For Quick Alerts
  ALLOW NOTIFICATIONS  
  For Daily Alerts

  ಇನ್ನು ಮುಂದೆ ಅಂಥಹಾ ಪಾತ್ರಗಳಲ್ಲಿ ನಟಿಸುವುದಿಲ್ಲ ಎಂದ ನಟಿ

  |

  90 ಹಾಗೂ ಅದರ ಹಿಂದಿನ ದಶಕದ ನಾಯಕಿಯರು ತಮ್ಮ ಸೌಂದರ್ಯ ಹಾಗೂ ಪ್ರತಿಭೆಯಿಂದ ಸಿನಿಮಾ ಅಭಿಮಾನಿಗಳ ಮೇಲೆ ಉತ್ತಮ ಪ್ರಭಾವ ಬೀರಿದ್ದರು.

  ಇನ್ಮುಂದೆ ಸೇನೆಯ ಬಗ್ಗೆ ಸಿನಿಮಾ ಮಾಡೋದು ಅಷ್ಟು ಸುಲಭ ಇಲ್ಲ | Filmibeat Kannada

  ಅದರಲ್ಲಿಯೂ ದಕ್ಷಿಣ ಭಾರತದ ಸಿನಿಮಾಗಳ ನಾಯಕಿಯರು ಗ್ಲಾಮರ್‌ಗಿಂತಲೂ ಹೆಚ್ಚಾಗಿ ಸೌಂದರ್ಯ ಹಾಗೂ ಪ್ರತಿಭೆಯೇ ಗಮನ ಸೆಳೆದವರು.

  ಶ್ರೀದೇವಿ, ಸೌಂದರ್ಯ, ಸುಹಾಸಿನಿ, ಕನ್ನಡದ ಪ್ರೇಮಾ ಹೀಗೆ ಹತ್ತಾರು ಹೆಸರುಗಳನ್ನು ಹೆಸರಿಸಬಹುದು. ಇವರಲ್ಲಿ ಒಬ್ಬರು ನಟಿ ರಾಶಿ. ಸುಮಾರು 80 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ರಾಶಿ ಉಚ್ರಾಯ ಕಾಲದಲ್ಲಿದ್ದಾಗ ಬಹುತೇಕ ಸಾಂಸಾರಿಕ ಸಿನಿಮಾಗಳನ್ನೇ ಮಾಡಿದವರು.

  ಕನ್ನಡದಲ್ಲಿಯೂ ನಟಿಸಿರುವ ನಟಿ ರಾಶಿ

  ಕನ್ನಡದಲ್ಲಿಯೂ ನಟಿಸಿರುವ ನಟಿ ರಾಶಿ

  ಕನ್ನಡದಲ್ಲಿಯೂ ಕೆಲವು ಸಿನಿಮಾಗಳಲ್ಲಿ ನಟಿಸಿರುವ ರಾಶಿ, ಆಗೊಮ್ಮೆ ಈಗೊಮ್ಮೆ ಕೆಲವು ಗ್ಲಾಮರ್ ತುಂಬಿದ ಪಾತ್ರಗಳನ್ನು ಸಹ ಮಾಡಿದರು. ಆದರೆ ಅವರ ಗ್ಲಾಮರ್ ಅವತಾರ ಅವರ ಕೆಲವು ಅಭಿಮಾನಿಗಳಿಗೆ ಇಷ್ಟವಾಗಲಿಲ್ಲ.

  ಅಭಿಮಾನಿಯೊಬ್ಬನ ಮನವಿ

  ಅಭಿಮಾನಿಯೊಬ್ಬನ ಮನವಿ

  ಇತ್ತೀಚೆಗೆ ರಾಶಿ, ತಮ್ಮ ಅಭಿಮಾನಿಗಳೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಸಂವಾದ ಮಾಡಿದ್ದು, ಅದರಲ್ಲಿ ಒಬ್ಬ ಅಭಿಮಾನಿ, ರಾಶಿ 'ನಿಜಂ' ಸಿನಿಮಾದಲ್ಲಿ ನಿರ್ವಹಿಸಿದ್ದ ಗ್ಲಾಮರಸ್ ಪಾತ್ರವನ್ನು ಹೆಸರಿಸಿ, 'ಆ ರೀತಿಯ ಪಾತ್ರ ಮಾಡಬಾರದಿತ್ತು' ಎಂದಿದ್ದ.

  'ಆ ರೀತಿಯ ಪಾತ್ರಗಳನ್ನು ನಿರ್ವಹಿಸುವುದಿಲ್ಲ'

  'ಆ ರೀತಿಯ ಪಾತ್ರಗಳನ್ನು ನಿರ್ವಹಿಸುವುದಿಲ್ಲ'

  ಇದಕ್ಕೆ ಸ್ಪಂದಿಸಿದ ರಾಶಿ, 'ಆ ರೀತಿಯ ಪಾತ್ರಗಳನ್ನು ನಿರ್ವಹಿಸುವುದು ನನಗೂ ವೈಯಕ್ತಿಕವಾಗಿ ಇಷ್ಟವಾಗುವುದಿಲ್ಲ. ಆದರೆ ಪರಿಸ್ಥಿತಿ ಅನುಸಾರ ಆ ಪಾತ್ರ ಮಾಡಬೇಕಾಯಿತು' ಎಂದಿದ್ದಾರೆ. ಮುಂದುವರೆದು ಇನ್ನುಮುಂದೆ ಅಂಥಹಾ ಪಾತ್ರಗಳಲ್ಲಿ ನಟಿಸುವುದಿಲ್ಲ ಎಂದು ಸಹ

  ಯೂಟ್ಯೂಬ್ ಚಾನೆಲ್ ತೆರೆದಿರುವ ರಾಶಿ

  ಯೂಟ್ಯೂಬ್ ಚಾನೆಲ್ ತೆರೆದಿರುವ ರಾಶಿ

  1988 ರಲ್ಲಿ ಮೊದಲ ಸಿನಿಮಾದಲ್ಲಿ ನಟಿಸಿದ್ದ ರಾಶಿ 2018 ರಿಂದ ಸಿನಿಮಾ ರಂಗಕ್ಕೆ ದೂರವಾಗಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಅವರು, ಯೂಟ್ಯೂಬ್ ಚಾನೆಲ್ ಒಂದನ್ನು ತೆರೆದಿದ್ದಾರೆ. ಅಭಿಮಾನಿಗಳೊಟ್ಟಿಗೆ ಸಂವಾದ ಸಹ ನಡೆಸುತ್ತಿರುತ್ತಾರೆ.

  English summary
  Actress Raashi said she will not act in glamours characters in future. She acted in several glamours characters.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X