For Quick Alerts
  ALLOW NOTIFICATIONS  
  For Daily Alerts

  ರಾಜಮೌಳಿ ಅಡ್ಡದಲ್ಲಿ ಕಾಣಿಸಿಕೊಂಡ ಅಜಯ್ ದೇವಗನ್

  |

  ಬಾಲಿವುಡ್ ನಟ ಅಜಯ್ ದೇವಗನ್ ನಿರ್ದೇಶಕ ರಾಜಮೌಳಿ ಗ್ಯಾಂಗ್ ಸೇರಿಕೊಂಡಿದ್ದಾರೆ. 'ಆರ್ ಆರ್ ಆರ್' ಸಿನಿಮಾದ ವಿಶೇಷ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ.

  ಇಂದಿನಿಂದ ಅಜಯ್ ದೇವಗನ್ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ. ಇಲ್ಲಿಂದ ಅಜಯ್ ಭಾಗದ ದೃಶ್ಯಗಳ ಚಿತ್ರೀಕರಣ ನಡೆಯಲಿದೆ. ಅಜಯ್ ದೇವಗನ್ ರನ್ನು ನಿರ್ದೇಶಕ ರಾಜಮೌಳಿ ಟ್ವಿಟ್ಟರ್ ನಲ್ಲಿ ಸ್ವಾಗತ ಮಾಡಿದ್ದಾರೆ.

  ಆರ್.ಆರ್.ಆರ್ ಚಿತ್ರಕ್ಕೆ ಎಂಟ್ರಿ ಕೊಟ್ಟ ಬಾಲಿವುಡ್ ನ ಮತ್ತಿಬ್ಬರು.!ಆರ್.ಆರ್.ಆರ್ ಚಿತ್ರಕ್ಕೆ ಎಂಟ್ರಿ ಕೊಟ್ಟ ಬಾಲಿವುಡ್ ನ ಮತ್ತಿಬ್ಬರು.!

  ರಾಜಮೌಳಿ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಅಜಯ್ ದೇವಗನ್ ''ರಾಜಮೌಳಿ ಅವರ ಜೊತೆಗಿನ ಕೆಲಸ 2012 ರಿಂದ ಶುರು ಆಗಿದೆ. ಅನೇಕ ಪ್ರಾಜೆಕ್ಟ್ ಗಳಲ್ಲಿ ಅವರ ಜೊತೆಗೆ ಇದ್ದೇ. 'ಆರ್ ಆರ್ ಆರ್' ಚಿತ್ರದಲ್ಲಿ ಅವರ ಜೊತೆಗೆ ಕೆಲಸ ಮಾಡುವುದು ಹೆಮ್ಮೆಯ ವಿಷಯ.'' ಎಂದು ಬರೆದಿದ್ದಾರೆ.

  'ಆರ್ ಆರ್ ಆರ್' ಸಿನಿಮಾದ ಸ್ಟಾರ್ ಬಳಗ ದೊಡ್ಡದಾಗಿದೆ. ರಾಮ್ ಚರಣ್ ತೇಜ ಹಾಗೂ ಜೂನಿಯರ್ ಎನ್ ಟಿ ಆರ್ ಚಿತ್ರದ ನಾಯಕರಾಗಿದ್ದಾರೆ. ಅಜಯ್ ದೇವಗನ್ ಪಾತ್ರದ ಬಗ್ಗೆ ವಿವರವನ್ನು ಇನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ.

  ಆಲಿಯಾ ಭಟ್ ಸಿನಿಮಾದ ನಾಯಕಿಯಾಗಿದ್ದಾರೆ. ನಿರ್ದೇಶಕ, ನಟ ಸಮುದ್ರ ಖಣಿ ಒಂದು ಪಾತ್ರ ಮಾಡುತ್ತಿದ್ದಾರೆ. ರಾಹುಲ್ ರಾಮಕೃಷ್ಣ, ಹಾಲಿವುಡ್ ನಟ ರೇ ಸ್ಟಿವ್ ಸನ್, ಹಾಲಿವುಡ್ ನಟಿ ಅಲಿಸನ್‌ ಡೂಡಿ ಕಾಣಿಸಿಕೊಂಡಿದ್ದಾರೆ.

  ಅಂದು ಶ್ರೀದೇವಿ ಮಾಡಿದ ತಪ್ಪನ್ನೇ ಈಗ ಮಗಳು ಮಾಡಿದ್ಲು.!ಅಂದು ಶ್ರೀದೇವಿ ಮಾಡಿದ ತಪ್ಪನ್ನೇ ಈಗ ಮಗಳು ಮಾಡಿದ್ಲು.!

  ಇತ್ತೀಚಿಗಷ್ಟೆ ಅಜಯ್ ದೇವಗನ್ ನೂರು ಸಿನಿಮಾಗಳನ್ನು ಪೂರೈಸಿದ್ದಾರೆ. ಅವರ ತಾನಾಜಿ ಸಿನಿಮಾ ಒಳ್ಳೆಯ ಗಳಿಕೆ ಮಾಡಿ ಮುನ್ನುಗುತ್ತಿದೆ.

  English summary
  RRR Movie: Director Rajamouli welcomes Ajay Devgan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X