ನಯನತಾರಾ ಪ್ರಿಯತಮನ ಹುಟ್ಟುಹಬ್ಬಕ್ಕೆ ಲಕ್ಷಾಂತರ ಖರ್ಚು ಮಾಡಿದ ನಯನತಾರಾ

  ನಿನ್ನ ಶಕ್ತಿಗೆ ಸಲ್ಯೂಟ್

  ನಿನ್ನ ಶಕ್ತಿಗೆ ಸಲ್ಯೂಟ್

  ''ಒನ್ ಅಂಡ್ ಒನ್ಲಿ ನಯನತಾರಾಗೆ ಹುಟ್ಟುಹಬ್ಬದ ಶುಭಾಶಯಗಳು. ಸದಾ ಪ್ರಕಾಶಮಾನವಾಗಿ ಹೊಳೆಯುತ್ತೀರಿ, ನಮ್ಮ ತನಕ್ಕಾಗಿ ಹೋರಾಟ ಮಾಡಲು ನಮಗೆ ಸ್ಫೂರ್ತಿ ನೀಡಿ. ನಿಮಗೆ ಹಚ್ಚಿನ ಶಕ್ತಿ ಸಿಗಲಿ ಸಹೋದರಿ. ನಿಮ್ಮ ಶಕ್ತಿಗೆ ಸಲ್ಯೂಟ್'' ಎಂದು ಸಮಂತಾ ವಿಶ್ ಮಾಡಿದ್ದಾರೆ.

  ಒಂದೇ ಚಿತ್ರದಲ್ಲಿ ನಟನೆ

  ಒಂದೇ ಚಿತ್ರದಲ್ಲಿ ನಟನೆ

  ಇದೇ ಮೊದಲ ಬಾರಿಗೆ ಸಮಂತಾ ಅಕ್ಕಿನೇನಿ ಮತ್ತು ನಯನತಾರ ಒಟ್ಟಿಗೆ ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ. ಇದುವರೆಗೂ ಈ ಇಬ್ಬರು ಬ್ಯೂಟಿಫುಲ್ ನಟಿಯರು ಒಟ್ಟಿಗೆ ತೆರೆ ಹಂಚಿಕೊಂಡಿರಲಿಲ್ಲ. ವಿಘ್ನೇಶ್ ನಿರ್ದೇಶನದಲ್ಲಿ ಮೂಡಿ ಬರಲಿರುವ ಚಿತ್ರದಲ್ಲಿ ನಯನತಾರ ಮತ್ತು ಸಮಂತಾ ನಟಿಸುವುದು ಅಧಿಕೃತವಾಗಿದೆ. ವಿಜಯ್ ಸೇತುಪತಿ ಈ ಚಿತ್ರಕ್ಕೆ ನಾಯಕರಾಗಿದ್ದಾರೆ.

  ವಿಘ್ನೇಶ್ ಲವ್ಸ್ ನಯನತಾರಾ

  ವಿಘ್ನೇಶ್ ಲವ್ಸ್ ನಯನತಾರಾ

  ನಿರ್ದೇಶಕ ವಿಘ್ನೇಶ್ ಜೊತೆ ನಟಿ ನಯನತಾರಾ ಲವ್ ರಿಲೇಶನ್‌ಷಿಪ್‌ನಲ್ಲಿದ್ದಾರೆ ಎನ್ನುವುದು ಗೊತ್ತಿರುವ ಸಂಗತಿ. ಆದ್ರೆ, ಮದುವೆ ಕುರಿತು ಸ್ಪಷ್ಟನೆ ಇಲ್ಲ. ವೈಯಕ್ತಿಕವಾಗಿ ಮತ್ತು ವೃತ್ತಿ ಜೀವನದಲ್ಲಿ ಏಳು ಬೀಳು ಕಂಡಿರುವ ನಯನತಾರಾ ತನ್ನ ಆಸೆಯಂತೆ ಬದುಕುತ್ತಿರುವ ನಟಿ.

  ಸಿನಿಮಾದಲ್ಲಿ ಇರುವುದು ಎಲ್ಲವೂ ಸತ್ಯ ಅಲ್ಲ ಅಂದ್ರು ರಿಯಲ್ ಲೈಫ್ ಹೀರೊ ಗೋಪಿನಾಥ್ | Filmibeat Kannada
  ಲೇಡಿ ಸೂಪರ್ ಸ್ಟಾರ್ ....

  ಲೇಡಿ ಸೂಪರ್ ಸ್ಟಾರ್ ....

  ಶ್ರೀದೇವಿ ಬಳಿಕ ಸೌತ್ ಇಂಡಿಯಾದಲ್ಲಿ ಲೇಡಿ ಸೂಪರ್ ಸ್ಟಾರ್ ಎಂದು ಕರೆಸಿಕೊಳ್ಳುತ್ತಿರುವ ನಟಿ ನಯನತಾರ. ಸ್ಟಾರ್ ನಟರ ಚಿತ್ರಗಳಲ್ಲಿ ಹೀರೋಯಿನ್ ಆಗಿ, ಸೋಲೊ ನಾಯಕಿಯಾಗಿಯೂ ಪ್ರೇಕ್ಷಕರನ್ನು ಥಿಯೇಟರ್‌ಗೆ ಕರೆದುಕೊಂಡು ಬರುವ ಶಕ್ತಿ ಹೊಂದಿದ್ದಾರೆ. ನಯನತಾರ ಹುಟ್ಟುಹಬ್ಬದ ಪ್ರಯುಕ್ತ ನೆಟ್ರಿಕಣ್ ಚಿತ್ರದ ಟೀಸರ್ ರಿಲೀಸ್ ಆಗಿದೆ. ವಿಘ್ನೇಶ್ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

  English summary
  South beauty Samantha akkineni wish to Lady superstar Nayanthara's Birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X