For Quick Alerts
  ALLOW NOTIFICATIONS  
  For Daily Alerts

  ನಟನೆಯಿಂದ ದೂರ ಸರಿಯುತ್ತಾರಾ ಕಾಜಲ್ ಅಗರ್ವಾಲ್? 'ಮಗಧೀರ' ಸುಂದರಿ ಹೇಳಿದ್ದೇನು?

  |

  ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟಿ ಕಾಜಲ್ ಅಗರ್ವಾಲ್ ಸದ್ಯ ಸಾಂಸಾರಿಕ ಜೀವನದಲ್ಲಿ ಬ್ಯುಸಿಯಾಗಿದ್ದಾರೆ. ಮದುವೆ ಬಳಿಕ ಸಿನಿಮಾರಂಗದಿಂದ ದೂರ ಸರಿಯುತ್ತಾರಾ ಎನ್ನುವ ಪ್ರಶ್ನೆ ನಟಿಮಣಿಯರಿಗೆ ಎದುರಾಗುತ್ತಲೇ ಇರುತ್ತೆ. ಕಾಜಲ್ ಮದುವೆ ನಂತರವೂ ಸಿನಿಮಾದಲ್ಲಿ ನಟಿಸುವುದಾಗಿ ಹೇಳಿದ್ದರು. ಆದರೀಗ ಬಣ್ಣದ ಲೋಕದಿಂದ ದೂರ ಸರಿಯುತ್ತಾರಾ ಎನ್ನುವ ಅನುಮಾನ ಅಭಿಮಾನಿಗಳಲ್ಲಿ ಕಾಡುತ್ತಿದೆ.

  ತೆಲುಗು, ತಮಿಳು ಮತ್ತು ಹಿಂದಿ ಸಿನಿಮಾರಂಗದಲ್ಲಿ ಮಿಂಚಿರುವ ಕಾಜಲ್ ಗೆ ಟಾಲಿವುಡ್ ಚಿತ್ರರಂಗ ದೊಡ್ಡ ಮಟ್ಟದ ಸಕ್ಸಸ್ ತಂದುಕೊಟ್ಟಿತ್ತು. ದಕ್ಷಿಣದ ಟಾಪ್ ನಟಿಯರ ಸಾಲಿನಲ್ಲಿರುವ ಕಾಜಲ್ ಮದುವೆ ಬಳಿಕವೂ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

  ಹೀರೋಗಳ ಟ್ರೆಂಡ್ ನಡುವೆ ಮಿರ ಮಿರ ಮಿಂಚಿದ ಕಾಜಲ್ ಅಗರ್‌ವಾಲ್ಹೀರೋಗಳ ಟ್ರೆಂಡ್ ನಡುವೆ ಮಿರ ಮಿರ ಮಿಂಚಿದ ಕಾಜಲ್ ಅಗರ್‌ವಾಲ್

  ಆದರೆ ಕಾಜಲ್ ಇತ್ತೀಚಿಗೆ ಆಂಗ್ಲ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ ಮಾತು ನಟನೆಯಿಂದ ದೂರ ಸರಿಯುತ್ತಾರಾ ಎನ್ನುವ ಅನುಮಾನಕ್ಕೆ ಕಾರಣವಾಗಿದೆ. ಸಂದರ್ಶನದಲ್ಲಿ ಮಾತನಾಡಿರುವ ಕಾಜಲ್ ಒಂದು ವೇಳೆ ಪತಿ ನಟನೆಯಿಂದ ದೂರ ಸರಿ ಎಂದು ಹೇಳಿದರೆ ಖಂಡಿತ ಹಾಗೆ ಮಾಡುತ್ತೇನೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

  ಪತಿ ಮತ್ತು ಕುಟುಂಬದ ಬಗ್ಗೆ ಮಾತನಾಡಿದ ಕಾಜಲ್, 'ನನ್ನ ಪತಿ ಮತ್ತು ಕುಟುಂಬ ಸದಸ್ಯರಿಂದ ಉತ್ತಮ ಬೆಂಬಲ ವ್ಯಕ್ತವಾಗಿದೆ. ಹಾಗಾಗಿ ನನಗೆ ನಟನಾ ವೃತ್ತಿಜೀವನದ ಕಡೆ ಗಮನ ಹರಿಸಲು ಸಾಧ್ಯವಾಗಿದೆ. ಎಷ್ಟು ದಿನ ಸಿನಿಮಾಗಳಲ್ಲಿ ನಟಿಸುತ್ತೇನೆ ಎನ್ನುವುದು ನನಗೆ ಗೊತ್ತಿಲ್ಲ. ಒಂದು ವೇಳೆ ಪತಿ ನಟನೆ ಬಿಡುವಂತೆ ಹೇಳಿದರೆ ಖಂಡಿತ ಹಾಗೆ ಮಾಡುತ್ತೇನೆ' ಎಂದಿದ್ದಾರೆ.

  Recommended Video

  ಕಷ್ಟದಲ್ಲಿರೋರಿಗೆ ಹೆಲ್ಪ್‌ ಮಾಡಿ,ನಾನೂ ಮಾಡ್ತೀನಿ ಅಂದ್ರು Shubha poonja | Filmibeat Kannada

  ಸದ್ಯ ಕಾಜಲ್ ತನ್ನ ಕೈಯಲ್ಲಿರುವ ಸಿನಿಮಾಗಳ ಕಡೆ ಗಮನ ಹರಿಸಿದ್ದಾರೆ. ತಮಿಳು ಮತ್ತು ತೆಲುಗು ಸೇರಿದಂತೆ ಐದಾರು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಜೊತೆಗೆ ಒಂದು ವೆಬ್ ಸೀರಿಸ್ ನಲ್ಲೂ ಕಾಜಲ್ ನಟಿಸುತ್ತಿದ್ದಾರೆ.

  English summary
  Actress Kajal Aggarwal will quit acting when her husband says.
  Wednesday, May 19, 2021, 9:32
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X