For Quick Alerts
  ALLOW NOTIFICATIONS  
  For Daily Alerts

  25 ವರ್ಷದ ದಾಂಪತ್ಯ ಮುರಿದುಕೊಂಡ್ರಾ ನಟ ಶ್ರೀಕಾಂತ್? ವಿಚ್ಚೇದನ ಬಗ್ಗೆ ನಟನ ಪ್ರತಿಕ್ರಿಯೆ ಏನು?

  |

  ಚಿತ್ರರಂಗದಲ್ಲಿ ವಿಚ್ಛೇದನ ಪ್ರಕರಣಗಳು ಹೆಚ್ಚಾಗುತ್ತಿದೆ. ಸಮಂತಾ-ನಾಗಚೈತನ್ಯ, ಧನುಷ್ ಹಾಗೂ ಐಶ್ವರ್ಯಾ ರಜನಿಕಾಂತ್ ಬಳಿಕ ದಕ್ಷಿಣ ಭಾರತದಲ್ಲಿ ಮತ್ತೊಂದು ತಾರಾ ಜೋಡಿ ಬೇರೆಯಾಗಲು ನಿರ್ಧರಿಸಿದೆ ಅನ್ನೋ ಸುದ್ದಿ ಹರಿದಾಡುತ್ತಿದೆ.

  ಕಳೆದ ಕೆಲವು ದಿನಗಳಿಂದ ತೆಲುಗು ಹಾಗೂ ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಶ್ರೀಕಾಂತ್ ವೈವಾಹಿಕ ಜೀವನ ಹಳಿತಪ್ಪಿದೆ ಅನ್ನೋ ಮಾತು ಕೇಳಿ ಬರುತ್ತಿದೆ. 25 ವರ್ಷಗಳ ದಾಂಪತ್ಯ ಜೀವಕ್ಕೆ ತಿಲಾಂಜಲಿ ನೀಡುತ್ತಿದ್ದಾರೆ ಅನ್ನೋ ಮಾತು ಕೇಳಿಬರುತ್ತಲೇ ಇತ್ತು.

  ಪವನ್ ಕಲ್ಯಾಣ್ ಎಂಥಹಾ ವ್ಯಕ್ತಿ: ಎರಡನೇ ಪತ್ನಿ ಬಿಚ್ಚಿಟ್ಟ ಮಾಜಿ ಪತಿಯ ವ್ಯಕ್ತಿತ್ವಪವನ್ ಕಲ್ಯಾಣ್ ಎಂಥಹಾ ವ್ಯಕ್ತಿ: ಎರಡನೇ ಪತ್ನಿ ಬಿಚ್ಚಿಟ್ಟ ಮಾಜಿ ಪತಿಯ ವ್ಯಕ್ತಿತ್ವ

  ಆದ್ರೀಗ ದಕ್ಷಿಣ ಭಾರತದ ಹಿರಿಯ ನಟ ಶ್ರೀಕಾಂತ್ ಡಿವೋರ್ಸ್ ಸುದ್ದಿ ವೈರಲ್ ಆಗುತ್ತಿದ್ದಂತೆ ಪ್ರತಿಕ್ರಿಯೆ ನೀಡಿದ್ದಾರೆ. ಸದ್ಯ ಶ್ರೀಕಾಂತ್ ಹಾಗೂ ಪತ್ನಿ ಊಹಾ ಅವರ ವಿಚ್ಛೇದನದ ಸುದ್ದಿ ಟಾಲಿವುಡ್‌ನಲ್ಲಿ ಬೇಜಾನ್ ಸದ್ದು ಮಾಡುತ್ತಿದೆ. ಅಷ್ಟಕ್ಕೂ ಡಿವೋರ್ಸ್ ಬಗ್ಗೆ ಶ್ರೀಕಾಂತ್ ನೀಡಿದ ರಿಯಾಕ್ಷನ್‌ನಲ್ಲಿ ಏನಿದೆ ಎಂದು ತಿಳಿಯಲು ಮುಂದೆ ಓದಿ.

  ಶ್ರೀಕಾಂತ್-ಊಹಾ ಪತ್ನಿ ವಿಚ್ಛೇದನ?

  ಶ್ರೀಕಾಂತ್-ಊಹಾ ಪತ್ನಿ ವಿಚ್ಛೇದನ?

  ಒಂದು ಕಾಲದಲ್ಲಿ ತೆಲುಗಿನಲ್ಲಿ ಸೂಪರ್‌ ಹಿಟ್ ಸಿನಿಮಾಗಳನ್ನು ನೀಡಿದ ನಟ ಶ್ರೀಕಾಂತ್. ಕರ್ನಾಟಕದ ಗಂಗಾವತಿಯಲ್ಲಿ ಶ್ರೀಕಾಂತ್ ಹುಟ್ಟೂರು. ಹೀಗಾಗಿ ತೆಲುಗಿನ ಹಿರಿಯ ನಟನಿಗೆ ಕನ್ನಡದ ನಂಟಿದೆ. ಅದೇ ಕಾರಣಕ್ಕೆ ಕನ್ನಡ ಹಲವು ಸಿನಿಮಾಗಳಲ್ಲೂ ನಟಿಸಿದ್ದಾರೆ. 54 ವರ್ಷ ಶ್ರೀಕಾಂತ್ ವೈವಾಹಿಕ ಜೀವನಕ್ಕೆ ಕಾಲಿಟ್ಟು ಸುಮಾರು 25 ವರ್ಷಗಳಾಗಿವೆ. ಈ ಸಂದರ್ಭದಲ್ಲಿ ಪತ್ನಿ ಊಹಾಗೆ ಡಿವೋರ್ಸ್ ನೀಡಲು ಮುಂದಾಗಿದ್ದಾರೆ ಅನ್ನೋ ಮಾತು ಎಲ್ಲಾ ಕಡೆ ಹರಿದಾಡುತ್ತಿದೆ.

  ಹಿರಿಯ ನಟ ಶ್ರೀಕಾಂತ್‌ಗೆ ಸಂಕಷ್ಟ

  ಹಿರಿಯ ನಟ ಶ್ರೀಕಾಂತ್‌ಗೆ ಸಂಕಷ್ಟ

  ತೆಲುಗಿನ ಸ್ಟಾರ್ ನಟ ಶ್ರೀಕಾಂತ್ ವಿಚ್ಛೇದನ ಸುದ್ದಿ ವೈರಲ್ ಆಗುತ್ತಿದ್ದಂತೆ ಕಾರಣವನ್ನು ಕೆದುಕಲು ಆರಂಭಿಸಿದ್ದಾರೆ. ತೆಲುಗು ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ, ಶ್ರೀಕಾಂತ್ ಸದ್ಯ ಆರ್ಥಿಕವಾಗಿ ಹಿನ್ನೆಡೆ ಅನುಭವಿಸಿದ್ದಾರೆ. ಇದೇ ವೇಳೆ ಪತ್ನಿಊಹಾ ಜೊತೆ ವೈಮನಸ್ಸು ಹೊಂದಿದ್ದಾರೆ. ಈ ಕಾರಣಕ್ಕೆ ಇಬ್ಬರೂ ಬೇರೆಯಾಗಲು ನಿರ್ಧರಿಸಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ. 1997ರಲ್ಲಿ ಶ್ರೀಕಾಂತ್ ನಟಿ ಊಹಾರನ್ನು ಮದುವೆಯಾಗಿದ್ದರು. ಅಲ್ಲಿಂದ ಈ ಜೋಡಿ ಅನ್ಯೋನ್ಯವಾಗಿಯೇ ಸಂಸಾರ ಮಾಡಿಕೊಂಡು ಬಂದಿದೆ. ಈ ದಂಪತಿಗೆ ಇಬ್ಬರು ಗಂಡು ಮಕ್ಕಳು ಹಾಗೂ ಇಬ್ಬ ಹೆಣ್ಣು ಮಗಳಿದ್ದಾರೆ. ಇತ್ತೀಚೆಗೆ ಪುತ್ರ ರೋಹನ್‌ರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದರು. ಆದರೆ, ಆ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆಲ್ಲಲ್ಲ. ಇಷ್ಟೆ ನಡೆಯುತ್ತಿರುವಾಗಲೇ ದಿಢೀರನೆ ಶ್ರೀಕಾಂತ್ ಡಿವೋರ್ಸ್ ಸುದ್ದಿ ಸಿನಿಪ್ರಿಯರಿಗೆ ನಿದ್ದೆ ಕೆಡಿಸಿದೆ.

  ಡಿವೋರ್ಸ್ ಬಗ್ಗೆ ಶ್ರೀಕಾಂತ್ ಪ್ರತಿಕ್ರಿಯೆ ಏನು?

  ಡಿವೋರ್ಸ್ ಬಗ್ಗೆ ಶ್ರೀಕಾಂತ್ ಪ್ರತಿಕ್ರಿಯೆ ಏನು?

  ಶ್ರೀಕಾಂತ್ ವಿಚ್ಚೇದನದ ಸುದ್ದಿ ಟಾಲಿವುಡ್‌ನಲ್ಲಿ ದೊಡ್ಡ ಸಂಚಲವನ್ನೇ ಸೃಷ್ಟಿಸಿದೆ. ಈ ಸಂಬಂಧ ಶ್ರೀಕಾಂತ್ ತೆಲುಗಿನ ಹಿರಿಯ ಪತ್ರಕರ್ತರೊಬ್ಬರಿಗೆ ಪ್ರತಿಕ್ರಿಯೆ ನೀಡಿದ್ದು, " ನಾನು ನನ್ನ ಪತ್ನಿ ಊಹಾ ಜೊತೆ ಸಂತೋಷದಿಂದ ತಮಿಳುನಾಡಿನ ಪ್ರವಾಸದಲ್ಲಿ ಇದ್ದೇನೆ. ಈ ಪ್ರವಾಸ ಮುಗಿಯುತ್ತಿದ್ದಂತೆ ಸಿನಿಮಾ ಶೂಟಿಂಗ್‌ಗಾಗಿ ಕೇರಳಕ್ಕೆ ತೆರಳಲಿದ್ದೇನೆ." ಎಂದಿದ್ದಾರೆಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ.

  ಕನ್ನಡ ಸಿನಿಮಾಗಳಲ್ಲೂ ಶ್ರೀಕಾಂತ್ ನಟನೆ

  ಕನ್ನಡ ಸಿನಿಮಾಗಳಲ್ಲೂ ಶ್ರೀಕಾಂತ್ ನಟನೆ

  ಶ್ರೀಕಾಂತ್ ಬಹುತೇಕ ತೆಲುಗು ಸಿನಿಮಾಗಳಲ್ಲಿಯೇ ನಟಿಸಿದ್ದರೂ, ಆಗಾಗ ಸ್ಯಾಂಡಲ್‌ವುಡ್‌ಗೆ ಬಂದು ಹೋಗುತ್ತಿದ್ದಾರೆ. 2017ರಲ್ಲಿ ತೆರೆಕಂಡಿದ್ದ 'ದಿ ವಿಲನ್' ಸಿನಿಮಾದಲ್ಲಿ ನಟಿಸಿದ್ದರು. ಆ ಬಳಿಕ ಇದೇ ವರ್ಷ ತೆರೆಕಂಡ ಪುನೀತ್ ರಾಜ್‌ಕುಮಾರ್ ನಟಿಸಿದ 'ಜೇಮ್ಸ್' ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು. ಜೊತೆ ತೆಲುಗು ಹಾಗೂ ತಮಿಳಿನಲ್ಲಿ ಸೆಟ್ಟೇರಿರುವ ದಳಪತಿ ವಿಜಯ್ ಅಭಿನಯದ 'ವಾರಿಸು' ಸಿನಿಮಾದಲ್ಲಿಯೂ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಏನೇನು ಬಿಗ್ ಪ್ರಾಜೆಕ್ಟ್ ಕೈಯಲ್ಲಿ ಇದೆ ಅನ್ನುವಾಗಲೇ ವಿಚ್ಛೇದನದ ಸುದ್ದಿ ಹರಿದಾಡುತ್ತಿದೆ.

  English summary
  Here Is the Senior Actor Srikanth Reaction About His Viral Divorce News, Know More.
  Tuesday, November 22, 2022, 16:34
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X