For Quick Alerts
  ALLOW NOTIFICATIONS  
  For Daily Alerts

  ತಮಿಳು ನಟ ಸೂರ್ಯಾ ಕಚೇರಿಗೆ ಬಾಂಬ್ ಇಟ್ಟಿರುವುದಾಗಿ ಕರೆ

  |

  ತಮಿಳು ಚಿತ್ರರಂಗದ ಖ್ಯಾತ ನಟ ಸೂರ್ಯಾ ಕಚೇರಿಗೆ ನಿನ್ನೆ (ಸೋಮವಾರ) ಸಂಜೆ ಅಗಂತುಕನೊಬ್ಬನಿಂದ ಹುಸಿ ಬಾಂಬ್ ಬೆದರಿಕೆ ಕರೆ ಬಂದಿದೆ.

  ಚೆನ್ನೈನ ಅಲ್ವಾರ್‌ಪೇಟೆಯಲ್ಲಿ ನಟ ಸೂರ್ಯಾ ಕಚೇರಿಯೊಂದನ್ನು ಹೊಂದಿದ್ದಾರೆ. ಈ ಕಚೇರಿಯನ್ನು ಅವರು ಹೆಚ್ಚಿಗೆ ಬಳಸುವುದಿಲ್ಲ. ಅವರು ಹೊಸದೊಂದು ಕಚೇರಿ ನಿರ್ಮಿಸಿಕೊಂಡಿದ್ದಾರೆ. ಆದರೆ ನಿನ್ನೆ ಸಂಜೆ ಬೆದರಿಕೆ ಕರೆ ಬಂದಿದ್ದು ಸೂರ್ಯಾ ರ ಹಳೆ ಕಚೇರಿ ಕುರಿತು.

  ಸಿನಿಮಾದಲ್ಲಿ ಈ ಡೈಲಾಗ್ ಬಳಸಿದ್ದಕ್ಕೆ ಮಣಿರತ್ನಂಗೆ ಬಾಂಬ್ ಕರೆ.!

  ಪೊಲೀಸ್ ಕಂಟ್ರೋಲ್ ರೂಂ ಗೆ ಕರೆ ಮಾಡಿದ ಅಗಂತುಕನೊಬ್ಬ, ಸೂರ್ಯಾರ ಚೆನ್ನೈನ ಅಲ್ವಾರ್‌ಪೇಟೆಯ ಕಚೇರಿಗೆ ಬಾಂಬ್ ಇಟ್ಟಿರುವುದಾಗಿ ಹೇಳಿದ್ದ. ಕೂಡಲೇ ಬಾಂಬ್ ನಿಷ್ಕ್ರಿಯ ದಳದೊಂದಿಗೆ ಸ್ಥಳಕ್ಕೆ ತಲುಪಿದ ಪೊಲೀಸರು, ಸುಮಾರು ಎರಡು ಗಂಟೆ ವರೆಗೆ ಬಾಂಬ್ ಗಾಗಿ ಹುಡುಕಾಟ ನಡೆಸಿದ್ದಾರೆ. ಆದರೆ ಬಾಂಬ್ ಪತ್ತೆಯಾಗಿಲ್ಲ. ಹುಸಿ ಕರೆ ಮಾಡಿದವನಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

  ವಿಜಯ್, ರಜನೀಕಾಂತ್, ಅಜಿತ್ ಗೂ ಬಾಂಬ್ ಬೆದರಿಕೆ ಕರೆ

  ವಿಜಯ್, ರಜನೀಕಾಂತ್, ಅಜಿತ್ ಗೂ ಬಾಂಬ್ ಬೆದರಿಕೆ ಕರೆ

  ಈ ಕೆಲವು ದಿನಗಳ ಹಿಂದೆ ನಟ ವಿಜಯ್, ಅಜಿತ್, ರಜನೀಕಾಂತ್ ನಿವಾಸಗಳಲ್ಲಿ ಬಾಂಬ್ ಇಟ್ಟುರುವುದಾಗಿ ಹುಸಿ ಬಾಂಬ್ ಕರೆ ಮಾಡಲಾಗಿತ್ತು. ಅದರಲ್ಲಿ ಅಜಿತ್ ಮತ್ತು ವಿಜಯ್ ಮನೆಯಲ್ಲಿ ಬಾಂಬ್ ಇಟ್ಟಿರುವುದಾಗಿ ಕರೆ ಮಾಡಿದವರು ಮಾನಸಿಕ ಅಸ್ವಸ್ಥರು ಎನ್ನಲಾಯಿತು.

  ಸೂರ್ಯಾ ಸಿನಿಮಾಗಳಿಗೆ ನಿಷೇಧ

  ಸೂರ್ಯಾ ಸಿನಿಮಾಗಳಿಗೆ ನಿಷೇಧ

  ಇನ್ನು ನಟ ಸೂರ್ಯಾ ಅವರು ಇತ್ತೀಚೆಗೆ ಕೆಲವು ವಿವಾದಗಳಲ್ಲಿ ಸಿಲುಕಿಕೊಂಡಿದ್ದರು. ಅವರ ನಿರ್ಮಾಣದ ಪತ್ನಿ ಜ್ಯೋತಿಕ ನಟಿಸಿದ್ದ 'ಪೊನ್ಮಗಳ್ ವಂದಾಳ್' ಸಿನಿಮಾವನ್ನು ಸೂರ್ಯಾ ಒಟಿಟಿಗೆ ಮಾರಾಟ ಮಾಡಿದ್ದರು. ಇದನ್ನು ಚಿತ್ರಮಂದಿರಗಳ ಸಂಘ ವಿರೋಧಿಸಿ ಸೂರ್ಯಾ ಸಿನಿಮಾಕ್ಕೆ ನಿಷೇಧ ಹೇರಿದೆ.

  DIRECTORS DIARY : ಸಿನಿಮಾ ರಿಲೀಸ್ ಗೂ ಮುಂಚೆ ಓಡೋಗೋಣ ಅಂತ ಪ್ಲಾನ್ ಮಾಡಿದ್ದೆ | Filmibeat Kannada
  ಸೂರರೈ ಪೊಟ್ರು ಸಿನಿಮಾ ಒಟಿಟಿಗೆ

  ಸೂರರೈ ಪೊಟ್ರು ಸಿನಿಮಾ ಒಟಿಟಿಗೆ

  ಈ ನಡುವೆ ಸೂರ್ಯಾ ನಟನೆಯ ಮುಂದಿನ ಸಿನಿಮಾ ಸೂರರೈ ಪೊಟ್ರು ಸಿನಿಮಾವನ್ನು ಸಹ ಒಟಿಟಿಗೆ ನೀಡಲಾಗಿದೆ. ಅದು ಕೆಲವೇ ದಿನಗಳಲ್ಲಿ ಅಮೆಜಾನ್ ಪ್ರೈಂ ನಲ್ಲಿ ಬಿಡುಗಡೆ ಆಗಲಿದೆ. ಕರ್ನಾಟಕದ ಕ್ಯಾಪ್ಟನ್ ಗೋಪಿನಾಥ್ ಜೀವನ ಆಧರಿಸಿದ ಸಿನಿಮಾ ಅದಾಗಿದೆ.

  ಮನೆಯಲ್ಲಿ ಬಾಂಬ್ ಇಟ್ಟಿರುವುದಾಗಿ ಅಜಿತ್‌ಗೆ ಬೆದರಿಕೆ ಕರೆ

  English summary
  Tamil actor Suriya's old office in Chennai's Alwar receives bomb threat call from unknown on Monday evening.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X