For Quick Alerts
  ALLOW NOTIFICATIONS  
  For Daily Alerts

  ವಿಡಿಯೋ ವೈರಲ್; ಬಸ್ ಚಲಾಯಿಸಿದ ಮಿಲ್ಕಿ ಬ್ಯೂಟಿ ತಮನ್ನಾ

  |

  ದಕ್ಷಿಣ ಭಾರತದ ಸಿನಿಮಾರಂಗದ ಖ್ಯಾತ ನಟಿ ತಮನ್ನಾ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಲಾಕ್ ಡೌನ್ ಬಳಿಕ ಚಿತ್ರೀಕರಣದಲ್ಲಿ ನಿರತರಾಗಿರುವ ತಮನ್ನಾ ಇತ್ತೀಚಿಗೆ ಬಸ್ ಚಲಾಯಿಸಿ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ.

  ಹೌದು, ನಟಿ ತಮನ್ನಾ ಶೂಟಿಂಗ್ ಸೆಟ್ ನಲ್ಲಿ ಬಸ್ ಓಡಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಬಸ್ ಓಡಿಸುತ್ತಿರುವ ವಿಡಿಯೋವನ್ನು ಸ್ವತಹ ತಮನ್ನಾ ಅವರೇ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಈ ವಿಡಿಯೋ ನೋಡಿ ಅಭಿಮಾನಿಗಳು ಲೈಕ್ ಒತ್ತಿ ಮೆಚ್ಚುಗೆಯ ಕಾಮೆಂಟ್ ಮಾಡುತ್ತಿದ್ದಾರೆ.

  ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ತಮನ್ನಾ; ಗೆಳತಿಗೆ ಸಮಂತಾ-ಕಾಜಲ್ ವಿಶ್ ಮಾಡಿದ್ದು ಹೀಗೆಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ತಮನ್ನಾ; ಗೆಳತಿಗೆ ಸಮಂತಾ-ಕಾಜಲ್ ವಿಶ್ ಮಾಡಿದ್ದು ಹೀಗೆ

  ಶೂಟಿಂಗ್ ಗಾಗಿ ಕೆಲವು ನಟಿಯರು ಟ್ರ್ಯಾಕ್ಟರ್ ಓಡಿಸಿರುವುದನ್ನು ನೋಡಿದ್ದೀರಿ. ಸಾಯಿ ಪಲ್ಲವಿ ಸೇರಿದಂತೆ ಕೆಲವು ನಟಿಯರು ಟ್ರ್ಯಾಕ್ಟರ್ ಓಡಿಸಿ ಅಚ್ಚರಿ ಮೂಡಿಸಿದ್ದರು. ಆದರೀಗ ತಮನ್ನಾ ಬಸ್ ಚಲಾಯಿಸಿ ಅಚ್ಚರಿ ಮೂಡಿಸಿದ್ದಾರೆ. ಅಂದಹಾಗೆ ತಮನ್ನಾ ಸದ್ಯ ಸೀಟಿಮಾರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾದ ಚಿತ್ರೀಕರಣ ಸಮಯದಲ್ಲಿ ತಮನ್ನಾ ಸಖತ್ ಎಂಜಾಯ್ ಮಾಡುತ್ತಿದ್ದಾರೆ.

  ಅಂದಹಾಗೆ ಸೀಟಿಮಾರ್ ಸಿನಿಮಾದಲ್ಲಿ ನಾಯಕನಾಗಿ ಗೋಪಿಚಂದ್ ಕಾಣಿಸಿಕೊಳ್ಳುತ್ತಿದ್ದಾರೆ. ಸಂಪತ್ ನಂದಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾ ಜೊತೆಗೆ ತಮನ್ನಾ ಕನ್ನಡದ ಲವ್ ಮಾಕ್ ಟೇಲ್ ಸಿನಿಮಾದ ರಿಮೇಕ್ ನಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ನಾಗಶೇಖರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.

  ಇನ್ನೂ ಹಿಂದಿಯ ಅಂಧಾಧುನ್ ಸಿನಿಮಾದ ರಿಮೇಕ್ ನಲ್ಲೂ ತಮನ್ನಾ ನಟಿಸುತ್ತಿದ್ದಾರೆ. ಜೊತೆಗೆ ವರುಣ್ ತೇಜ್ ಜೊತೆ ಎಫ್3, ಬೋಲೆ ಚೂಡಿಯಾ ಸೇರಿದಂತೆ ಇನ್ನು ಹಲವು ಸಿನಿಮಾಗಳು ತಮನ್ನಾ ಬಳಿ ಇದೆ. ಸಿನಿಮಾಗಳ ಜೊತೆಗೆ ತಮನ್ನಾ ವೆಬ್ ಸೀರಿಸ್ ನಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ.

  ಇತ್ತೀಚಿಗಷ್ಟೆ ತಮನ್ನಾಗೆ ಕೊರೊನಾ ಸೋಂಕು ತಗುಲಿತ್ತು. ಹೈದರಾಬಾದ್ ನಲ್ಲಿ ಶೂಟಿಂಗ್ ನಲ್ಲಿದ್ದ ತಮನ್ನಾ ಬಳಿಕ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಪಡೆದು ಗುಣಮುಖರಾಗಿ ಮುಂಬೈಗೆ ವಾಪಸ್ ಆಗಿದ್ದರು. ಕೆಲವು ದಿನಗಳ ವಿಶ್ರಾಂತಿ ಪಡೆದು ಬಳಿಕ ಮತ್ತೆ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

  English summary
  Actress Tamannaah drives bus in Seetimaarr shooting set.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  Desktop Bottom Promotion