For Quick Alerts
  ALLOW NOTIFICATIONS  
  For Daily Alerts

  ಅವಕಾಶ ಕೊಡಲು ಹಾಸಿಗೆ ಹಂಚಿಕೋ ಎಂದು ಕರೆದಿದ್ದ ನಿರ್ದೇಶಕ: ಕರಾಳ ಅನುಭವ ಬಿಚ್ಚಿಟ್ಟ ನಟಿ

  |

  ಕ್ಯಾಸ್ಟಿಂಗ್ ಕೌಚ್ ಬಹುತೇಕ ಎಲ್ಲ ಚಿತ್ರರಂಗದಲ್ಲಿಯೂ ಸದ್ದು ಮಾಡಿದ ಸಂಗತಿ. ಈ ಭಯಾನಕ ಸತ್ಯವನ್ನು ಬಹಿರಂಗಪಡಿಸುವ ಧೈರ್ಯವನ್ನು ಕೆಲವೇ ನಟಿಯರು ಮಾಡುತ್ತಾರೆ. ಉದ್ಯಮದಲ್ಲಿ ಒಂದು ಹಂತಕ್ಕೆ ಬೆಳೆದ ಬಳಿಕ ತಮ್ಮ ಹಳೆಯ ಅನುಭವವನ್ನು ತೆರೆದಿಡುತ್ತಾರೆ. ಇನ್ನು ಕ್ಯಾಸ್ಟಿಂಗ್ ಕೌಚ್ ಎಂಬ ಹೀನ ಪ್ರವೃತ್ತಿಯ ಜಾಲದೊಳಗೆ ಸಿಲುಕಿ ನಲುಗಿದ ಎಷ್ಟೋ ನಟಿಯರು, ನಟಿಸುವ ಆಕಾಂಕ್ಷೆಯಿಂದ ಬಂದ ಯುವತಿಯರು ಅದನ್ನು ಹೇಳಿಕೊಳ್ಳಲಾಗದೆ ಒದ್ದಾಡಿದ್ದಾರೆ.

  ಗ್ಲ್ಯಾಮರ್ ಜಗತ್ತಿನಲ್ಲಿ ತಮ್ಮ ವೃತ್ತಿ ಬದುಕು ಆರಂಭಿಸುವಾಗ ಇದರ ಬಗ್ಗೆ ಬಹಿರಂಗವಾಗಿ ಮಾತನಾಡಲು ಸಾಕಷ್ಟು ಧೈರ್ಯವೂ ಬೇಕು. ಹೀಗೆ ಇತ್ತೀಚೆಗೆ ಇದರ ಬಗ್ಗೆ ತಮ್ಮ ಕರಾಳ ಅನುಭವವನ್ನು ನಟಿಯೊಬ್ಬರು ನೆನಪಿಸಿಕೊಂಡಿದ್ದಾರೆ. ತೆಲುಗು ನಟಿ ವಾಣಿ ಭೋಜನ್ ಕ್ಯಾಸ್ಟಿಂಗ್ ಕೌಚ್‌ನ ಕ್ರೂರ ಮುಖ ತಮ್ಮೆದುರೂ ಬಂದಿತ್ತು ಎಂಬುದನ್ನು ತಿಳಿಸಿದ್ದಾರೆ.

  ಆರಂಭದಲ್ಲಿ ಅನುಭವ

  ಆರಂಭದಲ್ಲಿ ಅನುಭವ

  ಫ್ಯಾಷನ್ ಪ್ರಪಂಚದಲ್ಲಿ ಸಾಕಷ್ಟು ಕೆಲಸ ಮಾಡಿ ಹೆಸರು ಪಡೆದಿರುವ ವಾಣಿ, 2019ರಲ್ಲಿ 'ಮೀಕು ಮಾತ್ರಾನೆ ಚೆಪ್ತಾ' ಚಿತ್ರದಲ್ಲಿ ತೆಲುಗು ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದ ಅವರು, ಪ್ರಶಸ್ತಿಗಳನ್ನೂ ಮುಡಿಗೇರಿಸಿಕೊಂಡಿದ್ದರು. ಅವರು ಸಿನಿಮಾ ಉದ್ಯಮಕ್ಕೆ ಕಾಲಿಟ್ಟ ಸಂದರ್ಭದಲ್ಲಿ ತಮಗೆ ಕೂಡ ಕ್ಯಾಸ್ಟಿಂಗ್ ಕೌಚ್ ಅನುಭವ ಆಗಿತ್ತು ಎಂದು ಹೇಳಿದ್ದಾರೆ.

  'ನನಗೂ ಕಾಸ್ಟಿಂಗ್ ಕೌಚ್ ಅನುಭವವಾಗಿದೆ' ಎಂದ 'ಮಾಣಿಕ್ಯ'ನ ನಾಯಕಿ ವರಲಕ್ಷ್ಮೀ'ನನಗೂ ಕಾಸ್ಟಿಂಗ್ ಕೌಚ್ ಅನುಭವವಾಗಿದೆ' ಎಂದ 'ಮಾಣಿಕ್ಯ'ನ ನಾಯಕಿ ವರಲಕ್ಷ್ಮೀ

  'ಅಡ್ಜಸ್ಟ್‌ಮೆಂಟ್' ಎಂಬುದೇ ಗೊತ್ತಿಲ್ಲ

  'ಅಡ್ಜಸ್ಟ್‌ಮೆಂಟ್' ಎಂಬುದೇ ಗೊತ್ತಿಲ್ಲ

  ಇತ್ತೀಚೆಗೆ 'ಓ ಮೈ ಕಾದುವಲೆ' ಚಿತ್ರದ ಮೂಲಕ ತಮಿಳಿಗೆ ಕಾಲಿರಿಸಿರುವ ವಾಣಿ, ಅಲ್ಲಿ ಯಶಸ್ಸು ಪಡೆದ ಖುಷಿಯಲ್ಲಿದ್ದಾರೆ. ಸಂದರ್ಶನವೊಂದರ ವೇಳೆ ಅವರು, ಕ್ಯಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ. ನಟಿಯರನ್ನು 'ಅಡ್ಜಸ್ಟ್‌ಮೆಂಟ್‌'ಗೆ ಕೇಳುವಾಗ ಜನರು ಯಾವುದರ ಬಗ್ಗೆ ಮಾತನಾಡುತ್ತಿದ್ದರು ಎಂಬುದೇ ತಮಗೆ ಅರ್ಥವಾಗಿರಲಿಲ್ಲ ಎಂದು ತಿಳಿಸಿದ್ದಾರೆ.

  ಮ್ಯಾನೇಜರ್ ಮೂಲಕ ಸಂಪರ್ಕ

  ಮ್ಯಾನೇಜರ್ ಮೂಲಕ ಸಂಪರ್ಕ

  ತಮಿಳು ಸಿನಿಮಾದಲ್ಲಿ ನಟಿಸಿದ ಬಳಿಕ ಅವರು ತಮ್ಮ ಕ್ಯಾಸ್ಟಿಂಗ್ ಕೌಚ್ ಅನುಭವದ ಬಗ್ಗೆ ಮಾತನಾಡಿದ್ದಾರೆ. ಆಕೆಯ ಮ್ಯಾನೇಜರ್ ಬಳಿಕ ನಿರ್ಮಾಪಕರು ಅವರನ್ನು ಸಂಪರ್ಕಿಸಿದ್ದರಂತೆ. ಆದರೆ ಅವರ ಫೋನ್ ಕರೆಗೆ ಅಷ್ಟೊಂದು ಮಹತ್ವ ನೀಡಿರಲಿಲ್ಲ ಎಂದು ವಾಣಿ ತಿಳಿಸಿದ್ದಾರೆ.

  ಡ್ಯಾನ್ಸ್ ಪ್ರ್ಯಾಕ್ಟೀಸ್ ಅಂತ ಕರೆದು ಹಾಸಿಗೆ ಮೇಲೆ ಎಸೆದ: ಗಣೇಶ್ ಆಚಾರ್ಯ ವಿರುದ್ಧ ಸಿಡಿದ ನೃತ್ಯಗಾರ್ತಿ.!ಡ್ಯಾನ್ಸ್ ಪ್ರ್ಯಾಕ್ಟೀಸ್ ಅಂತ ಕರೆದು ಹಾಸಿಗೆ ಮೇಲೆ ಎಸೆದ: ಗಣೇಶ್ ಆಚಾರ್ಯ ವಿರುದ್ಧ ಸಿಡಿದ ನೃತ್ಯಗಾರ್ತಿ.!

  ದೊಡ್ಡ ಸ್ಟಾರ್‌ ಆಗಬೇಕೆಂದರೆ ಅನುಭವಿಸಬೇಕಾಗುತ್ತದೆ

  ದೊಡ್ಡ ಸ್ಟಾರ್‌ ಆಗಬೇಕೆಂದರೆ ಅನುಭವಿಸಬೇಕಾಗುತ್ತದೆ

  'ನನಗೆ ಸಿನಿಮಾಗಳಲ್ಲಿ ನಟಿಸಲೇಬೇಕು ಎಂಬ ಹಪಹಪಿ ಇಲ್ಲ. ನಾನು ಬಯಸಿದಾಗ ಕಿರುತೆರೆಗೆ ವಾಪಸ್ ಹೋಗಿ ನಟಿಸುತ್ತೇನೆ. ದೊಡ್ಡ ನಟಿಯಾಗಲೇಬೇಕು ಎಂಬ ಮಹತ್ವಾಕಾಂಕ್ಷೆಯುಳ್ಳ ಜನರು ಮಾತ್ರ ಅಂತಹ ಆಫರ್‌ಗಳನ್ನು ಒಪ್ಪಿಕೊಳ್ಳಬಹುದು. ಅದರ ಅರ್ಥ ದೊಡ್ಡ ಸ್ಟಾರ್‌ಗಳು ಕಠಿಣ ಪರಿಶ್ರಮ ಪಡುವುದಿಲ್ಲ ಎಂದಲ್ಲ. ಆ ಹಂತವನ್ನು ತಲುಪಲು ಅವರು ಅಂತಹ ಸಂಕಷ್ಟಗಳನ್ನು ಎದುರಿಸಿರಬೇಕಾಗುತ್ತದೆ' ಎಂದಿದ್ದಾರೆ.

  ಅವರ ಉದ್ದೇಶ ಸರಿಯಾಗಿ ಗೊತ್ತಿಲ್ಲ

  ಅವರ ಉದ್ದೇಶ ಸರಿಯಾಗಿ ಗೊತ್ತಿಲ್ಲ

  ಕ್ಯಾಸ್ಟಿಂಗ್ ಕೌಚ್‌ಗಾಗಿ ತಮ್ಮನ್ನು ಯಾರೂ ನೇರವಾಗಿ ಸಂಪರ್ಕಿಸಿಲ್ಲ. ತಮ್ಮ ಮ್ಯಾನೇಜರ್ ಮೂಲಕವೇ ಸಂಪರ್ಕಿಸಲಾಗಿತ್ತು ಎಂದು ಅವರು ಹೇಳಿದ್ದಾರೆ. ನಟಿಯರನ್ನು ಹೀಗೆ ಸಂಪರ್ಕಿಸುವ ಜನರ ಉದ್ದೇಶಗಳೇ ತಿಳಿದಿಲ್ಲ. ಹೀಗಾಗಿ ಅದರ ಬಗ್ಗೆ ಕಾಮೆಂಟ್ ಮಾಡಲು ಆಗುವುದಿಲ್ಲ. ಬಹುಶಃ ಅವರು ಅದು ಸರಿಯಾದ ಸಂಗತಿ ಎಂದು ಅಂದುಕೊಂಡ ಕಾರಣದಿಂದ ಹಾಗೆ ಮಾಡುತ್ತಿರಬಹುದು. ಆದರೆ ನಟಿಯರು ಅದನ್ನು ಬಯಸದ ಕಾರಣ ಒಪ್ಪಿಕೊಳ್ಳುತ್ತಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

  ಕಥೆ ಕೇಳಲು ನಿರ್ದೇಶಕನ ಕಚೇರಿಗೆ ಹೋದ ನಟಿಗೆ ಆಗಿದ್ದು ಕೆಟ್ಟ ಅನುಭವಕಥೆ ಕೇಳಲು ನಿರ್ದೇಶಕನ ಕಚೇರಿಗೆ ಹೋದ ನಟಿಗೆ ಆಗಿದ್ದು ಕೆಟ್ಟ ಅನುಭವ

  English summary
  Actress Vani Bhojan has shared her horrific experience of casting couch. A producer approached her to share bed with her.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X