For Quick Alerts
  ALLOW NOTIFICATIONS  
  For Daily Alerts

  ನಯನತಾರಾ ಕಾಲೆಳೆದಿದ್ದ ಜೂ ಎನ್‌ಟಿಆರ್: ಘಟನೆ ನೆನಪಿಸಿಕೊಂಡ ನಟಿ

  By ಫಿಲ್ಮಿಬೀಟ್ ಡೆಸ್ಕ್
  |

  ಜೂ ಎನ್‌ಟಿಆರ್ ಹಾಗೂ ಪ್ರಭಾಸ್ ತೆಲುಗಿನ ಸ್ಟಾರ್ ನಟರು. 'ಬಾಹುಬಲಿ' ಮೂಲಕ ಪ್ರಭಾಸ್ ಪ್ಯಾನ್ ಇಂಡಿಯಾ ಸ್ಟಾರ್ ಎನಿಸಿಕೊಂಡಿದ್ದಾರೆ. ಅಂತೆಯೇ ಜೂ ಎನ್‌ಟಿಆರ್ ಸಹ 'RRR' ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಎನಿಸಿಕೊಂಡಿದ್ದಾರೆ.

  ಇಬ್ಬರಿಗೂ ಬಹಳ ದೊಡ್ಡ ಸಂಖ್ಯೆಯ ಅಭಿಮಾನಿ ವರ್ಗವಿದೆ. ಪ್ರಭಾಸ್‌ಗೆ ಹೋಲಿಸಿದರೆ ಡ್ಯಾನ್ಸ್ ವಿಚಾರದಲ್ಲಿ ಜೂ ಎನ್‌ಟಿಆರ್ ಬಹಳ ಮುಂದೆ ಇದ್ದಾರೆ ಬಿಟ್ಟರೆ ಇನ್ನುಳಿದವುಗಳಲ್ಲಿ ಇಬ್ಬರೂ ಸಮಾನ ಪ್ರತಿಭಾವಂತರು. ನಟನೆಯ ವಿಚಾರದಲ್ಲಿ ಜೂ ಎನ್‌ಟಿಆರ್ ತುಸು ಹೆಚ್ಚೇ ಮೊನಚು.

  ಪ್ರಭಾಸ್ ಹಾಗೂ ಜೂ ಎನ್‌ಟಿಆರ್ ಅಭಿಮಾನಿಗಳ ನಡುವೆ ಯಾವುದೇ ತಿಕ್ಕಾಟವೇನೂ ಇಲ್ಲ. ಸ್ವತಃ ಪ್ರಭಾಸ್ ಹಾಗೂ ಜೂ ಎನ್‌ಟಿಆರ್ ನಡುವೆಯೂ ನೇರ ಸ್ಪರ್ಧೆಯೆಂಬುದೇನೂ ಇಲ್ಲ. ಇಬ್ಬರೂ ತಮ್ಮ ಪಾಡಿಗೆ ತಾವು ಸಿನಿಮಾಗಳನ್ನು ಮಾಡುತ್ತಾ ಸಾಗುತ್ತಿದ್ದಾರೆ. ಆದರೆ ಇಬ್ಬರು ಇಷ್ಟು ದೊಡ್ಡ ಸ್ಟಾರ್‌ಗಳಾಗುವ ಮುನ್ನ ಇಬ್ಬರೊಟ್ಟಿಗೂ ನಟಿಸಿರುವ ನಟಿ ನಯನತಾರಾ ಇಬ್ಬರ ವ್ಯಕ್ತಿತ್ವದ ಬಗ್ಗೆ ಮಾತನಾಡಿದ್ದಾರೆ. ಆಗ ಅವರ ವ್ಯಕ್ತಿಗಳು ಹೇಗಿದ್ದವು, ಹೇಗೆ ನಡೆದುಕೊಳ್ಳುತ್ತಿದ್ದರು ಎಂಬ ಬಗ್ಗೆ ಮಾತನಾಡಿದ್ದಾರೆ.

  2007 ರಲ್ಲಿ ಪ್ರಭಾಸ್ ಜೊತೆ ನಟನೆ

  2007 ರಲ್ಲಿ ಪ್ರಭಾಸ್ ಜೊತೆ ನಟನೆ

  ನಟ ಪ್ರಭಾಸ್ ಜೊತೆಗೆ 2007ರಲ್ಲಿ 'ಯೋಗಿ' ಹೆಸರಿನ ಸಿನಿಮಾದಲ್ಲಿ ನಯನತಾರಾ ನಟಿಸಿದ್ದರು. ಈ 'ಯೋಗಿ' ಸಿನಿಮಾ, ಕನ್ನಡದ 'ಜೋಗಿ' ಸಿನಿಮಾದ ರೀಮೇಕ್ ಆಗಿತ್ತು. ''ಪ್ರಭಾಸ್ ಬಹಳ ಸ್ವೀಟ್ ವ್ಯಕ್ತಿಯಾಗಿದ್ದರು. ಮಗುವಿನ ರೀತಿ ಅವರ ವರ್ತನೆ ಇರುತ್ತಿತ್ತು. ಸೆಟ್‌ ತುಂಬಾ ಓಡಾಡಿಕೊಂಡು, ಫನ್ ಮಾಡುತ್ತಾ ಇರುತ್ತಿದ್ದರು. ಈಗಲೂ ಅವರು ಹಾಗೆಯೇ ಇದ್ದರೆ ಒಳ್ಳೆಯದು. ಆದರೆ ಈಗ ಅವರು ಬಹಳ ದೊಡ್ಡ ಸ್ಟಾರ್ ಆಗಿದ್ದಾರೆ. ಅವರ ಬಗ್ಗೆ ಖುಷಿ ಇದೆ'' ಎಂದಿದ್ದಾರೆ ನಯನತಾರಾ.

  2010 ರ 'ಅಧುರ್ಸ್' ಸಿನಿಮಾದಲ್ಲಿ ಒಟ್ಟಿಗೆ ನಟನೆ

  2010 ರ 'ಅಧುರ್ಸ್' ಸಿನಿಮಾದಲ್ಲಿ ಒಟ್ಟಿಗೆ ನಟನೆ

  ಜೂ ಎನ್‌ಟಿಆರ್ ಜೊತೆಗೂ ನಯನತಾರಾ ನಟಿಸಿದ್ದು ಅವರೊಟ್ಟಿಗೂ ಉತ್ತಮ ಬಾಂಧವ್ಯವನ್ನು ನಯನತಾರಾ ಹೊಂದಿದ್ದರು. 2010 ರಲ್ಲಿ ಜೂ ಎನ್‌ಟಿಆರ್ ಜೊತೆ 'ಅಧುರ್ಸ್' ಸಿನಿಮಾದಲ್ಲಿ ನಟಿಸಿದ್ದರು. ಆಗ ಜೂ ಎನ್‌ಟಿಆರ್ ತಮಾಷೆಯಾಗಿ ತಮ್ಮ ಕಾಲೆಳೆದಿದ್ದ ಸಂಗತಿಯೊಂದನ್ನು ನಯನತಾರಾ ನೆನಪಿಸಿಕೊಂಡಿದ್ದಾರೆ. 'ಅಧುರ್ಸ್' ಸಿನಿಮಾ ಶೂಟಿಂಗ್‌ ಸಮಯದಲ್ಲಿ ನಾನು ಪದೇ-ಪದೇ ಮೇಕಪ್‌, ಟಚ್‌ ಮಾಡಿಕೊಳ್ಳುತ್ತಿದ್ದೆ. ಆಗ ಜೂ ಎನ್‌ಟಿಆರ್ ನನ್ನನ್ನೇ ನೋಡುತ್ತಿದ್ದರು. ಏಕೆ ನೋಡುತ್ತೀರಿ ಎಂದು ಕೇಳಿದರೆ, ಯಾಕೆ ಇಷ್ಟೋಂದು ಮೇಕಪ್‌ ಮಾಡಿಕೊಳ್ಳುತ್ತೀಯ, ಹೇಗೋ ಜನ ನಿನ್ನನ್ನು ನೋಡುವುದಿಲ್ಲ, ನನ್ನನ್ನು ಮಾತ್ರವೇ ನೋಡುವುದು ಎಂದಿದ್ದರಂತೆ. ಆದರೆ ಇದನ್ನು ತಮಾಷೆಯಾಗಿ ಹೇಳಿದ್ದರಂತೆ ಜೂ ಎನ್‌ಟಿಆರ್.

  ರಿಹರ್ಸಲ್ ಮಾಡದ ಏಕೈಕ ಕಲಾವಿದ ಜೂ ಎನ್‌ಟಿಆರ್

  ರಿಹರ್ಸಲ್ ಮಾಡದ ಏಕೈಕ ಕಲಾವಿದ ಜೂ ಎನ್‌ಟಿಆರ್

  ಜೂ ಎನ್‌ಟಿಆರ್ ಬಗ್ಗೆ ಸಾಕಷ್ಟು ಹೊಗಳಿರುವ ನಟಿ ನಯನತಾರಾ, ''ಜೂ ಎನ್‌ಟಿಆರ್ ಅದ್ಭುತ ಕಲಾವಿದ. ಅವರು ದೃಶ್ಯಕ್ಕಾಗಿ ರಿಹರ್ಸಲ್ ಮಾಡಿರುವುದನ್ನು ನಾನು ನೋಡಿಯೇ ಇಲ್ಲ. ಆಕ್ಷನ್ ಹೇಳುತ್ತಲೇ ಪಾತ್ರದೊಳಕ್ಕೆ ಅವರು ಲೀನವಾಗಿಬಿಡುತ್ತಾರೆ. ಅವರ ನೃತ್ಯವಂತೂ ಅತ್ಯದ್ಭುತ. ಈಗ ಹೇಗೆ ಮಾಡುತ್ತಾರೊ ಗೊತ್ತಿಲ್ಲ. ಆದರೆ ನಾನು ಅವರೊಟ್ಟಿಗೆ ನಟಿಸುವಾಗಂತೂ ಅವರು ಸೆಟ್‌ಗೆ ಬರುತ್ತಿದ್ದರು, ನೃತ್ಯ ನಿರ್ದೇಶಕರು ಮಾಡುವ ಡ್ಯಾನ್ಸ್ ಸ್ಟೆಪ್ಟ್ ನೋಡಿಕೊಳ್ಳುತ್ತಿದ್ದರು. ನಾನು ರಿಹರ್ಸಲ್‌ಗೆ ಕರೆದರೆ ನಾನು ರೆಡಿ ಇದ್ದೇನೆ ಎನ್ನುತ್ತಿದ್ದರೆ. ಆಕ್ಷನ್ ಹೇಳುತ್ತಿದ್ದಂತೆ ಅದ್ಭುತವಾಗಿ ಡ್ಯಾನ್ಸ್ ಮಾಡುತ್ತಿದ್ದರು'' ಎಂದಿದ್ದಾರೆ ನಟ ಜೂ ಎನ್‌ಟಿಆರ್.

  ನಯನತಾರಾ ನಟನೆಯ 'ಕನೆಕ್ಟ್' ಬಿಡುಗಡೆ

  ನಯನತಾರಾ ನಟನೆಯ 'ಕನೆಕ್ಟ್' ಬಿಡುಗಡೆ

  ನಯನತಾರಾ ನಟನೆಯ 'ಕನೆಕ್ಟ್' ಸಿನಿಮಾ ಬಿಡುಗಡೆ ಆಗುತ್ತಿದ್ದು, ಅದೇ ಕಾರಣಕ್ಕೆ ನಯನತಾರಾ ಪ್ರಚಾರದಲ್ಲಿ ಪಾಲ್ಗೊಂಡಿದ್ದಾರೆ. ಸಂದರ್ಶನಗಳಿಂದ ಬಹುಪಾಲು ದೂರವೇ ಉಳಿಯುವ ನಯನತಾರಾ, ಇದೀಗ 'ಕನೆಕ್ಟ್' ಸಿನಿಮಾಕ್ಕಾಗಿ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಇತ್ತೀಚೆಗಷ್ಟೆ ಗೆಳೆಯ ವಿಘ್ನೇಶ್ ಶಿವನ್ ಅನ್ನು ವಿವಾಹವಾಗಿರುವ ನಯನತಾರಾ ಸೆರೊಗಸಿ ವಿಧಾನದ ಮೂಲಕ ಇಬ್ಬರು ಮಕ್ಕಳನ್ನು ಪಡೆದಿದ್ದಾರೆ.

  English summary
  Actress Nayantara talks about jr NTR and remembers a incident while shooting for Adhurs movie in 2010.
  Wednesday, December 21, 2022, 17:33
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X