For Quick Alerts
  ALLOW NOTIFICATIONS  
  For Daily Alerts

  ನಟಿ-ನಿರೂಪಕಿ ಚಿತ್ರಾ ಆತ್ಮಹತ್ಯೆ: ಮುಖದ ಮೇಲೆ ಗಾಯ, ಹೆಚ್ಚಿದ ಅನುಮಾನ!

  |

  ತಮಿಳುನಾಡಿನ ಖ್ಯಾತ ಕಿರುತೆರೆ ನಟಿ, ನಿರೂಪಕಿ ವಿಜೆ ಚಿತ್ರಾ ಹೋಟೆಲ್ ರೂಂನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ವರಿಯಾಗಿದೆ. ಈ ಸುದ್ದಿ ಬಹಿರಂಗವಾಗುತ್ತಿದ್ದಂತೆ ಕಿರುತೆರೆ ಇಂಡಸ್ಟ್ರಿ ಆಘಾತಕ್ಕೊಳಗಾಗಿದೆ.

  ಬಯಲಾಯ್ತು ನಟಿ Chaitra ಸಾವಿನ ಹಿಂದಿನ ರಹಸ್ಯ??? | Filmibeat Kannada

  ಬೆಳಗ್ಗೆ ಶೂಟಿಂಗ್ ಮುಗಿಸಿದ ರೂಮಿಗೆ ಬಂದ ನಟಿ ಆತ್ಮಹತ್ಯೆ ಮಾಡಿಕೊಂಡರು ಅಂದ್ರೆ ಅದಕ್ಕೆ ಕಾರಣ ಏನಿರಬಹುದು ಎಂಬ ಅನುಮಾನ ಕಾಡುತ್ತಿದೆ. ನಟಿಯ ಮುಖದ ಮೇಲೆ ಕೆಲವು ಗಾಯದ ಗುರುತುಗಳಿವೆ ಎಂದು ತಿಳಿದು ಬಂದಿದೆ. ಈ ಕಡೆ ನಟಿಯ ಮರಣೋತ್ತರ ಪರೀಕ್ಷೆಯ ವರದಿ ಇನ್ನೂ ಹೆತ್ತವರ ಕೈ ಸೇರಿಲ್ಲ. ಹೊಸದಾಗಿ ಮದುವೆ ಬೇರೆ ಆಗಿದ್ದರು. ಅಷ್ಟಕ್ಕೂ, ಆ ಗಾಯದ ಕಲೆ ಯಾವುದು? ನಿಜಕ್ಕೂ ನಟಿಯದ್ದು ಆತ್ಮಹತ್ಯೆನಾ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಉದ್ಭವವಾಗಿದೆ. ಮುಂದೆ ಓದಿ...

  ಕಿರುತೆರೆಯ ಖ್ಯಾತ ನಟಿ ವಿ.ಜೆ ಚಿತ್ರಾ ಆತ್ಮಹತ್ಯೆಗೆ ಶರಣು ಕಿರುತೆರೆಯ ಖ್ಯಾತ ನಟಿ ವಿ.ಜೆ ಚಿತ್ರಾ ಆತ್ಮಹತ್ಯೆಗೆ ಶರಣು

  ಆತ್ಮಹತ್ಯೆಯಿಂದ ಉಂಟಾದ ಗುರುತು

  ಆತ್ಮಹತ್ಯೆಯಿಂದ ಉಂಟಾದ ಗುರುತು

  ನಟಿಯ ಮುಖದ ಮೇಲೆ ಆಗಿರುವ ಗಾಯದ ಗುರುತುಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದ್ದು, ಅನುಮಾನ ಮೂಡಿದೆ. ಈ ಕುರಿತು ನಟಿಯ ತಂದೆ ಮಾದ್ಯಮಗಳಿಗೆ ಪ್ರತಿಕ್ರಿಯಿಸಿರುವ ವೇಳೆ ''ಅದು ಆಕೆ ಆತ್ಮಹತ್ಯೆ ಮಾಡಿಕೊಂಡಾಗ ಆಗಿರುವ ಗಾಯ'' ಎಂದು ತಿಳಿಸಿದ್ದಾರೆ. ಇದು ಎಷ್ಟರ ಮಟ್ಟಿಗೆ ನಿಜ ಎಂದು ಮರಣೋತ್ತರ ಪರೀಕ್ಷೆಯ ವರದಿ ಬಂದಮೇಲೆ ಗೊತ್ತಾಗಲಿದೆ.

  ಆತ್ಮಹತ್ಯೆಗೆ ಕಾರಣ ಏನು ಗೊತ್ತಿಲ್ಲ?

  ಆತ್ಮಹತ್ಯೆಗೆ ಕಾರಣ ಏನು ಗೊತ್ತಿಲ್ಲ?

  ವಿಜೆ ಚಿತ್ರಾ ಅವರ ಸಾವಿಗೆ ನಿಜವಾದ ಕಾರಣ ಏನು ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ನಟಿಯ ತಂದೆಯೂ ಯಾರ ಮೇಲೂ ಅನುಮಾನ ವ್ಯಕ್ತಪಡಿಸಿಲ್ಲ.

  ಕಿರುತೆರೆ ನಟಿ ಆತ್ಮಹತ್ಯೆ; ತನಿಖೆಯಿಂದ ಬಯಲಾಯ್ತು ಚಿತ್ರಾ ಗುಟ್ಟಾಗಿ ಮದುವೆಯಾಗಿದ್ದ ರಹಸ್ಯಕಿರುತೆರೆ ನಟಿ ಆತ್ಮಹತ್ಯೆ; ತನಿಖೆಯಿಂದ ಬಯಲಾಯ್ತು ಚಿತ್ರಾ ಗುಟ್ಟಾಗಿ ಮದುವೆಯಾಗಿದ್ದ ರಹಸ್ಯ

  ಗುಟ್ಟಾಗಿ ಮದುವೆ ಆಗಿದ್ದೇಕೆ?

  ಗುಟ್ಟಾಗಿ ಮದುವೆ ಆಗಿದ್ದೇಕೆ?

  ಆಗಸ್ಟ್ ತಿಂಗಳಲ್ಲಿ ಚೆನ್ನೈ ಮೂಲದ ಉದ್ಯಮಿ ಹೇಮಂತ್ ಎನ್ನುವವರ ಜೊತೆ ನಟಿ ಚಿತ್ರಾ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅಕ್ಟೋಬರ್ 9ರಂದು ಇಬ್ಬರು ಮದುವೆಯಾಗಿದ್ದಾರಂತೆ. ಗುಟ್ಟಾಗಿ ರಿಜಿಸ್ಟರ್ ಮ್ಯಾರೇಜ್ ಆಗಿದ್ದ ವಿಚಾರವನ್ನು ಅವರು ಎಲ್ಲಿಯೂ ಬಹಿರಂಗ ಪಡಿಸಲಿಲ್ಲ. ಈ ಬಗ್ಗೆ ಹೇಮಂತ್ ಪೊಲೀಸರಿಗೆ ಮಾಹಿತಿ ನೀಡಿದ್ದು, ರಿಜಿಸ್ಟರ್ ಮ್ಯಾರೇಜ್ ಆಗಿರುವುದಾಗಿ ಮಾಹಿತಿ ನೀಡಿದ್ದಾರೆ.

  ಚಿತ್ರ ಸಾವಿನ ಬಗ್ಗೆ ಪತಿ ಹೇಳಿದ್ದೇನು?

  ಚಿತ್ರ ಸಾವಿನ ಬಗ್ಗೆ ಪತಿ ಹೇಳಿದ್ದೇನು?

  ಚಿತ್ರ ಸಾವಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹೇಮಂತ್ 'ಚಿತ್ರೀಕರಣ ಮುಗಿಸಿ ವಾಪಸ್ ಆಗಿದ್ದ ಚಿತ್ರಾ ಸ್ನಾನ ಮುಗಿಸಿ ಬರುವುದಾಗಿ ಹೇಳಿ ಹೋದಳು. ತುಂಬಾ ಸಮಯವಾದರೂ ಬರಲಿಲ್ಲ, ಬಳಿಕ ಬಾಗಿಲು ಬಡಿಯಲು ಪ್ರಾರಂಭಿಸಿದೆ. ಬಾಗಿಲು ತೆಗೆಯಲಿಲ್ಲ. ಬಳಿಕ ಹೋಟೆಲ್ ಸಿಬ್ಬಂದಿಗೆ ತಿಳಿಸಿ ನಕಲಿ ಕೀ ಬಳಸಿ ಬಾಗಿಲು ತೆರೆದೆವು. ಚಿತ್ರಾ ನೇಣುಹಾಕಿಕೊಂಡಿದ್ದಳು' ಎಂದಿದ್ದಾರೆ.

  English summary
  Tamil small screen actor VJ chitra commits suicide yesterday. now, questioned raised after marks were found on her face.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X