Don't Miss!
- News
ಮಾನ್ವಿ: ಮಂಜೂರಾದ ಬಡವರ ಭೂಮಿಗೆ ಕಣ್ಣು ಹಾಕಿದ ಪ್ರಭಾವಿಗಳು, ಜನಾಕ್ರೋಶ
- Sports
LLC 2023: ಲೆಜೆಂಡ್ಸ್ ಲೀಗ್ನಲ್ಲಿ ಕೈಫ್, ಗೇಲ್, ಗಂಭೀರ್ ಸೇರಿದಂತೆ ಹಲವು ಸ್ಟಾರ್ಗಳು
- Lifestyle
ಆರೋಗ್ಯವಾಗಿರಬೇಕೆ? ಹಾಗಾದರೆ ನೀವು 3 ವಿಷಯಗಳಲ್ಲಿ ನಂಬಿಕೆ ಇಡಲೇಬೇಕು
- Finance
Jio 5G services: ಇಂದಿನಿಂದ ಮತ್ತೆ 34 ನಗರಗಳಲ್ಲಿ ಪ್ರಾರಂಭ- ಮಧ್ಯ ಕರ್ನಾಟಕದ ಯಾವ ನಗರಕ್ಕೆ ಕೊಡುಗೆ? ಮಾಹಿತಿ ಪಡೆಯಿರಿ
- Automobiles
ಪೆಟ್ರೋಲ್ ಬೆಲೆ ಏರಿಕೆ ಚಿಂತೆ ಬಿಡಿ: ರೂ.1 ಲಕ್ಷ ಇದ್ರೆ ಆಕ್ಟಿವಾವನ್ನು ಎಲೆಕ್ಟ್ರಿಕ್ ಸ್ಕೂಟರ್ ಆಗಿ ಪರಿವರ್ತಿಸಬ
- Technology
ಆಂಡ್ರಾಯ್ಡ್ ಬಳಕೆದಾರರಿಗಾಗಿ 'ಕಿಡ್ಸ್ ಮಿಸ್ಟರಿ ಬಾಕ್ಸ್' ಫೀಚರ್ಸ್ ಪರಿಚಯಿಸಿದ ನೆಟ್ಫ್ಲಿಕ್ಸ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ರಾಕ್‌ಲೈನ್ ವೆಂಕಟೇಶ್‌ಗಾಗಿ ಕತೆ ಬರೆದಿದ್ದ ರಾಜಮೌಳಿ ತಂದೆ, ಸಿನಿಮಾ ಆಗಿದ್ದು ಹೇಗೆ?
ದೇಶದ ಅತ್ಯುತ್ತಮ ನಿರ್ದೇಶಕರಲ್ಲಿ ಒಬ್ಬರು ರಾಜಮೌಳಿ. ಆದರೆ ರಾಜಮೌಳಿಗೆ ಧಕ್ಕಿರುವ ಯಶಸ್ಸಿನಲ್ಲಿ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಅವರಿಗೂ ಪಾಲಿದೆ.
ಕೆ.ವಿ.ವಿಜಯೇಂದ್ರ ಪ್ರಸಾದ್ ಭಾರತದ ಯಶಸ್ವಿ ಕತೆಗರಾರರಲ್ಲಿ ಒಬ್ಬರು. ಅವರ ಕತೆ ಬರೆದ ಸಿನಿಮಾಗಳು ಚಿತ್ರಮಂದಿರದಲ್ಲಿ ಸೋತಿರುವುದು ವಿರಾಳಾತಿವಿರಳ. 'ಬಾಹುಬಲಿ', 'ಮಗಧೀರ', 'ಸೈ', 'ನರಸಿಂಹ ರೆಡ್ಡಿ' , 'ಸಿಂಹಾದ್ರಿ', 'ಛತ್ರಪತಿ', 'ಯಮದೊಂಗ', ಹಿಂದಿಯ 'ಭಜರಂಗಿ ಭಾಯ್‌ಜಾನ್', 'ಮಣಿಕರ್ಣಿಕಾ', ತಮಿಳಿನ 'ಮರ್ಸೆಲ್' ಇನ್ನೂ ಹಲವಾರು ಸಿನಿಮಾಗಳಿಗೆ ಕತೆ ಬರೆದಿದ್ದಾರೆ. ಕನ್ನಡದ ನಾಲ್ಕು ಸಿನಿಮಾಗಳಿಗೆ ಕತೆ ಬರೆದಿದ್ದಾರೆ.
ಕೆ.ವಿ.ವಿಜಯೇಂದ್ರ ಪ್ರಸಾದ್ ಅವರು ಕನ್ನಡದ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್‌ಗೆ ಆಪ್ತರಾಗಿದ್ದು ಅವರಿಗಾಗಿ ಎರಡು ಸಿನಿಮಾಗಳಿಗಾಗಿ ಕತೆ ಬರೆದಿದ್ದಾರೆ. ಅದರಲ್ಲಿ ಒಂದು ಸೂಪರ್ ಹಿಟ್ ಹಿಂದಿ ಸಿನಿಮಾ 'ಭಜರಂಗಿ ಭಾಯಿಜಾನ್'. ಸಿನಿಮಾದ ನಾಯಕ ಸಲ್ಮಾನ್ ಖಾನ್.

ರಾಕ್‌ಲೈವ್ ವೆಂಕಟೇಶ್‌ಗಾಗಿ ಬರೆದ ಕತೆ
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಕೆ.ವಿ.ವಿಜಯೇಂದ್ರ ಪ್ರಸಾದ್, 'ಭಜರಂಗಿ ಭಾಯಿಜಾನ್' ಸಿನಿಮಾ ಕತೆ ಹುಟ್ಟಿದ ಆಸಕ್ತಿಕರ ಪ್ರಸಂಗವನ್ನು ವಿವರಿಸಿದ್ದಾರೆ. 'ನನಗೆ ರಾಕ್‌ಲೈವ್ ವೆಂಕಟೇಶ್ ಪರಿಚಯ, ಅವರಿಗಾಗಿ ಈ ಹಿಂದೆಯೇ ಒಂದು ಕತೆ ಬರೆದಿದ್ದೆ. ಅವರಿಗೆ ಈ ಕತೆ ಹೇಳಿದಾಗ ಅವರಿಗೆ ಇಷ್ಟವಾಗಿ. ಅದನ್ನು ಹಿಂದಿಯಲ್ಲಿಯೇ ತೆಗೆಯಬೇಕೆಂದುಕೊಂಡರು' ಎಂದಿದ್ದಾರೆ ವಿಜಯೇಂದ್ರ ಪ್ರಸಾದ್.

ತೆಲುಗು ಸಿನಿಮಾದಿಂದ ಕಾಪಿ ಹೊಡೆದು ಬರೆದ ಕತೆ
ಪಾಕಿಸ್ತಾನದಿಂದ ಹುಡುಗಿ ಬಂದು ಆಕೆಯನ್ನು ಮತ್ತೆ ಅಮ್ಮನ ಬಳಿ ತಲುಪಿಸುವ ಆ ಕತೆ ಹುಟ್ಟಿದ್ದು ಹೇಗೆ? ಎಂಬ ಪ್ರಶ್ನೆಗೆ ಉತ್ತರಿಸಿದ ವಿಜಯೇಂದ್ರ ಪ್ರಸಾದ್, 'ಒಮ್ಮೆ ನಾನು, ಎಂಎಂ ಕೀರವಾಣಿ ತಮ್ಮ ಕಾಶಿ, ನಿರ್ದೇಶಕ ಮಹದೇವ್ ಮೂವರೂ ಸೇರಿ ಚಿರಂಜೀವಿ ನಟನೆಯ 'ಪಸಿವಾಡಿ ಪ್ರಾಣಂ' ಸಿನಿಮಾ ನೋಡುತ್ತಿದ್ದೆವು. ಸಿನಿಮಾ ನನಗೆ ಬಹಳಾ ಇಷ್ಟವಾಗಿ, 'ಸಿನಿಮಾ ಚೆನ್ನಾಗಿದೆ ಕಾಪಿ ಹೊಡೆದುಬಿಡೋಣವಾ?' ಎಂದೆ. ಅದಕ್ಕೆ ಕಾಶಿ ಹಾಗಿದ್ದರೆ ಹುಡುಗನಿಗೆ ಡೇಂಜರ್ ಇಲ್ಲಿಂದ ಬೇಡ ಪಾಕಿಸ್ತಾನದಿಂದ ಇಡಿ. ಆಗ ಎರಡು ದೇಶಗಳ ನಡುವಿನ ಸಾಮರಸ್ಯದ ಕತೆ ಹೇಳಬಹುದು ಎಂದ' ನಾನೂ ಹಾಗೆಯೇ ಮಾಡಿದೆ ಎಂದಿದ್ದಾರೆ ವಿಜಯೇಂದ್ರ.

ಜೈಪುರ್‌ಗೆ ಹೋಗಿ ಅಮೀರ್ ಖಾನ್‌ಗೆ ಕತೆ ಹೇಳಿದ್ದರು
ರಾಕ್‌ಲೈನ್ ವೆಂಕಟೇಶ್‌ಗೆ ಕತೆ ಹೇಳಿದ ಬಳಿಕ ಅವರಿಗೆ ಇಷ್ಟವಾಗಿ ಅದನ್ನು ಹಿಂದಿಯಲ್ಲಿಯೇ ತೆಗೆಯಬೇಕೆಂದು ರಾಕ್‌ಲೈನ್‌ಗೆ ಪರಿಚಯದ ರಾಜೇಶ್ ಭಟ್ ಎಂಬುವರ ಸಹಾಯದೊಂದಿಗೆ ಅಮೀರ್ ಖಾನ್‌ಗೆ ಕತೆ ಹೇಳಿದೆವು. ಆಗ ಅವರು ಜೈಪುರದ ಅರಮನೆಯಲ್ಲಿ ಶೂಟಿಂಗ್‌ನಲ್ಲಿದ್ದರು. ಅಲ್ಲಿಗೆ ಹೋದೆವು. ಅಮೀರ್ ಪೂರ್ಣ ಕತೆ ಕೇಳಿದರು. ನಂತರ ನಮ್ಮೊಂದಿಗೆ ಸುಮಾರು ಒಂದು ಕಿ.ಮೀ ನಡೆದುಕೊಂಡು ಕತೆಯ ಬಗ್ಗೆ ಮಾತನಾಡುತ್ತಾ ಬಂದು ನಮಗೆ ಕಾರು ಹತ್ತಿಸಿ ಬೀಳ್ಕೊಟ್ಟರು. ನಾನಂದುಕೊಂಡೆ ಅಮೀರ್ ಖಾನ್ ಖಂಡಿತ ನಟಿಸುತ್ತಾರೆ ಎಂದು ಎಂದು ನೆನಪಿಸಿಕೊಂಡಿದ್ದಾರೆ ವಿಜಯೇಂದ್ರ ಪ್ರಸಾದ್.

ಅಮೀರ್ ಖಾನ್ ನಟಿಸಲಿಲ್ಲ
ಆದರೆ ಆ ನಂತರ ಅವರು ಮೆಸೇಜ್ ಮಾಡಿ, 'ಯಾಕೋ ಪಾತ್ರದ ಜೊತೆಗೆ ಕನೆಕ್ಟ್ ಆಗುತ್ತಿಲ್ಲ ಹಾಗಾಗಿ ನನ್ನನ್ನು ಕ್ಷಮಿಸಿ ನಟಿಸಲಾಗುವುದಿಲ್ಲ' ಎಂದಿದ್ದರು. ನಂತರ ಕಬೀರ್ ಖಾನ್ ಅನ್ನುವವರ ಸಹಾಯದೊಂದಿಗೆ ಸಲ್ಮಾನ್ ಖಾನ್ ಅನ್ನು ಭೇಟಿಯಾಗಿ ಕತೆ ಹೇಳಿದೆವು ಅವರಿಗೆ ಇಷ್ಟವಾಯಿತು. ಕಬೀರ್ ಖಾನ್ ಸಿನಿಮಾವನ್ನು ನಿರ್ದೇಶನ ಮಾಡಿದರು. ರಾಕ್‌ಲೈನ್ ಹಾಗೂ ಸಲ್ಮಾನ್ ಖಾನ್ ನಿರ್ಮಾಣ ಮಾಡಿದರು. ಸಿನಿಮಾ ಸೂಪರ್-ಸೂಪರ್ ಹಿಟ್ ಆಯಿತು ಎಂದರು ವಿಜಯೇಂದ್ರ ಪ್ರಸಾದ್.
Recommended Video

ಕನ್ನಡದ ನಾಲ್ಕು ಸಿನಿಮಾಗಳಿಗೆ ಕತೆ ಬರೆದಿದ್ದಾರೆ
ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಕನ್ನಡದಲ್ಲಿ ನಾಲ್ಕು ಸಿನಿಮಾಗಳಿಗಾಗಿ ಕತೆ ಬರೆದಿದ್ದಾರೆ. ವಿಷ್ಣುವರ್ಧನ್ ನಟನೆಯ ಸೂಪರ್ ಹಿಟ್ ಸಿನಿಮಾ 'ಅಪ್ಪಾಜಿ'ಗೆ ಕತೆ ಬರೆದಿರುವುದು ವಿಜಯೇಂದ್ರ ಪ್ರಸಾದ್, ಆ ನಂತರ ಶಿವರಾಜ್ ಕುಮಾರ್ ನಟನೆಯ 'ಕುರುಬನ ರಾಣಿ' ಸಿನಿಮಾಕ್ಕೂ ಕತೆ ಬರೆದಿದ್ದಾರೆ ವಿಜಯೇಂದ್ರ. ನಂತರ ರವಿಚಂದ್ರನ್ ನಟನೆಯ 'ಪಾಂಡು ರಂಗ ವಿಠಲ' ಸಿನಿಮಾಕ್ಕೆ ಹಾಗೂ ನಿಖಿಲ್ ಕುಮಾರಸ್ವಾಮಿ ನಟನೆಯ 'ಜಾಗ್ವಾರ್' ಸಿನಿಮಾಕ್ಕೆ ಕತೆ ಬರೆದಿದ್ದಾರೆ.