twitter
    For Quick Alerts
    ALLOW NOTIFICATIONS  
    For Daily Alerts

    ಬೆಂಬಲ ಹಿಂಪಡೆದ ಬಂಡ್ಲ ಗಣೇಶ್: ಇಕ್ಕಟ್ಟಿಗೆ ಸಿಲುಕಿದ ಪ್ರಕಾಶ್ ರೈ

    |

    ನಟ ಪ್ರಕಾಶ್ ರೈ, ತೆಲುಗು ಚಿತ್ರರಂಗದ ಮಾ(ಮೂವಿ ಆರ್ಟಿಸ್ಟ್ ಅಸೋಸಿಯೇಷನ್) ಚುನಾವಣೆಗೆ ಸ್ಪರ್ಧಿಸಿದ್ದು ಗೆಲ್ಲುವ ಅಭ್ಯರ್ಥಿ ಎನಿಸಿಕೊಂಡಿದ್ದಾರೆ. ಈಗಾಗಲೇ ತಮ್ಮ ಸಿಂಡಿಕೇಟ್ ಅನ್ನು ಪ್ರಕಾಶ್ ರೈ ಘೋಷಿಸಿದ್ದು, ತಮ್ಮ ವಿರೋಧಿ ಬಣದಲ್ಲಿದ್ದ ಇಬ್ಬರನ್ನು ತಮ್ಮ ಸಿಂಡಿಕೇಟ್‌ಗೆ ಸೇರಿಸಿಕೊಂಡಿದ್ದಾರೆ.

    ಪ್ರಕಾಶ್‌ ರೈಗೆ ವಿರುದ್ಧವಾಗಿ ಕಣಕ್ಕೆ ಇಳಿಯಲು ಸಜ್ಜಾಗಿದ್ದ ನಟಿ ಹೇಮಾ ಮತ್ತು ಜೀವಿತಾ ರಾಜಶೇಖರ್ ಅನ್ನು ತಮ್ಮ ಸಿಂಡಿಕೇಟ್‌ಗೆ ಸೇರಿಸಿಕೊಂಡು ತಮ್ಮ ಗುಂಪಿನಿಂದಲೇ ಸ್ಪರ್ಧಿಸಲು ಪ್ರಕಾಶ್ ರೈ ಅವಕಾಶ ಮಾಡಿಕೊಟ್ಟಿದ್ದಾರೆ. ಪ್ರಕಾಶ್‌ ರೈರ ಈ ನಡೆ ಬಹಳ ಬುದ್ಧಿವಂತಿಕೆಯದ್ದು ಎಂದು ಹೊಗಳಲಾಗಿತ್ತು. ಆದರೆ ಇದರಿಂದಲೇ ಪ್ರಕಾಶ್ ರೈ ಸಮಸ್ಯೆಗೆ ಸಿಲುಕಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

    ಹೇಮಾ ಮತ್ತು ಜೀವಿತಾ ರಾಜಶೇಖರ್ ಅವರುಗಳನ್ನು ಪ್ರಕಾಶ್ ರೈ ತಮ್ಮ ಬಣಕ್ಕೆ ಸೇರಿಸಿಕೊಂಡಿದ್ದಾರೆ. ಇದರಿಂದ ಕೆಲವರು ಅಸಮಾಧಾನಗೊಂಡಿದ್ದು, ಬಹಿರಂಗವಾಗಿಯೇ ತಮ್ಮ ಅಸಮಾಧಾನವನ್ನು ಹೊರಗೆ ಹಾಕಿದ್ದಾರೆ. ಅದರಲ್ಲಿಯೂ ಪ್ರಮುಖ ನಟ, ನಿರ್ಮಾಪಕ, ನಿರ್ದೇಶಕ ಮತ್ತು ಪವನ್ ಕಲ್ಯಾಣ್‌ಗೆ ಬಹಳ ಆಪ್ತವಾಗಿರುವ ಬಂಡ್ಲ ಗಣೇಶ್ ಪ್ರಕಾಶ್ ರೈ ವಿರುದ್ಧ ಕಿಡಿ ಕಾರಿದ್ದಾರೆ. ತಮ್ಮ ಬೆಂಬಲವನ್ನು ಹಿಂಪಡೆಯುತ್ತಿರುವುದಾಗಿಯೂ ಘೋಷಿಸಿದ್ದಾರೆ.

    ''ಜೀವಿತಾ ರಾಜಶೇಖರ್ ಅನ್ನು ಸಿಂಡಿಕೇಟ್‌ಗೆ ಸೇರಿಸಿಕೊಂಡಿದ್ದನ್ನು ನನಗೆ ನಂಬಲಾಗುತ್ತಿಲ್ಲ. ಈ ಸುದ್ದಿ ಕೇಳಿ ನನಗೆ ಆಘಾತವಾಯಿತು. ನನಗೆ ರಾತ್ರಿಯೆಲ್ಲ ನಿದ್ದೆ ಬರಲಿಲ್ಲ. ಈ ಹಿಂದೆ ಇದೇ ಜೀವಿತಾ ರಾಜಶೇಖರ್ ನಟ ಚಿರಂಜೀವಿ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಹೊರಿಸಿದ್ದರು. ಈಗ ಅವರನ್ನೇ ಪ್ರಕಾಶ್ ರೈ ತಮ್ಮ ಬಳಗಕ್ಕೆ ಸೇರಿಸಿಕೊಂಡಿದ್ದಾರೆ. ಹಾಗಾಗಿ ನಾನು ಪ್ರಕಾಶ್ ರೈಗೆ ನೀಡಿರುವ ಬೆಂಬಲವನ್ನು ವಾಪಸ್ ಪಡೆಯುತ್ತಿದ್ದೇನೆ'' ಎಂದಿದ್ದಾರೆ ಬಂಡ್ಲ ಗಣೇಶ್.

    ನಾನು ಚುನಾವಣೆಗೆ ನಿಲ್ಲುತ್ತೇನೆ: ಬಂಡ್ಲ ಗಣೇಶ್

    ನಾನು ಚುನಾವಣೆಗೆ ನಿಲ್ಲುತ್ತೇನೆ: ಬಂಡ್ಲ ಗಣೇಶ್

    ''ಜೀವಿತಾ ರಾಜಶೇಖರ್ ಎಂಎಎ (ಮಾ)ಗೆ ಕಾರ್ಯದರ್ಶಿಯಾಗಿ ಎರಡು ವರ್ಷ ಇದ್ದಾಗ ಏನೇನು ಕೆಲಸ ಮಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು. ಅಂಥಹಾ ಭ್ರಷ್ಟರಿಗೆ ಮತ್ತೆ ಅವಕಾಶ ನೀಡಿದ್ದರಿಂದ ನನಗೆ ತೀವ್ರ ಬೇಸರವಾಗಿದೆ. ಹಾಗಾಗಿ ನಾನು ಪ್ರಕಾಶ್ ರೈಗೆ ನೀಡಿದ್ದ ಬೆಂಬಲ ವಾಪಸ್‌ ಪಡೆಯುತ್ತಿದ್ದೇನೆ ಮತ್ತು ನಾನೇ ಸ್ವತಃ ಚುನಾವಣೆಗೆ ನಿಲ್ಲುತ್ತಿದ್ದೇನೆ. ನಾನು ಗೆದ್ದೇ ಗೆಲ್ಲುತ್ತೇನೆ ಎಂಬ ನಂಬಿಕೆ ಇದೆ'' ಎಂದಿದ್ದಾರೆ ಬಂಡ್ಲ ಗಣೇಶ್.

    ಬಂಡ್ಲ ಗಣೇಶ್ ಸ್ಪರ್ಧಿಸಿದರೆ ಪ್ರಕಾಶ್ ರೈಗೆ ಕಷ್ಟ

    ಬಂಡ್ಲ ಗಣೇಶ್ ಸ್ಪರ್ಧಿಸಿದರೆ ಪ್ರಕಾಶ್ ರೈಗೆ ಕಷ್ಟ

    ಬಂಡ್ಲ ಗಣೇಶ್ ತೆಲುಗು ಚಿತ್ರರಂಗದಲ್ಲಿ ಸಣ್ಣ ವ್ಯಕ್ತಿಯೇನೂ ಅಲ್ಲ. ಚಿರಂಜೀವಿ ಕುಟುಂಬಕ್ಕೆ ಅದರಲ್ಲೂ ಪವನ್ ಕಲ್ಯಾಣ್‌ಗೆ ಬಹಳ ಆಪ್ತವಾಗಿದ್ದಾರೆ ಬಂಡ್ಲ ಗಣೇಶ್. ಒಂದೊಮ್ಮೆ ಬಂಡ್ಲ ಗಣೇಶ್ ಹೇಳಿದ ಮಾತಿನಂತೆಯೇ ಚುನಾವಣೆಗೆ ಸ್ಪರ್ಧಿಸಿದರೆ ಚಿರಂಜೀವಿ ಕುಟುಂಬವು ಪ್ರಕಾಶ್ ರೈಗೆ ಬದಲಾಗಿ ಬಂಡ್ಲ ಗಣೇಶ್‌ಗೆ ಬೆಂಬಲ ನೀಡುವ ಸಾಧ್ಯತೆ ಇಲ್ಲದೇ ಇಲ್ಲ. ಹಾಗಾಗಿ ಪ್ರಕಾಶ್‌ ರೈಗೆ ಆತಂಕ ಶುರುವಾಗಿದೆ.

    ರಾಜಶೇಖರ್-ಚಿರು ವೈಷಮ್ಯ ಹಳೆಯದ್ದು

    ರಾಜಶೇಖರ್-ಚಿರು ವೈಷಮ್ಯ ಹಳೆಯದ್ದು

    ನಟ ರಾಜಶೇಖರ್ ಹಾಗೂ ಚಿರಂಜೀವಿ ನಡುವೆ ವೈಷಮ್ಯ ಬಹಳ ವರ್ಷಗಳದ್ದು. ಈ ಹಿಂದೆ ಚಿರಂಜೀವಿ ವಿರುದ್ಧ ರಾಜಶೇಖರ್ ಕೆಟ್ಟದಾಗಿ ಮಾತನಾಡಿದ್ದಾರೆಂದು ಚಿರು ಅಭಿಮಾನಿಗಳು ರಾಜಶೇಖರ್ ವಿರುದ್ಧ ದಾಳಿ ಮಾಡಿದ್ದರು. ಆಗ ಚಿರಂಜೀವಿ ಬಹಿರಂಗವಾಗಿ ವೇದಿಕೆ ಮೇಲೆ ನಿಂತು ರಾಜಶೇಖರ್ ಹಾಗೂ ಕುಟುಂಬವನ್ನು ಕ್ಷಮೆ ಕೇಳಿದ್ದರು. ಆದರೆ ಆ ನಂತರವೂ ರಾಜಶೇಖರ್ ಚಿರಂಜೀವಿ ವಿರುದ್ಧ ಆಗಾಗ್ಗೆ ಹೇಳಿಕೆಗಳನ್ನು ನೀಡುತ್ತಲೇ ಬಂದಿದ್ದರು. ರಾಜಶೇಖರ್ ಪತ್ನಿ ಜೀವಿತಾ ರಾಜಶೇಖರ್ ಸಹ ಚಿರಂಜೀವಿ ವಿರುದ್ಧ ಹಲವು ಆರೋಪಗಳನ್ನು ಈ ಹಿಂದೆ ಮಾಡಿದ್ದಾರೆ.

    ಪ್ರಕಾಶ್ ರೈ ಗುಂಪಿನಲ್ಲಿ ಯಾರ್ಯಾರಿದ್ದಾರೆ?

    ಪ್ರಕಾಶ್ ರೈ ಗುಂಪಿನಲ್ಲಿ ಯಾರ್ಯಾರಿದ್ದಾರೆ?

    ನಟಿ ಹೇಮಾ ಹಾಗೂ ಜೀವಿತಾ ಇಬ್ಬರನ್ನು ಪ್ರಕಾಶ್ ರೈ ತಮ್ಮ ಸಿಂಡಿಕೇಟ್‌ಗೆ ಸೇರಿಸಿಕೊಂಡಿದ್ದು, ತಮ್ಮ ಸಿಂಡಿಕೇಟ್ ಅನ್ನು ಘೋಷಣೆ ಸಹ ಮಾಡಿದ್ದಾರೆ. ಪ್ರಕಾಶ್ ರೈ ಸಿಂಡಿಕೇಟ್‌ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪ್ರಕಾಶ್ ರೈ, ಕಾರ್ಯನಿರ್ವಾಹಕ ಉಪಾಧ್ಯಕ್ಷ ಸ್ಥಾನಕ್ಕೆ ಮೇಕಾ ಶ್ರೀಕಾಂತ್, ಉಪಾಧ್ಯಕ್ಷ ಸ್ಥಾನಕ್ಕೆ ಹೇಮಾ ಮತ್ತು ಬ್ಯಾನರ್ಜಿ, ಮುಖ್ಯ ಕಾರ್ಯದರ್ಶಿ ಸ್ಥಾನಕ್ಕೆ ಜೀವಿತಾ ರಾಜಶೇಖರ್, ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಉತ್ತೇಜ್, ಅನಿತಾ ಚೌಧರಿ, ಖಜಾಂಚಿ ಸ್ಥಾನಕ್ಕೆ ನಾಗಿನೇಡು ಸ್ಪರ್ಧಿಸುತ್ತಿದ್ದಾರೆ. ಸಮಿತಿ ಸದಸ್ಯರ ಸ್ಥಾನಕ್ಕೆ, ಅನುಸೂಯಾ, ಅಜಯ್, ಭೂಪಾಲ್, ಬ್ರಹ್ಮಾಜಿ, ಈಟಿವಿ ಪ್ರಭಾಕರ್, ಗೋವಿಂದ ರಾವ್, ಖಾಯುಮ್, ಕೌಶಿಕ್, ಪ್ರಗತಿ, ರಮಣ ರೆಡ್ಡಿ, ಶ್ರೀಧರ್ ರಾವ್, ಶಿವಾ ರೆಡ್ಡಿ, ಸುಡಿಗಾಲಿ ಸುಧೀರ್, ಡಿ ಸುಬ್ಬರಾಜು, ಸುರೇಶ್ ಕೊಂಡೇಟಿ, ತನಿಶ್ ಮತ್ತು ತರ್ಜಾನ್ ಅವರುಗಳು ಪ್ರಕಾಶ್ ಸಿಂಡಿಕೇಟ್‌ನಿಂದ ಸ್ಪರ್ಧಿಸುತ್ತಿದ್ದಾರೆ. ಮಾ ಚುನಾವಣೆಯು ಅಕ್ಟೋಬರ್ ತಿಂಗಳಲ್ಲಿ ನಡೆಯಲಿದೆ.

    English summary
    Actor, producer Bandla Ganesh said he will not support Prakash Raj in MAA election because he gave chance to Jivitha Rajshekhar from his syndicate
    Monday, September 6, 2021, 18:51
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X