For Quick Alerts
  ALLOW NOTIFICATIONS  
  For Daily Alerts

  'ಪುದುಪೇಟೈ' ಖ್ಯಾತಿಯ ನಟ ಬಾಲಸಿಂಗ್ ನಿಧನ

  |

  ತಮಿಳು ಚಿತ್ರರಂಗದ ವರ್ಸಟೈಲ್ ನಟ ಬಾಲಸಿಂಗ್ (67) ಬುಧವಾರ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಉಸಿರಾಟದ ತೊಂದರೆ ಮತ್ತು ಜ್ವರದಿಂದ ಬಳಲುತ್ತಿದ್ದ ಬಾಲಸಿಂಗ್ ಕಳೆದ ಕೆಲವು ದಿನದ ಹಿಂದೆ ಚೆನ್ನೈನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.

  ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಸಿಂಗ್ ಅವರು ಬುಧವಾರ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಬಾಲಸಿಂಗ್ ಅವರ ನಿಧನಕ್ಕೆ ತಮಿಳು ಚಿತ್ರರಂಗ ಅಚ್ಚರಿಗೊಳಗಾಗಿದ್ದು, ಸಂತಾಪ ಸೂಚಿಸಿದೆ.

  ಸರಿಯಾದ ಸಮಯಕ್ಕೆ ಅಂಬುಲೆನ್ಸ್ ಸಿಗದೆ ಚಿತ್ರನಟಿ ನಿಧನ

  ಬಾಲಸಿಂಗ್ ಅವರು ಬಹುಮುಖ ಪ್ರತಿಭೆಯಾಗಿದ್ದರು. ಮೂಲತಃ ರಂಗಭೂಮಿ ಕಲಾವಿದರಾಗಿದ್ದ ಅವರು ಕಿರುತೆರೆ ಮತ್ತು ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮಿಳಿನ ಹಿರಿಯನ ನಟ ನಾಸೀರ್ ಅವರ ಆಪ್ತ ಸ್ನೇಹಿತರಾಗಿದ್ದ ಬಾಲಸಿಂಗ್ ಅವರು, ನಾಸೀರ್ ನಿರ್ದೇಶನದ 'ಅವತಾರಂ' ಚಿತ್ರದಲ್ಲಿ ಪ್ರಮುಖ ಖಳನಟನಾಗಿ ಅಭಿನಯಿಸಿದ್ದರು.

  ತಮಿಳು ಇಂಡಸ್ಟ್ರಿಯಲ್ಲಿ ಜರ್ನಿ ಆರಂಭಿಸುವುದಕ್ಕೂ ಮುಂಚೆ ಕೆಲವು ಮಲಯಾಳಂ ಚಿತ್ರಗಳಲ್ಲಿ ಬಾಲಸಿಂಗ್ ನಟಿಸಿದ್ದರು. ತಮಿಳು ಮತ್ತು ಮಲಯಾಳಂ ಭಾಷೆಯಲ್ಲಿ ಸುಮಾರು 50ಕ್ಕೂ ಅಧಿಕ ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ.

  ಸ್ನೇಹಿತ ಬಿಟ್ಟು ಹೋದರು, ಸ್ನೇಹವನ್ನು ಮರೆಯದ ಧ್ರುವ ಸರ್ಜಾ: ನೆನಪಾಯ್ತು ಆ 'ಕರಾಳ ದಿನ'!ಸ್ನೇಹಿತ ಬಿಟ್ಟು ಹೋದರು, ಸ್ನೇಹವನ್ನು ಮರೆಯದ ಧ್ರುವ ಸರ್ಜಾ: ನೆನಪಾಯ್ತು ಆ 'ಕರಾಳ ದಿನ'!

  ಧನುಶ್ ನಟನೆಯ 'ಪುದುಪೇಟೈ' ಚಿತ್ರದಲ್ಲಿ ರಾಜಕಾರಣಿ ಪಾತ್ರದಲ್ಲಿ ಬಾಲಸಿಂಗ್ ಕಾಣಿಸಿಕೊಂಡಿದ್ದರು. ಈ ಸಿನಿಮಾ ಬಹುದೊಡ್ಡ ಹೆಸರು ಮಾಡಿತ್ತು. ಬಾಲಸಿಂಗ್ ನಟನೆ ಬಗ್ಗೆಯೂ ವೈಯಕ್ತಿಕವಾಗಿ ಮೆಚ್ಚುಗೆ ಗಳಿಸಿಕೊಂಡಿತ್ತು.

  ವೀರಾಮಾಂಡಿ, ಪುದುಪೇಟ್ಟೈ, ಸಾಮಿ, ಜಿಗರ್ ಥಂಡ, ಎನ್.ಜಿ.ಕೆ, ಮಾಗಮುನಿ, ಸರ್ವಂ ತಲಮಾಯಂ ಅಂತಹ ಸಿನಿಮಾಗಳಲ್ಲಿ ನಟಿಸಿದ್ದರು.

  Read more about: death died ಸಾವು ನಿಧನ
  English summary
  Actor Bala Singh who did several Tamil movies and the recent ones being NGK and Magamuni passed away due to illness in a Chennai Hospital.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X