For Quick Alerts
  ALLOW NOTIFICATIONS  
  For Daily Alerts

  ತಮಿಳು ನಟ ವಿಶಾಲ್ ಗೆ ವಿಲನ್ ಆದ ನಟ ಆರ್ಯ: ಕಾರಣವೇನು?

  |

  ಕಾಲಿವುಡ್ ನ ಖ್ಯಾತ ನಟರಾದ ವಿಶಾಲ್ ಮತ್ತು ಆರ್ಯ ಒಂದೇ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಆನಂದ್ ಶಂಕರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಮಲ್ಟಿ ಸ್ಟಾರರ್ ಸಿನಿಮಾದಲ್ಲಿ ಆರ್ಯ ಮತ್ತು ವಿಶಾಲ್ ಪ್ರಮುಖ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಈ ಬಗ್ಗೆ ನಿರ್ದೇಶಕ ಆನಂದ್ ಶಂಕರ್ ಸಾಮಾಜಿಕ ಜಾಲತಾಣದ ಮೂಲಕ ಬಹಿರಂಗ ಪಡಿಸಿದ್ದಾರೆ.

  ಅಂದ್ಹಾಗೆ ಆರ್ಯ ಮತ್ತು ವಿಶಾಲ್ ಇಬ್ಬರು 9 ವರ್ಷದ ಬಳಿಕ ಒಂದಾಗುತ್ತಿದ್ದಾರೆ. ಈ ಮೊದಲು ಅವನ್ ಅವನ್ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಇದೀಗ ಮತ್ತೆ ಒಂದಾಗಿರುವ ವಿಶಾಲ್ ಮತ್ತು ಆರ್ಯನನ್ನು ಒಟ್ಟಿಗೆ ನೋಡಲು ತಮಿಳು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

  ಅಚ್ಚರಿ ಮೂಡಿಸಿದೆ ಸ್ಟಾರ್ ನಟನ ಬಾಡಿ ಬಿಲ್ಡಿಂಗ್: ಹೊಸ ಸಿನಿಮಾಗೆ ರೆಡಿ ಎಂದ ನಟ!

  ಆರ್ಯ ಮತ್ತು ವಿಶಾಲ್ ಇಬ್ಬರೂ ಉತ್ತಮ ಸ್ನೇಹಿತರು. ಆದರೆ ತೆರೆಮೇಲೆ ಇಬ್ಬರು ವಿರೋಧಿಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹೌದು, ಚಿತ್ರದಲ್ಲಿ ವಿಶಾಲ್ ನಾಯಕನಾಗಿ ಕಾಣಿಸಿಕೊಂಡರೇ ಆರ್ಯ ವಿಲನ್ ಆಗಿ ಮಿಂಚುತ್ತಿದ್ದಾರಂತೆ. ಆದರೆ ಈ ಬಗ್ಗೆ ಸಿನಿಮಾತಂಡ ಇನ್ನೂ ಅಧಿಕೃತವಾಗಿ ಬಹಿರಂಗ ಪಡಿಸಿಲ್ಲ.

  ಚಿತ್ರಕ್ಕೆ ಇನ್ನೂ ಟೈಟಲ್ ಫಿಕ್ಸ್ ಆಗಿಲ್ಲ. ನಿರ್ದೇಶಕ ಆನಂದ್ ಈ ಮೊದಲು ವಿಜಯ್ ದೇವರಕೊಂಡ ಅಭಿನಯದ ನೋಟ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದರು. ಈ ಸಿನಿಮಾ ತಮಿಳು ಮತ್ತು ತೆಲುಗಿನಲ್ಲಿ ತೆರೆಗೆ ಬಂದಿದೆ. ಈ ಸಿನಿಮಾ ಈಗ ಆನಂದ್ ನಿರ್ದೇಶನದ ನಾಲ್ಕನೇ ಚಿತ್ರವಾಗಿದೆ.

  ಪ್ರೇಮ್, ರಚಿತಾ ರಾಮ್ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ರಾಣಾ | Filmibeat Kannada

  ಇನ್ನೂ ನಟ ಆರ್ಯ ಸದ್ಯ ಸಲ್ಪಟ್ಟ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾಗಾಗಿ ಆರ್ಯ ಸಿಕ್ಕಾಪಟ್ಟೆ ವರ್ಕೌಟ್ ದೇಹ ಹುರಿಗೊಳಿಸಿದ್ದಾರೆ ಬಾಕ್ಸಿಂಗ್ ಬೇಸ್ಡ್ ಸಿನಿಮಾ ಇದಾಗಿದ್ದು ಪಾತ್ರಕ್ಕೆ ಸಿಕ್ಕಾಪಟ್ಟೆ ತಯಾರಿ ಮಾಡಿಕೊಂಡಿದ್ದಾರೆ. ಈ ಸಿನಿಮಾ ಜೊತೆಗೆ ಅರಣ್ಮಣೈ ಮತ್ತು ಟೆಡ್ಡಿ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಇತ್ತ ನಟ ವಿಶಾಲ್ ತುಪ್ಪರಿವಾಲನ್-2 ಮತ್ತು ಚಕ್ರ ಸಿನಿಮಾದಲ್ಲಿ ನಿರತರಾಗಿದ್ದಾರೆ. ಆರ್ಯ ಮತ್ತು ವಿಶಾಲ್ ಹೊಸ ಸಿನಿಮಾ ಮುಂದಿನ ವರ್ಷ ಸೆಟ್ಟೇರುವ ಸಾಧ್ಯತೆ ಇದೆ.

  English summary
  Tamil Actors Arya and Vishal will come together for a new film directed by Anand Shankar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X