Don't Miss!
- News
ಕೆಲವೇ ಕ್ಷಣಗಳಲ್ಲಿ ತುಮಕೂರಿಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ, ಸಿದ್ಧತೆ ಹೇಗಿದೆ ತಿಳಿಯಿರಿ
- Technology
ಟೆಲಿಗ್ರಾಮ್ನಲ್ಲಿ ವಾಟ್ಸಾಪ್ ಅನ್ನೇ ಮೀರಿಸುವ ಫೀಚರ್ಸ್!; ಬಳಕೆದಾರರಿಗೆ ಸಾಕಷ್ಟು ಅನುಕೂಲ
- Finance
ಅದಾನಿ ಡಾಲರ್ ಬಾಂಡ್ ವಿರುದ್ಧ ಸಾಲ ನೀಡಲು ಸ್ಟಾಡರ್ಡ್ ಚಾರ್ಟೆಡ್ ನಕಾರ: ವರದಿ
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ಭಾರತವನ್ನು ಮಣಿಸಲು ಆಸಿಸ್ ತಂಡಕ್ಕೆ ಮಿಚೆಲ್ ಜಾನ್ಸನ್ ಸಲಹೆ
- Automobiles
ಸೆಲ್ಟೋಸ್ನ ಗೇರ್ಬಾಕ್ಸ್ನಲ್ಲಿ ದೋಷ ಕಂಡು ಬಂದಾಗ ಉಚಿತವಾಗಿ ಬದಲಾಯಿಸಿ ಕೊಟ್ಟ ಕಿಯಾ
- Lifestyle
ಮಕ್ಕಳನ್ನು 'ಅಮ್ಮ' ದಡಾರದಿಂದ ರಕ್ಷಿಸಲು ಇದೇ ತಿಂಗಳು ತಪ್ಪದೆ ಕೊಡಿಸಿ MR ಲಸಿಕೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮಹೇಶ್ ಬಾಬು ಜೊತೆ ನಟಿಸಲು ಪೂಜಾ ಹೆಗ್ಡೆ ಹೊಸ ಷರತ್ತು!
ಸೌತ್ ಚಿತ್ರರಂಗದ ಬೇಡಿಕೆಯ ನಟಿಯರಲ್ಲಿ ಪೂಜಾ ಹೆಗ್ಡೆ ಕೂಡ ಒಬ್ಬರು. ಸದ್ಯ ಯಾವುದೇ ಸಿನಿಮಾ ಅದರೂ, ರಶ್ಮಿಕಾ ಮಂದಣ್ಣ ಮತ್ತು ಪೂಜಾ ಹೆಗ್ಡೆ ಹೆಸರುಗಳೇ ಮುಂಚೂಣಿಯಲ್ಲಿ ಇರುತ್ತವೆ. ಯಾವ ಸ್ಟಾರ್ ನಟನ ಸಿನಿಮಾ ಲಾಂಚ್ ಅದರೂ ಕೂಡ ಇದಕ್ಕೆ, ಪೂಜಾ ಮತ್ತು ರಶ್ಮಿಕಾ ಹೆಸರಿನ ನಡುವೆ ಸ್ಪರ್ಧೆ ಇರುತ್ತದೆ.
ಬೇಡಿಕೆ ಇರುವ ಪೂಜಾ ಹೆಗ್ಡೆ ಸಾ, ಸಾಲು ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ. ದೊಡ್ಡ ಸ್ಟಾರ್ ನಟರುಗಳ ಜೊತೆ ಸ್ಕ್ರೀನ್ ಹಂಚಿಕೊಳ್ಳುತ್ತಿರುವ ಈ ಪೂಜಾ ಮುಂದಿನ ಸಿನಿಮಾ ಮಹೇಶ್ ಬಾಬು ಜೊತೆಗೆ. ಮಹೇಶ್ ಬಾಬು ಜೊತೆಗೆ ಈ ಹಿಂದೆ ನಟಿಸಿ ಸೈ ಎನಿಸಿಕೊಂಡಿದ್ದಾರೆ ಪೂಜಾ. ಮತ್ತೊಮ್ಮೆ ಮಹೇಶ್ ಬಾಬು ಜೊತೆಗೆ ತೆರೆಹಂಚಿಕೊಳ್ಳುತ್ತಿದ್ದಾರೆ.
ವಿಜಯ್
ಚಿತ್ರಕ್ಕೆ
ರಶ್ಮಿಕಾ
ಮಂದಣ್ಣ
ದುಪ್ಪಟ್ಟು
ಸಂಭಾವನೆ:
ಈಕೆಯೇ
ನಂ.1?
ಆದರೆ ಇಲ್ಲಿ ವಿಷಯ ಅದಲ್ಲ. ಈಗ ಸಿನಿಮಾಗಳಲ್ಲಿ ನಟಿಸಲು ಪೂಜಾ ಹೆಗ್ಡೆ ಹೊಸ ಕಂಡೀಷನ್ ಹಾಕುತ್ತಿದ್ದಾರಂತೆ. ಮಹೇಶ್ ಬಾಬು ಜೊತೆ ನಟಿಸುತ್ತಿರುವ ಈ ಚಿತ್ರಕ್ಕೂ ಕೂಡ ಪೂಜಾ ಹೆಗ್ಡೆ ಷರತ್ತು ಹಾಕಿದ್ದು, ಚಿತ್ರತಂಡಕ್ಕೆ ತಲೆ ನೋವು ತಂದಿದೆಯಂತೆ.
ಕನ್ನಡ
ಚಿತ್ರರಂಗಕ್ಕೆ
ಪೂಜಾ
ಹೆಗ್ಡೆ
ಎಂಟ್ರಿ?
ಹೀರೊ
ಯಾರು?

ಹೆಚ್ಚು ದಿನ ಶೂಟಿಂಗ್ ಮಾಡುವಂತಿಲ್ಲ!
ಸ್ಟಾರ್ ನಟರ ಸಿನಿಮಾಗಳಲ್ಲಿ ನಾಯಕಿಗಿಂತ ಹೆಚ್ಚಾಗಿ, ನಾಯಕರಿಗೆ ಆದ್ಯತೆ ಇರುತ್ತದೆ. ಸಿನಿಮಾದಲ್ಲಿ ನಾಯಕ ನಟರೇ ಅಬ್ಬರಿಸುತ್ತಾರೆ. ನಾಯಕಿಯರ ಪಾತ್ರ ಹೆಚ್ಚು ಪ್ರಮುಖವಾಗಿರುವುದಿಲ್ಲ. ಕೆಲವು ಸಿನಿಮಾಗಳಲ್ಲಿ ಮಾತ್ರವೇ ನಾಯಕಿಯರಿಗೆ ಅತ್ಯುತ್ತಮ ಮತ್ತು ಹೆಚ್ಚು ಕಾಲ ತೆರೆಮೇಲೆ ಕಾಣುವ ಅವಕಾಶ ಇರುತ್ತದೆ. ಇದೇ ಕಾರಣಕ್ಕೆ ಪೂಜಾ ಹೆಗ್ಡೆ ಈಗ ಷರತ್ತು ವಿಧಿಸಿದ್ದಾರಂತೆ.

45 ದಿನಕ್ಕೆ ಮಾತ್ರ ಕಾಲ್‌ಶೀಟ್!
ಸದ್ಯ ತೆಲುಗಿನಲ್ಲಿ ಮಹೇಶ್ ಬಾಬು ಜೊತೆ ಪೂಜಾ ಹೆಗ್ಡೆ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ತ್ರಿವಿಕ್ರಮ್ ನಿರ್ದೇಶನವಿದೆ. . ಈ ಚಿತ್ರಕ್ಕೆ ನಟಿ ಪೂಜಾ ಹೆಗ್ಡೆ ಕೇವಲ 45 ದಿನಗಳನ್ನು ಮೀಸಲಿಟ್ಟಿದ್ದಾರಂತೆ. ಅದಕ್ಕೂ ಮೀರಿದ ಡೇಟ್‌ಗಳನ್ನು ಕೇಳಬಾರದು ಎಂದು ಷರತ್ತು ಹಾಕಿದ್ದಾರಂತೆ. ಈ 45 ದಿನಗಳಲ್ಲಿ ಪೂಜಾ ಪಾತ್ರದ ಚಿತ್ರೀಕರಣವನ್ನೂ ಮುಗಿಸಬೇಕು ಎಂದು ನಿರ್ದೇಶಕರಿಗೆ ಷರತ್ತು ಹಾಕಿದ್ದಾರಂತೆ.

ಸಾಲು, ಸಾಲು ಸೋಲುಂಡ ನಟಿ!
ಇತ್ತೀಚಿಗೆ ಪೂಜಾ ಹೆಗ್ಡೆ ಅವರ ಚಿತ್ರಗಳು ಸತತ ಸೋಲು ಕಾಣುತ್ತಿವೆ. 'ರಾಧೆ ಶ್ಯಾಮ್', 'ಬೀಸ್ಟ್', ಮತ್ತು ಇತ್ತೀಚೆಗೆ ತೆರೆಕಂಡ 'ಆಚಾರ್ಯ' ಬಾಕ್ಸ್ ಆಫೀಸ್‌ನಲ್ಲಿ ಸೋತಿದೆ. ಹೀಗಾಗಿ ಮುಂದಿನ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುವ ಬಗ್ಗೆ ಸಾಕಷ್ಟು ಯೋಚನೆ ಮಾಡುತ್ತಿದ್ದಾರಂತೆ ಪೂಜಾ ಹೆಗ್ಡೆ. ಒಂದು ಸೂಪರ್ ಹಿಟ್ ಕೊಡಬೇಕು ಎಂದು ಕಾಯುತ್ತಿದ್ದರಂತೆ.

ಕನ್ನಡಕ್ಕೆ ಪೂಜಾ ಹೆಗ್ಡೆ!
ಇನ್ನು ಪೂಜಾ ಹೆಗ್ಡೆ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡಲಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ. ಪೂಜಾ ಹೆಗ್ಡೆ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ. ಅದರಲ್ಲೂ ರಾಕಿಂಗ್ ಸ್ಟಾರ್ ಜೊತೆ ನಟಿಸುತ್ತಾರೆ ಎನ್ನುವ ಸುದ್ದಿ ಕುತೂಹಲ ಹೆಚ್ಚಿಸಿದೆ. ಯಶ್ ಜೊತೆಗೆ ಅಭಿನಯಿಸುವ ಮೂಲಕ ಪೂಜಾ ಹೆಗ್ಡೆ ಸ್ಯಾಂಡಲ್‌ವುಡ್‌ಗೆ ಬರ್ತಿದ್ದಾರೆ ಎನ್ನಲಾಗಿದೆ.