twitter
    For Quick Alerts
    ALLOW NOTIFICATIONS  
    For Daily Alerts

    "ಗಂಡಸರು ಅದನ್ನು ಕಂಟ್ರೋಲ್ ಮಾಡಿಕೊಳ್ಳಬೇಕು": ಕಾಸ್ಟಿಂಗ್ ಕೌಚ್ ಬಗ್ಗೆ ವಿಷ್ಣುಪ್ರಿಯಾ ಹೇಳಿಕೆ

    |

    ಇತ್ತೀಚೆಗಷ್ಟೆ ಕನ್ನಡ ನಟಿ ಆಶಿತಾ ಚಿತ್ರರಂಗದಲ್ಲಿರುವ ಕಾಸ್ಟಿಂಗ್ ಕೌಚ್ ಅನ್ನುವ ಹೀನ ಸಂಸ್ಕೃತಿಯ ಬಗ್ಗೆ ಮಾತನಾಡಿದ್ದಾರೆ. 15 ವರ್ಷಗಳ ಹಿಂದೆ ತಾವು ಚಿತ್ರರಂಗದಿಂದ ದೂರ ಉಳಿಯಲು ಇದು ಕೂಡ ಒಂದು ಕಾರಣ ಎಂದು ಹೇಳಿದ್ದರು. ಇದೀಗ ತೆಲುಗು ನಟಿ, ನಿರೂಪಕಿ ವಿಷ್ಣುಪ್ರಿಯಾ ಕೂಡ ಚಿತ್ರರಂಗದಲ್ಲಿ ಇಂತಾದೊಂದು ರೂಢಿ ಇದೆ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ.

    ಕೆಲ ಸಿನಿಮಾಗಳಲ್ಲಿ ನಟಿಸಿ, ಕಿರುತೆರೆ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಮಿಂಚಿರುವ ವಿಷ್ಣುಪ್ರಿಯಾ ಬಗ್ಗೆ ಟಾಲಿವುಡ್ ಮಂದಿಗೆ ಬಿಡಿಸಿ ಹೇಳುವ ಅಗತ್ಯವಿಲ್ಲ. ಆದರೆ ಈಕೆ ಕೂಡ ಚಿತ್ರರಂಗದಲ್ಲಿ ನಾಯಕಿಯಾಗಲು ಸಾಕಷ್ಟು ಪ್ರಯತ್ನ ನಡೆಸಿದ್ದಾರೆ. ದೊಡ್ಡಮಟ್ಟದಲ್ಲಿ ಯಶಸ್ಸು ಮಾತ್ರ ಸಿಕ್ಕಿಲ್ಲ. ಇತ್ತೀಚೆಗೆ ಹಲವಾರು ಕೆಲ ಕಾರ್ಯಕ್ರಮಗಳ ಮೂಲಕ ವಿಷ್ಣುಪ್ರಿಯಾ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಅಲ್ಲದೇ ಆಗಾಗ ಫೋಟೋಶೂಟ್‌ಗಳಲ್ಲಿ ಬೋಲ್ಡ್ ಆಗಿ ಪೋಸ್ ಕೊಟ್ಟು ಆ ಫೋಟೊಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ. ಯೂಟ್ಯೂಬ್ ಸಂದರ್ಶನದಲ್ಲಿ ಭಾಗವಹಿಸಿದ್ದ ಚೆಲುವೆ ಕಾಸ್ಟಿಂಗ್ ಕೌಚ್ ವಿಚಾರವಾಗಿ ಹಲವು ಕುತೂಹಲಕಾರಿ ಕಾಮೆಂಟ್‌ಗಳನ್ನು ಮಾಡಿದ್ದಾರೆ.

    Me Too.. Me Too.. "ಪಾತ್ರಕ್ಕಾಗಿ ಪಲ್ಲಂಗ.. ನನಗೂ ಆ ಬೇಡಿಕೆ ಇಟ್ಟಿದ್ದರು" ಅದಕ್ಕೆ ಇಂಡಸ್ಟ್ರಿ ಬಿಟ್ಟೆ: ಬಾಂಬ್ ಸಿಡಿಸಿದ ಆಶಿತಾ

    'ಜರಿ ಜರಿ ಪಂಚೆಕಟ್ಟು' ಅನ್ನುವ ಸ್ಪೆಷಲ್‌ ಸಾಂಗ್‌ನಲ್ಲಿ ವಿಷ್ಣುಪ್ರಿಯಾ ಕುಣಿದಿದ್ದು, ಈ ಸಾಂಗ್ ಈಗ ಸಖತ್ ಸದ್ದು ಮಾಡ್ತಿದೆ. ಬಿಂದಾಸ್ ಚೆಲುವೆ ಜೊತೆ ಮಾನಸ್‌ ಹೆಜ್ಜೆ ಹಾಕಿದ್ದಾರೆ. ಶೇಖರ್ ಮಾಸ್ಟರ್ ಕೊರಿಯೋಗ್ರಫಿಯಲ್ಲಿ ಸಾಂಗ್ ಮೂಡಿ ಬಂದಿದೆ.

    ಎಲ್ಲಾ ಕ್ಷೇತ್ರಗಳಲ್ಲೂ ಕಾಸ್ಟಿಂಗ್ ಕೌಚ್ ಇದೆ

    ಎಲ್ಲಾ ಕ್ಷೇತ್ರಗಳಲ್ಲೂ ಕಾಸ್ಟಿಂಗ್ ಕೌಚ್ ಇದೆ

    ಕಾಸ್ಟಿಂಗ್ ಕೌಚ್ ಕುರಿತಾದ ಪ್ರಶ್ನೆಗೆ ಮಾತನಾಡುತ್ತಾ ವಿಷ್ಣುಪ್ರಿಯಾ "ಕಾಸ್ಟಿಂಗ್ ಕೌಚ್ ಸಮಸ್ಯೆ ಕೇವಲ ಚಿತ್ರರಂಗದಲ್ಲಿ ಮಾತ್ರವಲ್ಲದೇ ಇತರ ಕ್ಷೇತ್ರಗಳಲ್ಲೂ ಇದೆ. ಆದರೆ ಚಿತ್ರರಂಗದ ಸೆಲೆಬ್ರಿಟಿಗಳು ಎಲ್ಲರಿಗೂ ಗೊತ್ತಿರುವ ಕಾರಣ ಹೆಚ್ಚಿನವರಿಗೆ ಇಂಡಸ್ಟ್ರಿಯ ಬಗ್ಗೆ ತಪ್ಪು ಕಲ್ಪನೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಸ್ಟಾರ್‌ ನಟರು ಮಧ್ಯರಾತ್ರಿ ಮನೆಗೆ ಕರೆಯುತ್ತಾರೆ: ಬಾಲಿವುಡ್‌ನ ಕರಾಳ ಮುಖ ಬಿಚ್ಚಿಟ್ಟ ಮಲ್ಲಿಕಾ ಶೆರಾವತ್ಸ್ಟಾರ್‌ ನಟರು ಮಧ್ಯರಾತ್ರಿ ಮನೆಗೆ ಕರೆಯುತ್ತಾರೆ: ಬಾಲಿವುಡ್‌ನ ಕರಾಳ ಮುಖ ಬಿಚ್ಚಿಟ್ಟ ಮಲ್ಲಿಕಾ ಶೆರಾವತ್

    ನನಗೂ ಇಂತಹ ಬೇಡಿಕೆ ಇಟ್ಟಿದ್ದರು

    ನನಗೂ ಇಂತಹ ಬೇಡಿಕೆ ಇಟ್ಟಿದ್ದರು

    "ಇಂತಹ ಬೇಡಿಕೆ ಇಟ್ಟಾಗ ಅದನ್ನು ಒಪ್ಪಿಕೊಳ್ಳಬೇಕೋ ಬೇಡವೋ ಎನ್ನುವುದು ಮಹಿಳೆಯರಿಗೆ ಬಿಟ್ಟ ವಿಚಾರ. ನನಗೂ ಅವಕಾಶಗಳು ಬರುತ್ತಿದ್ದ ಸಮಯದಲ್ಲಿ ತುಂಬಾ ಜನ ಕೋರಿಕೆ ತೀರಿಸುವಂತೆ ಕೇಳಿದ್ದರು. ಆದರೆ ನಾನು ಅದಕ್ಕೆ ಒಪ್ಪಿಕೊಳ್ಳಲಿಲ್ಲ. ಅದರಿಂದ ಸಾಕಷ್ಟು ಅವಕಾಶಗಳನ್ನು ಕಳೆದುಕೊಳ್ಳುವಂತಾಯಿತು. ನನ್ನ ಪ್ರತಿಭೆಯನ್ನು ನಂಬಿ ಮುಂದಡಿ ಇಟ್ಟೆ. ನನ್ನ ಪರಿಶ್ರಮದ ಫಲವಾಗಿ ಇಂದು ಈ ಸ್ಥಾನದಲ್ಲಿ ಇದ್ದೀನಿ"

    ಗಂಡಸರು ಅದನ್ನು ಕಂಟ್ರೋಲ್ ಮಾಡಿಕೊಳ್ಳಬೇಕು

    ಗಂಡಸರು ಅದನ್ನು ಕಂಟ್ರೋಲ್ ಮಾಡಿಕೊಳ್ಳಬೇಕು

    "ಪುರುಷರು ಸಹ ತಮ್ಮ ಹಾರ್ಮೋನುಗಳನ್ನು ನಿಯಂತ್ರಿಸಬೇಕು ಎಂದು ವಿಷ್ಣುಪ್ರಿಯಾ ಹೇಳಿದ್ದಾರೆ. ಕೂಡಲೇ ಸಂದರ್ಶಕ ಮಹಿಳೆಯರಿಗೆ ಅಷ್ಟೇ ಅಲ್ಲ, ಪುರುಷರಿಗೆ ಮಹಿಳೆಯರಿಂದಲೂ ಈ ಕಾಸ್ಟಿಂಗ್ ಕೌಚ್ ಸಮಸ್ಯೆ ಎದುರಾಗುತ್ತಿದೆ ಎಂದಿದ್ದಕ್ಕೆ ಪುರುಷರೊಂದಿಗೆ ಮಹಿಳೆಯರು ಸಹ ತಮ್ಮ ಹಾರ್ಮೋನುಗಳನ್ನು ನಿಯಂತ್ರಿಸಿಕೊಳ್ಳಬೇಕು" ಎಂದು ವಿಷ್ಣುಪ್ರಿಯಾ ತಮಾಷೆಯಾಗಿ ನಕ್ಕಿದ್ದಾರೆ.

    ಚಿತ್ರರಂಗದಲ್ಲಿ ಪುರುಷರ ಆಧಿಪತ್ಯ ಹೆಚ್ಚು

    ಚಿತ್ರರಂಗದಲ್ಲಿ ಪುರುಷರ ಆಧಿಪತ್ಯ ಹೆಚ್ಚು

    "ಪ್ರತಿಭೆ ಇದ್ದರೆ ಮಾತ್ರ ಅವಕಾಶಗಳು ಸಿಗುವುದಿಲ್ಲ. ಅದೃಷ್ಟವೂ ಇರಬೇಕು, ಇಲ್ಲದಿದ್ದರೆ ಇಂಡಸ್ಟ್ರಿಯಲ್ಲಿ ಮೇಲುಗೈ ಸಾಧಿಸಲು ಸಾಧ್ಯವಿಲ್ಲ. ಚಿತ್ರರಂಗದಲ್ಲಿ ಪುರುಷರ ಪಾರುಪತ್ಯ ಹೆಚ್ಚಾಗಿದೆ. ಅದು ಹೋಗಲು ಇನ್ನು ಬಹಳ ಸಮಯ ಬೇಕು. ಮಹಿಳೆಯರು ಇತ್ತೀಚೆಗೆ ಎಲ್ಲಾ ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದಾರೆ. 15-20 ವರ್ಷಗಳಲ್ಲಿ ಮಹಿಳೆಯರು ಹೆಚ್ಚು ಪೈಪೋಟಿ ಕೊಡಲಿದ್ದಾರೆ" ಎಂದು ವಿಷ್ಣುಪ್ರಿಯಾ ಹೇಳಿದ್ದಾರೆ.

    English summary
    Actress Vishnu Priya speaks up about casting couch in Film Industry. know more.
    Sunday, September 18, 2022, 16:57
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X