Just In
Don't Miss!
- Education
BEL Recruitment 2021: 19 ಪ್ರಾಜೆಕ್ಟ್ ಇಂಜಿನಿಯರ್-I ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
ಕ್ರ್ಯಾಶ್ ಟೆಸ್ಟಿಂಗ್ನಲ್ಲಿ ಅತ್ಯುತ್ತಮ ರೇಟಿಂಗ್ಸ್ ಪಡೆದುಕೊಂಡ ನಿಸ್ಸಾನ್ ಮ್ಯಾಗ್ನೈಟ್
- News
ಅವಳಿ ನಗರವಾಗಿ ಚನ್ನಪಟ್ಟಣ-ರಾಮನಗರ ಅಭಿವೃದ್ಧಿ; ಎಚ್ಡಿಕೆ
- Sports
ಬಾಂಗ್ಲಾ vs ವಿಂಡೀಸ್: ಒಂದೇ ಪಂದ್ಯದಲ್ಲಿ ವಿಂಡೀಸ್ ತಂಡಕ್ಕೆ 6 ಆಟಗಾರರು ಪದಾರ್ಪಣೆ
- Lifestyle
ಗರ್ಭಾವಸ್ಥೆಯಲ್ಲಿ ಮಧುಮೇಹ: ಪ್ರಾರಂಭದಲ್ಲಿಯೇ ವ್ಯಾಯಾಮದಿಂದ ತಡೆಗಟ್ಟಲು ಸಾಧ್ಯ
- Finance
ಅಂತರರಾಷ್ಟ್ರೀಯ ವಹಿವಾಟಿಗೆ ಎಸ್ ಬಿಐ ಖಾತೆದಾರರು ಹೀಗೆ ಮಾಡಿ...
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮದುವೆ ಬಳಿಕ ಹೊಸ ಸಿನಿಮಾಗೆ ಸಹಿ ಮಾಡಿದ ನಟಿ ಕಾಜಲ್ ಅಗರ್ವಾಲ್
ದಕ್ಷಿಣ ಭಾರತದ ಖ್ಯಾತ ನಟಿ ಕಾಜಲ್ ಅಗರ್ವಾಲ್ ಇತ್ತೀಚಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹುಕಾಲದ ಗೆಳೆಯ ಗೌತಮ್ ಕಿಚಲು ಜೊತೆ ಕಾಜಲ್ ಸರಳವಾಗಿ ಹಸೆಮಣೆ ಏರಿದ್ದಾರೆ. ಕಾಜಲ್ ಸದ್ಯ ಪತಿ ಗೌತಮ್ ಜೊತೆ ಮುಂಬೈನಲ್ಲಿ ನೆಲೆಸಿದ್ದಾರೆ.
ಮದುವೆ ಬಳಿಕ ಕಾಜಲ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ದಾಂಪತ್ಯ ಜೀವನವನ್ನು ಎಂಜಾಯ್ ಮಾಡುತ್ತಿರುವ ಕಾಜಲ್ ಮದುವೆ ಬಳಿಕ ಇನ್ನು ಶೂಟಿಂಗ್ ಗೆ ಹೊರಟಿಲ್ಲ. ಇತ್ತೀಚಿಗಷ್ಟೆ ಮಾಲ್ಡೀವ್ಸ್ ಹನಿಮೂನ್ ಮುಗಿಸಿ ವಾಪಸ್ ಆಗಿರುವ ಕಾಜಲ್ ಇದೀಗ ಹೊಸ ಸಿನಿಮಾಗೆ ಸಹಿ ಮಾಡಿದ್ದಾರೆ.
'ಆಚಾರ್ಯ'ಗಾಗಿ ಹನಿಮೂನ್ ಮುಗಿಸಿ ಭಾರತಕ್ಕೆ ಬಂದ ನಟಿ ಕಾಜಲ್ ಅಗರ್ವಾಲ್
ಮದುವೆಯಾಗಿ ಒಂದು ತಿಂಗಳ ಬಳಿಕ ಕಾಜಲ್ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಮದುವೆ ಬಳಿಕ ಮಗದೀರ ಸುಂದರಿ ಮೊದಲ ಸಿನಿಮಾಗೆ ಸಹಿ ಮಾಡುವ ಮೂಲಕ ಮತ್ತೆ ಸಿನಿಮಾಗಳಿಗೆ ಮರಳಿದ್ದಾರೆ. ತಮಿಳು ಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿರುವ ಕಾಜಲ್ ಹಾರರ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ.
ವಿಶೇಷ ಎಂದರೆ ಈ ಸಿನಿಮಾ ಮಲ್ಟಿ ಸ್ಟಾರರ್ ಸಿನಿಮಾ ವಾಗಿದ್ದು, ಮೂವರು ನಾಯಕಿಯರು ಇರಲಿದ್ದಾರೆ. ಇನ್ನು ಹೆಸರಿಡದ ಚಿತ್ರಕ್ಕೆ ಕಾಲಿವುಡ್ ನಿರ್ದೇಶಕ ಡಿಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸದ್ಯ ಚಿತ್ರದ ಪ್ರಿ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಮುಂದಿನ ವರ್ಷ ಸಿನಿಮಾ ಚಿತ್ರೀಕರಣ ನಡೆಯಲಿದೆ. ಕಾಜಲ್ ಅಗರ್ವಾಲ್ ಸದ್ಯ ಕಮಲ್ ಹಾಸನ್ ಅಭಿನಯದ ಇಂಡಿಯನ್ -2, ಮುಂಬೈ ಸಗಾ ಮತ್ತು ಚಿರಂಜೀವಿ ಜೊತೆ ಆಚಾರ್ಯ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಇನ್ನೇನು ಆಚಾರ್ಯ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗುತ್ತಿದ್ದು, ಸದ್ಯದಲ್ಲೇ ಕಾಜಲ್ ಆಚಾರ್ಯ ಸೆಟ್ ಸೇರಿಕೊಳ್ಳಲಿದ್ದಾರೆ. ಸಿನಿಮಾಗಳ ಜೊತೆಗೆ ಕಾಜಲ್ ಒಂದು ವೆಬ್ ಸೀರಿಸ್ ನಲ್ಲಿ ಬ್ಯುಸಿಯಾಗಿದ್ದಾರೆ. ಮದುವೆ ಬಳಿಕವೂ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ಕಾಜಲ್ ಮೊದಲು ಯಾವ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರ್ತಾರೆ ಎಂದು ಕಾದು ನೋಡಬೇಕು.