For Quick Alerts
  ALLOW NOTIFICATIONS  
  For Daily Alerts

  ಕಿಲ್ಲಿಂಗ್ ವೀರಪ್ಪನ್, ಅಟ್ಟಹಾಸ ನೆನಪು ಮಾಡಿದ 'ಪುಷ್ಪ': ಟೀಸರ್ ಕಂಡು ಉಘೇ ಎಂದ ಫ್ಯಾನ್ಸ್

  |

  ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್ ನಟನೆಯಲ್ಲಿ ತಯಾರಾಗುತ್ತಿರುವ 'ಪುಷ್ಪ' ಟೀಸರ್ ಬಿಡುಗಡೆಯಾಗಿದೆ. 'ಪುಷ್ಪ' ಟೀಸರ್‌ನಲ್ಲಿ ಅಲ್ಲು ಅರ್ಜುನ್ ಲುಕ್ ನೋಡಿದ ಅಭಿಮಾನಿಗಳು ಥ್ರಿಲ್ ಆಗಿದ್ದು, ಈ ಚಿತ್ರ ಸೂಪರ್ ಹಿಟ್ ಆಗೋದು ಪಕ್ಕಾ ಎನ್ನುತ್ತಿದ್ದಾರೆ.

  ಮತ್ತೊಂದೆಡೆ ಪುಷ್ಪ ಸಿನಿಮಾದ ಟೀಸರ್ ಕನ್ನಡದ 'ಕಿಲ್ಲಿಂಗ್ ವೀರಪ್ಪನ್' ಮತ್ತು 'ಅಟ್ಟಹಾಸ' ಚಿತ್ರಗಳನ್ನು ನೆನಪು ಮಾಡುವಂತಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

  ಅಲ್ಲು ಅರ್ಜುನ್ ಬಳಿ ಗಿಫ್ಟ್ ಬೇಕೆಂದು ಕೇಳಿದ ರಶ್ಮಿಕಾ; ಸ್ಟೈಲಿಶ್ ಸ್ಟಾರ್ ಹೇಳಿದ್ದೇನು?

  ಕಾಡುಗಳ್ಳ ವೀರಪ್ಪನ್ ಹೇಗೆ ಕಾಡಿನಲ್ಲಿ ಅವಿತು ಗಂಧದ ಮರಗಳನ್ನು ಕಳ್ಳಸಾಗಣೆ ಮತ್ತು ಆನೆ ದಂತಗಳನ್ನು ಕಳ್ಳ ಸಾಗಣೆ ಮಾಡುತ್ತಿದ್ದನೋ ಅಂತಹದ್ದೇ ಕಥೆ ಇದಾಗಿದೆ ಎಂಬ ಅನುಮಾನ ಕಾಡ್ತಿದೆ. ಏಕಂದ್ರೆ, ಟೀಸರ್‌ನಲ್ಲಿ ಅಂತಹ ದೃಶ್ಯಗಳು ಪ್ರತಿಬಿಂಬವಾಗಿ ಕಾಣ್ತಿದೆ. ಮುಂದೆ ಓದಿ...

  ನೈಜ ಘಟನೆಗಳ ಆಧರಿತ ಚಿತ್ರ

  ನೈಜ ಘಟನೆಗಳ ಆಧರಿತ ಚಿತ್ರ

  ಅಲ್ಲು ಅರ್ಜುನ್ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆಯಾಗಿರುವ ಪುಷ್ಪ ಚಿತ್ರದ ಟೀಸರ್‌ಗೆ ಚೆನ್ನಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಟೀಸರ್ ನೋಡಿದ್ಮೇಲೆ ಅಲ್ಲು ಅರ್ಜುನ್ ಹಾಗೂ ಸುಕುಮಾರ್ ಕಾಂಬಿನೇಷನ್ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಅಂದ್ಹಾಗೆ, ಪುಷ್ಪ ಸಿನಿಮಾ ನೈಜ ಘಟನೆಗಳ ಕಥೆಯನ್ನು ಆಧರಿಸಿ ತಯಾರಾಗಿದೆ. ಕ್ರಿಮಿನಲ್ ಒಬ್ಬನ ಕಥೆಯಾಗಿದೆ ಎಂದು ನಿರ್ದೇಶಕ ಸುಕುಮಾರ್ ಮಾಹಿತಿ ನೀಡಿದ್ದರು.

  ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆ

  ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆ

  ಸೂಪರ್ ಹಿಟ್ ಚಿತ್ರಗಳ ನಿರ್ದೇಶಕ ಸುಕುಮಾರ್ 'ಪುಷ್ಪ' ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಅಲ್ಲು ಅರ್ಜುನ್-ಸುಕುಮಾರ್ ಕಾಂಬಿನೇಷನ್‌ನಲ್ಲಿ ಮೂಡಿಬಂದಿರುವ ಎರಡು ಚಿತ್ರವೂ ಸೂಪರ್ ಡೂಪರ್ ಹಿಟ್ ಆಗಿತ್ತು. ಇದೀಗ, ಮೂರನೇ ಚಿತ್ರವೂ ದೊಡ್ಡ ಗೆಲುವು ಸಾಧಿಸಲಿದೆ ಎಂದು ಈ ಟೀಸರ್ ಸಾಬೀತು ಪಡಿಸಿದಂತಿದೆ. ಇದಕ್ಕೂ ಮುಂಚೆ ಅಲ್ಲು ಅರ್ಜುನ್ ನಟಿಸಿದ್ದ ಆರ್ಯ ಹಾಗೂ ಆರ್ಯ 2 ಚಿತ್ರಗಳನ್ನು ಸುಕುಮಾರ್ ನಿರ್ದೇಶಿಸಿದ್ದರು. ಈಗ ಹ್ಯಾಟ್ರಿಕ್ ಬಾರಿಸುವ ಸುಳಿವು ನೀಡಿದ್ದಾರೆ.

  ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಕಹಿ ಸುದ್ದಿ: 'ಪುಷ್ಪಾ' ಬಿಡುಗಡೆ ಮುಂದೂಡಿಕೆ?

  ರಶ್ಮಿಕಾ-ಅಲ್ಲು ಅರ್ಜುನ್ ಜೋಡಿ

  ರಶ್ಮಿಕಾ-ಅಲ್ಲು ಅರ್ಜುನ್ ಜೋಡಿ

  ರಶ್ಮಿಕಾ ಮಂದಣ್ಣ ಈ ಚಿತ್ರದಲ್ಲಿ ನಾಯಕಿಯಾಗಿದ್ದಾರೆ. ಮೊದಲ ಬಾರಿಗೆ ಅಲ್ಲು ಅರ್ಜುನ್ ಚಿತ್ರದಲ್ಲಿ ರಶ್ಮಿಕಾ ನಟಿಸುತ್ತಿದ್ದು, ಟೀಸರ್ ಬಗ್ಗೆ ಕೊಡಗಿನ ಕುವರಿ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದು, ಫಹಾದ್ ಫಾಸಿಲ್, ಜಗಪತಿ ಬಾಬು, ಪ್ರಕಾಶ್ ರಾಜ್, ಸುನಿಲ್ ಪೋಷಕ ಪಾತ್ರದಲ್ಲಿದ್ದಾರೆ. ವಿಶೇಷ ಅಂದ್ರೆ ಕನ್ನಡ ನಟ ಧನಂಜಯ್ ಸಹ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

  ನಟ ಕಾರ್ತಿ ಹೇಳಿದ ಯಾವ ಮಾತಿಗೆ ರಶ್ಮಿಕಾಗೆ ಅಳು ಬಂತು | Filmibeat Kannada
  ಕನ್ನಡದಲ್ಲೂ ಪುಷ್ಪ ಬಿಡುಗಡೆ

  ಕನ್ನಡದಲ್ಲೂ ಪುಷ್ಪ ಬಿಡುಗಡೆ

  ದೇವಿಶ್ರೀ ಪ್ರಸಾದ್ ಈ ಚಿತ್ರಕ್ಕೆ ಸಂಗೀತ ಒದಗಿಸಿದ್ದಾರೆ. ಇನ್ನುಳಿದಂತೆ ತೆಲುಗಿನಲ್ಲಿ ತಯಾರಾಗಿರುವ ಈ ಚಿತ್ರ ಕನ್ನಡ, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ತೆರೆಕಾಣಲಿದೆ. ಸದ್ಯ ಚಿತ್ರತಂಡ ಪ್ರಕಟಿಸಿರುವ ಪ್ರಕಾರ ಆಗಸ್ಟ್ 13 ರಂದು ಪುಷ್ಪ ಸಿನಿಮಾ ಚಿತ್ರಮಂದಿರಕ್ಕೆ ಬರಲಿದೆ.

  English summary
  Tollywood star Allu Arjun and Rashmika Mandanna Starrer Pushpa Movie Teaser Released.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X