For Quick Alerts
  ALLOW NOTIFICATIONS  
  For Daily Alerts

  ತಮಿಳು ಆಯಿತು ಈಗ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟ ಆಶಿಕಾ ರಂಗನಾಥ್

  |

  2016ರಲ್ಲಿ ತೆರೆಕಂಡ ಕ್ರೇಜಿ ಬಾಯ್ ಎಂಬ ಸಿನಿಮಾ ಮೂಲಕ‌ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟ ನಟಿ ಆಶಿಕಾ ರಂಗನಾಥ್ ಬಳಿಕ ಶಿವ ರಾಜ್ ಕುಮಾರ್ ನಟನೆಯ ಮಾಸ್ ಲೀಡರ್ ಚಿತ್ರದಲ್ಲಿ ಸಹ ನಟಿಸಿದ್ದರು. ಬಳಿಕ 2017ರಲ್ಲಿ ಬಿಡುಗಡೆಯಾದ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಯೋಗರಾಜ್ ಭಟ್ ಜೋಡಿಯ ಮುಗುಳುನಗೆ ಚಿತ್ರದಲ್ಲಿ ನಾಯಕಿಯಾಗಿ ಬಣ್ಣ ಹಚ್ಚಿದ ಆಶಿಕಾ ರಂಗನಾಥ್ ಖ್ಯಾತಿ ಪಡೆದರು.

  ಬಳಿಕ ಶರಣ್ ನಟನೆಯ ರಾಂಬೋ 2 ಚಿತ್ರದಲ್ಲಿ ನಟಿಸಿ ಗೆಲುವನ್ನು ಕಂಡ ಆಶಿಕಾ ರಂಗನಾಥ್ ಸುದೀಪ್ ನಟನೆಯ ಕೋಟಿಗೊಬ್ಬ 3 ಚಿತ್ರದ ಐಟಂ ಹಾಡಿಗೆ ಹಾಗೂ ಪುನೀತ್ ರಾಜ್‍ಕುಮಾರ್ ನಟನೆಯ ಜೇಮ್ಸ್‌ ಚಿತ್ರದ ಹಾಡಿಗೆ ಹೆಜ್ಜೆ ಹಾಕಿದ್ದು ಬಿಟ್ಟರೆ ಸ್ಟಾರ್ ನಟರ ಚಿತ್ರಗಳಲ್ಲಿ ಲೀಡ್ ರೋಲ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿಲ್ಲ.

  ಕೈನಲ್ಲಿ ಕನ್ನಡದ ಹಲವು ಚಿತ್ರಗಳು ಆಶಿಕಾ ಕೈನಲ್ಲಿ ಇರುವಾಗಲೇ ನಟಿ ಪಕ್ಕದ ಇಂಡಸ್ಟ್ರಿಗಳಿಗೆ ಜಿಗಿದಿದ್ದಾರೆ. ನವೆಂಬರ್ ತಿಂಗಳಿನಲ್ಲಿ ಆಶಿಕಾ ರಂಗನಾಥ್ ನಟನೆಯ ಮೊದಲ ತಮಿಳು‌ ಚಿತ್ರ 'ಪಟ್ಟದು ಅರಸನ್' ಬಿಡುಗಡೆಯಾಗಿತ್ತು. ಈ ಚಿತ್ರ ಸದ್ದು‌ ಮಾಡಲೇ ಇಲ್ಲ. ಇನ್ನು ತಮಿಳು‌ ನಟ ಸಿದ್ಧಾರ್ಥ್ ನಟನೆಯ ಮತ್ತೊಂದು ತಮಿಳು ಚಿತ್ರಕ್ಕೆ ಆಶಿಕಾ ಆಯ್ಕೆಯಾಗಿದ್ದು, ಇದರ ಬೆನ್ನಲ್ಲೇ ನಟಿ ತೆಲುಗು ಚಿತ್ರರಂಗಕ್ಕೆ ಹಾರಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು‌.

  ಈ ಸುದ್ದಿ ಇದೀಗ ನಿಜವಾಗಿದ್ದು ತೆಲುಗಿನ ದೊಡ್ಡ ಬ್ಯಾನರ್ ನಿರ್ಮಿಸುತ್ತಿರುವ ಚಿತ್ರದ ಮೂಲಕ ತೆಲುಗು ಇಂಡಸ್ಟ್ರಿಗೆ ನಟಿ ಆಶಿಕಾ ರಂಗನಾಥ್ ಪದಾರ್ಪಣೆ ಮಾಡಲಿದ್ದಾರೆ. ಮೈತ್ರಿ‌‌ ಮೂವಿ ಮೇಕರ್ಸ್ ಬಂಡವಾಳ ಹೂಡುತ್ತಿರುವ 'ಅಮಿಗೊಸ್' ಎಂಬ ವಿಭಿನ್ನ ಟೈಟಲ್ ಉಳ್ಳ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಚಿತ್ರಕ್ಕೆ ರಾಜೇಂದ್ರ ರೆಡ್ಡಿ ನಿರ್ದೇಶನವಿದ್ದು, ನಂದಾಮೂರಿ‌ ಕಲ್ಯಾಣ್ ರಾಮ್ ನಾಯಕನಾಗಿದ್ದಾರೆ‌. ಚಿತ್ರತಂಡ ಆಶಿಕಾ ರಂಗನಾಥ್ ನಮ್ಮ ಚಿತ್ರದಲ್ಲಿ ಇಶಿಕಾ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಪರಿಚಯಿಸಿದೆ.

  English summary
  Ashika Ranganath Telugu debut film announced by Mytri Movie Makers
  Saturday, December 24, 2022, 20:39
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X