twitter
    For Quick Alerts
    ALLOW NOTIFICATIONS  
    For Daily Alerts

    400 ಸರ್ಕಾರಿ ಶಾಲೆ ದತ್ತು ಪಡೆದ ಸೂರ್ಯ- ಉಚಿತ ಶಾಲೆ ನಡೆಸಲು ವಿಜಯ್ ನಿರ್ಧಾರ

    |

    ಕಾಲಿವುಡ್ ನಲ್ಲಿ ರಜನಿಕಾಂತ್ ನಂತರ ಮುಂದಿನ ಸೂಪರ್ ಸ್ಟಾರ್ ಯಾರು? ಎಂಬ ಪ್ರಶ್ನೆ ಯಾರನ್ನಾದರೂ ಕೇಳಿದರೆ ತಕ್ಷಣಕ್ಕೆ ಒಂದು ಹೆಸರು ಅದು ವಿಜಯ್. ಹಾಗೆ ನೋಡಿದರೆ ಪ್ರಸ್ತುತ ತಮಿಳು ಸಿನಿಮಾ ರಂಗದಲ್ಲಿ ನಂಬರ್1 ಸ್ಥಾನದಲ್ಲಿರುವ ನಟ ವಿಜಯ್. ರಜನಿಕಾಂತ್ ಬಿಟ್ಟರೆ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಮತ್ತೊಬ್ಬ ತಮಿಳು ನಟ ಅಂದರೆ ಅದು ವಿಜಯ್ ಮಾತ್ರ. ಒಂದು ಹಂತದಲ್ಲಿ ವಿಜಯ್ ಮತ್ತು ಅಜಿತ್ ಮಧ್ಯೆ ನಂಬರ್ ಒನ್ ಸ್ಥಾನಕ್ಕೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಆದರೆ, ಮೋಟರ್ ರೈಸಿಂಗ್‌ನಲ್ಲಿ ಸಿಕ್ಕಾಪಟ್ಟೆ ಆಸಕ್ತಿ ಹೊಂದಿದ್ದ ಅಜಿತ್ ಒಂದಷ್ಟು ಕಾಲ ಸಿನಿಮಾರಂಗದಿಂದ ಇದೇ ಕಾರಣಕ್ಕೆ ದೂರ ಕೂಡ ಉಳಿದರು.

    ಇದೇ ಸಮಯದಲ್ಲಿ ಎಲ್ಲಾ ತರದ ಅವಕಾಶಗಳು ಮುಕ್ತವಾಗಿ ವಿಜಯ್ ಅವರೇ ಕಡೆಗೆ ಮುಖ ಮಾಡಿತು. ಒಂದಕ್ಕಿಂತ ಒಂದು ಚಿತ್ರ ಸೂಪರ್ ಹಿಟ್ ಆಗಿ ವಿಜಯ್ ಸ್ಥಾನವನ್ನು ನಂಬರ್ ಒನ್ ಸ್ಥಾನದಲ್ಲಿ ತಂದು ನಿಲ್ಲಿಸಿತು. ಆದರೆ ಈಗ ಮತ್ತೊಬ್ಬ ನಟ ಸೂರ್ಯ ಕೂಡ ವಿಜಯ್ ಅವರ ಸರಿಸಮಾನಕ್ಕೆ ನಿಧಾನವಾಗಿ ಬೆಳೆಯುತ್ತಿದ್ದಾರೆ. ಆದರೂ ಪ್ರಸ್ತುತ ವಿಜಯ್ ಇತರ ಎಲ್ಲಾ ತಮಿಳು ನಟರಿಂದ ಮುಂದಿದ್ದಾರೆ. ಪ್ರಸ್ತುತ ಸಿನಿಮಾವೊಂದಕ್ಕೆ 80 ರಿಂದ 100 ಕೋಟಿ ವಿಜಯ್ ಪಡೆಯುತ್ತಿದ್ದಾರೆ.

    ಸೇವಾಕಾರ್ಯಗಳಲ್ಲಿ ತಮಿಳು ನಟರು ಸದಾ ಮುಂದು

    ಸೇವಾಕಾರ್ಯಗಳಲ್ಲಿ ತಮಿಳು ನಟರು ಸದಾ ಮುಂದು

    ತಮಿಳು ಸಿನಿಮಾರಂಗ ಜನಸಾಮಾನ್ಯರ ಮೇಲೆ ತೀವ್ರವಾದ ಪರಿಣಾಮವನ್ನು ಬೀರುತ್ತಿದೆ. ತಮಿಳು ಸಿನಿಮಾ ರಂಗ ಮತ್ತು ತಮಿಳರನ್ನು ಬೇರೆ ಮಾಡಿ ನೋಡಲು ಸಾಧ್ಯವೇ ಇಲ್ಲ ಅಷ್ಟರಮಟ್ಟಿಗೆ ಸಿನಿಮಾರಂಗ ಮತ್ತು ತಮಿಳರು ಪರಸ್ಪರ ಹೊಂದಿಕೊಳ್ಳುತ್ತದೆ. ಹಿಂದೆ ಎಂಜಿಆರ್ ಅವರು 'ರಿಕ್ಷಾಕಾರನ್' ಚಿತ್ರ ಮಾಡುವ ಸಮಯದಲ್ಲಿ, ರಿಕ್ಷಾಕಾರರ ಕಷ್ಟಗಳನ್ನು ಸ್ವಯಂ ತಿಳಿದುಕೊಂಡರು. ಮದ್ರಾಸ್‌ನಲ್ಲಿನ ಎಲ್ಲಾ ರಿಕ್ಷಾದವರನ್ನು ಕರೆದು ಅವರಿಗೆ ಹೊಸ ರಿಕ್ಷಾಗಳನ್ನು ಕೊಡಿಸಿದ್ದು ಅಲ್ಲದೆ ಆರ್ಥಿಕವಾಗಿ ಕೂಡ ಸಾಕಷ್ಟು ಸಹಾಯವನ್ನು ಮಾಡುತ್ತಾರೆ. ಇಂಥ ಸೇವಾ ಮನೋಭಾವದಿಂದಲೇ ಎಂಜಿಆರ್ ತಮಿಳರ ಪಾಲಿಗೆ ನಡೆದಾಡುವ ದೇವರಂತೆ ಕಂಡಿದ್ದು. ಎಂಜಿಆರ್ ಅವರನ್ನು ಸಾಯುವ ತನಕ ತಮ್ಮ ಮುಖ್ಯಮಂತ್ರಿಯಾಗಿ, ಜೊತೆಗೆ ತಮ್ಮ ನೆಚ್ಚಿನ ನಾಯಕನಾಗಿ ಹೃದಯಗಳಲ್ಲಿ ಕೂಡ ಪ್ರತಿಷ್ಠಾಪನೆ ಮಾಡಿಕೊಂಡಿದ್ದು. ಎಂಜಿಆರ್ ನಂತರ ಇದೇ ತರದಲ್ಲಿ ಸೇವಾ ಕಾರ್ಯಗಳ ಮೂಲಕ ತಮಿಳರ ಮನಗೆದ್ದು ರಜನಿಕಾಂತ್. ರಜನಿಕಾಂತ್ ಇಂದಿಗೂ ಕೂಡ ಕೊಡುಗೈ ದಾನಿ ಇದ್ದಾನೆ ಅಂತಲೆ ತಮಿಳುನಾಡಿನಲ್ಲಿ ಪ್ರಸಿದ್ದಿ ಹೊಂದಿದ್ದಾರೆ.

    ಸೇವಾಕಾರ್ಯಗಳಲ್ಲಿ ಸೂರ್ಯ ಸದಾ ಮುಂದು

    ಸೇವಾಕಾರ್ಯಗಳಲ್ಲಿ ಸೂರ್ಯ ಸದಾ ಮುಂದು

    ಪ್ರಸ್ತುತವಿರುವ ತಮಿಳು ಸಿನಿಮಾ ನಾಯಕ ನಟರಲ್ಲಿ ಸೂರ್ಯ ಸೇವಾಕಾರ್ಯಗಳಲ್ಲಿ ಇತರ ನಾಯಕ ನಟರಿಗಿಂತ ಒಂದು ಹೆಜ್ಜೆ ಮುಂದಿದ್ದಾರೆ. ಪತ್ನಿ ಜ್ಯೋತಿಕಾ ಮತ್ತು ತಮ್ಮ ನಟ ಕಾರ್ತಿ ಜೊತೆಯಲ್ಲಿ ಸೂರ್ಯ 'ಅಗರಂ' ಫೌಂಡೇಶನ್ ಸ್ಥಾಪಿಸಿದ್ದು, ಇದರ ಮೇಲುಸ್ತುವಾರಿಯನ್ನು ಅವರ ತಂದೆ ನಟ ಶಿವಕುಮಾರ್ ಅವರು ವಹಿಸಿಕೊಂಡಿದ್ದಾರೆ. 'ಅಗರಂ' ವಿಶೇಷವಾಗಿ ತೀರ ಹಿಂದುಳಿದ ಪ್ರದೇಶಗಳಲ್ಲಿನ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ದೊಡ್ಡಮಟ್ಟದಲ್ಲಿ ಶ್ರಮಿಸುತ್ತಿದೆ. ಅದರ ಜೊತೆಗೆ ವೈದ್ಯಕೀಯರಂಗದಲ್ಲಿ ವಿಶೇಷವಾದ ಕಾರ್ಯಗಳನ್ನು ಮಾಡುತ್ತಿದೆ. ಪ್ರಾಜೆಕ್ಟ್ 'ವಿಧೈ' ವಿಶೇಷವಾಗಿ ತೀರಾ ಬಡತನ ಮತ್ತು ಹಿಂದುಳಿದ ಹೆಣ್ಣುಮಕ್ಕಳು ಶಿಕ್ಷಣಕ್ಕಾಗಿ ವಿಶೇಷವಾಗಿ ಶ್ರಮಿಸುತ್ತಿದೆ ಅಲ್ಲದೆ ತಮಿಳುನಾಡಿನಲ್ಲಿ ಸುಮಾರು 400 ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಆ ಶಾಲೆಗಳ ಅಭಿವೃದ್ಧಿಗಾಗಿ ವಿಶೇಷವಾಗಿ ಶ್ರಮಿಸುತ್ತಿದೆ.

    ನಂಬರ್ ಒನ್ ಸ್ಥಾನಕ್ಕೆ ವಿಜಯ್ ವರ್ಸಸ್ ಸೂರ್ಯ

    ನಂಬರ್ ಒನ್ ಸ್ಥಾನಕ್ಕೆ ವಿಜಯ್ ವರ್ಸಸ್ ಸೂರ್ಯ

    ಒಂದೆಡೆ ನಟ ಸೂರ್ಯ ತನ್ನ ವಿಭಿನ್ನವಾದ ಪ್ರಯತ್ನಗಳು ಮತ್ತು ಪ್ರಯೋಗಾತ್ಮಕ ಚಿತ್ರಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. 'ಸೂರರೈ ಪೋಟ್ರು' 'ಜೈ ಭೀಮ್' ಚಿತ್ರಗಳ ಮೂಲಕ ದೇಶಾದ್ಯಂತ ಸದ್ದು ಮಾಡಿದ್ದರು ಸೂರ್ಯ ಇನ್ನೊಂದೆಡೆ ವಿಜಯ್ ಕೂಡ ತನ್ನ ಮಾಸ್ ಚಿತ್ರಗಳ ಮೂಲಕ ದೊಡ್ಡ ಪ್ರಮಾಣದಲ್ಲಿ ಗಮನಸೆಳೆದಿದ್ದಾರೆ. ಈಗ ದಿನಕಳೆದಂತೆ ಸೂರ್ಯ ಅವರು ವಿಜಯ್ ಅವರಿಗೆ ಪ್ರತಿಸ್ಪರ್ಧಿಯಾಗಿ ಬೆಳೆಯುತ್ತಿದ್ದಾರೆ. ಜೊತೆಗೆ ಸೂರ್ಯ ತಮ್ಮ ಸೇವಾ ಕಾರ್ಯಗಳ ಮೂಲಕ ಕೂಡ ಜನ ಮೆಚ್ಚುಗೆಯನ್ನು ಪಡೆಯುತ್ತಿದ್ದಾರೆ. ಇಂತಹ ಸಮಯದಲ್ಲಿ ವಿಜಯ್ ಸುಮ್ಮನೆ ಇರಲು ಸಾಧ್ಯವೇ? ವಿಜಯ್ ಕೂಡ ಇದುವರೆಗೂ ಸಾಕಷ್ಟು ಪ್ರಮಾಣದಲ್ಲಿ ಜನಸಾಮಾನ್ಯರಿಗೆ ಅನೇಕ ತರದ ಸಹಾಯಗಳನ್ನು ಮಾಡುತ್ತಲೇ ಬಂದಿದ್ದಾರೆ. ಆದರೆ ಈ ಬಾರಿ ಒಂದು ದೊಡ್ಡ ಮಟ್ಟದ ಯೋಜನೆಯೊಂದಿಗೆ ದೇಶದ ಗಮನ ಸೆಳೆಯಲು ಮುಂದಾಗಿದ್ದಾರೆ.

    ಉಚಿತ ಶಿಕ್ಷಣ ನೀಡಲು ದಳಪತಿ ವಿಜಯ್ ಹೊಸ ಶಾಲೆಯನ್ನು ನಿರ್ಮಿಸುತ್ತಿದ್ದಾರಾ?

    ಉಚಿತ ಶಿಕ್ಷಣ ನೀಡಲು ದಳಪತಿ ವಿಜಯ್ ಹೊಸ ಶಾಲೆಯನ್ನು ನಿರ್ಮಿಸುತ್ತಿದ್ದಾರಾ?

    ವಿಜಯ್ ದಕ್ಷಿಣ ಭಾರತದ ಜನಪ್ರಿಯ ನಟರಲ್ಲಿ ಒಬ್ಬರು ಮತ್ತು ಅವರು ಪ್ರಪಂಚದಾದ್ಯಂತ ವ್ಯಾಪಕವಾಗಿ ಹರಡಿರುವ ನಿಷ್ಠಾವಂತ ಅಭಿಮಾನಿಗಳನ್ನು ಹೊಂದಿದ್ದಾರೆ. ವಿಜಯ್ ಅವರು ತಮ್ಮ ಅಭಿಮಾನಿಗಳ ಸಂಘ 'ವಿಜಯ್ ಮಕ್ಕಳ್ ಇಯಕ್ಕಂ' ಮೂಲಕ ನಿರ್ಗತಿಕರಿಗೆ ಸಹಾಯ ಮಾಡುತ್ತಿದ್ದಾರೆ. ಇದೀಗ, ವಿಜಯ್ ಬಡ ಮತ್ತು ನಿರ್ಗತಿಕರ ಮಕ್ಕಳಿಗಾಗಿ ಉಚಿತ ಶಿಕ್ಷಣ ನೀಡಲು ಶಾಲೆಯೊಂದನ್ನು ನಿರ್ಮಿಸಲು ಮುಂದಾಗಿದ್ದಾರೆ ಅಂತ ಅಂತರ್ಜಾಲದಲ್ಲಿ ಈಗ ಸುದ್ದಿಯಾಗುತ್ತಿದೆ. ಮಕ್ಕಳ ಶಿಕ್ಷಣದ ಬಗ್ಗೆ ವಿಶೇಷ ಒಲವು ಹೊಂದಿರುವ ವಿಜಯ್, ಶಾಲಾ ಶುಲ್ಕವನ್ನು ಪಾವತಿಸಲು ಸಾಧ್ಯವಾಗದ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ನಿರ್ಧರಿಸಿದ್ದಾರೆ. ವಿಜಯ್ ಅವರಿಂದ ಇದರ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆಯಿಲ್ಲದಿದ್ದರೂ, ಅವರು ಚೆನ್ನೈನ ತಿರುಪೋರೂರಿನಲ್ಲಿ ಶಾಲೆಯನ್ನು ನಿರ್ಮಿಸುತ್ತಿದ್ದಾರೆ ಅಂತ ಹೇಳಲಾಗುತ್ತಿದೆ.ಈ ಬಗ್ಗೆ ಶೀಘ್ರದಲ್ಲೇ ವಿಜಯ್ ಅವರು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ ಅಂತ ಹೇಳಲಾಗುತ್ತಿದೆ. ವಿಜಯ್ ಅವರು ಈಗಾಗಲೇ ತಮಿಳುನಾಡಿನ ಹಲವಾರು ಕೇಂದ್ರಗಳಲ್ಲಿ ತಮ್ಮ ಅಭಿಮಾನಿಗಳ ಸಂಘಗಳ ಮೂಲಕ ಉಚಿತ ರೆಸ್ಟೋರೆಂಟ್ (ವಿಜೈ ಇಲ್ಲಾ ಉನವಾಗಮ್) ನಡೆಸುತ್ತಿದ್ದಾರೆ ಮತ್ತು ಅಗತ್ಯವಿರುವ ಜನರಿಗೆ ಉಚಿತ ಆಹಾರವನ್ನು ನೀಡುತ್ತಿದ್ದಾರೆ.

    ಪ್ರಸ್ತುತ ವಿಜಯ್, ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ 'ಬೀಸ್ಟ್' ಚಿತ್ರದಲ್ಲಿ ನಟಿಸುತ್ತಿದ್ದಾರೆ ಇದರ ನಂತರ ನೇರ ತೆಲುಗು ಚಿತ್ರವೊಂದಕ್ಕೂ ಸಹಿ ಹಾಕಿದ್ದು ಅವರು ವಂಶಿ ಪೈಡಿಪಲ್ಲಿ ನಿರ್ದೇಶನದಲ್ಲಿ, ನಿರ್ಮಾಪಕ ದಿಲ್ ರಾಜು ನಿರ್ಮಿಸಲಿರುವ ಚಿತ್ರದಲ್ಲಿ ಅಭಿನಯಿಸಲಿದ್ದಾರೆ.

    English summary
    Actor Suriya adopted 400 government school, while Vijay will run a free school. Tamil cinema actors are active in social service activities.
    Wednesday, December 22, 2021, 17:06
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X