Just In
Don't Miss!
- News
50 ಸಾವಿರ ಪಾಯಿಂಟ್ ದಾಟಿಕ್ದ ಸೂಚ್ಯಂಕ, ಹೂಡಿಕೆದಾರರು ಸಂತಸ
- Sports
ಐಪಿಎಲ್ 2021: ಬಿಡುಗಡೆಗೊಳಿಸಿದಕ್ಕೆ ಧನ್ಯವಾದ ಎಂದ ಪಾರ್ಥಿವ್ ಪಟೇಲ್
- Automobiles
ಮೂರು ತಿಂಗಳಲ್ಲಿ ಆರು ಕೋಟಿಗೂ ಹೆಚ್ಚು ದಂಡ ತೆತ್ತ ವಾಹನ ಸವಾರರು
- Finance
50 ಸಾವಿರ ಪಾಯಿಂಟ್ ಗಡಿ ದಾಟಿದ ಸೆನ್ಸೆಕ್ಸ್; ನಿಫ್ಟಿ 14700 ಪಾಯಿಂಟ್ ಆಚೆಗೆ
- Lifestyle
ನಿಮ್ಮ ಕೋಮಲ ತುಟಿಗಳಿಗಾಗಿ ಮನೆಯಲ್ಲಿಯೇ ತಯಾರಿಸಿ ಈ ಲಿಪ್ ಬಾಮ್ ಗಳನ್ನು...
- Education
WAPCOS Recruitment 2021: 11 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸೂರ್ಯಾ ಹೊಸ ಸಿನಿಮಾ ಲುಕ್ ಲೀಕ್: ಅಭಿಮಾನಿಗಳಿಗೆ ಕುತೂಹಲ
ನಟ ಸೂರ್ಯಾ ಪ್ರತಿ ಸಿನಿಮಾಗೂ ತಮ್ಮ ಲುಕ್ ಬದಲಿಸುತ್ತಿರುತ್ತಾರೆ. ಒಂದೇ ಸಿನಿಮಾದಲ್ಲಿ ಹಲವು ಲುಕ್‌ಗಳಲ್ಲಿ ಕಾಣಿಸಿಕೊಂಡಿದ್ದೂ ಸಹ ಇದೆ.
ಇದೀಗ ಸೂರರೈ ಪೊಟ್ರು ಸಿನಿಮಾದಲ್ಲಿ ನಾಲ್ಕು ಭಿನ್ನ ಲುಕ್‌ಗಳಲ್ಲಿ ಕಾಣಿಸಿಕೊಂಡಿದ್ದ ಸೂರ್ಯಾ, ತಮ್ಮ ಹೊಸ ಸಿನಿಮಾಕ್ಕೆ ಸಂಪೂರ್ಣ ಹೊಸ ಲುಕ್ ಗೆ ಮೇಕ್‌ಓವರ್ ಆಗಿದ್ದಾರೆ.
ಹೌದು, ಗೌತಮ್ ಮೆನನ್ ನಿರ್ದೇಶನದ ಹೊಸ ಸಿನಿಮಾಕ್ಕೆ ನಟ ಸೂರ್ಯಾ ಚಿತ್ರೀಕರಣದಲ್ಲಿ ಭಾಗವಹಿಸಿದ್ದು, ಚಿತ್ರೀಕರಣ ಸೆಟ್‌ನ ಚಿತ್ರಗಳು ಲೀಕ್ ಆಗಿವೆ. ಅದರಲ್ಲಿನ ಸೂರ್ಯಾ ಲುಕ್ ನೋಡಿ ಅಭಿಮಾನಿಗಳು ಸಂತಸಗೊಂಡಿದ್ದಾರೆ.
ಈ ವರೆಗೆ ಕಾಣದಿದ್ದ ಹೊಸ ಅವತಾರದಲ್ಲಿ ನಟ ಸೂರ್ಯಾ ಕಾಣಿಸಿಕೊಳ್ಳುತ್ತಿದ್ದಾರೆ. ಕರ್ಲಿ ಆದರೆ ಉದ್ದ ಕೂದಲು, ಮೀಸೆ ಇರದ, ರಾಕ್‌ಸ್ಟಾರ್ ಮಾದರಿಯ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ ನಟ ಸೂರ್ಯಾ.

ಸೂರ್ಯಾ ಲುಕ್ ಬಹಳ ಭಿನ್ನವಾಗಿದೆ
ಗೌತಮ್ ಮೆನನ್ ಸಿನಿಮಾಗಳು ನಿಜಜೀವನಕ್ಕೆ ಬಹು ಹತ್ತಿರವಾಗಿರುತ್ತವೆ, ಅವರ ಸಿನಿಮಾಗಳಲ್ಲಿ ಕಮರ್ಶಿಯಲ್ ಅಂಶಗಳು, 'ಲಾರ್ಜರ್ ದ್ಯಾನ್ ಲೈಫ್' ರೀತಿಯ ಪಾತ್ರಗಳು ಇರುವುದಿಲ್ಲ, ಆದರೆ ಕತೆಯಲ್ಲಿ ತಾಜಾತನ ಇರುತ್ತದೆ, ಹಾಗಾಗಿ ನಟ ಸೂರ್ಯಾ ಜೊತೆಗೆ ಎಂಥಹಾ ಕತೆ ಹೇಳಲು ಹೊರಟಿದ್ದಾರೆ ಎಂಬ ಕುತೂಹಲ ಎದ್ದಿದೆ.

ಹಲವು ನಿರ್ದೇಶಕರು ಒಟ್ಟು ಸೇರಿರುವ ಸಿನಿಮಾ
ಗೌತಮ್-ಸೂರ್ಯಾ ಜೋಡಿಯ ಈ ಸಿನಿಮಾಕ್ಕೆ ನವರಸ ಎಂದು ಹೆಸರಿಡಲಾಗಿದೆ. ಈ ಸಿನಿಮಾವನ್ನು ಗೌತಮ್ ವಾಸುದೇವ್ ಮೆನನ್ ಮಾತ್ರವೇ ನಿರ್ದೇಶಿಸುತ್ತಿಲ್ಲ. ಸಿನಿಮಾವನ್ನು ಇನ್ನೂ ಕೆಲವು ನಿರ್ದೇಶಕರು ಒಟ್ಟಿಗೆ ಸೇರಿ ನಿರ್ದೇಶಿಸುತ್ತಿದ್ದಾರೆ. ಇದೊಂದು ಅಂತಾಲಜಿ ಸಿನಿಮಾ ಆಗಿರಲಿದೆ.

ನವರಸ ಸಿನಿಮಾದಲ್ಲಿ ಒಂಬತ್ತು ಕಿರುಚಿತ್ರ
'ನವರಸ' ಸಿನಿಮಾದಲ್ಲಿ ಒಟ್ಟು ಒಂಬತ್ತು ಕಿರು ಸಿನಿಮಾಗಳಿರಲಿದ್ದು, ಎಲ್ಲ ಸಿನಿಮಾಗಳು ನವ ಭಾವಗಳ ಮೇಲೆ ಆಧರಿಸಿದ್ದಾಗಿರಲಿವೆ. ಎಲ್ಲಾ ಒಂಬತ್ತೂ ಕಿರುಚಿತ್ರಗಳಲ್ಲಿಯೂ ಸೂರ್ಯಾ ಮುಖ್ಯ ಪಾತ್ರದಲ್ಲಿರುತ್ತಾರೆ ಎನ್ನಲಾಗುತ್ತಿದೆ. 'ನವರಸ' ಸಿನಿಮಾವನ್ನು ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ಮಿಸುತ್ತಿದ್ದಾರೆ.

ಈಗಾಗಲೇ ಒಂದು ಸಿನಿಮಾ ಬಿಡುಗಡೆ ಆಗಿದೆ
ಈಗಾಗಲೇ ತಮಿಳಿನ ಒಂದು ಅಂತಾಲಜಿ ಸಿನಿಮಾ 'ಪುತ್ತು ಪುದು ಕಾಲೈ' ಒಟಿಟಿಯಲ್ಲಿ ಬಿಡುಗಡೆ ಆಗಿ ಭಾರಿ ಜನಮೆಚ್ಚುಗೆ ಗಳಿಸಿದೆ. ಇದೇ ತಿಂಗಳ 18 ಕ್ಕೆ 'ಪಾವ ಕದೈಗಳ್' ಎಂಬ ಮತ್ತೊಂದು ಅಂತಾಲಜಿ ಸಿನಿಮಾ ಬಿಡುಗಡೆ ಆಗುತ್ತಿದೆ. ನವರಸ ಸಹ ಅಂತಾಲಜಿ ಸಿನಿಮಾ ಆಗಿದ್ದು, ಇದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಗಲಿದೆ.