ರಜನಿಕಾಂತ್, ಅಕ್ಷಯ್ ಹಿಂದಿಕ್ಕಿದ ದಳಪತಿ: ಲಾಕ್ ಡೌನ್ ನಲ್ಲಿ ಹೆಚ್ಚು ವೀಕ್ಷಿಸಲ್ಪಟ್ಟ ನಟ ವಿಜಯ್

ಚಿತ್ರತಂಡ ಭಯಭೀತರಾಗಿದ್ದಾರೆ. ಚಿತ್ರಮಂದಿರಗಳು ಬಂದ್ ಆಗಿ ನಾಲ್ಕು ತಿಂಗಳಾಗಿವೆ. ಸಿನಿಮಾಗಳು ರಿಲೀಸ್ ಆಗುತ್ತಿಲ್ಲ. ಜನರು ಮನೆಯಿಂದ ಹೊರಬರದ ಸ್ಥಿತಿ ನಿರ್ಮಾಣವಾಗಿದೆ. ಮನೆಯಲ್ಲಿಯೆ ಇರುವ ಜನರು ಆನ್ ಲೈನ್ ಮತ್ತು ಟಿವಿಯನ್ನು ಹೆಚ್ಚಾಗಿ ವೀಕ್ಷಿಸುತ್ತಿದ್ದಾರೆ.

Recommended Video

Jogi Prem : ಅಮ್ಮನನ್ನು ನೆನೆದು ಭಾವುಕರಾದ ಪ್ರೇಮ್ | Filmibeat Kannada

ನೆಚ್ಚಿನ ವೆಬ್ ಸರಣಿಗಳು, ಒಟಿಟಿಯಲ್ಲಿ ಸಿನಿಮಾಗಳನ್ನು ನೋಡುತ್ತ ಸಮಯಕಳೆಯುತ್ತಿದ್ದಾರೆ. ಲಾಕ್ ಡೌನ್ ಅವಧಿಯಲ್ಲಿ ಟಿವಿಯಲ್ಲಿ ಹೆಚ್ಚು ವೀಕ್ಷಿಸಿದ ಭಾರತೀಯ ನಟ ಯಾರು ಅಂತ ಸಮೀಕ್ಷೆ ಮಾಡಲಾಗಿದೆ. ಈ ಸಮೀಕ್ಷೆಯಲ್ಲಿ ತಮಿಳು ನಟ, ದಳಪತಿ ವಿಜಯ್ ಅಗ್ರಸ್ಥಾನದಲ್ಲಿದ್ದಾರೆ.

ದೇಶಾದ್ಯಂತ ಜನಪ್ರಿಯ ಟಿವಿ ವಾಹಿನಿಗಳು ವೀಕ್ಷಕರನ್ನು ಸೆಳೆಯಲು ಟಾಪ್ ನಟರ ಪ್ರಸಿದ್ಧ ಸಿನಿಮಾಗಳನ್ನು ಪ್ರಸಾರ ಮಾಡುತ್ತಿವೆ. ಪ್ರೈಮ್ ಸಮಯದಲ್ಲಿ ಉತ್ತಮ ಸಿನಿಮಾಗಳನ್ನು ಬಿತ್ತರಿಸುತ್ತಿವೆ. ಈ ವಿಚಾರದಲ್ಲಿ ಮನರಂಜನಾ ವಾಹಿನಿಗಳು ಸ್ಪರ್ಧಿಗೆ ಬಿದ್ದಿವೆ. ಲಾಕ್ ಡೌನ್ ಅವಧಿಯಲ್ಲಿ ಸಾಕಷ್ಟು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ಪ್ರಸಾರ ಮಾಡಿವೆ.

Vijay Is Most Viewed Actor On Indian Television During Lockdown

ಇದರಲ್ಲಿ ದಳಪತಿ ವಿಜಯ್ ಅವರ ಚಲನಚಿತ್ರಗಳು 117.9 ಮಿಲಿಯನ್ ಇಂಪ್ರೆಷನ್ ಗಳಿಸಿ ಹೆಚ್ಚು ವೀಕ್ಷಣೆ ಪಡೆದ ನಟ ಎನ್ನುವ ಖ್ಯಾತಿಗಳಿಸಿದ್ದಾರೆ. ವಿಜಯ್ ನಂತರದ ಸ್ಥಾನದಲ್ಲಿ ರಾಘವ್ ಲಾರೆನ್ಸ್ ಇದ್ದಾರೆ. 76.2 ಮಿಲಿಯನ್ ಪಡೆದು ಎರಡನೇ ಸ್ಥಾನದಲ್ಲಿದ್ದಾರೆ. ಮೂರನೆ ಸ್ಥಾನದಲ್ಲಿ ರಜನಿಕಾಂತ್ ಹಾಗೂ ನಾಲ್ಕನೆ ಸ್ಥಾನದಲ್ಲಿ ಅಕ್ಷಯ್ ಕುಮಾರ್ ಇದ್ದಾರೆ. ಇನ್ನೂ 5 ಸ್ಥಾನದಲ್ಲಿ ನಟ ಪ್ರಭಾಸ್ ಸ್ಥಾನ ಪಡೆದಿದ್ದಾರೆ.

ವಿಜಯ್ ಮೊದಲ ಸ್ಥಾನದಲ್ಲಿದ್ದಾರೆ ಎನ್ನುವ ಮಾಹಿತಿ ಹೊರ ಬರುತ್ತಿದ್ದಂತೆ ದಳಪತಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮಿಸುತ್ತಿದ್ದಾರೆ. ವಿಜಯ್ ಫೋಟೋ ಶೇರ್ ಮಾಡಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ವಿಜಯ್ ಸದ್ಯ ಮಾಸ್ಟರ್ ಸಿನಿಮಾದ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಅಂದುಕೊಂಡಂತೆಆಗಿದ್ದರೆ ಸಿನಿಮಾ ಈಗಾಗಲೆ ರಿಲೀಸ್ ಆಗಬೇಕಿತ್ತು. ಆದರೆ ಕೊರೊನಾ ಹಾವಳಿಯ ಪರಿಣಾಮ ಸಿನಿಮಾ ರಿಲೀಸ್ ಮುಂದಕ್ಕೆ ಹೋಗಿದೆ.

More from Filmibeat

English summary
Tamil actor Thalapathy Vijay is most viewed actor on Indian Television during lockdown.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X