twitter
    For Quick Alerts
    ALLOW NOTIFICATIONS  
    For Daily Alerts

    ಗಾಡ್‌ಫಾದರ್ ಮೊದಲ ವಾರದ ರಿಪೋರ್ಟ್: ಸೇಫ್ ಆಗಲು ಇನ್ನೂ ಬೇಕು 40% ಕಲೆಕ್ಷನ್!

    |

    ಚಿರಂಜೀವಿ ಅಭಿನಯದ ಗಾಡ್‌ಫಾದರ್ ಚಿತ್ರ ಕಳೆದ ಬುಧವಾರದಂದು ( ಅಕ್ಟೋಬರ್ 5 ) ವಿಶ್ವದಾದ್ಯಂತ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗಿತ್ತು. ಇದೇ ವರ್ಷ ಆಚಾರ್ಯ ರೀತಿಯ ಅಟ್ಟರ್ ಫ್ಲಾಪ್ ಸಿನಿಮಾ ಮಾಡಿದ್ದ ಚಿರಂಜೀವಿ ಈ ಬಾರಿ ಮಲಯಾಳಂನ ಸೂಪರ್ ಹಿಟ್ ಚಿತ್ರ ಲೂಸಿಫರ್ ರಿಮೇಕ್ ಆದ ಗಾಡ್‌ಫಾದರ್‌ ಮೂಲಕ ಹಿಟ್ ನೀಡುವ ಉದ್ದೇಶದೊಂದಿಗೆ ವಿಜಯದಶಮಿಯಂದು ಚಿತ್ರಮಂದಿರಕ್ಕೆ ಕಾಲಿಟ್ಟರು.

    ನಿರೀಕ್ಷೆಯಂತೆ ಬಿಡುಗಡೆ ದಿನ ಗಾಡ್ ಫಾದರ್ ಸಿನಿಮಾ ಪ್ರೇಕ್ಷಕರಿಂದ ಒಳ್ಳೆಯ ವಿಮರ್ಶೆಯನ್ನೇ ಪಡೆದುಕೊಂಡಿತು. ಬುಕ್ ಮೈ ಶೋ, ಐಎಂಡಿಬಿ ಹಾಗೂ ಇತರೆ ಸಿನಿಮಾ ಪ್ಲಾಟ್ ಫಾರ್ಮ್ ಗಳಲ್ಲಿ ಗಾಡ್ ಫಾದರ್ ಚಿತ್ರಕ್ಕೆ ಒಳ್ಳೆಯ ರೇಟಿಂಗ್ ಸಿಕ್ಕಿತು. ಚಿತ್ರ ಮೊದಲನೇ ದಿನ ಒಳ್ಳೆಯ ಕಲೆಕ್ಷನ್ ಅನ್ನು ಕೂಡ ಮಾಡಿತು.

    Godfather first week collection report: Movie still needs 36 crores to enter safe zone

    ಆದರೆ ದಿನಕಳೆದಂತೆ ಗಾಡ್ ಫಾದರ್ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಕಳೆಗುಂದುತ್ತಾ ಬಂದಿದೆ. ತನ್ನ ಮೊದಲ ವಾರದ ಅಂತ್ಯಕ್ಕೆ ಗಾಡ್ ಫಾದರ್ ಸಿನಿಮಾ ವಿಶ್ವದಾದ್ಯಂತ 101 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ. ಇದರಲ್ಲಿ 54.22 ಕೋಟಿ ವರ್ಲ್ಡ್ ವೈಡ್ ಶೇರ್ ಕಲೆಕ್ಷನ್ ಆಗಿದೆ. ಇನ್ನು ಗಾಡ್ ಫಾದರ್ ಚಿತ್ರದ ಥಿಯೇಟ್ರಿಕಲ್ ಹಕ್ಕು 90.5 ಕೋಟಿ ರುಪಾಯಿಗಳಿಗೆ ಮಾರಾಟವಾಗಿದ್ದು, ಚಿತ್ರ ಥಿಯೇಟ್ರಿಕಲ್ ಹಕ್ಕಿನ ಮೊತ್ತವನ್ನು ಸಂಪೂರ್ಣವಾಗಿ ಸಂಪಾದಿಸಲು ಇನ್ನೂ 36.28 ಕೋಟಿ ರೂಪಾಯಿಗಳನ್ನು ಸಂಪಾದಿಸಬೇಕಿದೆ. ಅಂದರೆ ಥಿಯೇಟ್ರಿಕಲ್ ಹಕ್ಕಿನಲ್ಲಿ ಗಾಡ್ ಫಾದರ್ ಮೊದಲ ವಾರದ ಅಂತ್ಯಕ್ಕೆ 60% ಮೊತ್ತವನ್ನು ಮಾತ್ರ ಸಂಪಾದಿಸಿದ್ದು, 40% ಮೊತ್ತವನ್ನು ಇನ್ನೂ ಸಂಪಾದಿಸಬೇಕಿದೆ.

    ಸದ್ಯ ದಸರಾ ಹಬ್ಬದ ರಜೆಗಳು ಕೂಡ ಮುಕ್ತಾಯವಾಗಿದ್ದು, ಗಾಡ್ ಫಾದರ್ ಚಿತ್ರದ ಬುಕ್ಕಿಂಗ್ ಕೂಡ ನಿಧಾನಗತಿಗೆ ಬಂದು ತಲುಪಿದೆ. ಅದೂ ಅಲ್ಲದೆ ಇದೇ ವಾರ ಕಾಂತಾರ ತೆಲುಗು ಚಿತ್ರವೂ ಬಿಡುಗಡೆಯಾಗುತ್ತಿರುವುದರಿಂದ ಗಾಡ್ ಫಾದರ್ ಗಳಿಕೆ ಮತ್ತಷ್ಟು ಇಳಿಕೆ ಕಾಣುವುದು ಖಚಿತ ಎನ್ನಬಹುದು. ಗಾಡ್ ಫಾದರ್ ಈ ದೊಡ್ಡ ಸವಾಲನ್ನು ಎದುರಿಸಿ ತನ್ನ ಥಿಯೆಟ್ರಿಕಲ್ ಹಕ್ಕಿನ ಮೊತ್ತಕ್ಕೆ ಸರಿಸಮನಾದ ಶೇರ್ ಕಲೆಕ್ಷನ್ ಮಾಡಲಿದೆಯಾ ಎಂಬುದು ಇದೀಗ ದೊಡ್ಡ ಪ್ರಶ್ನೆಯಾಗಿದೆ.

    English summary
    Godfather first week collection report: Movie still needs 36 crores to enter safe zone . Read on
    Wednesday, October 12, 2022, 20:11
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X