For Quick Alerts
  ALLOW NOTIFICATIONS  
  For Daily Alerts

  ಬಳ್ಳಾರಿಗೆ ತಮಿಳು ಸ್ಟಾರ್ ವಿಜಯ್, ಜೊತೆಗೆ ರಶ್ಮಿಕಾ ಮಂದಣ್ಣ

  |

  ತಮಿಳಿನ ಸ್ಟಾರ್ ನಟ ವಿಜಯ್‌ ಬಳ್ಳಾರಿಗೆ ಬರುತ್ತಿದ್ದಾರೆ. ಜೊತೆಗೆ ನಟಿ ರಶ್ಮಿಕಾ ಮಂದಣ್ಣ ಸಹ ಬರ್ತಿದ್ದಾರೆ. ಇವರ್ಯಾವುದೊ ಕಾರ್ಯಕ್ರಮಕ್ಕೆ ಬರುತ್ತಿಲ್ಲ, ಬದಲಾಗಿ ಸಿನಿಮಾ ಶೂಟಿಂಗ್ ಒಂದಕ್ಕಾಗಿ ಬಳ್ಳಾರಿಗೆ ಬರುತ್ತಿದೆ ಈ 'ವಾರಿಸು' ಜೋಡಿ.

  ವಿಜಯ್ ಪ್ರಸ್ತುತ ತಮಿಳಿನ 'ವಾರಿಸು' ಸಿನಿಮಾದಲ್ಲಿ ನಟಿಸುತ್ತಿದ್ದು, ಸಿನಿಮಾದ ಹಾಡೊಂದರ ಚಿತ್ರೀಕರಣಕ್ಕಾಗಿ ಬಳ್ಳಾರಿಗೆ ಆಗಮಿಸುತ್ತಿದ್ದಾರೆ. ಮೊದಲ ಬಾರಿಗೆ ವಿಜಯ್ ಜೊತೆ ನಟಿಸುತ್ತಿರುವ ರಶ್ಮಿಕಾ ಮಂದಣ್ಣ ಸಹ ವಿಜಯ್ ಜೊತೆ ಬಳ್ಳಾರಿಗೆ ಬರುತ್ತಿದ್ದಾರೆ.

  'ವಾರಿಸು' ಸಿನಿಮಾದ ಹಾಡೊಂದನ್ನು ಬಳ್ಳಾರಿಯಲ್ಲಿ ಚಿತ್ರೀಕರಣ ಮಾಡಲು ನಿಶ್ಚಯಿಸಲಾಗಿದ್ದು, ಇದೇ ಕಾರಣಕ್ಕೆ ಸಿನಿಮಾದ ಹಾಡಿನ ಕೋರಿಯೋಗ್ರಾಫರ್ ಜಾನಿ ಮಾಸ್ಟರ್‌ ಮುಂದಾಗಿ ಬಂದು ಲೊಕೇಶನ್‌ ಫೈನಲ್ ಮಾಡಿದ್ದು, ಸೆಟ್ ಇನ್ನಿತರೆ ವಿಷಯಗಳನ್ನು ಫೈನಲ್ ಮಾಡಿದ್ದಾರೆ.

  ವಿಜಯ್ ಹಾಗೂ ರಶ್ಮಿಕಾ ಮಂದಣ್ಣ ಹಾಡಿನ ಚಿತ್ರೀಕರಣಕ್ಕೆ ಬಳ್ಳಾರಿಗೆ ಬರುತ್ತಿರುವ ವಿಷಯವನ್ನು ಜಾನಿ ಮಾಸ್ಟರ್‌ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ''ಮತ್ತೊಂದು ಬ್ಲಾಕ್‌ ಬಸ್ಟರ್‌, ನಿರ್ದೇಶಕ ವಂಶಿ ಹಾಗೂ ವಿಜಯ್‌ ಜೋಡಿಯಿಂದಾಗಿ ತಯಾರಾಗುತ್ತಿದೆ, ಅದುವೇ 'ವಾರಿಸು'. ಬಳ್ಳಾರಿಯ ಕೆಲವು ಸುಂದರವಾದ ಲೊಕೇಶನ್‌ಗಳಲ್ಲಿ ಸಿನಿಮಾದ ಚಿತ್ರೀಕರಣ ನಡೆಯಲಿದೆ. ನಮ್ಮನ್ನು ಪ್ರೀತಿಯಿಂದ ಸ್ವಾಗತಿಸಿದ, ಬೆಂಬಲಿಸಿದ ಜನರಿಗೆ ಧನ್ಯವಾದಗಳು. ನಿಮ್ಮ ನಿರೀಕ್ಷೆಗಳನ್ನು ಹೆಚ್ಚಿಗೆ ಇರಿಸಿಕೊಳ್ಳಿ'' ಎಂದು ಜಾನಿ ಮಾಸ್ಟರ್ ಟ್ವೀಟ್ ಮಾಡಿದ್ದಾರೆ.

  ಈ ಟ್ವೀಟ್‌ನ ಜೊತೆಗೆ ಮ್ಯೂಸಿಮ್ ಒಳಾಂಗಣದಂತೆ ಕಾಣುವ ಚಿತ್ರಗಳನ್ನು ಜಾನಿ ಮಾಸ್ಟರ್ ಹಂಚಿಕೊಂಡಿದ್ದಾರೆ. ಇದು ಸಿನಿಮಾಕ್ಕಾಗಿ ಹಾಕಲಾದ ಸೆಟ್ಟೋ ಅಥವಾ ಬಳ್ಳಾರಿಯ ಯಾವುದಾದರೂ ಮ್ಯೂಸಿಯಮ್ಮೊ ತಿಳಿದು ಬಂದಿಲ್ಲ.

  'ವಾರಿಸು' ಸಿನಿಮಾವನ್ನು ತೆಲುಗಿನ ನಿರ್ದೇಶಕ ವಂಶಿ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ವಿಜಯ್ ಜೊತೆ ಮೊದಲ ಬಾರಿಗೆ ಕನ್ನಡತಿ ನಟಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಸಿನಿಮಾವನ್ನು ಖ್ಯಾತ ನಿರ್ಮಾಪಕ ದಿಲ್ ರಾಜು ನಿರ್ಮಾಣ ಮಾಡುತ್ತಿದ್ದಾರೆ. ಮುಂದಿನ ಸಂಕ್ರಾಂತಿಗೆ ಸಿನಿಮಾ ಬಿಡುಗಡೆ ಆಗಲಿದೆ ಎನ್ನಲಾಗಿದೆ.

  English summary
  Tamil super star Vijay and Rashmika Mandanna to shoot a song in Karnataka's Bellari.
  Monday, November 21, 2022, 22:47
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X