For Quick Alerts
  ALLOW NOTIFICATIONS  
  For Daily Alerts

  'ಆಚಾರ್ಯ' ಸೋಲಿಗೆ ಅದೇ ಕಾರಣ: ಕೊನೆಗೂ ಮೌನ ಮುರಿದ ರಾಮ್‌ಚರಣ್!

  |

  'RRR' ಸೂಪರ್ ಸಕ್ಸಸ್ ಬೆನ್ನಲ್ಲೇ ತಂದೆ ಚಿರಂಜೀತಿ ಜೊತೆ ರಾಮ್ ಚರಣ್ ನಟಿಸಿದ 'ಆಚಾರ್ಯ' ಅಟ್ಟರ್ ಫ್ಲಾಪ್ ಆಗಿತ್ತು. ವಿತರಕರು, ಪ್ರದರ್ಶಕರು ನಷ್ಟ ಅನುಭವಿಸಿ ಭಾರೀ ರಾದ್ಧಾಂತವೇ ಆಗಿತ್ತು. ಕೆಲ ದಿನಗಳ ಹಿಂದೆ ನಟ ಚಿರಂಜೀವಿ ಈ ಬಗ್ಗೆ ಪ್ರತಿಕ್ರಿಯಿಸಿದ್ದರು. ಪರೋಕ್ಷವಾಗಿ ನಿರ್ದೇಶಕ ಕೊರಟಾಲ ಶಿವ ಮೇಲೆ ಆರೋಪ ಮಾಡಿದ್ದರು. ಇದೀಗ ರಾಮ್ ಚರಣ್ ಮಾತನಾಡಿದ್ದಾರೆ.

  ಮೆಗಾಸ್ಟಾರ್ ಚಿರಂಜೀವಿ ಸಿನಿಮಾಗಳಿಗೆ ಇರುವ ಕ್ರೇಜ್ ಬಗ್ಗೆ ಹೊಸದಾಗಿ ಬಿಡಿಸಿ ಹೇಳುವುದು ಬೇಕಾಗಿಲ್ಲ. ಅಂತಾದ್ರಲ್ಲಿ ಚಿರು ಜೊತೆ ಪುತ್ರ ಚರಣ್ ಕೂಡ ನಟಿಸಿದರೆ ಆ ಬಝ್ ಹೇಗಿರುತ್ತೆ ಹೇಳಿ. ಕೊರಟಾಲ ಶಿವ ನಿರ್ದೇಶನದ ಆಕ್ಷನ್ ಎಂಟರ್‌ಟೈನರ್ 'ಆಚಾರ್ಯ' ಅಂತಾದ್ದೇ ಹೈಪ್ ಕ್ರಿಯೇಟ್ ಮಾಡಿತ್ತು. ಆದರೆ ಮೊದಲ ಶೋನಿಂದಲೇ ಚಿತ್ರದ ಬಗ್ಗೆ ನೆಗೆಟಿವ್ ಟಾಕ್ ಕೇಳಿಬಂದಿತ್ತು. ಅಲ್ಲಿಂದ ಮುಂದೆ ಸಿನಿಮಾ ಮೇಲೇಳಲೇ ಇಲ್ಲ. ತಂದೆ ಮಕ್ಕಳಿಬ್ಬರು ಒಟ್ಟಿಗೆ ನಟಿಸುವುದು ಮಾತ್ರವಲ್ಲದೇ ಸ್ವತಃ ರಾಮ್‌ಚರಣ್ ತೇಜ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಆದರೆ ಸಿನಿಮಾ ಹೀನಾಯವಾಗಿ ಸೋಲುಂಡಿತ್ತು.

  ಬಹಳ ದಿನಗಳ ಕಾಲ ಚಿತ್ರತಂಡದ ಯಾರೊಬ್ಬರು ಸಿನಿಮಾ ಸೋಲಿನ ಬಗ್ಗೆ ಎಲ್ಲೂ ಮಾತನಾಡಿಲಿಲ್ಲ. ಇತ್ತೀಚೆಗೆಷ್ಟೆ ಚಿರು ಕೂಡ ಮೌನ ಮುರಿದಿದ್ದರು. ಎಲ್ಲಾ ಸಿನಿಮಾಗಳು ಗೆಲ್ಲಬೇಕು ಎಂದರೆ ಸಾಧ್ಯವಿಲ್ಲ. ಕೆಲವೊಮ್ಮೆ ಸೋಲು ಎದುರಾಗುತ್ತದೆ ಎಂದಿದ್ದಾರೆ. ಕಂಟೆಂಟ್ ಚೆನ್ನಾಗಿದ್ದರೆ ಮಾತ್ರ ಸಿನಿಮಾ ಗೆಲ್ಲುತ್ತದೆ. ದೊಡ್ಡ ನಟರು ಇದ್ದ ಮಾತ್ರಕ್ಕೆ ಸಿನಿಮಾ ಗೆಲ್ಲುವುದಿಲ್ಲ ಎಂದಿದ್ದರು. ಇದೇ ಮಾತನ್ನು ಪುತ್ರ ರಾಮ್‌ ಚರಣ್ ತೇಜಾ ಕೂಡ ಪುನರುಚ್ಚರಿಸಿದ್ದಾರೆ. ಹಿಂದೂಸ್ತಾನ್ ಟೈಮ್ಸ್ ಲೀಡರ್ ಶಿಪ್ ಸಮ್ಮಿಟ್‌ನಲ್ಲಿ ಭಾಗವಹಿಸಿದ್ದ ಚರಣ್ 'ಆಚಾರ್ಯ' ಸಿನಿಮಾ ಹೆಸರು ಹೇಳದೇ ಸೋಲಿನ ಬಗ್ಗೆ ಮಾತನಾಡಿದ್ದಾರೆ.

  "RRR' ಸೂಪರ್ ಸಕ್ಸಸ್ ನಂತರ ನಾನು ನಟಿಸಿದ ಒಂದು ಚಿಕ್ಕ ಸಿನಿಮಾ ರಿಲೀಸ್ ಆಗಿತ್ತು. ಅದರಲ್ಲಿ ನಾನು ಗೆಸ್ಟ್ ರೋಲ್‌ ರೀತಿಯಲ್ಲಿ ನಟಿಸಿದ್ದೆ. ಆದರೆ ಯಾಕೋ ಜನ ಸಿನಿಮಾ ನೋಡಲು ಬರಲೇಯಿಲ್ಲ. ಕಂಟೆಂಟ್ ಚೆನ್ನಾಗಿದ್ದರೆ ಮಾತ್ರ ಪ್ರೇಕ್ಷಕರು ಸಿನಿಮಾಗಳು ನೋಡುತ್ತಾರೆ. ಚಿತ್ರಮಂದಿರಕ್ಕೆ ಬರುತ್ತಾರೆ ಎನ್ನುವ ಮಾತು ಮತ್ತೊಮ್ಮೆ ಸಾಬೀತಾಗಿತ್ತು. ವಿಷಯ ಇಲ್ಲದೇ ಯಾರೇ ನಟಿಸಿದರೂ ಜನ ನೋಡುವುದಿಲ್ಲ" ಎಂದಿದ್ದಾರೆ. ಇನ್ನು 'RRR' ಚಿತ್ರದ ಎಂಟ್ರಿ ಸೀನ್ ಬಗ್ಗೆಯೂ ಮಾತನಾಡಿರುವ ಚರಣ್ "ಆ ದೃಶ್ಯವನ್ನು 35 ದಿನ ಶೂಟ್ ಮಾಡಿದ್ವಿ. ನನಗೆ ಚಿಕ್ಕಂದಿನಿಂದಲೂ ಡಸ್ಟ್ ಅಲರ್ಜಿ. ಅದಕ್ಕಾಗಿ ಸರ್ಜರಿ ಆಗಿತ್ತು. ಆದರೂ ಸಾವಿರಾರು ಜನರ ಜೊತೆ ಅಷ್ಟು ದಿನಗಳ ಕಾಲ ಆ ಧೂಳಿನಲ್ಲಿ ಕಷ್ಟಪಟ್ಟು ಕೆಲಸ ಮಾಡಿದೆ. ಆ ಸೀನ್ ಕ್ರೆಡಿಟ್ ರಾಜಮೌಳಿಗೆ ಸಲ್ಲಬೇಕು" ಎಂದಿದ್ದಾರೆ.

  good-content-will-always-drive-ram-charan-breaks-silence-on-failure-of-acharya

  ಶಂಕರ್ ನಿರ್ದೇಶನದ ಇನ್ನು ಹೆಸರಿಡದ ಚಿತ್ರದಲ್ಲಿ ರಾಮ್ ಚರಣ್ ತೇಜಾ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಕಿಯಾದ ಅದ್ವಾನಿ ಚಿತ್ರದಲ್ಲಿ ನಾಯಕಿಯಾಗಿ ನಟಿಸ್ತಿದ್ದು, ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣವಾಗ್ತಿದೆ. ಶೀಘ್ರದಲ್ಲೇ ಸಿನಿಮಾ ಚಿತ್ರೀಕರಣಕ್ಕಾಗಿ ಜೋಡಿ ನ್ಯೂಜಿಲ್ಯಾಂಡ್‌ಗೆ ಹೊರಡಲಿದೆ.

  English summary
  Ram charan Breaks Silence On Failure Of Acharya Good Content Will Always Drive. Action Triller Film Acharya written and directed by Koratala Siva. Produced by Konidela Production Company and Matinee Entertainment. Know More.
  Monday, November 14, 2022, 5:45
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X