For Quick Alerts
  ALLOW NOTIFICATIONS  
  For Daily Alerts

  ಈ ಒಂದು ಕಾರಣಕ್ಕಾಗಿ ತೆಲುಗು ಕಲಿಯುತ್ತಿರುವ ಅಲಿಯಾ ಭಟ್: ರಾಜಮೌಳಿ ಸಿನಿಮಾದ ಬಗ್ಗೆ ಹೇಳಿದ್ದೇನು?

  |

  ತೆಲುಗು ಸಿನಿಮಾರಂಗದಲ್ಲಿ ಮಾತ್ರವಲ್ಲದೆ ಭಾರತೀಯ ಸಿನಿಮಾ ಪ್ರಿಯರ ಗಮನ ಸೆಳೆದಿರುವ 'ಆರ್ ಆರ್ ಆರ್' ಸಿನಿಮಾದಲ್ಲಿ ಬಾಲಿವುಡ್ ಖ್ಯಾತ ನಟಿ ಅಲಿಯಾ ಭಟ್ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಅಲಿಯಾ, ಸೀತಾ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಸಿನಿಮಾತಂಡ ಅನೌನ್ಸ್ ಮಾಡಿ ವರ್ಷವೆ ಆಗಿದೆ. ಆದರೆ ಇದುವರೆಗೂ ಅಲಿಯಾ ಚಿತ್ರೀಕರಣದಲ್ಲಿ ಭಾಗಿಯಾಗಿಲ್ಲ.

  ಅಲಿಯಾ ಸಿನಿಮಾದಿಂದ ಔಟ್ ಆಗಿದ್ದಾರೆ ಎನ್ನುವ ಸುದ್ದಿ ಇತ್ತೀಚಿಗೆ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ನಿರ್ದೇಶಕ ರಾಜಮೌಳಿ ಬೇರೆ ನಾಯಕಿಯ ಹುಡುಕಾಟದಲ್ಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿತ್ತು. ಆದರೆ ಈ ಎಲ್ಲಾ ವದಂತಿಗಳಿಗೆ ಸ್ವತಹ ಅಲಿಯಾ ತೆರೆ ಎಳೆದಿದ್ದಾರೆ. ಚಿತ್ರೀಕರಣದಲ್ಲಿ ಭಾಗಿಯಾಗಲು ಉತ್ಸುಕಳಾಗಿದ್ದೇನೆ ಎಂದು ಅಲಿಯಾ ಟ್ವೀಟ್ ಮಾಡಿದ್ದಾರೆ. ಈ ಮೂಲಕ ಅಲಿಯಾ ಎಂಟ್ರಿ ಅಧಿಕೃತವಾಗಿದೆ. ಮುಂದೆ ಓದಿ...

  ನಿರ್ದೇಶಕ ರಾಜಮೌಳಿ ಕಡೆಯಿಂದ ಅಭಿಮಾನಿಗಳಿಗೆ ಸಿಕ್ತು ಗುಡ್ ನ್ಯೂಸ್

  ಚಿತ್ರೀಕರಣ ಪ್ರಾರಂಭಿಸಿದ ಆರ್ ಆರ್ ಆರ್ ತಂಡ

  ಚಿತ್ರೀಕರಣ ಪ್ರಾರಂಭಿಸಿದ ಆರ್ ಆರ್ ಆರ್ ತಂಡ

  ಈಗಾಗಲೇ ಆರ್ ಆರ್ ಆರ್ ಸಿನಿಮಾ ಚಿತ್ರೀಕರಣ ಪ್ರಾರಂಭವಾಗಿದೆ. ಬರೋಬ್ಬರಿ 7 ತಿಂಗಳ ಬಳಿಕ ನಿರ್ದೇಶಕ ರಾಜಮೌಳಿ ಮತ್ತು ತಂಡ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಹೈದರಾಬಾದ್ ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಣ ನಡೆಯುತ್ತಿದೆ. ಚಿತ್ರೀಕರಣ ಪ್ರಾರಂಭಿಸಿದ ಖುಷಿಯಲ್ಲಿ ಸಿನಿಮಾತಂಡ ಮೇಕಿಂಗ್ ವಿಡಿಯೋ ಮಾಡಿ ಶೇರ್ ಮಾಡಿದೆ.

  ತೆಲುಗು ಕಲಿಯುತ್ತಿರುವ ಅಲಿಯಾ

  ತೆಲುಗು ಕಲಿಯುತ್ತಿರುವ ಅಲಿಯಾ

  ಈ ವಿಡಿಯೋಗೆ ಅಲಿಯಾ ಕಾಮೆಂಟ್ ಮಾಡಿ ಚಿತ್ರೀಕರಣದಲ್ಲಿ ಭಾಗಿಯಾಗಲು ಕಾಯುತ್ತಿದ್ದೇನೆ ಎಂದು ಹೇಳಿದ್ದಾರೆ. ಮೂಲಗಳ ಪ್ರಕಾರ ಅಲಿಯಾ ನವೆಂಬರ್ ಮೊದಲ ವಾರದಲ್ಲಿ ಚಿತ್ರೀಕರಣಕ್ಕೆ ಹಾಜರಾಗಲಿದ್ದಾರಂತೆ. ಅಂದ್ಹಾಗೆ ಅಲಿಯಾ ಆರ್ ಆರ್ ಆರ್ ಸಿನಿಮಾಗಾಗಿ ತೆಲುಗು ಕಲಿಯುತ್ತಿದ್ದಾರಂತೆ. ಚಿತ್ರದ ಡಬ್ಬಿಂಗ್ ಅಲಿಯಾ ಭಟ್ ಅವರೇ ಮಾಡುತ್ತಿರುವ ಕಾರಣ ತೆಲುಗು ಭಾಷೆ ಕಲಿಯುತ್ತಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಸ್ಥಳಿಯ ತೆಲುಗು ಕ್ಲಾಸ್ ಗೆ ಹೋಗುತ್ತಿದ್ದಾರಂತೆ.

  ಆಲಿಯಾ ಭಟ್‌ ಗಾಗಿ ಯೋಜನೆ ಬದಲಿಸಿದ ರಾಜಮೌಳಿ

  'ಗಂಗೂಬಾಯಿ ಕಥಿಯಾವಾಡಿ' ಸಿನಿಮಾದಲ್ಲಿ ಅಲಿಯಾ ಬ್ಯುಸಿ

  'ಗಂಗೂಬಾಯಿ ಕಥಿಯಾವಾಡಿ' ಸಿನಿಮಾದಲ್ಲಿ ಅಲಿಯಾ ಬ್ಯುಸಿ

  ಅಲಿಯಾ ಭಟ್ ಸದ್ಯ 'ಗಂಗೂಬಾಯಿ ಕಥಿಯಾವಾಡಿ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಮಹಿಳಾ ಪ್ರಧಾನ ಸಿನಿಮಾ ಇದಾಗಿದ್ದು ಚಿತ್ರಕ್ಕೆ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ಈ ಸಿನಿಮಾದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದ್ದು, ಚಿತ್ರೀಕರಣ ಸಂಪೂರ್ಣ ಮುಗಿಸಿ ಆರ್ ಆರ್ ಆರ್ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರಂತೆ.

  ಅಜಯ್ ದೇವಗನ್ ಪಾತ್ರದ ಚಿತ್ರೀಕರಣ ಮುಕ್ತಾಯ

  ಅಜಯ್ ದೇವಗನ್ ಪಾತ್ರದ ಚಿತ್ರೀಕರಣ ಮುಕ್ತಾಯ

  ಈಗಾಗಲೇ ಬಾಲಿವುಡ್ ನಟ ಅಜಯ್ ದೇವಗನ್ ಪಾತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಕೊರೊನಾ ಲಾಕ್ ಡೌನ್ ಗೂ ಮೊದಲು ಅಜಯ್ ದೇವಗನ್ ಪಾತ್ರದ ಚಿತ್ರೀಕರಣ ಮಾಡಿ ಮುಗಿಸಿದೆ ಸಿನಿಮಾತಂಡ. ಚಿತ್ರದಲ್ಲಿ ಅಜಯ್ ದೇವಗನ್ ಗೆ ನಾಯಕಿಯಾಗಿ ನಟಿ ಶ್ರೀಯಾ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

  ಜೂ.ಎನ್ ಟಿ ಆರ್ ಅಭಿಮಾನಿಗಳಿಗೆ ಕಾದಿದೆ ಬಿಗ್ ಸರ್ಪ್ರೈಸ್: ಏನದು?

  KGF Chapter 2 ಇಲ್ಲಿದೆ Rocking Star Yash ಅಭಿಮಾನಿಗಳು ಖುಷಿ ಪಡೋ ಸುದ್ದಿ | Filmibeat Kannada
  ಅಕ್ಟೋಬರ್ 22ಕ್ಕೆ ಜೂ.ಎನ್ ಟಿ ಆರ್ ಇಂಟ್ರಡಕ್ಷನ್ ಟೀಸರ್

  ಅಕ್ಟೋಬರ್ 22ಕ್ಕೆ ಜೂ.ಎನ್ ಟಿ ಆರ್ ಇಂಟ್ರಡಕ್ಷನ್ ಟೀಸರ್

  ಅಕ್ಟೋಬರ್ 22ಕ್ಕೆ ಸಿನಿಮಾತಂಡ ಜೂ.ಎನ್ ಟಿ ಆರ್ ಅವರ ಇಂಟ್ರಡಕ್ಷನ್ ಟೀಸರ್ ರಿಲೀಸ್ ಮಾಡುತ್ತಿದೆ. ಅಂದುಕೊಂಡಂತೆ ಆಗಿದ್ದಾರೆ ಈ ಟೀಸರ್ ಈಗಾಗಲೇ ರಿಲೀಸ್ ಆಗಬೇಕಿತ್ತು. ಜೂ.ಎನ್ ಟಿ ಆರ್ ಹುಟ್ಟುಹಬ್ಬಕ್ಕೆ ಟೀಸರ್ ಬಿಡುಗಡೆಯಾಗಲಿದೆ ಎಂದು ಅಭಿಮಾನಿಗಳು ಕಾದುಕುಳಿತಿದ್ದರು. ಆದರೆ ಕೊರೊನಾ ವೈರಸ್ ಹಾವಳಿಯ ಪರಿಣಾಮ ಸಿನಿಮಾದ ಟೀಸರ್ ರಿಲೀಸ್ ಮಾಡಲು ಸಾಧ್ಯವಾಗಿರಲಿಲ್ಲ. ಅಂದು ನಿರಾಸೆಯಾಗಿದ್ದ ಅಭಿಮಾನಿಗಳಿಗೆ ಈಗ ಸಂತಸದ ಸುದ್ದಿ ಸಿಕ್ಕಿದೆ. ಈಗಾಗಲೇ ಈ ಟೀಸರ್ ಗಾಗಿ #RamarajuforBheemaonoc22 ಹ್ಯಾಷ್ ಟ್ಯಾಗ್ ಬಳಿಸಿ ಟ್ರೆಂಡ್ ಮಾಡಲಾಗುತ್ತಿದೆ.

  English summary
  Bollywood Actress Alia Bhatt set to join for RRR movie on November. Alia Bhatt is learning telugu for RRR movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X