For Quick Alerts
  ALLOW NOTIFICATIONS  
  For Daily Alerts

  ಆಸ್ಕರ್ ಸ್ಪರ್ಧೆಗೆ ದಕ್ಷಿಣ ಭಾರತದ ಮತ್ತೊಂದು ಸಿನಿಮಾ

  |

  ಸಿನಿಮಾ ಮಟ್ಟಿಗೆ ವಿಶ್ವದ ಸರ್ವೋತ್ತಮ ಪ್ರಶಸ್ತಿ ಎನ್ನಲಾಗುವ ಆಸ್ಕರ್ ಪ್ರಶಸ್ತಿಗೆ ಈ ಬಾರಿ ಎರಡು ದಕ್ಷಿಣ ಭಾರತದ ಸಿನಿಮಾಗಳು ಸ್ಪರ್ಧೆಗೆ ಹೊರಟಿವೆ.

  ಮಲಯಾಳಂ ನ 'ಜಲ್ಲಿಕಟ್ಟು' ಸಿನಿಮಾವನ್ನು ಭಾರತದಿಂದ ಆಸ್ಕರ್‌ ಗೆ ಅಧಿಕೃತ ಆಯ್ಕೆ ರೂಪದಲ್ಲಿ ಕಳುಹಿಸಲಾಗಿದೆ. ಇದರ ಬೆನ್ನಲ್ಲೇ ಮತ್ತೊಂದು ದಕ್ಷಿಣ ಭಾರತದ ಸಿನಿಮಾ ಆಸ್ಕರ್ ಸ್ಪರ್ಧೆಗೆ ಹೊರಟಿದೆ.

  ಕನ್ನಡಿಗನ ಕತೆ ಹೊಂದಿರುವ ಸೂರ್ಯ ನಟಿಸಿ ಸುಧಾ ಕೊಂಗರ ನಿರ್ದೇಶನದ 'ಸೂರರೈ ಪೊಟ್ರು' ಸಿನಿಮಾ ಆಸ್ಕರ್‌ಗೆ ಸ್ಪರ್ಧೆಯಲ್ಲಿ ಅದೃಷ್ಟ ಪರೀಕ್ಷೆ ನಡೆಸಲಿದೆ.

  ಕನ್ನಡಿಗ ಕ್ಯಾಪ್ಟರ್ ಗೋಪಿನಾಥ್ ಅವರ ಜೀವನವನ್ನು ಸಿನಿಮಾ ಆಗಿಸಿದ್ದಾರೆ ನಿರ್ದೇಶಕಿ ಸುಧಾ ಕೊಂಗರ. ಸಿನಿಮಾದಲ್ಲಿ ನಟ ಸೂರ್ಯ, ಅಪರ್ಣಾ ಬಾಲಮುರಳಿ, ಪರೇಶ್ ರಾವಲ್, ಮೋಹನ್‌ಬಾಬು ಇನ್ನೂ ಹಲವರು ನಟಿಸಿದ್ದಾರೆ.

  Big News: ಆಸ್ಕರ್‌ ಸ್ಪರ್ಧೆಗೆ ಆಯ್ಕೆಯಾದ ದಕ್ಷಿಣ ಭಾರತದ ಸಿನಿಮಾ

  ಕೊರೊನಾ ಕಾರಣಕ್ಕೆ ಆಸ್ಕರ್ ಸ್ಪರ್ಧೆಯ ನಿಯಮಗಳಲ್ಲಿ ಕೆಲವು ಬದಲಾವಣೆ ಮಾಡಲಾಗಿದ್ದು, ಒಟಿಟಿಗಳಲ್ಲಿ ಬಿಡುಗಡೆ ಆದ ಸಿನಿಮಾಗಳೂ ಸಹ ಸ್ಪರ್ಧೆಯಲ್ಲಿ ಭಾಗವಹಿಸಬಹುದು ಎಂಬ ನಿಯಮ ತರಲಾಗಿದೆ.

  ಅತ್ಯುತ್ತಮ ಸಿನಿಮಾ, ಅತ್ಯುತ್ತಮ ನಟ, ನಟಿ, ಸಂಗೀತ, ನಿರ್ದೇಶನ, ಅತ್ಯುತ್ತಮ ಕತೆ ವಿಭಾಗದಲ್ಲಿ ಸ್ಪರ್ಧೆ ಮಾಡಲಿದೆ. ಆಸ್ಕರ್ ನ ಆಯ್ಕೆದಾರರು ಸಿನಿಮಾವನ್ನು ನೋಡಿ ಮುಂದಿನ ಸುತ್ತಿಗೆ ಆಯ್ಕೆ ಮಾಡಲಿದ್ದಾರೆ.

  ಎಲ್ಲರ ಪ್ರಶ್ನೆಗೆ ಉತ್ತರಕೊಟ್ಟ ಐಂದ್ರಿತಾ | Filmibeat Kannada

  ಸೂರರೈ ಪೊಟ್ರು ಸಿನಿಮಾ ಆಸ್ಕರ್ ಮಾತ್ರವೇ ಅಲ್ಲದೆ ಗೋಲ್ಡನ್ ಗ್ಲೋಬ್ ಸ್ಪರ್ಧೆಯಲ್ಲಿಯೂ ಭಾಗವಹಿಸಲಿದೆ.

  English summary
  Tamil movie Soorarai Potru to be contesting in Oscar award race. It also contesting in Golden Glob awards.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X