For Quick Alerts
  ALLOW NOTIFICATIONS  
  For Daily Alerts

  ವಿಜೆ ಚಿತ್ರ ಆತ್ಮಹತ್ಯೆ: 16 ಪುಟಗಳ ವರದಿ ಸಲ್ಲಿಸಿದ ಆರ್‌ಡಿಓ ಅಧಿಕಾರಿಗಳು

  |

  ಕಿರುತೆರೆ ನಟಿ ವಿಜೆ ಚಿತ್ರಾ ಅವರ ಸಾವಿಗೆ ಸಂಬಂಧಪಟ್ಟಂತೆ ತನಿಖೆ ಕೈಗೊಂಡಿದ್ದ ಆರ್‌ಡಿಓ ಅಧಿಕಾರಿಗಳು ಸುಮಾರು 16 ಪುಟಗಳ ಅಂತಿಮ ವರದಿಯನ್ನು ಸಲ್ಲಿಸಿದ್ದಾರೆ.

  ವಿಜೆ ಚಿತ್ರ ಆತ್ಮಹತ್ಯೆಗೆ ಸಂಬಂಧಿಸಿದಂತೆ ಪತಿ, ಸ್ನೇಹಿತರು ಹಾಗೂ ಕುಟುಂಬಸ್ಥರು ಸೇರಿ ಸುಮಾರು 15 ಮಂದಿಯನ್ನು ವಿಚಾರಣೆಗೆ ಒಳಪಡಿಸಿದ ಬಳಿಕ ಒಂದು ಸ್ಪಷ್ಟನೆಗೆ ಬಂದಿದ್ದಾರೆ. ವರದಕ್ಷಿಣೆ ಕಿರುಕುಳ ಆರೋಪ ಕುರಿತು ಸ್ಪಷ್ಟನೆ ನೀಡಿದ್ದ ಡಿಆರ್ಓ ಅಧಿಕಾರಿಗಳು ಈ ವರದಕ್ಷಿಣೆ ಕಿರುಕುಳ ನಡೆದಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದರು.

  ವಿಜೆ ಚಿತ್ರ ಆತ್ಮಹತ್ಯೆ ಕೇಸ್: ವರದಕ್ಷಿಣೆ ಕಿರುಕುಳ ತಳ್ಳಿಹಾಕಿದ RDO ಅಧಿಕಾರಿಗಳುವಿಜೆ ಚಿತ್ರ ಆತ್ಮಹತ್ಯೆ ಕೇಸ್: ವರದಕ್ಷಿಣೆ ಕಿರುಕುಳ ತಳ್ಳಿಹಾಕಿದ RDO ಅಧಿಕಾರಿಗಳು

  ಸಾರ್ವಜನಿಕ ವಲಯದಲ್ಲಿ ಚಿತ್ರಾ ಅವರ ಸಾವು ಹೆಚ್ಚು ಚರ್ಚೆಯಲ್ಲಿದ್ದು, ಹಲವು ರೀತಿಯ ಗೊಂದಲವನ್ನುಂಟು ಮಾಡಿದೆ. ಹಾಗಾಗಿ, ಶೀಘ್ರದಲ್ಲಿ ಡಿಆರ್ಓ ವರದಿಯನ್ನು ಸಾರ್ವಜನಿಕವಾಗಿ ಪ್ರಕಟಿಸಲಾಗುವುದು ಎನ್ನಲಾಗಿದೆ.

  ಚಿತ್ರಾ ಪ್ರಕರಣದಲ್ಲಿ ಚೆನ್ನೈ ಪೊಲೀಸರು ಆಕೆಯ ಫೋನ್‌ನಿಂದ ಕೆಲವು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ ಎಂದು ಹೇಳಲಾಗಿದೆ. ಚಿತ್ರಾ ಅವರ ಫೋನ್‌ನಿಂದ ಆಡಿಯೋ ಫೈಲ್‌ಗಳನ್ನು ಪತಿ ಹೇಮಂತ್ ಡಿಲೀಟ್ ಮಾಡಿದ್ದರು. ಬಳಿಕ, ಸೈಬರ್ ಪೊಲೀಸರ ಸಹಾಯದಿಂದ ಅದನ್ನು ಮತ್ತೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.

  ವಿಜೆ ಚಿತ್ರ ಹಾಗೂ ಪತಿ ಹೇಮಂತ್ ಕುಮಾರ್ ನಡುವೆ ಹಲವು ವಿಚಾರಕ್ಕೆ ಭಿನ್ನಾಭಿಪ್ರಾಯ ಮೂಡಿತ್ತು. ಈ ಹಿನ್ನೆಲೆ ಇವರಿಬ್ಬರ ನಡುವೆ ಜಗಳವೂ ಆಗಿದೆ. ಚಿತ್ರಾ ನಟಿಸುತ್ತಿದ್ದ ಧಾರಾವಾಹಿ ಸೆಟ್‌ಗೂ ಬಂದಿದ್ದ ಹೇಮಂತ್ ರೇಗಾಡಿದ್ದರು ಎಂದು ವರದಿಯಾಗಿದೆ.

  ವಿಜೆ ಚಿತ್ರಾ ಸಾವಿನಲ್ಲಿ ತೆಲುಗು ನಟನೊಬ್ಬನ ಕೈವಾಡ: ಗೆಳತಿಯ ಸ್ಪೋಟಕ ಹೇಳಿಕೆವಿಜೆ ಚಿತ್ರಾ ಸಾವಿನಲ್ಲಿ ತೆಲುಗು ನಟನೊಬ್ಬನ ಕೈವಾಡ: ಗೆಳತಿಯ ಸ್ಪೋಟಕ ಹೇಳಿಕೆ

  Recommended Video

  ಮಾತಾಡೋರು ಇದ್ರೇನೆ ಅವರು ಬದುಕಿದ್ದಾರೆ ಅನೋದು ಗೊತ್ತಾಗೋದು | Filmibeat Knnada

  ಮತ್ತೊಂದೆಡೆ ಚಿತ್ರಾ ಅವರ ತಾಯಿ ತನ್ನ ಅಳಿಯ ಹೇಮಂತ್ ಅವರ ಮೇಲೆ ಬಲವಾದ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

  English summary
  Actress VJ Chitra Death case: RDO Officials submitted 15 page final report after inquiry of her close friends and family members.
  Thursday, December 31, 2020, 15:11
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X