For Quick Alerts
  ALLOW NOTIFICATIONS  
  For Daily Alerts

  ವಿಷವಿಟ್ಟು ಕೊಲ್ಲಲು ಯತ್ನಿಸಿದ್ದರು: ತೆಲುಗು ಹಾಸ್ಯ ನಟ ಬಾಬು ಮೋಹನ್!

  |

  ಚಿತ್ರರಂಗದಲ್ಲಿ ನಟ-ನಟಿಯರ ನಡುವೆ ಸಣ್ಣ ಪುಟ್ಟ ವೃತ್ತಿ ಮತ್ಸರ ಇರುವುದು ಸಾಮಾನ್ಯ ಆದರೆ ಯಾರೂ ಮತ್ತೊಬ್ಬ ನಟರನ್ನು ಕೊಲ್ಲಲು ಯತ್ನಿಸಿಲ್ಲ. ಅಂಥಹಾ ಘಟನೆಗಳು ರಾಜಕೀಯದಲ್ಲಿ ನಡೆದಿವೆಯಷ್ಟೆ.

  ತೆಲುಗಿನ ಜನಪ್ರಿಯ ಹಾಸ್ಯನಟರೊಬ್ಬರು, ತಮ್ಮನ್ನು ವಿಷವಿಟ್ಟು ಕೊಲ್ಲಲು ಯತ್ನಿಸಿದ್ದ ಘಟನೆಯನ್ನು ಇದೀಗ ಬಹಿರಂಗಪಡಿಸಿದ್ದಾರೆ. ಆದರೆ ಅದು ರಾಜಕೀಯ ರಂಗದಿಂದ ಆದ ಪ್ರಯತ್ನ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

  ಹಾಸ್ಯನಟ ಬಾಬು ಮೋಹನ್ ಒಂದು ಸಮಯದಲ್ಲಿ ಬಹಳ ಜನಪ್ರಿಯ ಹಾಸ್ಯನಟ. ತೆಲುಗಿನಲ್ಲಿ ಬ್ರಹ್ಮಾನಂದಂಗಿಂತಲೂ ಹೆಚ್ಚು ಬ್ಯುಸಿಯಾಗಿದ್ದ ನಟರಾಗಿದ್ದರು ಬಾಬು ಮೋಹನ್ ಆದರೆ ಆ ನಂತರ ಅವರಿಗೆ ಅವಕಾಶಗಳು ಕಡಿಮೆಯಾದವು. ಆದರೆ ರಾಜಕೀಯದಲ್ಲಿ ಸಫಲರೇ ಆದರು ಬಾಬು ಮೋಹನ್.

  ನಟರಾಗಿ ಖ್ಯಾತಿ, ರಾಜಕೀಯದಲ್ಲೂ ಯಶಸ್ಸು

  ನಟರಾಗಿ ಖ್ಯಾತಿ, ರಾಜಕೀಯದಲ್ಲೂ ಯಶಸ್ಸು

  ಹಾಸ್ಯನಟರಾಗಿ ಹಲವು ಜನಪ್ರಿಯ ಸಿನಿಮಾಗಳಲ್ಲಿ ನಟಿಸಿದ ಬಾಬು ಮೋಹನ್ ಬಳಿಕ ಅವಿಭಜಿತ ಆಂಧ್ರಪ್ರದೇಶ ರಾಜ್ಯವಿದ್ದಾಗ ತೆಲುಗುದೇಶಂ ಪಕ್ಷ ಸೇರಿದ ಬಾಬು ಮೋಹನ್ ಮೂರು ಬಾರಿ ಶಾಸಕರಾದು. ಒಮ್ಮೆ ಸಚಿವರಾಗಿಯೂ ಕಾರ್ಯ ನಿರ್ವಹಿಸಿದರು. ಆದರೆ ತೆಲಂಗಾಣ ರಾಜ್ಯ ಉದಯವಾದ ಬಳಿಕ ಟಿಆರ್‌ಎಸ್ ಪಕ್ಷ ಸೇರಿದರು. ಅಲ್ಲಿಂದ ಮತ್ತೆ ಬಿಜೆಪಿಗೆ ಪಲಾಯನ ಮಾಡಿದರು.

  ಕೊಲೆ ಯತ್ನ ನಡೆದ ಬಗ್ಗೆ ಮಾಹಿತಿ ಬಿಚ್ಚಿಟ್ಟ ಬಾಬು ಮೋಹನ್

  ಕೊಲೆ ಯತ್ನ ನಡೆದ ಬಗ್ಗೆ ಮಾಹಿತಿ ಬಿಚ್ಚಿಟ್ಟ ಬಾಬು ಮೋಹನ್

  ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ತಮ್ಮ ಮೇಲೆ ಕೊಲೆ ಯತ್ನ ನಡೆದ ವಿಷಯವನ್ನು ಬಾಬು ಮೋಹನ್ ಬಹಿರಂಗಗೊಳಿಸಿದ್ದಾರೆ. ಬಾಬು ಮೋಹನ್ ಸಿನಿಮಾದಲ್ಲಿದ್ದಾಗ ಭರಣಿ ಪಾನ್ ತಿನ್ನುವ ಅಭ್ಯಾಸ ಮಾಡಿಕೊಂಡಿದ್ದರಂತೆ. ಅದು ಒಂದು ರೀತಿ ವ್ಯಸನ ಆಗಿಬಿಟ್ಟಿತಂತೆ. ರಾಜಕೀಯಕ್ಕೆ ಸೇರಿದಾಗಲೂ ಪಾನ್ ತಿನ್ನುವ ಅಭ್ಯಾಸ ಕೈಬಿಡಲಿಲ್ಲ. ಇದರಿಂದಲೇ ಒಮ್ಮೆ ಬಾಬು ಮೋಹನ್‌ ಮೇಲೆ ಕೊಲೆ ಯತ್ನವೂ ಆಯಿತಂತೆ.

  ಫೋನ್ ಮಾಡಿ ಪಾನ್‌ನಲ್ಲಿ ವಿಷವಿದೆ ಎಂದರು: ಬಾಬು ಮೋಹನ್

  ಫೋನ್ ಮಾಡಿ ಪಾನ್‌ನಲ್ಲಿ ವಿಷವಿದೆ ಎಂದರು: ಬಾಬು ಮೋಹನ್

  ''ನಾನು ದಿನಕ್ಕೆ 25-30 ಪಾನ್ ತಿನ್ನುತ್ತಿದ್ದೆ. ಬಾಕ್ಸ್‌ನಲ್ಲಿ ಪಾನ್ ಕಟ್ಟಿಸಿಕೊಂಡು ಹೋಗುತ್ತಿದ್ದೆ. ನಾನು ಹೈದರಾಬಾದ್‌ಗೆ ಬರಬೇಕಾದರೆ ಪ್ರತಿ ಬಾರಿ ಸಂಗಾರೆಡ್ಡಿ ದಾರಿಯಿಂದ ಬರುತ್ತಿದ್ದೆ ಅಲ್ಲಿ ಒಬ್ಬ ಪರಿಚಿತ ಪಾನ್ ಶಾಪ್‌ನಲ್ಲಿ ಪಾನ್ ಕಟ್ಟಿಸಿಕೊಳ್ಳುವುದು ಅಭ್ಯಾಸ. ಹೀಗೆ ಒಮ್ಮೆ ಪಾನ್ ಕಟ್ಟಿಸಿಕೊಂಡು ಸ್ವಲ್ಪ ದೂರ ಬಂದಿದ್ದೆ ಅಷ್ಟೆ. ಅಷ್ಟರಲ್ಲಿ ನನಗೆ ಕರೆಯೊಂದು ಬಂತು. ಆ ಪಾನ್ ತಿನ್ನಬೇಡಿ ಅದರಲ್ಲಿ ವಿಷವಿದೆ ಎಂದು ಪೋನ್‌ ಮಾಡಿದವರು ಹೇಳಿದರು'' ಎಂದು ನೆನಪಿಸಿಕೊಂಡಿದ್ದಾರೆ ಬಾಬು ಮೋಹನ್.

  ಪಾನ್ ಕಟ್ಟಿಕೊಟ್ಟವನ ಹೆಂಡತಿಯಿಂದಲೇ ಕರೆ!

  ಪಾನ್ ಕಟ್ಟಿಕೊಟ್ಟವನ ಹೆಂಡತಿಯಿಂದಲೇ ಕರೆ!

  ''ಪಾನ್ ಕಟ್ಟಿಕೊಟ್ಟವನ ಪತ್ನಿಯೇ ನನಗೆ ಕರೆ ಮಾಡಿ ಪಾನ್‌ನಲ್ಲಿ ವಿಷ ಸೇರಿಸಿರುವ ವಿಷಯ ಹೇಳಿದರು. ಆಕೆಯ ಗಂಡನನ್ನು ಬೆದರಿಸಿ ಪಾನ್‌ನಲ್ಲಿ ವಿಷ ಬೆರೆಸಿ ಕೊಡುವಂತೆ ಹೇಳಲಾಗಿತ್ತಂತೆ. ಪಾಪ ಆತ ಭಯಕ್ಕೆ ಪಾನ್‌ ನಲ್ಲಿ ವಿಷ ಹಾಕಿ ಕೊಟ್ಟಿದ್ದ. ಆ ವಿಷಯ ಗೊತ್ತಾದ ಮೇಲೆ ರಾಜಕೀಯದಲ್ಲಿ ಎಂಥೆಂಥ ಜನರಿರುತ್ತಾರೆ, ರಾಜಕೀಯ ಎಷ್ಟು ಅಪಾಯಕಾರಿ ಎಂಬುದು ಗೊತ್ತಾಯಿತು'' ಎಂದಿದ್ದಾರೆ ಬಾಬು ಮೋಹನ್.

  English summary
  Comedy actor Babu Mohan talked about Murder attempt on him. He said once some people tried to kill me.
  Saturday, July 9, 2022, 22:29
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X