Don't Miss!
- News
ವಂಚನೆ ಪ್ರಕರಣ: ಮತ್ತೋರ್ವ ನಟಿಯನ್ನು ಮದುವೆಯಾಗಲು ಬಯಸಿದ್ದ ಸುಕೇಶ್!
- Automobiles
ಭಾರತದಲ್ಲಿ ಹೊಸ ಅಧ್ಯಾಯ ಬರೆಯಲು ಸಿದ್ಧವಾಗಿವೆ ಮಾರುತಿ ಸುಜುಕಿ ಕಾರುಗಳು
- Sports
ಮತ್ತೊಮ್ಮೆ ನಮಗೆ ಆತನೇ ಬಲು ದೊಡ್ಡ ಕಂಟಕ: ಭಾರತೀಯ ಆಟಗಾರನ ಬಗ್ಗೆ ಆಸಿಸ್ ಕ್ರಿಕೆಟಿಗನ ಆತಂಕ!
- Finance
ಅದಾನಿ ಗ್ರೂಪ್ ವಿರುದ್ಧ ಆರೋಪ: 'ನಾವು ಜಾಗರೂಕರಾಗಿದ್ದೇವೆ' ಎಂದ ಭಾರತದ ಉನ್ನತ ಬ್ಯಾಂಕ್ಗಳು
- Technology
ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಫೈರ್ಬೋಲ್ಟ್ ಕಂಪೆನಿ!..ಪ್ರತಿಸ್ಫರ್ಧಿಗಳು ಕಂಗಾಲು!
- Lifestyle
ಬಿಪಿ ಸಮಸ್ಯೆಯೇ? ಪಿಜ್ಜಾ, ಮಜ್ಜಿಗೆ ಈ ಬಗೆಯ ಅಧಿಕ ಸೋಡಿಯಂ ಆಹಾರ ಸೇವಿಸಲೇಬೇಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ನಟಿ ಮೀನಾ ನೋಡಿ ಬೇಸರ ವ್ಯಕ್ತಪಡಿಸಿದ ರಜನಿಕಾಂತ್; ಕಾರಣವೇನು?
ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟಿ ಮೀನಾ ಇತ್ತೀಚಿಗೆ ಚಿತ್ರರಂಗದಲ್ಲಿ 40 ವರ್ಷವನ್ನು ಪೂರೈಸಿದ್ದಾರೆ. ಬಹುಭಾಷಾ ನಟಿ ಮೀನಾ ಕನ್ನಡಿಗರೂ ಚಿರಪರಿಚಿತ. ಪುಟ್ನಂಜ, ಸಿಂಹಾದ್ರಿಯ ಸಿಂಹ, ಸ್ವಾತಿ ಮುತ್ತು, ಮೈ ಆಟೋಗ್ರಾಫ್ ಮೂಲಕ ಕನ್ನಡ ಪ್ರೇಕ್ಷಕರ ಹೃದಯ ಗೆದ್ದಿರುವ ಮೀನಾ ಈಗ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
ಸದ್ಯ ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಅಣ್ಣಾತೆ ಸಿನಿಮಾದಲ್ಲಿ ಮೀನಾ ನಟಿಸುತ್ತಿದ್ದಾರೆ. ಅಂದಹಾಗೆ ಮೀನಾ ಮತ್ತು ರಜನಿಕಾಂತ್ ಒಟ್ಟಿಗೆ ನಟಿಸುತ್ತಿರುವುದು ಇದೇ ಮೊದಲಲ್ಲ. ಈಗಾಗಲೇ ಅನೇಕ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಇದೀಗ ಅನೇಕ ವರ್ಷಗಳ ಬಳಿಕ ಮೀನಾ ಅಣ್ಣಾತೆ ಮೂಲಕ ಮತ್ತೆ ಸೂಪರ್ ಸ್ಟಾರ್ ಜೊತೆ ತೆರೆಹಂಚಿಕೊಳ್ಳುತ್ತಿದ್ದಾರೆ. ಚಿತ್ರೀಕರಣ ಸೆಟ್ ನಲ್ಲಿ ರಜನಿಕಾಂತ್ ಹೇಳಿದ ಮಾತನ್ನು ಮೀನಾ ಇತ್ತೀಚಿಗಿನ ಸಂದರ್ಶನವೊಂದರಲ್ಲಿ ಬಹಿರಂಗ ಪಡಿಸಿದ್ದಾರೆ. ಮುಂದೆ ಓದಿ...

ಮೀನಾ ಬಗ್ಗೆ ನಿರಾಸೆ ವ್ಯಕ್ತಪಡಿಸಿದ ರಜನಿಕಾಂತ್
ಅಣ್ಣಾತೆ ಚಿತ್ರದಲ್ಲಿ ಮೀನಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚಿಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಮೀನಾ ಅಣ್ಣಾತೆ ಶೂಟಿಂಗ್ ನಲ್ಲಿ ಸೂಪರ್ ಸ್ಟಾರ್ ಜೊತೆಗಿನ ಮಾತುಕತೆ ಬಗ್ಗೆ ವಿವರಿಸಿದ್ದಾರೆ. ವರ್ಷಗಳ ಬಳಿಕ ಒಂದಾಗಿ ನಟಿಸುತ್ತಿರುವ ಬಗ್ಗೆ ಸಂತಸ ಹೊಂಚಿಕೊಂಡ ಮೀನಾ ಚಿತ್ರೀಕರಣ ಸೆಟ್ ನಲ್ಲಿ ಮೀನಾ ನೋಡಿ ರಜನಿಕಾಂತ್ ಬೇಸರ ವ್ಯಕ್ತ ಪಡಿಸಿದ ಬಗ್ಗೆಯೂ ವಿವರಿಸಿದ್ದಾರೆ.
ಚಿತ್ರರಂಗದಲ್ಲಿ
40
ವರ್ಷ
ಪೂರೈಸಿದ
ನಟಿ
ಮೀನಾ
ಹೃದಯಸ್ಪರ್ಶಿ
ಸಂದೇಶ

ವೀರ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದ ಮೀನಾ-ರಜನಿಕಾಂತ್
1994ರಲ್ಲಿ ರಿಲೀಸ್ ಆಗಿದ್ದ ಸೂಪರ್ ಹಿಟ್ 'ವೀರ' ಸಿನಿಮಾದಲ್ಲಿ ಮೀನಾ ಸೂಪರ್ ಸ್ಟಾರ್ ಜೊತೆ ತೆರೆಹಂಚಿಕೊಂಡಿದ್ದರು. ಆ ಸಿನಿಮಾದಿಂದನೂ ಈಗಲೂ ಮೀನಾ ನೋಡೋಕೆ ಹಾಗೆ ಇದ್ದಾರೆ ಎಂದು ನಿರಾಸೆ ಪಟ್ಟುಕೊಂಡಿದ್ದರಂತೆ. ಈ ಬಗ್ಗೆ ಆಂಗ್ಲ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಬಹಿರಂಗ ಪಡಿಸಿದ್ದಾರೆ.

ವೀರ ಚಿತ್ರದಿಂದನೂ ಹಾಗೆ ಇದ್ದೀರಿ ಎಂದ ರಜನಿಕಾಂತ್
ಒಂದು ದಿನ ರಜನಿಕಾಂತ್ ಸರ್ ನನ್ನ ಹತ್ತಿರ ಬಂದು, ಮೀನಾ ನಾನು ನಿಮ್ಮ ಬಗ್ಗೆ ನಿರಾಸೆಗೊಂಡಿದ್ದೇನೆ ಎಂದು ಹೇಳಿದರು. ಆಗ ನಾನು ಆಘಾತಕ್ಕೊಳಗಾದೆ. ಅನೇಕರು ನಮ್ಮನ್ನು ನೋಡುತ್ತಿದ್ದರು. ಬಳಿಕ ಅವರು ನಾವೆಲ್ಲರೂ ಬದಲಾಗಿದ್ದೇವೆ. ಆದರೆ ನೀವು ವೀರ ಸಿನಿಮಾದಿಂದನೂ ಹಾಗೆ ಇದ್ದೀರಿ ಎಂದು ಹೇಳಿದರು' ಸೂಪರ್ ಸ್ಟಾರ್ ಹೇಳದ ಮಾತನ್ನು ಹಂಚಿಕೊಂಡಿದ್ದಾರೆ.

ಅಣ್ಣಾತೆ ಚಿತ್ರೀಕರಣ ಬಹುತೇಕ ಮುಕ್ತಾಯ
ಅಂದಹಾಗೆ ಅಣ್ಣಾತೆ ಸಾಕಷ್ಟು ಅಡೆತಡೆಗಳ ನಡುವೆಯೂ ಬಹುತೇಕ ಚಿತ್ರೀಕರಣ ಮಾಡಿ ಮುಗಿಸಿದ್ದಾರೆ. ಕೊರೊನಾ ನಡುವೆಯೂ ಚಿತ್ರತಂಡ ಹೈದರಾಬಾದ್ ನಲ್ಲಿ ಚಿತ್ರೀಕರಣ ಮಾಡಿದೆ. ಚಿತ್ರತಂಡದ ಒಂದಿಷ್ಟು ಮಂದಿಗೆ ಕೊರೊನಾ ಪಾಸಿಟಿವ್ ಬಂದ ಬಳಿಕ ಚಿತ್ರೀಕರಣ ಸ್ಥಗಿತಗೊಳಸಲಾಗಿತ್ತು. ಅಷ್ಟರಲ್ಲೇ ರಜನಿಕಾಂತ್ ಕೂಡ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾದರು.
Recommended Video

ಖುಷ್ಬೂ, ಕೀರ್ತಿ, ನಯನತಾರಾ ನಟನೆ
ಕೆಲವು ತಿಂಗಳು ಚಿತ್ರೀಕರಣ ಸ್ಥಗಿತಗೊಳಿಸಲಾಗಿತ್ತು. ಬಳಿಕ ಮತ್ತೆ ಚಿತ್ರೀಕರಣ ಪ್ರಾರಂಭ ಮಾಡಿದ ಸಿನಿಮಾತಂಡ ಪ್ರಮುಖ ಭಾಗಗಳ ಚಿತ್ರೀಕರಣ ಮಾಡಿ ಮುಗಿಸಿದೆ. ಮತ್ತೆ ಚಿತ್ರೀಕರಣಕ್ಕೆ ಹೊರಡಲು ಸಿನಿಮಾತಂಡ ಸಿದ್ಧತೆ ನಡೆಸುತ್ತಿದೆ. ಸಿರುಥೈ ಶಿವ ಸಾರಥ್ಯದಲ್ಲಿ ಮೂಡಿಬರುತ್ತಿರುವ ಅಣ್ಣಾತೆ ಚಿತ್ರದಲ್ಲಿ ನಯನತಾರಾ, ಖುಷ್ಬೂ, ಕೀರ್ತಿ ಸುರೇಶ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.