For Quick Alerts
  ALLOW NOTIFICATIONS  
  For Daily Alerts

  ಮತ್ತೊಂದು ತೆಲುಗು ಚಿತ್ರ: ಸ್ಟಾರ್ ನಟನ ಸಿನಿಮಾದಲ್ಲಿ ಶ್ರೀಲೀಲಾ ನಾಯಕಿ?

  |

  ಕಿಸ್, ಭರಾಟೆ ಚಿತ್ರಗಳ ನಂತರ ನಟಿ ಶ್ರೀಲೀಲಾ ಪರಭಾಷೆಯಲ್ಲಿ ಬೇಡಿಕೆ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಕನ್ನಡದ ಜೊತೆ ಜೊತೆಗೆ ಟಾಲಿವುಡ್‌ನಲ್ಲಿ ಶ್ರೀಲೀಲಾ ಬ್ಯುಸಿಯಾಗುತ್ತಿದ್ದಾರೆ. ಈಗಾಗಲೇ ತೆಲುಗಿನಲ್ಲಿ ಒಂದು ಸಿನಿಮಾ ಕೈಗೆತ್ತಿಕೊಂಡಿರುವ ಶ್ರೀಲೀಲಾ ಇನ್ನೊಂದು ಚಿತ್ರದ ಅವಕಾಶ ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

  ತೆಲುಗು ಸ್ಟಾರ್ ನಟ ಅಭಿನಯಿಸುತ್ತಿರುವ ಈ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ಶ್ರೀಲೀಲಾ ಸಹ ಒಬ್ಬರು ಎನ್ನಲಾಗಿದೆ. ನಿನ್ನೆಯಷ್ಟೇ ಈ ಸಿನಿಮಾ ಘೋಷಣೆಯಾಗಿದ್ದು, ಸದ್ಯಕ್ಕೆ ಚಿತ್ರದ ಹೆಸರು ಅಂತಿಮವಾಗಿಲ್ಲ. ಅಷ್ಟಕ್ಕೂ, ಶ್ರೀಲೀಲಾ ನಟಿಸಲಿರುವ ಎರಡನೇ ತೆಲುಗು ಸಿನಿಮಾ ಯಾವುದು? ಯಾರು ಆ ಸ್ಟಾರ್?

  ರವಿತೇಜ ಚಿತ್ರದಲ್ಲಿ ಶ್ರೀಲೀಲಾ?

  ರವಿತೇಜ ಚಿತ್ರದಲ್ಲಿ ಶ್ರೀಲೀಲಾ?

  ಕ್ರ್ಯಾಕ್ ಸಿನಿಮಾದ ಯಶಸ್ಸಿನ ನಂತರ ಟಾಲಿವುಡ್ ಮಾಸ್ ಮಹಾರಾಜ ರವಿತೇಜ ಹೊಸ ಪ್ರಾಜೆಕ್ಟ್ ಆರಂಭಿಸಿದ್ದಾರೆ. ತ್ರಿನಾಧ್ ರಾವ್ ನಕ್ಕಿನಾ ನಿರ್ದೇಶನದ ಮಾಡಲಿರುವ ಚಿತ್ರದಲ್ಲಿ ರವಿತೇಜ ನಾಯಕನಾಗಿ ಕಾಣಿಸಿಕೊಳ್ಳಲಿದ್ದು, ಕನ್ನಡ ನಟಿ ಶ್ರೀಲೀಲಾ ನಾಯಕಿಯಾಗಿ ಇರಲಿದ್ದಾರೆ.

  ಟಾಲಿವುಡ್‌ಗೆ 'ಕಿಸ್' ನಟಿ: ತೆಲುಗಿನ ಬಹುದೊಡ್ಡ ನಿರ್ದೇಶಕನ ಚಿತ್ರಕ್ಕೆ ಶ್ರೀಲೀಲಾ ನಾಯಕಿ

  ರವಿತೇಜಗೆ ಇಬ್ಬರು ನಾಯಕಿ

  ರವಿತೇಜಗೆ ಇಬ್ಬರು ನಾಯಕಿ

  ಪ್ರಸನ್ನ ಕುಮಾರ್ ಬೆಜವಾಡ ಈ ಚಿತ್ರಕ್ಕೆ ಸ್ಕ್ರಿಪ್ಟ್ ಮಾಡಿದ್ದು, ರವಿತೇಜಗೆ ಇಬ್ಬರು ನಾಯಕಿಯರು ಇರಲಿದ್ದಾರೆ. ಒಬ್ಬರು ಕನ್ನಡದ ಶ್ರೀಲೀಲಾ ಹಾಗೂ ಇನ್ನೊಬ್ಬರು ಈಶ್ವರ್ಯ ಮೆನನ್ ಎನ್ನಲಾಗಿದೆ. ಇಬ್ಬರದ್ದು ಪ್ರಮುಖ ಪಾತ್ರಗಳಾಗಿದ್ದು, ಚಿತ್ರಕ್ಕೆ ಟ್ವಿಸ್ಟ್ ಮತ್ತು ಕುತೂಹಲ ಹೆಚ್ಚಿಸುವ ಪಾತ್ರಗಳಂತೆ.

  ಶ್ರೀಲೀಲಾ ಮೊದಲ ಚಿತ್ರ ಯಾವುದು?

  ಶ್ರೀಲೀಲಾ ಮೊದಲ ಚಿತ್ರ ಯಾವುದು?

  ತೆಲುಗು ಇಂಡಸ್ಟ್ರಿಯ ದಿಗ್ಗಜ ನಿರ್ದೇಶಕ, ನಿರ್ಮಾಪಕ, ಬರಹಗಾರ, ನೃತ್ಯ ಸಂಯೋಜಕ ಕೆ ರಾಘವೇಂದ್ರ ರಾವ್ ನಿರ್ಮಾಣ ಮಾಡುತ್ತಿರುವ 'ಪೆಳ್ಳಿಸಂದಡಿ-2' ಚಿತ್ರದಲ್ಲಿ ಶ್ರೀಲೀಲಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಟಾಲಿವುಡ್ ಸ್ಟಾರ್ ನಟ ಶ್ರೀಕಾಂತ್ ಅವರ ಪುತ್ರ ರೋಷನ್ ನಾಯಕನಾಗಿದ್ದಾರೆ.

  ಹರಿ ಸಂತು-ಧನ್ವೀರ್ ಜೋಡಿಯ 'ಬೈ 2 ಲವ್' ಆರಂಭ

  ಧನ್ವೀರ್ ಜೊತೆ 'ಬೈ 2 ಲವ್'

  ಧನ್ವೀರ್ ಜೊತೆ 'ಬೈ 2 ಲವ್'

  ಶ್ರೀಮುರಳಿ ಜೊತೆ ಭರಾಟೆ ಮುಗಿಸಿದ ಶ್ರೀಲೀಲಾ ಈಗ ಹರಿ ಸಂತೋಷ್ ನಿರ್ದೇಶನದ ಬೈ ಟು ಲವ್ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಬಜಾರ್ ಖ್ಯಾತಿಯ ಧನ್ವೀರ್ ಈ ಚಿತ್ರದ ನಾಯಕನಾಗಿದ್ದು, ಈಗಾಗಲೇ ಶೂಟಿಂಗ್ ಸಹ ಆರಂಭವಾಗಿದೆ.

  ಏಪ್ರಿಲ್‌ನಲ್ಲಿ ರವಿತೇಜ-ಶ್ರೀಲೀಲಾ ಸಿನಿಮಾ ಶೂಟಿಂಗ್

  ಏಪ್ರಿಲ್‌ನಲ್ಲಿ ರವಿತೇಜ-ಶ್ರೀಲೀಲಾ ಸಿನಿಮಾ ಶೂಟಿಂಗ್

  ಕ್ರ್ಯಾಕ್ ಸಿನಿಮಾದ ಯಶಸ್ಸಿನ ಬಳಿಕ ಕಿಲಾಡಿ ಎಂಬ ಚಿತ್ರದಲ್ಲಿ ರವಿತೇಜ ನಟಿಸುತ್ತಿದ್ದಾರೆ. ಈ ಸಿನಿಮಾದ ಮುಗಿಯುತ್ತಿದ್ದಂತೆ 68ನೇ ಚಿತ್ರವನ್ನು ಪ್ರಾರಂಭಿಸಲಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಶ್ರೀಲೀಲಾ ಎರಡನೇ ತೆಲುಗು ಸಿನಿಮಾ ಏಪ್ರಿಲ್ ತಿಂಗಳಲ್ಲಿ ಚಿತ್ರೀಕರಣ ಶುರು ಮಾಡಲಿದೆ.

  ಪೊಗರು ಸಿನಿಮಾ ವಿರುದ್ಧ ಸಿಡಿದೆದ್ದ ಸಂಸದೆ ಶೋಭಾ ಕರಂದ್ಲಾಜೆ | Filmibeat Kannada
  English summary
  Kannada actress Sreeleela To Share Screen Space With tollywood Ravi Teja.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X