Don't Miss!
- Automobiles
ಡೀಸೆಲ್ ಎಂಜಿನ್ನೊಂದಿಗೆ ಮರಳಿ ಬಂದ ಜನಪ್ರಿಯ ಟೊಯೊಟಾ ಇನೋವಾ ಕ್ರಿಸ್ಟಾ : ಬುಕ್ಕಿಂಗ್ ಪ್ರಾರಂಭ
- Sports
ಈ ಹಿಂದಿನಂತೆ ಈ ತಂಡ ಈಗ ಬಲಿಷ್ಠ ತಂಡವಲ್ಲ: ಆಕಾಶ್ ಚೋಪ್ರ ಹೇಳಿದ ಆ ತಂಡ ಯಾವುದು?
- News
ಐಟಿ ದೈತ್ಯ ಎಸ್ಎಪಿನಿಂದ 3000 ನೌಕರರ ವಜಾ
- Technology
ChatGPT ಬಳಕೆಯಿಂದ ಏನೆಲ್ಲಾ ಲಾಭ? ಏನೆಲ್ಲಾ ನಷ್ಟ?
- Lifestyle
Shani Asta 2023 : ಶನಿ ಅಸ್ತ 2023: ದ್ವಾದಶ ರಾಶಿಗಳ ಮೇಲೆ ಇದರ ಪ್ರಭಾವ ಹಾಗೂ ಪರಿಹಾರ
- Finance
ಹಿಂಡೆನ್ಬರ್ಗ್ ವರದಿ ಎಫೆಕ್ಟ್: ಅದಾನಿ ಸ್ಟಾಕ್ ಶೇ.20ರಷ್ಟು ಕುಸಿತ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಅಜಿತ್ v/s ವಿಜಯ್, ಗೆದ್ದವರ್ಯಾರು? ಮೂರು ದಿನಕ್ಕೆ 'ವಾರಿಸು', 'ತುನಿವು' ಗಳಿಸಿದ್ದೆಷ್ಟು?
ತಮಿಳು ಚಿತ್ರರಂಗದ ಬದ್ಧ ಪ್ರತಿಸ್ಪರ್ಧಿಗಳಾದ ವಿಜಯ್ ಹಾಗೂ ಅಜಿತ್ ಕುಮಾರ್ ಬಾಕ್ಸ್ ಆಫೀಸ್‌ನಲ್ಲಿ ಈ ಸಂಕ್ರಾಂತಿಗೆ ಎದುರಾಗಿದ್ದರು.
ಅಜಿತ್‌ರ 'ತುನಿವು' ಸಿನಿಮಾ ಹಾಗೂ ವಿಜಯ್ ನಟನೆಯ 'ವಾರಿಸು' ಒಂದೇ ದಿನ ಬಿಡುಗಡೆ ಆಗಿದ್ದವು. ಎರಡೂ ಸಿನಿಮಾಗಳ ಬಗ್ಗೆಯೂ ಮಿಶ್ರ ಪ್ರತಿಕ್ರಿಯೆಯನ್ನು ಸಿನಿಮಾ ವಿಮರ್ಶಕರು ವ್ಯಕ್ತಪಡಿಸಿದ್ದರು. ಇಬ್ಬರ ಸಿನಿಮಾಗಳಲ್ಲಿ ಯಾವ ಸಿನಿಮಾ ಗೆಲ್ಲಲಿದೆ ಯಾರ ಸಿನಿಮಾ ಹೆಚ್ಚು ಕಲೆಕ್ಷನ್ ಮಾಡುತ್ತದೆ ಎಂಬುದು ಕುತೂಹಲ ಹುಟ್ಟಿಸಿತ್ತು.
ಇದೀಗ ಎರಡು ಸಿನಿಮಾಗಳು ಬಿಡುಗಡೆ ಆಗಿ ಮೂರು ದಿನಗಳು ಆಗಿರುವ ಬೆನ್ನಲ್ಲೆ ವಿಜಯ್ ನಟನೆಯ 'ವಾರಿಸು' ಸಿನಿಮಾ ಅಜಿತ್‌ರ 'ತುನಿವು' ಸಿನಿಮಾಗಳ ಪೈಕಿ ಹೆಚ್ಚು ಗಳಿಸಿದ್ದು ಯಾರ ಸಿನಿಮಾ ಎಂಬ ಲೆಕ್ಕಾಚಾರ ಜೋರಾಗಿ ನಡೆಯುತ್ತಿದೆ. ಕೆಲವರು ಅಜಿತ್ ಸಿನಿಮಾ ಎಂದರೆ ಇನ್ನು ಕೆಲವರು ವಿಜಯ್ ಸಿನಿಮಾ ಎನ್ನುತ್ತಿದ್ದಾರೆ.

ಮೂರು ದಿನಕ್ಕೆ 'ವಾರಿಸು' ಗಳಿಸಿದ್ದೆಷ್ಟು?
'ವಾರಿಸು' ಸಿನಿಮಾ ಬಿಡುಗಡೆ ಆದ ಮೂರೇ ದಿನದಲ್ಲಿ ವಿಶ್ವದಾದ್ಯಂತ 100 ಕೋಟಿಗೂ ಹೆಚ್ಚು ಹಣ ಗಳಿಸಿದೆ. ಈವರೆಗೆ ನೂರು ಕೋಟಿ ಕಲೆಕ್ಷನ್ ದಾಟಿದ ವಿಜಯ್‌ರ ಹತ್ತನೇ ಸಿನಿಮಾ ಎನಿಸಿಕೊಂಡಿದೆ 'ವಾರಿಸು'. ತಮಿಳುನಾಡಿನಲ್ಲಿ ಈ ಸಿನಿಮಾ ಮೂರು ದಿನಕ್ಕೆ 50 ಕೋಟಿ ಗಳಿಸಿದೆ. ಇನ್ನುಳಿದ ಐವತ್ತು ಕೋಟಿಯನ್ನು ಭಾರತದ ಇತರೆ ರಾಜ್ಯ ಹಾಗೂ ವಿಶ್ವದಾದ್ಯಂತ ಸೇರಿ ಗಳಿಸಿದೆ.

ಮೂರು ದಿನಕ್ಕೆ 78 ಕೋಟಿ ಕಲೆಕ್ಷನ್ ಮಾಡಿದ 'ವಾರಿಸು'
ತಮಿಳುನಾಡು ಹಾಗೂ ಭಾರತದ ಇತರೆ ರಾಜ್ಯಗಳ ಒಟ್ಟು ಕಲೆಕ್ಷನ್ ಮೂರು ದಿನಕ್ಕೆ 78 ಕೋಟಿ ಆಗಿದ್ದು, ಇನ್ನು 25 ಕೋಟಿ ಹಣವನ್ನು ವಿದೇಶಿ ಬಾಕ್ಸ್ ಆಫೀಸ್‌ನಿಂದ ಈ ಸಿನಿಮಾ ಗಳಿಸಿದೆ. ಅಲ್ಲಿಗೆ ಕೇವಲ ಮೂರೇ ದಿನಕ್ಕೆ ವರ್ಲ್ಡ್ ವೈಡ್ ಬಾಕ್ಸ್ ಆಫೀಸ್ ಕಲೆಕ್ಷನ್ ನೂರು ಕೋಟಿ ಮೀರಿದೆ. ವಿಜಯ್‌ರ ಈ ಹಿಂದಿನ ಸಿನಿಮಾ 'ಬೀಸ್ಟ್' ಸಹ ಕೇವಲ ಮೂರು ದಿನಕ್ಕೆ ವಿಶ್ವದಾದ್ಯಂತ ನೂರು ಕೋಟಿ ಕಲೆಕ್ಷನ್ ದಾಟಿತ್ತು. ಈಗ ಮತ್ತೊಮ್ಮೆ ವಿಜಯ್ ಸಿನಿಮಾ ನೂರು ಕೋಟಿ ದಾಟಿದೆ.

ತಮಿಳುನಾಡಿನಲ್ಲಿ ವಿಜಯ್‌ರನ್ನು ಹಿಂದಿಕ್ಕಿದ ಅಜಿತ್
ಇನ್ನು ಅಜಿತ್‌ರ ತುನಿವು ಸಿನಿಮಾ ಚೆನ್ನಾಗಿಯೇ ಆರಂಭ ಪಡೆದಿದೆ. 'ತುನಿವು' ಸಿನಿಮಾ ಸಹ ಮೂರೇ ದಿನಕ್ಕೆ ನೂರು ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ವಿಶೇಷವೆಂದರೆ 'ತುನಿವು' ಸಿನಿಮಾವು ತಮಿಳುನಾಡಿನಲ್ಲಿ 'ವಾರಿಸು' ಸಿನಿಮಾಕ್ಕಿಂತಲೂ ಹೆಚ್ಚು ಕಲೆಕ್ಷನ್ ಮಾಡಿದೆ ಎನ್ನಲಾಗುತ್ತಿದೆ. ಆದರೆ ತಮಿಳುನಾಡು ಹೊರತಾಗಿ ಬೇರೆ ರಾಜ್ಯಗಳಲ್ಲಿ 'ವಾರಿಸು' ಕಲೆಕ್ಷನ್ ಚೆನ್ನಾಗಿದೆ ಎನ್ನಲಾಗುತ್ತಿದೆ.

ವಿಜಯ್ ವಿರುದ್ಧ ಅಜಿತ್‌ಗೆ ಮುನ್ನಡೆ
'ವಾರಿಸು' ಹಾಗೂ 'ತುನಿವು' ಎರಡೂ ಸಿನಿಮಾಗಳ ನಡುವೆ ಹತ್ತಿರದ ಸ್ಪರ್ಧೆ ಏರ್ಪಟ್ಟಿದೆ. ಆದರೆ ಅಜಿತ್ ರ 'ತುನಿವು' ಸಿನಿಮಾ ಅಲ್ಪ ಮುನ್ನಡೆ ಸಾಧಿಸಿದೆ ಎನ್ನಲಾಗುತ್ತಿದೆ. 'ವಾರಿಸು' ಸಿನಿಮಾದ ತೆಲುಗು ಡಬ್ಬಿಂಗ್ ವರ್ಷನ್ ತಡವಾಗಿ ಬಿಡುಗಡೆ ಆಗುತ್ತಿರುವುದು ಸಹ ಇದಕ್ಕೊಂದು ಕಾರಣ ಇರಬಹುದು. ಒಟ್ಟಾರೆ ಸಿನಿಮಾ ಬಿಡುಗಡೆ ಆದ ಮೂರು ದಿನಗಳ ಲೆಕ್ಕ ಹಿಡಿದರೆ ವಿಜಯ್‌ರ ಸಿನಿಮಾಕ್ಕಿಂತಲೂ ಅಜಿತ್‌ರ ಸಿನಿಮಾ ಮುನ್ನಡೆಯಲ್ಲಿದೆ.